ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೇಳಿಕೆ

ನವದೆಹಲಿ – ಶರೀಫ್ ಉಸ್ಮಾನ್ ಹಾದಿಯ ಸಾವಿನ ಘಟನೆಯು ಮೊಹಮ್ಮದ್ ಯುನೂಸ್ ಅವರ ಆಡಳಿತದಲ್ಲಿ ಮತ್ತಷ್ಟು ಬಿಗಡಾಯಿಸಿರುವ ಅರಾಜಕತೆಯ ಪ್ರತಿಬಿಂಬವಾಗಿದೆ. ಈಗ ಬಾಂಗ್ಲಾದೇಶದಲ್ಲಿ ಹಿಂಸಾಚಾರವು ಒಂದು ಸಾಮಾನ್ಯ ವಿಷಯವಾಗಿಬಿಟ್ಟಿದೆ. ಮಧ್ಯಂತರ ಸರಕಾರವು ಅದನ್ನು ತಡೆಯಲು ಸಾಧ್ಯವಾಗದ ಪರಿಸ್ಥಿತಿಯಿದೆ. ಇಂತಹ ಘಟನೆಗಳು ಬಾಂಗ್ಲಾದೇಶವನ್ನು ಆಂತರಿಕವಾಗಿ ಅಸ್ಥಿರಗೊಳಿಸುತ್ತವೆ. ನಮ್ಮ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧದ ಮೇಲೂ ಇದು ಪರಿಣಾಮ ಬೀರುತ್ತದೆ. ಈ ಎಲ್ಲಾ ಪರಿಸ್ಥಿತಿಯನ್ನು ಬಾಂಗ್ಲಾದೇಶದ ನೆರೆಯ ರಾಷ್ಟ್ರಗಳು ಗಮನಿಸುತ್ತಿವೆ. ಬಾಂಗ್ಲಾದೇಶದ ಪ್ರಸ್ತುತ ಅರಾಜಕತೆಯ ಪರಿಸ್ಥಿತಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಹಿಂದೂಗಳ ಮೇಲಿನ ದೌರ್ಜನ್ಯದ ಪ್ರತಿಯೊಂದು ಘಟನೆಯನ್ನೂ ಭಾರತವು ಗಮನಿಸುತ್ತಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಶೇಖ್ ಹಸೀನಾ ಅವರು ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಯುನೂಸ್ ಸರಕಾರವು ಭಯೋತ್ಪಾದಕರನ್ನು ಕಾರಾಗೃಹದಿಂದ ಬಿಡುಗಡೆ ಮಾಡಿದೆ!
ಹಿಂದೆ ಸುರಕ್ಷಿತ ಮತ್ತು ಜಾತ್ಯತೀತ ರಾಷ್ಟ್ರವನ್ನು ಇಷ್ಟಪಡುತ್ತಿದ್ದ ಲಕ್ಷಾಂತರ ಬಾಂಗ್ಲಾದೇಶಿ ಜನರು ಈಗ ಆತಂಕದಲ್ಲಿದ್ದಾರೆ ಎಂದು ಶೇಖ್ ಹಸೀನಾ ಪ್ರತಿಪಾದಿಸಿದ್ದಾರೆ. ಯುನೂಸ್ ಅವರು ಭಯೋತ್ಪಾದಕ ಮನೋಭಾವದ ಜನರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ದೋಷಿಗಳೆಂದು ಸಾಬೀತಾದ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ ಮತ್ತು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಗುಂಪುಗಳಿಗೆ ಸಾರ್ವಜನಿಕ ಜೀವನದಲ್ಲಿ ಪಾತ್ರ ವಹಿಸಲು ಅನುಮತಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
In an email interview with ANI, former Prime Minister of Bangladesh Sheikh Hasina speaks on the death of Osman Hadi, “This tragic killing reflects the lawlessness that uprooted my government and has multiplied under Yunus. Violence has become the norm while the interim government… pic.twitter.com/6YbPHnKbpq
— ANI (@ANI) December 22, 2025
ಸಂಪಾದಕೀಯ ನಿಲುವುಭಾರತವು ಸದ್ಯ ಕೇವಲ ಗಮನಿಸುತ್ತಿದೆ ಎಂದಷ್ಟೇ ತೋರುತ್ತಿದೆ. ವಾಸ್ತವವಾಗಿ ಭಾರತವು ಕ್ರಮ ಕೈಗೊಂಡು ಅಲ್ಲಿನ ಹಿಂದೂಗಳನ್ನು ರಕ್ಷಿಸುವುದು ಅಗತ್ಯವಾಗಿದೆ. ಭಾರತದ ಸ್ಥಾನದಲ್ಲಿ ಇಸ್ರೇಲ್ ಇದ್ದಿದ್ದರೆ ಮತ್ತು ಹಿಂದೂಗಳ ಸ್ಥಾನದಲ್ಲಿ ಯಹೂದಿಗಳಿದ್ದಿದ್ದರೆ ಚಿತ್ರಣವೇ ಬೇರೆಯಾಗಿರುತ್ತಿತ್ತು ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !