
‘೨೦೦೯ ರಲ್ಲಿ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರುವ ಸಾಧ್ಯತೆ ಇತ್ತು. ಆ ಸಮಯದಲ್ಲಿ ‘ಸಂಸ್ಥೆಯ ಮೇಲೆ ನಿಷೇಧ ಹೇರಿಸಿದರೆ ಗುರುಕಾರ್ಯವು ನಿಲ್ಲುವುದು’, ಎಂದು ಎಲ್ಲ ಕಡೆಯ ಸಾಧಕರಿಗೆ ಸ್ವಲ್ಪ ಚಿಂತೆಯಾಗುತ್ತಿತ್ತು. ಕೆಲವು ಸಾಧಕರು ಇಂತಹ ಪರಿಸ್ಥಿತಿಯಲ್ಲಿ ಪರಾತ್ಪರ ಗುರು ಡಾಕ್ಟರರನ್ನು ಭೇಟಿಯಾಗಲು ಹೋದರು. ಸಾಧಕರ ಮನಸ್ಸಿನಲ್ಲಿ ಸ್ವಲ್ಪ ಒತ್ತಡ ಇರುವುದರಿಂದ ಯಾರು ಏನು ಮಾತನಾಡಲಿಲ್ಲ. ಪರಾತ್ಪರ ಗುರು ಡಾಕ್ಟರರು ೧-೨ ನಿಮಿಷಗಳ ನಂತರ, ”ಯಾರಿಗೆ ಏನೂ ಮಾತನಾಡಲು ಇಲ್ಲದಿದ್ದರೆ, ನಾನು ಹೋಗುತ್ತೇನೆ,’’ ಎಂದು ಹೇಳಿದರು. ಇದನ್ನು ಕೇಳಿ ಸಾಧಕಿಯು ಮಾತನಾಡಲು ಆರಂಭಿಸಿದಳು. ಅವಳು, ”ಪರಾತ್ಪರ ಗುರು ಡಾಕ್ಟರ್, ನಮ್ಮನ್ನು ಕೊನೆಯ ಕ್ಷಣದ ವರೆಗೆ ನಿಮ್ಮ ಚರಣಗಳಲ್ಲಿಡಿ. ಬೇರೇನು ಬೇಡ,’’ ಎಂದು ಹೇಳಿದಳು. ಅದನ್ನು ಕೇಳಿ ಪರಾತ್ಪರ ಗುರು ಡಾಕ್ಟರರು, ”ಯಾರ ಕೊನೆಯ ಕ್ಷಣದ ವರೆಗೆ ನನ್ನದೋ ಅಥವಾ ನಿಮ್ಮದೋ ?’’ ಎಂದು ಹೇಳಿದರು. ಅದನ್ನು ಕೇಳಿ ಎಲ್ಲರೂ ನಕ್ಕರು. ಪರಾತ್ಪರ ಗುರು ಡಾಕ್ಟರರು ಕೆಲವೇ ಕ್ಷಣಗಳಲ್ಲಿ ಸಾಧಕರ ಮನಸ್ಸಿನಲ್ಲಿನ ಒತ್ತಡವನ್ನು ದೂರಗೊಳಿಸಿ ವಾತಾವರಣವನ್ನು ಹಗುರ ಮಾಡಿದರು. ನಂತರ ಎಲ್ಲ ಸಾಧಕರು ಮನಮುಕ್ತತೆಯಿಂದ ಮಾತನಾಡತೊಡಗಿದರು. ‘ಸಾಧಕರು ಯಾವುದೇ ವಿಷಯದಲ್ಲಿ ಒತ್ತಡವನ್ನು ಮಾಡಿಕೊಳ್ಳದೇ ಯಾವಾಗಲೂ ಆನಂದದಲ್ಲಿರ ಬೇಕು’, ಎಂದು ಪರಾತ್ಪರ ಗುರು ಡಾಕ್ಟರರು ಪ್ರಯತ್ನಿಸುತ್ತಾರೆ.
‘ದೇವರು ನಮ್ಮೆಲ್ಲ ಸಾಧಕರಿಗೆ, ಸಾಧಕರ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ಗುರುದೇವರನ್ನು ನೀಡಿದ್ದಾನೆ’, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಸೌ. ಶ್ರದ್ಧಾ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೧೦.೨೦೨೫)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !