ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸತ್ಸಂಗದಲ್ಲಿ ‘ಸಾಧಕನ ಮನಸ್ಸಿನಲ್ಲಿ ಸತತವಾಗಿ ಮೃತ್ಯುವಿನ ವಿಚಾರ ಬರುವುದು’, ಈ ಕುರಿತು ನೀಡಿದ ದೃಷ್ಟಿಕೋನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಒಮ್ಮೆ ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಈ ಸತ್ಸಂಗದಲ್ಲಿ ಸಾಧಕಿಯ ಯಜಮಾನರಾದ ಶ್ರೀ. ಮಧುಸೂದನ ಕುಲಕರ್ಣಿ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೬೨ ವರ್ಷ) ಇವರ ಮನಸ್ಸಿನಲ್ಲಿ ಬರುವ ಮೃತ್ಯುವಿನ ವಿಚಾರವನ್ನು ಹೇಳಿದಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ದೃಷ್ಟಿಕೋನವನ್ನು ಮುಂದೆ ಕೊಡಲಾಗಿದೆ.

ಶ್ರೀ. ಮಧುಸೂದನ ಕುಲಕರ್ಣಿ

ಸೌ. ಸುಜಾತಾ ಕುಲಕರ್ಣಿ : ಪ.ಪೂ. ಗುರುದೇವಾ, ೨-೩ ವರ್ಷಗಳ ಹಿಂದೆ ನನ್ನ ಯಜಮಾನರ ಅಣ್ಣನ ನಿಧನವಾಯಿತು. ಅವರಿಗೆ ಹೃದಯಘಾತ (ಹಾರ್ಟಾಟ್ಯಾಕ್) ಆಗಿತ್ತು. ಈಗ ೩ ತಿಂಗಳ ಹಿಂದೆ ಯಜಮಾನರ ಕಿರಿಯ ಸಹೋದರನೂ ಅರ್ಬುದರೋಗದಿಂದ ನಿಧನರಾದರು. ಆದ್ದರಿಂದ ಈಗ ೩ ಸಹೋದರರಲ್ಲಿ ಯಜಮಾನರೊಬ್ಬರೇ ಉಳಿದಿದ್ದಾರೆ. ಈಗ ಅವರ ಮನಸ್ಸಿನಲ್ಲಿ ಸತತವಾಗಿ, ‘ಈಗ ನನ್ನ ಸರದಿ ಬರುವುದು’, ‘ಈಗ ನನಗೂ ಸಾವು ಬರುವುದು,’ ಎಂಬ ವಿಚಾರಗಳು ಬರುತ್ತವೆ. ಆಗ ನನಗೆ, ಕಳೆದ ಕೇವಲ ೨೦-೨೫ ವರ್ಷಗಳಿಂದ ಅಲ್ಲದೇ ಕಳೆದ ಅನೇಕ ಜನ್ಮಗಳಿಂದ ತಾವೇ ಅವರನ್ನು ಸಂಭಾಳಿಸುತ್ತಿದ್ದೀರಿ, ಎಂದು ಅನಿಸಿತು.

(ವರ್ಷ ೨೦೦೨ ರಲ್ಲಿ ಶ್ರೀ. ಮಧುಸೂದನ ಕುಲಕರ್ಣಿಯವರಿಗೆ ಮೃತ್ಯುಯೋಗ ಬಂದಿತ್ತು ಮತ್ತು ಅದನ್ನು ಗುರುದೇವರೇ ತಪ್ಪಿಸಿದ್ದರು. ವಿವಿಧ ರೋಗಗಳಿಂದ ಪೀಡಿತವಾಗಿರುವ ಶ್ರೀ. ಮಧುಸೂದನ ಇವರನ್ನು ಗುರುದೇವರು ನಿರಂತರ ರಕ್ಷಣೆ ಮಾಡುತ್ತಿದ್ದಾರೆ ಮತ್ತು ಅವರಿಗೆ ಜೀವದಾನ ನೀಡುತ್ತಿದ್ದಾರೆ. ಅನೇಕ ಕಾಯಿಲೆಗಳಿದ್ದರೂ ಶ್ರೀ. ಮಧುಸೂದನ ಇವರ ವ್ಯಾಧಿಗ್ರಸ್ತ ಅಂಗಗಳಿಗೆ ಹೆಚ್ಚು ಹಾನಿ (ಡ್ಯಾಮೇಜ್) ಆಗಲಿಲ್ಲ. ಇದೆಷ್ಟು ದೊಡ್ಡ ಕೃಪೆಯಾಗಿದೆ !)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚೈತನ್ಯಮಯ ವಾಣಿಯ ಮಹತ್ವ ಮತ್ತು ಆ ವಾಣಿಯಿಂದ ಸಾಧಕರ ಮೇಲೆ ಬೀರುವ ಪರಿಣಾಮ !

ಸೌ. ಸುಜಾತಾ ಮಧುಸೂದನ ಕುಲಕರ್ಣಿ

    ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೊಂದಿಗೆ ಮೇಲಿನ ಸಂಭಾಷಣೆ ಆದನಂತರ ಸುಮಾರು ಒಂದೂವರೆ ವರ್ಷದ ನಂತರ ನಾನು ಆ ಲೇಖನವನ್ನು ಓದಿ ಅದರ ಸಂಕಲನವನ್ನು ಮಾಡುತ್ತಿದ್ದೆನು. ಆಗ, ಕಳೆದ ಒಂದೂವರೆ ವರ್ಷದಲ್ಲಿ ಶ್ರೀ. ಮಧುಸೂದನ ಕುಲಕರ್ಣಿ ಇವರ ಮನಸ್ಸಿನಲ್ಲಿನ ಮೃತ್ಯುವಿನ ವಿಚಾರಗಳು ಬಹಳಷ್ಟು ಕಡಿಮೆ ಆಗಿವೆ ಮತ್ತು ಮೃತ್ಯುವಿನ ಭಯವೂ ಸಂಪೂರ್ಣವಾಗಿ ಕಡಿಮೆ ಆಯಿತು. ಆದ್ದರಿಂದ ಅವರು ಒಂದು ಬಾರಿಯೂ ತಮ್ಮ ಮೃತ್ಯುವಿನ ವಿಷಯದ ಬಗ್ಗೆ ಏನು ಮಾತನಾಡಲಿಲ್ಲ, ಎಂಬುದು ನನ್ನ ಗಮನಕ್ಕೆ ಬಂದಿತು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಾಣಿಯ ಮಹಾತ್ಮೆಯು ಗಮನಕ್ಕೆ ಬರುತ್ತದೆ. ಗುರುದೇವರ ಸಹಜ ಮಾತುಗಳೂ ಕೂಡ ಸಂಕಲ್ಪದಂತೆಯೇ ಇರುತ್ತದೆ ಮತ್ತು ಅದು ಸಾಧಕರ ಅಂತರ್ಮನಸ್ಸಿನಲ್ಲಿ ಅಂಕಿತಗೊಳಿಸುತ್ತದೆ. ಗುರುದೇವರ ಚೈತನ್ಯಮಯ ವಾಣಿಯಿಂದ ‘ಸಾಧಕರ ಮನಸ್ಸಿನಲ್ಲಿನ ಭಯ, ಅಸುರಕ್ಷತೆಯ ಭಾವನೆ ಮತ್ತು ಅನಾವಶ್ಯಕ ವಿಚಾರಗಳು’ ಈ ಎಲ್ಲವೂ ದೂರವಾಗಿ ಅವನಿಗೆ ಪ್ರಾರಬ್ಧದವನ್ನು ಪರಿಹರಿಸಲು ಶಕ್ತಿ ಸಿಗುತ್ತದೆ. ಧನ್ಯ ಧನ್ಯ ಆ ಗುರುದೇವರು ಮತ್ತು ಅವರ ಸಾಧಕರ ಮೇಲಿನ ಪ್ರೀತಿಯನ್ನು ನೋಡಿ ಧನ್ಯಳಾದೆನು !’ – ಸೌ. ಸುಜಾತಾ ಮಧುಸೂದನ ಕುಲಕರ್ಣಿ, ಫೊಂಡಾ, ಗೋವಾ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಾವು ಎಲ್ಲರಿಗೂ ಬರುತ್ತದೆ. ಅದರ ಬಗ್ಗೆ ವಿಚಾರ ಮಾಡುವುದು ಬೇಡ. ಈಶ್ವರನ ಇಚ್ಛೆ ಇದ್ದರೆ, ಸಾವು ಖಂಡಿತ ಬರುವುದು; ಆದರೆ ಮರಣದ ಸಮಯದಲ್ಲಿ ನಮ್ಮಿಂದ ನಾಮಜಪ ನಡೆದರೆ ಮಾತ್ರ ನಾವು ಈಶ್ವರನ ಬಳಿ ಹೋಗುವೆವು ! ನಮಗೆ ಇನ್ನು ಬೇರೆ ಏನು ಬೇಕು ? ಈಶ್ವರನ ಬಳಿ ಹೋದರೆ ಮನುಷ್ಯಜನ್ಮದ ಸಾರ್ಥಕವಾಗುತ್ತದೆ ಅಲ್ಲ !

ನನಗೂ ಕೂಡ ಸಾವು ಖಂಡಿತ ಬರುತ್ತದೆ; ಆದರೆ ಅದರ ಮೊದಲು ನನಗೆ ‘ಸಾಧಕರಿಗೆ ಭೇಟಿಯಾಗಬೇಕು ಮತ್ತು ಅವರಿಗೆ ಸಾಧನೆಯ ಬಗ್ಗೆ ಏನಾದರು ಹೇಳಬೇಕು’, ಎಂಬ ವಿಚಾರಗಳು ಬರುತ್ತವೆ. ಅನಂತರ ಸಾವು ಬರುವುದಿದ್ದರೆ, ಅದು ಸಂತೋಷದಿಂದ ಬರಲಿ. ಈ ರೀತಿ ಸೇವೆಯ ವಿಚಾರಗಳೇ ಹೆಚ್ಚು ಇರಬೇಕು. ತಿಳಿಯತಲ್ಲ !

ಶ್ರೀ. ಮಧುಸೂದನ ಕುಲಕರ್ಣಿ : ಹೌದು ಗುರುದೇವಾ !