ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ – ‘ರಣಸಂವಾದ – ಭಾರತದ ಯುದ್ಧತಂತ್ರದ ನೀತಿ’ ವಿಚಾರ ಸಂಕಿರಣ!

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

‘ರಾ’ ದ ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರ ಕರೆ – ‘ಗಜವಾ-ಎ-ಹಿಂದ್’ಗೆ ಉತ್ತರವಾಗಿ ವೈಚಾರಿಕ ‘ಗಜವಾ-ಎ-ಇಸ್ಲಾಂ’ ಪ್ರಾರಂಭಿಸಿರಿ

ನಾವು ಪಾಕಿಸ್ತಾನವನ್ನು ಯಾವಾಗಲೂ ಒಂದು ಭೌಗೋಳಿಕ ಪ್ರದೇಶವೆಂದು ಭಾವಿಸುತ್ತೇವೆ. ಪಾಕಿಸ್ತಾನ ಒಂದು ವಿಚಾರ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಮುಸಲ್ಮಾನರಲ್ಲಿ ೨ ವಿಧಗಳಿವೆ: ಒಂದು ಉಪಖಂಡದ (ಸಬ್ಕಾಂಟಿನೆಂಟಲ್) ಮುಸಲ್ಮಾನರು ಮತ್ತು ಉಳಿದ ಇತರ ಮುಸಲ್ಮಾನರು! ಉಪಖಂಡದ ಮುಸಲ್ಮಾನರಲ್ಲಿ ಶೇ. ೯೯ ರಷ್ಟು ಮಂದಿ ಹೊಸದಾಗಿ ಮತಾಂತರಗೊಂಡವರಾಗಿದ್ದಾರೆ. ಕಳೆದ ೧ಸಾವಿರ,೪೦೦ ವರ್ಷಗಳಿಂದ ‘ಗಜವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣಗೊಳಿಸಲು ಸಾರಿದ ಯುದ್ಧ) ಘೋಷಣೆಗಳನ್ನು ನೀಡಲಾಗುತ್ತಿದೆ. ಗಜವಾ-ಎ-ಬ್ರಿಟನ್, ಗಜವಾ-ಎ-ಜರ್ಮನಿ ಎಂಬ ಘೋಷಣೆಗಳನ್ನು ಎಂದಿಗೂ ನೀಡಲಾಗುವುದಿಲ್ಲ. ನಾವು ಈ ಬೆದರಿಕೆಗಳನ್ನು ಕೇಳಿ ನಾಶವಾಗಿ ಹೋಗುತ್ತೇವೆಯೇ? ಇಲ್ಲ.

ನಮ್ಮಲ್ಲಿ ಪ್ರತಿರೋಧಿಸುವ ಸಾಮರ್ಥ್ಯವಿದೆ. ಆದ್ದರಿಂದ, ವೈಚಾರಿಕ ಮಟ್ಟದಲ್ಲಿ ಮೊದಲು ‘ಗಜವಾ-ಎ-ಇಸ್ಲಾಂ’ ಪ್ರಾರಂಭವಾಗಬೇಕು. ‘ಗಜವಾ-ಎ-ಹಿಂದ್’ಗೆ ಉತ್ತರವಾಗಿ ವೈಚಾರಿಕ ‘ಗಜವಾ-ಎ-ಇಸ್ಲಾಂ’ಗೆ ಚಾಲನೆ ನೀಡಿ ಎಂದು ‘ರಾ’ ಮತ್ತು ಭಾರತೀಯ ಸೇನೆಯ ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ಕರೆ ನೀಡಿದರು. ಅವರು ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿನ ‘ರಣಸಂವಾದ – ಭಾರತದ ಯುದ್ಧತಂತ್ರ ನೀತಿ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬ್ರಿಗೇಡಿಯರ್ (ನಿವೃತ್ತ) ಸಂಜಯ ಅಗರ್ವಾಲ, ವಿಂಗ್ ಕಮಾಂಡರ (ನಿವೃತ್ತ) ವಿನಾಯಕ ಡಾವರೆ, ‘ನ್ಯಾಷನಲ್ ಸೆಂಟರ್ ಫಾರ್ ಹಿಸ್ಟಾರಿಕಲ್ ರಿಸರ್ಚ್ ಅಂಡ್ ಕಂಪ್ಯಾರಿಟಿವ್ ಸ್ಟಡೀಸ್’ನ ಅಧ್ಯಕ್ಷರಾದ ಶ್ರೀ. ನೀರಜ ಅತ್ರಿ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ‘ಡಿಡಿ ನ್ಯೂಸ್’ನ ಸಂಪಾದಕರಾದ ಅಶೋಕ ಶ್ರೀವಾಸ್ತವ ಮತ್ತು ‘ಯೂತ್ ಫಾರ್ ಪನೂನ್ ಕಾಶ್ಮೀರ್’ನ ಅಧ್ಯಕ್ಷರಾದ ಶ್ರೀ. ರಾಹುಲ ಕೌಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ಈ ರಣಸಂವಾದದ ಸೂತ್ರ ಸಂಚಾಲನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ‘ಪಾಕಿಸ್ತಾನ, ಚೀನಾ ಮತ್ತು ಟರ್ಕಿಯ ಕುರಿತಾದ ಭಾರತದ ನೀತಿ’ ವಿಷಯದ ಕುರಿತು ತಮ್ಮ ವಿಚಾರಗಳನ್ನು ಮಂಡಿಸುತ್ತಾ, ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ದೇಶದೊಳಗಿನ ದೊಡ್ಡ ಅಪಾಯದ ಬಗ್ಗೆ ನಮಗೆ ಅರಿವು ಮೂಡಿಸಿದರು. ಅವರು ಮಾತು ಮುಂದುವರಿಸುತ್ತಾ “ನಮ್ಮ ದೇಶದೊಳಗೆ ಕೂಡ ಒಂದು ಪಾಕಿಸ್ತಾನವಿದೆ. ನಿಜವಾದ ಪಾಕಿಸ್ತಾನದಲ್ಲಿ ನಾವು ‘ಆಪರೇಷನ್ ಸಿಂದೂರ’ವನ್ನು ಜಾರಿಗೆ ತರಬಹುದು; ಆದರೆ ದೇಶದೊಳಗಿನ ಪಾಕಿಸ್ತಾನಕ್ಕೆ ಏನು ಮಾಡುವುದು? ಈ ಕಟ್ಟರವಾದವನ್ನು ಎದುರಿಸುವ ಸಾಮರ್ಥ್ಯ ನಮಗಿದೆ. ಅವರ ವಿಚಾರಗಳು ಮತ್ತು ಆದರ್ಶವಾದದಿಂದ ನಮಗೆ ಅಪಾಯವಿದೆ ಎಂದು ಹೇಳಿದರು. ಭಾರತ-ಪಾಕಿಸ್ತಾನ ಗಡಿಯಲ್ಲಿ ನಾವು ಬೇಲಿ ಹಾಕಿದ್ದೇವೆ. ಪಾಕಿಸ್ತಾನೀಯರಿಗೆ ಅದರ ಅವಶ್ಯಕತೆಯಿರಲಿಲ್ಲ; ಏಕೆಂದರೆ ಅವರಿಗೆ ನಮ್ಮ ವಿಚಾರಗಳಿಂದ ಅಪಾಯವಿಲ್ಲ. ಈಗ ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಎಸ್ಐಆರ್’ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಈ ಆಂತರಿಕ ಪಾಕಿಸ್ತಾನೀಯರ ಬೆಂಬಲವಿದೆ. ನಾವು ಭಾರತೀಯ ರಾಜಕೀಯವನ್ನು ಗಮನಿಸಿದಾಗ, ಇಲ್ಲಿನ ದೇಶದ್ರೋಹಿಗಳ ಬೆಂಬಲ ಪಡೆದು ಮತ್ತು ಆಂತರಿಕ ಪಾಕಿಸ್ತಾನೀಯರ ಸಹಾಯ ಪಡೆದು ಅಧಿಕಾರದಲ್ಲಿ ಇರಬಹುದು ಎಂದು ಅವರು ತಿಳಿದುಕೊಂಡಿರುವುದು ಕಂಡುಬರುತ್ತದೆ. ನಮ್ಮ ಆಂತರಿಕ ಪಾಕಿಸ್ತಾನೀಯರು ‘ಆಪರೇಷನ್ ಸಿಂದೂರ’ದಿಂದ ದುಃಖಿತರಾಗಿದ್ದರು. ಇವರ ವಿರುದ್ಧ ವೈಚಾರಿಕ ಮಟ್ಟದಲ್ಲಿ ‘ಗಜವಾ-ಎ-ಇಸ್ಲಾಂ’ ನ ಘೋಷಣೆ ಕೂಗುವ ಅವಶ್ಯಕತೆ ಇದೆ.

ಹಿಂದೂಫೋಬಿಯಾದ (ಹಿಂದೂದ್ವೇಷ) ಅಂಕಿ-ಅಂಶಗಳ ಕಡೆಗೆ ಗಮನ ಹರಿಸುವುದು ಅವಶ್ಯಕ! – ಅಶೋಕ ಶ್ರೀವಾಸ್ತವ, ಸಂಪಾದಕ, ಡಿಡಿ ನ್ಯೂಸ್

ನಾನು ಮಾಧ್ಯಮಗಳಲ್ಲೇ ಕೆಲಸ ಮಾಡುತ್ತಿದ್ದರೂ ಹೇಳಬಲ್ಲೆ, ಪ್ರಸಾರ ಮಾಧ್ಯಮಗಳು ನಮ್ಮ ಅತಿ ದೊಡ್ಡ ಶತ್ರುಗಳಾಗಿವೆ. ‘ಆಪರೇಷನ್ ಸಿಂದೂರ’ದ ಸಮಯದಲ್ಲಿ ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಪಾಕಿಸ್ತಾನವಲ್ಲ, ಭಾರತೀಯ ಮಾಧ್ಯಮಗಳು ಹೊಡೆದುರುಳಿಸಿದವು. ಆಗ ‘ದಿ ಹಿಂದೂ’ ಪತ್ರಿಕೆಯು, ಪಾಕಿಸ್ತಾನ ಭಾರತದ ೫ ರಫೇಲ್ ವಿಮಾನಗಳನ್ನು ಹೊಡೆದುರುಳಿಸಿತು ಎಂದು ವರದಿ ಮಾಡಿತ್ತು. ಇದು ಹಿಂದಿನಿಂದಲೂ ಇರುವ ಒಂದು ಷಡ್ಯಂತ್ರವಾಗಿದೆ.

ಮೋಹನದಾಸ್ ಗಾಂಧೀಜಿಯವರ ಹತ್ಯೆಯ ಸಮಯದಲ್ಲೂ ‘ನ್ಯೂ ಯಾರ್ಕ್ ಟೈಮ್ಸ್’ನ ವರದಿಯ ಶೀರ್ಷಿಕೆ ‘ಗಾಂಧಿ ಇಸ್ ಕಿಲ್ಡ್ ಬೈ ಹಿಂದೂ’ ಎಂದಿತ್ತು. ‘ನ್ಯೂ ಯಾರ್ಕ್ ಟೈಮ್ಸ್’ ಇನ್ನೊಂದು ಧರ್ಮದ ಬಗ್ಗೆ ಇಂತಹ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಬಹುದೇ? ‘ಇಂಥ ನಾಯಕನ ಹತ್ಯೆ ಮುಸಲ್ಮಾನನಿಂದ ಆಗಿದೆ’, ‘ಇಂಥ ನಾಯಕನ ಹತ್ಯೆ ಕ್ರಿಶ್ಚಿಯನ್ನನಿಂದ ಆಗಿದೆ’ ಎಂಬ ಶೀರ್ಷಿಕೆಗಳನ್ನು ಎಂದಾದರೂ ಕೊಡಲಾಗುತ್ತದೆಯೇ? ಇಸ್ಲಾಮಿ ಭಯೋತ್ಪಾದನೆಯ ಬಣ್ಣವನ್ನು ಈಗಲೂ ಪ್ರಗತಿಪರರಿಗೆ ನೋಡಲು ಸಾಧ್ಯವಾಗುತ್ತಿಲ್ಲ.ಕೆಲವು ವರ್ಷಗಳ ಹಿಂದೆ ೪-೫ ವಿಶ್ವವಿದ್ಯಾಲಯಗಳು ಒಟ್ಟಾಗಿ ಒಂದು ಕಾರ್ಯಕ್ರಮವನ್ನು ಮಾಡಿದವು, ಅದರ ಹೆಸರು ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ. ಇಂತಹ ಕಾರ್ಯಕ್ರಮಗಳಿಂದ ಸುಳ್ಳು ನಿರೂಪಣೆ ರಚಿಸಲಾಗುತ್ತದೆ. ನಮ್ಮ ದೇಶದ ಚಿತ್ರಮಂದಿರಗಳಲ್ಲಿ ಅನೇಕ ವರ್ಷಗಳಿಂದ ಕೇಸರಿ ಬಟ್ಟೆ ಧರಿಸಿದ ಸಾಧುಗಳನ್ನು ಕಳ್ಳರು, ಅತ್ಯಾಚಾರಿಗಳು, ದರೋಡೆಕೋರರಂತೆ ತೋರಿಸಲಾಗುತ್ತದೆ. ಈ ಸುಳ್ಳು ನಿರೂಪಣೆಯನ್ನು ನಾಶಪಡಿಸುವ ಅವಶ್ಯಕತೆ ಇದೆ.

ರಾಜಕೀಯ ನಾಯಕರು ಹಿಂದುತ್ವವನ್ನು ‘ಡೆಂಗ್ಯೂ’, ‘ಮಲೇರಿಯಾ’, ‘ಏಡ್ಸ್’ ಎಂದು ಕರೆದಾಗ, ಪ್ರಸಾರ ಮಾಧ್ಯಮಗಳು ಸುಮ್ಮನೆ ಕೂತಿರುತ್ತವೆ. ಅದೇ ರಾಜಕೀಯ ನಾಯಕರನ್ನು ಮಾಧ್ಯಮಗಳು ಇತರ ಧರ್ಮಗಳ ಬಗ್ಗೆ ಹೀಗೆ ಪ್ರಶ್ನಿಸುತ್ತವೆಯೇ? ಪ್ರಸ್ತುತ ಇಸ್ಲಾಮೋಫೋಬಿಯಾದ (ಇಸ್ಲಾಂ ದ್ವೇಷದ) ಚರ್ಚೆ ನಡೆಯುತ್ತಿದೆ. ವಾಸ್ತವದಲ್ಲಿ ಹಿಂದೂಫೋಬಿಯಾ (ಹಿಂದೂದ್ವೇಷ) ಬಹಳ ದೊಡ್ಡ ಪ್ರಮಾಣದಲ್ಲಿದೆ. ಹಿಂದೂಫೋಬಿಯಾದ ಕುರಿತು ಒಂದು ವರದಿ ಇದೆ. ಭಾರತದಲ್ಲಿ ಡಿಸೆಂಬರ್ ೨೦೨೫ ರ ಮೊದಲ ೧೧ ದಿನಗಳಲ್ಲಿ ಹಿಂದೂಗಳನ್ನು ಕೇವಲ ಅವರು ಹಿಂದೂಗಳಾಗಿರುವುದರಿಂದಲೇ ತೊಂದರೆ ನೀಡಿದ ೧೦೪ ಘಟನೆಗಳು ನಡೆದಿವೆ. ‘ಧುರಂಧರ’ ಬಂದ ಬಳಿಕ, ಇದನ್ನು ಇಸ್ಲಾಮೋಫೋಬಿಯಾ ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಹಿಂದೂಫೋಬಿಯಾದ ಅಂಕಿ-ಅಂಶಗಳ ಕಡೆಗೆ ಗಮನ ಹರಿಸುವುದು ಅವಶ್ಯಕವಾಗಿದೆ.

ನುಸುಳುಕೋರರಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಬೇಕೇ? – ಅಶೋಕ ಶ್ರೀವಾಸ್ತವ, ಸಂಪಾದಕರು ‘ಡಿಡಿ ನ್ಯೂಸ್’

ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದರೆ, ಅದನ್ನು ಸ್ವಾಗತಿಸಬೇಕು. ‘ನಮ್ಮ ನಾಗರಿಕರು ಯಾರು?’ ಎಂಬುದು ನಮಗೇ ತಿಳಿದಿಲ್ಲ. ಸಯೀದಾ ಹಮೀದ್ ಎಂಬ ಮಹಿಳೆ ಸೋನಿಯಾ ಗಾಂಧಿಯವರ ಆಪ್ತಳಾಗಿದ್ದಳು. ಒಮ್ಮೆ ಅವರು, ಇತರ ದೇಶಗಳಿಂದ ಮುಸಲ್ಮಾನರು ಇಲ್ಲಿಗೆ ಬರುತ್ತಿದ್ದರೆ, ಅವರನ್ನು ಬರಲು ಬಿಡಬೇಕು. ಈ ಭೂಮಿ ಅಲ್ಲಾಹನ ಭೂಮಿ. ಯಾರಾದರೂ ಬಂದರೆ, ಅವರು ಇಲ್ಲಿ ಇರಲು ಅವಕಾಶ ಕೊಡಬೇಕು ಎಂದಿದ್ದರು. ಈಗ ಅವರಿಗೆ ಹೇಳಬೇಕು, ಮುಸಲ್ಮಾನರು ಅಲ್ಲಾಹನ ಭೂಮಿಯನ್ನು ವರ್ಷ ೧೯೪೭ ರಲ್ಲಿ ತೆಗೆದುಕೊಂಡು ಹೋದರು. ಈಗ ಈ ಭೂಮಿ ಶ್ರೀರಾಮನದ್ದಾಗಿದೆ.

ನುಸುಳುಕೋರರಿಗೆ ಕೆಂಪುಹಾಸಿಗೆ ಹಾಕಿ ಸ್ವಾಗತಿಸಬೇಕೇ? ನುಸುಳುವಿಕೆಯನ್ನು ತಡೆಯಲು ವಿಶೇಷ ಆಳವಾದ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ, ಅದರಲ್ಲಿ ಏನು ತೊಂದರೆ ಇದೆ? ದೇಶದ ನ್ಯಾಯಾಲಯಗಳಲ್ಲಿ ಬದಲಾವಣೆಗಳಾಗುತ್ತಿದ್ದರೆ, ಅದು ಒಳ್ಳೆಯದು. ಈಗ ಪ್ರಸಾರ ಮಾಧ್ಯಮಗಳು ತಮಿಳುನಾಡಿನ ಕಾರ್ತಿಕೇಯ ದೀಪಂನ ವಿಷಯವನ್ನು ಎತ್ತುತ್ತಿವೆ. ಇದು ಬಹಳ ಪ್ರಾಚೀನ ಸಂಪ್ರದಾಯ. ಯಾವ ಬೆಟ್ಟದ ಮೇಲೆ ದೀಪವನ್ನು ಬೆಳಗಿಸಲಾಗುತ್ತದೆಯೋ, ಅದರ ಪಕ್ಕದಲ್ಲಿ ದರ್ಗಾ ಕಟ್ಟಿದರೆ, ದೀಪ ಹಚ್ಚುವುದನ್ನು ನಿಲ್ಲಿಸಬೇಕೇ? ಇದರ ಕುರಿತು ನ್ಯಾಯಮೂರ್ತಿಗಳು ಹಿಂದೂಗಳ ಪರವಾಗಿ ತೀರ್ಪು ನೀಡಿದರೆ, ಅವರ ವಿರುದ್ಧ ಮಹಾಭಿಯೋಗ ನಡೆಸುವ ಮಾತುಗಳನ್ನು ಆಡಲಾಗುತ್ತಿದೆ. ಮಹಾಭಿಯೋಗಕ್ಕೆ ಒತ್ತಾಯ ಮಾಡುತ್ತಿರುವವರು ಪಾಕಿಸ್ತಾನದಿಂದ ಬಂದವರಲ್ಲ. ಅವರು ಹಿಂದೂಗಳ ಮತಗಳಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಅವರ ತಪ್ಪಿನ ಅರಿವು ಮಾಡಿಸುವುದು ಅವಶ್ಯಕವಾಗಿದೆ.

• ಪ್ರತಿಯೊಬ್ಬ ಸೈನಿಕ ಸನಾತನ ರಾಷ್ಟ್ರಕ್ಕಾಗಿ ಹೋರಾಡುತ್ತಾನೆ! – ವಿಂಗ್ ಕಮಾಂಡರ್ ವಿನಾಯಕ ಡಾವರೆ (ನಿವೃತ್ತ)

‘ಆಪರೇಷನ್ ಸಿಂದೂರ’ದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಪಹಲ್ಗಾಮ್ನಲ್ಲಿ ೨೬ ಪ್ರವಾಸಿಗರ ಧರ್ಮ ಕೇಳಿ ನಿರ್ದಯವಾಗಿ ಹತ್ಯೆ ಮಾಡಲಾಯಿತು. ಇದರ ಮೂಲ ಹಿಂದೂದ್ವೇಷವಾಗಿದೆ.

ಸರ್ಜಿಕಲ್ ಸ್ಟ್ರೈಕ್ ಮತ್ತು ಅದಕ್ಕೂ ಮೊದಲು ಮಾಡಿದ ೧-೨ ಪ್ರತಿಕಾರಗಳನ್ನು ಹೊರತುಪಡಿಸಿದರೆ, ಪಾಕಿಸ್ತಾನ ನಿರಂತರವಾಗಿ ಕುತಂತ್ರಗಳನ್ನು ಮಾಡುತ್ತಿದ್ದರೂ ಕಳೆದ ಅನೇಕ ವರ್ಷಗಳಲ್ಲಿ ಭಾರತದಿಂದ ಪ್ರತಿಕ್ರಿಯೆಯೇ ಇರಲಿಲ್ಲ. ವರ್ಷ ೨೦೧೪ ರಿಂದ ನಮ್ಮ ಮಾನಸಿಕತೆ ಬದಲಾಗಿದೆ. ರಾಜಕೀಯ ಇಚ್ಛಾಶಕ್ತಿ ಹೆಚ್ಚಿದೆ. ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಾದ ನಂತರ, ಪ್ರಧಾನಮಂತ್ರಿಗಳು ಮೂರೂ ಸೇನಾಪಡೆಗಳ ಮುಖ್ಯಸ್ಥರಿಗೆ ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ರಾಜಕೀಯ ಇಚ್ಛಾಶಕ್ತಿ ಮತ್ತು ಸೇನೆಗೆ ಸ್ವಾತಂತ್ರ್ಯ ಸಿಗುವುದು ಬಹಳ ಅವಶ್ಯಕ. ಇದರೊಂದಿಗೆ, ಸೇನೆಯ ಯೋಜನೆ ಬಹಳ ಮಹತ್ವದ್ದಾಗಿದೆ.

ಸೇನೆಯ ಅಪ್ರತಿಮ ಶೌರ್ಯದ ಜೊತೆಗೆ ಇಸ್ರೋ, ಡಿ.ಆರ್.ಡಿ.ಒ. ಯುದ್ಧ ತಂತ್ರಜ್ಞಾನದಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿವೆ ಎಂದರೆ ಅದಕ್ಕೆ ಸಾಟಿಯಿಲ್ಲ. ಹೊಸ ಯುದ್ಧ ಸಾಮಗ್ರಿಗಳು ನಿರಂತರವಾಗಿ ನಡೆಯುವ ಕೆಲಸವಾಗಿದೆ. ಕಳೆದ ೧೧ ವರ್ಷಗಳಲ್ಲಿ ಈ ಕೆಲಸ ಆಗಿದೆ. ಆಪರೇಷನ್ ಸಿಂದೂರದ ಸಮಯದಲ್ಲಿ ಹೇಗೆ ಗುರಿಯಿಟ್ಟು ದಾಳಿ ಮಾಡಲಾಗುತ್ತದೆ ಎಂಬುದನ್ನು ಜಗತ್ತಿಗೆ ನೋಡಲು ಸಿಕ್ಕಿತು. ಈ ಎಲ್ಲಾ ಕೌಶಲ್ಯಗಳನ್ನು ಪಡೆಯಲು ಸೇನೆ ಶ್ರಮಿಸಿದೆ. ಈ ಎಲ್ಲ ಪ್ರಯತ್ನಗಳ ಫಲವೇ ಆಪರೇಷನ್ ಸಿಂದೂರ ಆಗಿದೆ.

ಗಡಿಯಲ್ಲಿ ದೇಶಕ್ಕಾಗಿ ಹೋರಾಡುವ ಸೈನಿಕನ ಶ್ರದ್ಧೆ ಏನು? ಪ್ರತಿ ತರಬೇತಿಯ ಸಮಯದಲ್ಲಿ ಭಾರತೀಯ ಸೈನಿಕನಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತಿ ತುಂಬಲಾಗುತ್ತದೆ. ಪ್ರತಿಯೊಬ್ಬ ಸೈನಿಕ ಮೊದಲು ರಾಷ್ಟ್ರಕ್ಕಾಗಿ ಹೋರಾಡುತ್ತಾನೆ, ನಂತರ ತನ್ನ ಗುಂಪಿಗಾಗಿ(ಸೇನೆಯ ತುಕಡಿಗಾಗಿ?) ಹೋರಾಡುತ್ತಾನೆ, ನಂತರ ತನಗಾಗಿ ಹೋರಾಡುತ್ತಾನೆ. ಪ್ರತಿ ಗುಂಪಿಗೆ(ಸೇನೆಯ ತುಕಡಿಗೆ?) ಕೆಲವು ಘೋಷವಾಕ್ಯಗಳಿವೆ. ಅದರಿಂದ ಅವರ ಸ್ಫೂರ್ತಿ ಏನು ಎಂಬುದು ತಿಳಿಯುತ್ತದೆ.

ಯುದ್ಧದ ಕೆಲವು ಘೋಷವಾಕ್ಯಗಳು!

ರೆಜಿಮೆಂಟ್ ಹೆಸರು ಘೋಷವಾಕ್ಯ
ಮರಾಠಾ ಲೈಟ್ ಇನ್ಫಂಟ್ರಿ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ!
ರಾಜಪೂತಾನಾ ರೈಫಲ್ಸ್ ಬಜರಂಗ ಬಲಿ ಹನುಮಾನ ಕೀ ಜೈ!
ರಾಜಸ್ಥಾನ ರೆಜಿಮೆಂಟ್ ರಾಜಾ ರಾಮಚಂದ್ರ ಕೀ ಜೈ!
ಜಮ್ಮು – ಕಾಶ್ಮೀರ್ ರೈಫಲ್ಸ್ ಭಾರತಮಾತಾ ಕೀ ಜೈ!
ಡೋಗ್ರಾ ರೆಜಿಮೆಂಟ್ ಜ್ವಾಲಾಮಾತಾ ಕೀ ಜೈ!
ಗಢವಾಲ್ ರೈಫಲ್ಸ್ ಬದ್ರೀ ವಿಶಾಲ್ ಕೀ ಜೈ!

ಈ ಘೋಷಣೆಗಳು ಸೈನಿಕರಿಗೆ ಸ್ಫೂರ್ತಿ ನೀಡುತ್ತವೆ. ಈ ಘೋಷಣೆಗಳಿಂದಲೇ ಪ್ರತಿಯೊಬ್ಬ ಸೈನಿಕ ಸನಾತನ ರಾಷ್ಟ್ರಕ್ಕಾಗಿ ಹೋರಾಡುತ್ತಾನೆ ಎಂಬುದು ತಿಳಿದುಬರುತ್ತದೆ.

ಶತ್ರು ರಾಷ್ಟ್ರಗಳ ಆಕ್ರಮಣಕಾರಿ ಪ್ರತಿರೋಧ ಅವಶ್ಯಕ! – ಬ್ರಿಗೇಡಿಯರ್ ಸಂಜಯ್ ಅಗರ್ವಾಲ್ (ನಿವೃತ್ತ)

ವರ್ಷ ೧೯೬೨ ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ನಾವು ಸೋತಿದ್ದೇವೆ ಎಂದು ಹೇಳಲಾಗುತ್ತದೆ. ಆದರೆ, ಅದರ ನಂತರ ೫ ವರ್ಷಗಳಲ್ಲಿಯೇ ನಾವು ೧೯೬೭ ರಲ್ಲಿ ಚೀನಾವನ್ನು ದೊಡ್ಡ ಪ್ರಮಾಣದಲ್ಲಿ ಸೋಲಿಸಿದ್ದೆವು; ಆದರೆ ಅದು ಹೆಚ್ಚಾಗಿ ಚರ್ಚೆಗೆ ಬರುವುದಿಲ್ಲ.

ನಾವು ನಮ್ಮ ಸಾಮರ್ಥ್ಯವನ್ನು ಮರೆತಿದ್ದೇವೆ. ಯಾವುದೇ ಶತ್ರು ದೇಶದ ಕುರಿತು ನಮ್ಮ ನೀತಿ ಏನಾಗಿರಬೇಕು?ಎಂಬುದನ್ನು ಎಂದಿಗೂ ಸ್ಪಷ್ಟಪಡಿಸಬಾರದು. ಇದರಿಂದ ನಮ್ಮ ಬಳಿ ಅನೇಕ ಆಯ್ಕೆಗಳು ಲಭ್ಯವಿರುತ್ತವೆ. ಆಪರೇಷನ್ ಸಿಂದೂರಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಅವಶ್ಯಕತೆ ಬಿದ್ದರೆ, ಅಣ್ವಸ್ತ್ರ ನೀತಿಯಲ್ಲಿಯೂ ಬದಲಾವಣೆ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯಿಂದ ಅಮೆರಿಕಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳು ಕಂಗಾಲಾಗಿದ್ದವು. ನಮ್ಮ ಸೇನಾ ಶಕ್ತಿ ಒಂದು ಪ್ರಮುಖ ಭಾಗವಾಗಿದೆ. ಸಾಮೂಹಿಕ ಶಕ್ತಿಯಿಂದಲೇ ದೇಶ ಜಯಶಾಲಿಯಾಗುತ್ತದೆ. ನಾವು ಅತ್ಯಂತ ಶಕ್ತಿಶಾಲಿಗಳು. ನಾವು ನಮ್ಮ ಶಕ್ತಿಯನ್ನು ಮರೆತಿದ್ದೇವೆ. ನಮ್ಮ ಶಕ್ತಿಯ ಅರಿವಾಗಲು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಂತಹ ಮಹೋತ್ಸವಗಳ ಅವಶ್ಯಕತೆ ಇದೆ. ಶಕ್ತಿಯ ಜಾಗೃತಿಗಾಗಿ ತಕ್ಷಣದ ಗುರಿ, ಮಧ್ಯಮ ಗುರಿ ಮತ್ತು ದೀರ್ಘಕಾಲೀನ ಗುರಿಯನ್ನು ಇಟ್ಟುಕೊಳ್ಳಬೇಕು. ಕ್ರಿಕೆಟ್ನಲ್ಲಿಯೂ ‘ಆಫೆನ್ಸಿವ್ ಡಿಫೆನ್ಸ್’ ಇರುವುದಿಲ್ಲ. ಕೇವಲ ಕ್ಷೇತ್ರರಕ್ಷಣೆ (ಫೀಲ್ಡಿಂಗ್) ಮಾಡಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ರನ್ ಗಳಿಸಬೇಕಾಗುತ್ತದೆ. ಅದನ್ನು ಈಗ ಯುದ್ಧದ ವಿಷಯದಲ್ಲಿ ಮಾಡುತ್ತಿದ್ದೇವೆ. ಟಿಬೆಟ್ ಮತ್ತು ತೈವಾನ್ ಚೀನಾದ ರೆಡ್ ಲೈನ್ಗಳಾಗಿವೆ. ಅವು ಚೆಕ್ಮೇಟ್ ಗೆ ಕಾರಣಗಳಾಗಿವೆ. ಕೊನೆಯಲ್ಲಿ ಮಾತ್ರ ಅವರನ್ನು ಯುದ್ಧದಲ್ಲಿ ಸೇರಿಸಿಕೊಳ್ಳಬೇಕು.

ಕಣಿವೆಗೆ ಕಾಶ್ಮೀರಿ ಹಿಂದೂಗಳ ಮರಳುವಿಕೆಯು ಕಾಶ್ಮೀರದಲ್ಲಿ ಭಾರತದ ‘ಘರ್ವಾಪಸಿ’! – ರಾಹುಲ್ ಕೌಲ್, ಅಧ್ಯಕ್ಷ, ‘ಯೂತ್ ಫಾರ್ ಪನೂನ್ ಕಾಶ್ಮೀರ್’

ಅನೇಕರಿಗೆ ಕಾಶ್ಮೀರಿ ಹಿಂದೂಗಳ ಸಮಸ್ಯೆಗಳು ೧೯೪೭ ರಲ್ಲಿ ಆದ ವಿಭಜನೆಯ ನಂತರದವು ಎಂದು ಅನಿಸುತ್ತದೆ. ವಾಸ್ತವದಲ್ಲಿ ಅದು ದೊಡ್ಡ ಭ್ರಮೆಯಾಗಿದೆ. ವರ್ಷ ೧೯೯೦ ರಲ್ಲಿ ಆದ ಕಾಶ್ಮೀರಿ ಹಿಂದೂಗಳ ವಲಸೆ ಏಳನೇ ವಲಸೆಯಾಗಿತ್ತು.

ವರ್ಷ ೧೯೪೭ ರವರೆಗೆ ಧರ್ಮದ ಕಾರಣದಿಂದ ಕಾಶ್ಮೀರಿ ಹಿಂದೂಗಳ ೫ ಬಾರಿ ವಲಸೆ ಆಗಿತ್ತು. ನಾವು ‘ಜಿಹಾಹ’ಅನ್ನು ‘ಜಿಹಾದ್’ ಎಂದು ಹೇಳಲು ಹೆದರುತ್ತೇವೆ. ನಾವು ಅದನ್ನು ‘ಭಯೋತ್ಪಾದನೆ’ ಎಂದು ಕರೆಯುತ್ತೇವೆ. ಇಂದು ನಮ್ಮದೇ ಸರಕಾರವು ಕಾಶ್ಮೀರಿ ಹಿಂದೂಗಳ ಹಿಂಸೆಯನ್ನು ‘ವಂಶವಿಚ್ಛೇದ’ ಎಂದು ಹೇಳಲು ನಿರಾಕರಿಸುತ್ತದೆ. ಕಾಶ್ಮೀರದಲ್ಲಿ ಜಿಹಾದ್ ಮೂಲಕ್ಕೆ ನೀರು-ಗೊಬ್ಬರ ಹಾಕಿದರೆ, ಅದರ ಕೊಂಬೆಗಳು ದೇಶದಾದ್ಯಂತ ಹರಡುತ್ತವೆ. ಕಾಶ್ಮೀರಿ ಹಿಂದೂಗಳ ಕಾಶ್ಮೀರ ಕಣಿವೆಗೆ ಮರಳುವಿಕೆ, ಕಾಶ್ಮೀರದಲ್ಲಿ ಭಾರತದ ಘರ್ವಾಪಸಿಯಾಗಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಘರ್ವಾಪಸಿ ಆದಾಗ ಭಾರತದಲ್ಲಿ ಹಿಂದೂಗಳ ಸಂಸ್ಕೃತಿಯ ಪುನರುಜ್ಜೀವನವಾಗುತ್ತದೆ ಎಂಬುದನ್ನು ಗಮನದಲ್ಲಿಡುವುದು ಮಹತ್ವದ್ದಾಗಿದೆ.

ವರ್ಷ ೧೯೯೦ ಕ್ಕಿಂತ ಮೊದಲು ಕಾಶ್ಮೀರದಲ್ಲಿ ವಾಸಿಸುತ್ತಿದ್ದ ಹಿಂದೂಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದರು. ಅಲ್ಲಿ ಇಸ್ಲಾಂನ ಪ್ರಾಬಲ್ಯ ಹೆಚ್ಚುತ್ತಿತ್ತು. ಕಾಶ್ಮೀರದಲ್ಲಿ ಹಿಂದೂಗಳು ರಾಜಕೀಯವಾಗಿ ಎಂದಿಗೂ ಸಬಲೀಕರಣಗೊಳ್ಳಲು ಸಾಧ್ಯವಾಗಲಿಲ್ಲ; ಏಕೆಂದರೆ ಅವರು ಭೌಗೋಳಿಕವಾಗಿ ಚದುರಿಹೋಗಿದ್ದರು. ಅವರು ಮತ್ತೆ ಮರಳಿ ಬರಲು ಕಾಶ್ಮೀರದಲ್ಲಿ ಕೇಂದ್ರಾಡಳಿತ ಪ್ರದೇಶ ನಿರ್ಮಾಣವಾಗಬೇಕು. ದೇಶಭಕ್ತ ಕಾಶ್ಮೀರಿ ಹಿಂದೂಗಳು ಇಲ್ಲಿ ಬಂದು ವಾಸಿಸಲು ಸಾಧ್ಯವಾಗುವಂತಹ ವಾತಾವರಣ ಅಲ್ಲಿ ನಿರ್ಮಾಣವಾಗಬೇಕು. ಈಗ ಪ್ರತಿರೋಧಿಸುವ ಸಮಯ ಬಂದಿದೆ. ಜನವರಿ ೧೬, ೨೦೨೬ ರಂದು ನಾವು ಅಷ್ಟಭೈರವ, ಜಗದಂಬಾರಿಗೆ ಆಹ್ವಾನಿಸಿ ಜಮ್ಮುವಿನಲ್ಲಿ ಆಂದೋಲನ ಪ್ರಾರಂಭಿಸಲಿದ್ದೇವೆ. ಕಾಶ್ಮೀರಿ ಹಿಂದೂಗಳನ್ನು ಅಲ್ಲಿ ಹೋಗಲು ಏನು ತೊಂದರೆ ಇದೆ? ಎಂದು ಕೇಳುವವರೆಗೆ ಈ ಆಂದೋಲನ ನಿಲ್ಲುವುದಿಲ್ಲ.

ಕಲಂ ೩೭೦ ಅನ್ನು ತೆಗೆದುಹಾಕಿದಾಗ, ಅದು ದೊಡ್ಡ ನಿರ್ಧಾರವಾಗಿತ್ತು; ಆದರೆ ಅದರ ನಂತರ ಕಾಶ್ಮೀರಿ ಹಿಂದೂಗಳ ಕಾಶ್ಮೀರ ಕಣಿವೆಗೆ ಮರಳುವಿಕೆಗಾಗಿ ಪ್ರಯತ್ನಗಳು ಆಗಲಿಲ್ಲ. ಅದಕ್ಕಾಗಿ ನಾವು ಈಗ ಪ್ರಯತ್ನಿಸಲಿದ್ದೇವೆ. ದೇಶವಾಸಿಗಳು ನಮ್ಮನ್ನು ಬೆಂಬಲಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಿದರು.

ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಧರ್ಮಕ್ಕಾಗಿ ಕಾರ್ಯ ನಿರ್ವಹಿಸಿರಿ! – ನೀರಜ ಅತ್ರಿ, ಅಧ್ಯಕ್ಷ, ‘ನ್ಯಾಷನಲ್ ಸೆಂಟರ್ ಫಾರ್ ಹಿಸ್ಟಾರಿಕಲ್ ರಿಸರ್ಚ್ ಅಂಡ್ ಕಂಪ್ಯಾರಿಟಿವ್ ಸ್ಟಡೀಸ್’

ಇಂದಿನ ಎಲ್ಲಾ ಯುವಕರು ಒಂದೇ ರೀತಿ ಯೋಚಿಸುವುದಿಲ್ಲ.. ಆಂದೋಲನದಲ್ಲಿ ಮುಂದೆ ಕೆಲವು ಯುವಕರು ಇರುತ್ತಾರೆ. ಅವರ ಹಿಂದೆ ಬೇರೆ ಶಕ್ತಿಗಳು ಇರುತ್ತವೆ.

ಇಂದೇ ನಾನು ಬೆಂಗಳೂರಿನಿಂದ ಬರುತ್ತಿದ್ದೆ. ವಿಮಾನ ನಿಲ್ದಾಣದಲ್ಲಿ ೨೫-೩೦ ಯುವಕರು ಭಜನೆಗಳನ್ನು ಹೇಳುತ್ತಿದ್ದರು. ಇದು ನಮ್ಮ ಯುವ ಪೀಳಿಗೆಯಾಗಿದೆ. ಶಿಕ್ಷಣ ವ್ಯವಸ್ಥೆ, ಮಾಧ್ಯಮಗಳಲ್ಲಿ ಈಗ ಬದಲಾವಣೆಗಳಾಗುತ್ತಿವೆ. ಯುವಕರನ್ನು ಪ್ರಚೋದಿಸುವವರಿಗೆ ತಕ್ಕ ಉತ್ತರ ನೀಡಲಾಗುವುದು.

ಮುಂಬಯಿಯ ಮೇಲೆ ನಡೆದ ೨೬/೧೧ ರ ದಾಳಿಯ ಸಮಯದಲ್ಲಿ ತುಕಾರಾಂ ಒಂಬಾಳೆ ಅವರ ಕೈಯಲ್ಲಿ ಕೇವಲ ಲಾಠಿ ಇತ್ತು. ಅದರ ಸಹಾಯದಿಂದ ಅವರು ಕಸಬ್ ನನ್ನು ಹಿಡಿದರು ಮತ್ತು ಆಗ ಕಾಂಗ್ರೆಸ್ ಸರಕಾರವು ರಚಿಸಿದ ಕೇಸರಿ ಭಯೋತ್ಪಾದನೆಯ ಷಡ್ಯಂತ್ರ ನಾಶವಾಯಿತು ಮತ್ತು ಕಾಂಗ್ರೆಸ್ಸಿನ ಅಧಿಕಾರಕ್ಕೆ ಕೊಳ್ಳಿ ಬಿತ್ತು. ಈ ಕೃತಿಯಿಂದ ಇತಿಹಾಸದ ದಿಕ್ಕೇ ಬದಲಾಯಿತು. ಆದ್ದರಿಂದ, ನಿಮ್ಮ ಶಕ್ತ್ಯಾನುಸಾರ ಧರ್ಮಕ್ಕಾಗಿ ಕಾರ್ಯ ನಿರ್ವಹಿಸುತ್ತಾ ಇರಬೇಕು.

ಹಿಂದೂಗಳು ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಆಗ್ರಹಿಸಬೇಕು! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು

ದಾಭೋಲಕರ್, ಕಲಬುರ್ಗಿ, ಪಾನಸರೆ, ಗೌರಿ ಲಂಕೇಶ್ ಈ ಪ್ರಗತಿಪರರ ಹತ್ಯೆಗಳ ನಂತರ ಬಹಳ ಗದ್ದಲ ಮಾಡಲಾಯಿತು. ಅದರ ಅಧ್ಯಯನ ಮಾಡಿದಾಗ, ಅವರ ಜೀವನದಲ್ಲಿ ನಕ್ಸಲರೊಂದಿಗೆ ಎಲ್ಲೋ ಸಂಬಂಧ ಬಂದಿದೆ ಎಂಬುದು ಕಂಡುಬಂದಿದೆ. ಹಿಂದುತ್ವ ನಿಷ್ಠ ಕಾರ್ಯಕರ್ತರು ಇವರೆಲ್ಲರನ್ನೂ ಕೊಂದಿದ್ದಾರೆ ಎಂಬುದು ಅವರ ಸಿದ್ಧಾಂತ.

ಅರ್ಬನ್ ನಕ್ಸಲರು ಎಷ್ಟು ಭಾರತೀಯರನ್ನು ಕೊಂದಿದ್ದಾರೆ ಎಂಬುದು ಎಷ್ಟು ಜನರಿಗೆ ತಿಳಿದಿದೆ? ಸುಮಾರು ೧೪ ಸಾವಿರದಷ್ಟಿದ್ದಾರೆ. ಇದರಲ್ಲಿ ಸಾಮಾನ್ಯ ನಾಗರಿಕರು, ಶಾಸಕರು, ಸರಪಂಚರು, ಆದಿವಾಸಿಗಳು ಎಲ್ಲರೂ ಇದ್ದಾರೆ. ಯಾರೋ ಹೇಳಿದರು, ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರು ಸರಕಾರದ ಮುಂದೆ ಶರಣಾಗತಿ ಹೊಂದುತ್ತಿದ್ದಾರೆ. ಹಾಗಾದರೆ ಅರ್ಬನ್ ನಕ್ಸಲವಾದ ಕೊನೆಗೊಳ್ಳುತ್ತದೆಯೇ? ಸಾಮ್ಯವಾದ ಮತ್ತು ಅರ್ಬನ್ ನಕ್ಸಲವಾದ ಒಂದೇ ಆಗಿವೆ. ಆದ್ದರಿಂದ, ಅರ್ಬನ್ ನಕ್ಸಲವಾದ ಸುಲಭವಾಗಿ ಕೊನೆಗೊಳ್ಳುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಗಡಿಯಲ್ಲಿರುವ ಸೈನಿಕನ ಪಾತ್ರವನ್ನು ನಿರ್ವಹಿಸಬೇಕು. ಇಸ್ರೇಲ್ ನಿರ್ಮಾಣವಾಗುವ ಮೊದಲು, ಯಹೂದಿಗಳು ಪ್ರತಿ ವರ್ಷ ಒಟ್ಟಾಗಿ ಸೇರುತ್ತಿದ್ದರು ಮತ್ತು ಮುಂದಿನ ವರ್ಷ ನಾವು ಇಸ್ರೇಲ್ನಲ್ಲಿ ಭೇಟಿಯಾಗೋಣ ಎಂದು ಹೇಳುತ್ತಿದ್ದರು. ಅವರು ಕನಸು ಕಾಣುತ್ತಿದ್ದರು. ನಾವು ಕೂಡ ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಆಗ್ರಹಿಸಬೇಕು.