ಪ.ಪೂ. ಗುರುದೇವ ಡಾ. ಕಾಟೇ ಸ್ವಾಮೀಜಿಯವರ ಅಮೂಲ್ಯ ವಿಚಾರಸಂಪತ್ತು !

‘ಜೀವವು ಯಾವ ಅಶುಭ ಕರ್ಮಗಳನ್ನು ಮನಸ್ಸಿನಿಂದ ಮಾಡುತ್ತದೆಯೋ, ಅದರ ಫಲವನ್ನು ಅದು ಮನಸ್ಸಿನಿಂದಲೇ ಭೋಗಿಸುತ್ತದೆ. ವಾಣಿಯಿಂದ ಮಾಡಿದ ಪಾಪ-ಪುಣ್ಯಗಳ ಫಲವನ್ನು, ವಾಣಿಯ ಮೂಲಕವೇ ಭೋಗಿಸುತ್ತದೆ. ಶರೀರದಿಂದ ಮಾಡಿದ ಪಾಪ-ಪುಣ್ಯಗಳ ಫಲವನ್ನು ಅದು ಶರೀರದಿಂದಲೇ ಭೋಗಿಸುತ್ತದೆ; ಆದುದರಿಂದ ಮಾನಸಿಕ, ವಾಚಿಕ, ಕಾಯಿಕ ಅಶುಭ ಕರ್ಮಗಳನ್ನು ಮಾಡಬಾರದು.
೧. ಅಶುಭ ಮಾನಸಿಕ ಕರ್ಮಗಳು
ಪರಧನವನ್ನು ಅನ್ಯಾಯದಿಂದ ಪಡೆಯುವ ಚಿಂತನೆ ಮಾಡುವುದು, ಬ್ರಾಹ್ಮಣ ಮುಂತಾದವರನ್ನು ಕೊಲ್ಲುವ ವಿಚಾರ ಮಾಡುವುದು, ಪರಲೋಕವಿಲ್ಲ ಮತ್ತು ದೇಹವೇ ಆತ್ಮವಾಗಿದೆ, ಎಂದು ಆಗ್ರಹ ಮಾಡುವುದು, ಇವು ೩ ಅಶುಭ ಮಾನಸಿಕ ಕರ್ಮಗಳಾಗಿವೆ.
೨. ವಾಣಿಯ ಅಶುಭ ಕರ್ಮಗಳು
ಅಪ್ರಿಯ ಮತ್ತು ಅಸತ್ಯ ನುಡಿ, ಕಠೋರ ಮಾತು, ಯಾರಾದರೊಬ್ಬನ ಅನುಪಸ್ಥಿತಿಯಲ್ಲಿ ಅವನ ದೋಷವನ್ನು ಹೇಳುವುದು; ರಾಜ, ಸ್ವದೇಶ ಅಥವಾ ತನ್ನ ನಗರ ಇವುಗಳ ಬಗ್ಗೆ ನಿರರ್ಥಕ ಮತ್ತು ಅಸತ್ಯ ಗಾಳಿಸುದ್ದಿಯನ್ನು ಹಬ್ಬಿಸುವುದು.
೩. ಶಾರೀರಿಕ ಅಶುಭ ಕರ್ಮಗಳು
ಅನ್ಯಾಯದಿಂದ, ಬಲವಂತವಾಗಿ ವಸ್ತುಗಳನ್ನು ಕಸಿದು ಕೊಳ್ಳುವುದು; ಧರ್ಮಶಾಸ್ತ್ರವು ಅನುಮತಿ ನೀಡದಿರುವಂತಹ ಹಿಂಸೆಯನ್ನು ಮಾಡುವುದು, ಪರಸ್ತ್ರೀ ಸಂಗ ಮಾಡುವುದು ಮನಸ್ಸು, ವಾಣಿ ಮತ್ತು ದೇಹದಿಂದ ಮಾಡಿದ ಶುಭ ಮತ್ತು ಅಶುಭ ಕರ್ಮಗಳು ಸುಖ ಅಥವಾ ದುಃಖಾತ್ಮಕ ಫಲಗಳನ್ನು ನೀಡುತ್ತವೆ. ಮುಂದಿನ ಜನ್ಮದಲ್ಲಿ ಕರ್ಮಾನುಸಾರ ಅವನಿಗೆ ಉತ್ತಮ (ಮನುಷ್ಯ), ಮಧ್ಯಮ (ಪಶು), ಅಧಮ (ಪಕ್ಷಿ) ಜನ್ಮವು ಪ್ರಾಪ್ತವಾಗುತ್ತದೆ.’
– ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿ
(ಆಧಾರ : ಮಾಸಿಕ ‘ಘನಗರ್ಜಿತ’ ಅಕ್ಟೋಬರ್ ೨೦೨೩)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !