|

ಇಂದ್ರಪ್ರಸ್ಥ (ನವದೆಹಲಿ), ಡಿಸೆಂಬರ್ ೧೨ (ವಾರ್ತೆ) – ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ, ಶಾಸ್ತ್ರ ಮತ್ತು ಶಸ್ತ್ರ ಪರಂಪರೆಯನ್ನು ಜಾಗೃತಗೊಳಿಸುವ ಮತ್ತು ಹಿಂದೂಗಳ ಶೌರ್ಯವನ್ನು ಹೆಚ್ಚಿಸುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಕ್ಕಾಗಿ ದೇಶದ ರಾಜಧಾನಿ ದೆಹಲಿ ಸಜ್ಜಾಗಿದೆ. ಡಿಸೆಂಬರ್ ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ಈ ಮಹೋತ್ಸವದ ಉದ್ಘಾಟನೆಯಾಗಲಿದೆ. ಮಹೋತ್ಸವದಲ್ಲಿ ಭಾಗವಹಿಸಲು ದೇಶ-ವಿದೇಶಗಳ ಗಣ್ಯರು, ಹಾಗೂ ಸಂತ-ಮಹಂತರು ದೆಹಲಿಗೆ ಆಗಮಿಸಿದ್ದಾರೆ. ದೇಶ-ವಿದೇಶಗಳಿಂದ ೮೦೦ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಈ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಭಾರತದ ೧೯ ರಾಜ್ಯಗಳ ಗಣ್ಯರು ಈ ಮಹೋತ್ಸವಕ್ಕಾಗಿ ಆಗಮಿಸುತ್ತಿದ್ದಾರೆ.
ಇದನ್ನು ಓದಿರಿ → ಸಂಪಾದಕೀಯ : ‘ಸನಾತನ ರಾಷ್ಟ್ರ’ದ ಶಂಖನಾದ ಏಕೆ ?
ಮಹೋತ್ಸವಕ್ಕಾಗಿ ಸಿದ್ಧಗೊಂಡ ದೆಹಲಿಯ ಭಾರತ ಮಂಟಪಂ ಸಭಾಂಗಣ ಸ್ವರಾಜ್ಯದ ಶೌರ್ಯಗಾಥೆಯನ್ನು ಹೇಳುವ ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರಾಚೀನ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ‘ಭಾರತ ಮಂಟಪಂ’ನ ೧೨ನೇ ಕ್ರಮಾಂಕದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಮುಖ್ಯ ಸಭಾಂಗಣದ ಹೊರತಾಗಿ ಇತರ ಸಭಾಂಗಣಗಳಲ್ಲಿ ಸಮಾನಾಂತರ ಗೋಷ್ಠಿಗಳಲ್ಲಿ ಗಣ್ಯರ ಚರ್ಚಾಕೂಟಗಳು ನಡೆಯಲಿವೆ.
ಉದ್ಘಾಟನಾ ಸಮಾರಂಭದಲ್ಲಿ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೆ ೧೫೦ ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಗೀತೆಯ ಸಾಮೂಹಿಕ ಗಾಯನವನ್ನು ಆಯೋಜಿಸಲಾಗಿದೆ. ಸ್ವರಾಜ್ಯದ ವಿಧಿ ಮತ್ತು ನ್ಯಾಯ ದೃಷ್ಟಿ, ಹಿಂದೂ ಧರ್ಮಕ್ಕೆ ಪುನಃ ಪ್ರವೇಶಿಸುವ ಬಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ದೃಷ್ಟಿಕೋನ, ಹಲಾಲ್ ಆರ್ಥಿಕತೆ ಮತ್ತು ಮತಾಂಧತೆ, ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಮುಂತಾದ ವಿಷಯಗಳ ಬಗ್ಗೆ ವಿಚಾರಮಂಥನ ನಡೆಯಲಿದೆ. ಭಾರತ ಮಂಟಪಂನ ಭವ್ಯ ಆವರಣದಲ್ಲಿ ಮಹೋತ್ಸವದ ಸಿದ್ಧತೆಗಳು ನಡೆಯುತ್ತಿದ್ದು, ಈ ಕಾರ್ಯಕ್ರಮದ ಬಗ್ಗೆ ಅಲ್ಲಿನ ಸ್ಥಳೀಯ ಜನರಲ್ಲಿ ಕುತೂಹಲ ಹೆಚ್ಚಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!