ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

‘ನ್ಯಾಯಾಂಗ ಪರಿವರ್ತನೆಯ ಮೂಲಕ ಸುರಾಜ್ಯ’ ಎಂಬ ವಿಷಯದ ಕುರಿತು ಮಾತನಾಡುತ್ತಾ, ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು, ಭಾರತದ ವಿಭಜನೆಯು ಧರ್ಮದ ಆಧಾರದ ಮೇಲಾಗಿತ್ತು(ಹಿಂದೂಗಳಿಗಾಗಿ ಭಾರತ ಮತ್ತು ಮುಸಲ್ಮಾನರಿಗಾಗಿ ಪಾಕಿಸ್ತಾನ). ಹೀಗಿರುವಾಗ (ಭಾರತವು ಹಿಂದೂಗಳಿಗಾಗಿಯೇ ಇರುವಾಗ) ಧರ್ಮದ ಆಧಾರದ ಮೇಲೆ ಈ ದೇಶದಲ್ಲಿ ಬೇರೆ-ಬೇರೆ ಕಾನೂನುಗಳು, ನಿಯಮಗಳು, ಆಯೋಗಗಳು, ಸಚಿವಾಲಯಗಳು, ಆರ್ಥಿಕ ಸಹಾಯ, ರಿಯಾಯಿತಿಗಳು, ಶಾಲೆ-ಕಾಲೇಜುಗಳು ಇತ್ಯಾದಿಗಳಿರುವುದು ಸರಿಯೇ? ಹಾಗಿದ್ದರೂ ಇವೆಲ್ಲವೂ ನಮ್ಮ ದೇಶದಲ್ಲಿ ಹೇಗೆ ನಡೆಯುತ್ತಿವೆ? ದೇಶದ ಎಲ್ಲ ನ್ಯಾಯಾಧೀಶರಿಗೆ ನನ್ನ ಪ್ರಶ್ನೆಯೇನೆಂದರೆ, ಯಾವ ಧರ್ಮವು ಸಮಾನತೆಯನ್ನು ನಂಬುವುದಿಲ್ಲವೋ ಮತ್ತು ತನ್ನನ್ನು ತಾನು ಶ್ರೇಷ್ಠವೆಂದು ಪರಿಗಣಿಸುತ್ತದೆಯೋ ಅಂತಹ ಧರ್ಮವನ್ನು ಭಾರತೀಯ ಸಂವಿಧಾನವು ಮಾನ್ಯತೆ ನೀಡುತ್ತದೆಯೇ?
ಅಧರ್ಮವನ್ನು ನಾಶ ಮಾಡುವುದು ರಾಜ್ಯದ ಜವಾಬ್ದಾರಿಯಾಗಿರುತ್ತದೆ. ಭೌತಿಕ ಅಭಿವೃದ್ಧಿಯ ಕಡೆಗೆ ಗಮನ ಕೊಡುವುದರ ಜೊತೆಗೆ, ನೈತಿಕ, ಆಧ್ಯಾತ್ಮಿಕ ಮತ್ತು ಚಾರಿತ್ರ್ಯವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯೂ ಸಹ ರಾಜ್ಯದ ಮೇಲಿದೆ. ದೇಶದಲ್ಲಿ ಕಠಿಣ ಕಾನೂನುಗಳನ್ನು ತರುವುದು ಅವಶ್ಯಕವಾಗಿದೆ. ಸಿಂಗಾಪುರದಲ್ಲಿ ೯೦೦ ಗ್ರಾಂ ಮಾದಕ ವಸ್ತುಗಳು ಪತ್ತೆಯಾದರೆ ಸಂಬಂಧಪಟ್ಟ ವ್ಯಕ್ತಿಯನ್ನು ಗಲ್ಲಿಗೇರಿಸಲಾಗುತ್ತದೆ ಮತ್ತು ಭಾರತದಲ್ಲಿ ೯ ಕಿಲೋ ಮಾದಕ ವಸ್ತುಗಳೊಂದಿಗೆ ಪತ್ತೆಯಾದ ವ್ಯಕ್ತಿಗೆ ಜಾಮೀನು ನೀಡಲಾಗುತ್ತದೆ. ಚೀನಾದಲ್ಲಿ ಭ್ರಷ್ಟ ಮಂತ್ರಿಗಳಿಗೆ ಗಲ್ಲು ಶಿಕ್ಷೆಯಾಗುತ್ತದೆ; ಆದರೆ ಭಾರತದಲ್ಲಿ ಭ್ರಷ್ಟ ನಾಯಕರಿಗೆ ಶಿಕ್ಷೆಯೇ ಆಗುವುದಿಲ್ಲ. ಆದ್ದರಿಂದ, ದೇಶದಲ್ಲಿ ಕಾನೂನಿನ ಭಯ ಯಾರಿಗೂ ಉಳಿದಿಲ್ಲ. ಇಂದು ನಾನು ಕರೆ ನೀಡುತ್ತೇನೆ, ನಾನು ಪ್ರಸ್ತಾಪಿಸಿದ ಕಾನೂನನ್ನು ಸರಕಾರ ಜಾರಿಗೊಳಿಸಿದರೆ, ದೇಶದ ಶೇ. ೯೦% ರಷ್ಟು ಒಳನುಸುಳುವಿಕೆ ಒಂದೇ ವರ್ಷದಲ್ಲಿ ಕೊನೆಗೊಳ್ಳುತ್ತದೆ! ಹಾಗಾಗದಿದ್ದರೆ, ನಾನು ಸಾಮಾಜಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ! ಎಂದು ಅಶ್ವಿನಿ ಉಪಾಧ್ಯಾಯ ಅವರು ಸವಾಲೆಸೆದರು.
‘ಮತಾಂತರಿತಗೊಂಡವರ ಶುದ್ಧೀಕರಣ’ ಮಾಡುವುದು ಹಿಂದೂ ಸಮಾಜದ ಆಂದೋಲನವಾಗಬೇಕು!೧. ಇಂದು ಪ್ರತಿವರ್ಷ ೫ ಲಕ್ಷ ಮಹಿಳೆಯರು ಕಾಣೆಯಾಗುತ್ತಾರೆ. ಅವರಲ್ಲಿ ಒಂದೂವರೆ ಲಕ್ಷ ಮಹಿಳೆಯರು ಮರಳಿ ಬರುತ್ತಾರೆ, ಆದರೆ ಉಳಿದ ೩ ಲಕ್ಷ ೫೦ ಸಾವಿರ ಮಹಿಳೆಯರು ಪತ್ತೆಯಾಗುವುದಿಲ್ಲ. ಆ ಮಹಿಳೆಯರು ಎಲ್ಲಿ ಹೋಗುತ್ತಾರೆ? ಅವರು ‘ಲವ್ ಜಿಹಾದ್’ ಮೂಲಕ ಮತಾಂತರಗೊಂಡಿರುತ್ತಾರೆ. ೨. ‘ದೇಶಾದ್ಯಂತ ೫ ಕೋಟಿ ಅಕ್ರಮ ವಲಸಿಗರಿರಬಹುದು’ ಎಂದು ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. ಈಗ ವಿವಿಧ ಸರಕಾರಗಳಿಗೆ ಲೆಕ್ಕ ಹಾಕಿದಾಗ ತಿಳಿದು ಬಂದಿದ್ದೇನೆಂದರೆ, ಈ ಸಂಖ್ಯೆ ೮ ಕೋಟಿಗಳಿಗಿಂತ ಹೆಚ್ಚಿದೆ. ಇದೇ ಜನ ‘ಲವ್ ಜಿಹಾದ್’, ‘ಭೂಮಿ ಜಿಹಾದ್’, ‘ಉಗುಳು ಜಿಹಾದ್’, ‘ಭಯೋತ್ಪಾದನೆ’ ಇತ್ಯಾದಿಗಳನ್ನು ಮಾಡುತ್ತಾರೆ. ೪. ಈ ಸಮಸ್ಯೆಯನ್ನು ‘ಹಿಂದೂ ಮತ್ತು ಮುಸಲ್ಮಾನ’ ಎಂದು ನೋಡದೆ, ‘ಹಿಂದೂ ಮತ್ತು ಮತಾಂತರಗೊಂಡ ಹಿಂದೂ’ ಎಂದು ನೋಡಬೇಕು. |

ಕ್ಷಣಚಿತ್ರ: ಶ್ರೀ. ಉಪಾಧ್ಯಾಯ ಅವರು ತಮ್ಮ ಭಾಷಣದ ವೇಳೆ ಅಧೀನ ಮನಸ್ಥಿತಿಯ ವಿರುದ್ಧ ಘೋಷಣೆಗಳನ್ನು ಮಾಡುತ್ತಾ, ಹಾಜರಿದ್ದವರನ್ನು ಪ್ರೋತ್ಸಾಹಿಸಿದರು ಮತ್ತು ಸಭಾಂಗಣವನ್ನು ಪ್ರತಿಧ್ವನಿಸುವಂತೆ ಮಾಡಿದರು. ‘ಘರವಾಪಸಿ ಕರಾಯೆಂಗೆ, ಹಿಂದೂ ರಾಷ್ಟ್ರ ಬನಾಯೆಂಗೆ’ (ಮನೆಗೆ ಮರಳಿ ಕರೆತರುತ್ತೇವೆ, ಹಿಂದೂ ರಾಷ್ಟ್ರ ನಿರ್ಮಿಸುತ್ತೇವೆ) ಎಂಬ ಘೋಷಣೆಯನ್ನೂ ಸಹ ಅವರು ಮಾಡಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!