ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
ಪ್ರತಿವಾರ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡಲಿದ್ದೇವೆ, ಈ ಲೇಖನದಲ್ಲಿ ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ’ (ಲೇಖನ ೬)
ಭಾರತೀಯ ಕಲೆಗಳ ಇತಿಹಾಸ ಮತ್ತು ಅವುಗಳ ಆಧ್ಯಾತ್ಮಿಕ ಸ್ವರೂಪ !
‘ಭಾರತೀಯ ಕಲೆಗಳಿಗೆ ಆಧ್ಯಾತ್ಮಿಕ ಇತಿಹಾಸದ ಪ್ರಬುದ್ಧವಾದ ಪರಂಪರೆ ಲಭಿಸಿದೆ. ಭಾರತೀಯ ತತ್ತ್ವಜ್ಞಾನ ಮತ್ತು ಅಧ್ಯಾತ್ಮವು ಭಾರತೀಯ ಕಲೆಗಳ ಪ್ರೇರಣಾಸ್ಥಾನವಾಗಿದೆ. ಭಾರತೀಯ ಕಲೆಗಳು ಆಧ್ಯಾತ್ಮಿಕ ತಳಹದಿಯಿಂದ ಹುಟ್ಟಿಕೊಂಡಿದೆ. ಕಲೆಯ ಆಧ್ಯಾತ್ಮಿಕ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು, ನಾವು ಮೊದಲು ಭಾರತೀಯ ಸಂಸ್ಕ್ರತಿಯ ಉತ್ಪತ್ತಿ ಮತ್ತು ಅದರ ಮೂಲಕ ಸೃಷ್ಟಿಯ ನಿರ್ಮಿತಿಯ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗುವುದು. (ಭಾಗ ೧)
೧. ಆಧ್ಯಾತ್ಮಿಕ ದೃಷ್ಟಿಕೋನದಿಂದ ಸೃಷ್ಟಿಯ ನಿರ್ಮಿತಿಯ ಪ್ರಕ್ರಿಯೆ ಪರಮೇಶ್ವರನ ನಿರ್ಗುಣ ನಿರಾಕಾರ ತತ್ತ್ವದಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ತ್ರಿದೇವರ ನಿರ್ಮಿತಿಯಾಯಿತು.

೧ ಅ. ಸೃಷ್ಟಿನಿರ್ಮಿತಿಯ ಪ್ರಕ್ರಿಯೆಯಲ್ಲಿ ಪ್ರಥಮ ನಾದ ‘ಓಂ’ಕಾರ ! : ಶ್ರೀವಿಷ್ಣು ಪುರಾಣಕ್ಕನುಸಾರ ಕ್ಷೀರಸಾಗರದಲ್ಲಿ ವಿರಾಜಮಾನನಾಗಿರುವ ಭಗವಾನ ಶ್ರೀವಿಷ್ಣುವಿನ ನಾಭಿಕಮಲದಿಂದ ಬ್ರಹ್ಮದೇವರ ನಿರ್ಮಿತಿಯಾಯಿತು. ಶ್ರೀವಿಷ್ಣುವಿನ ಆದೇಶದಂತೆ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು. ಆ ಸಮಯದಲ್ಲಿ ಮೊದಲು ಉತ್ಪತ್ತಿಯಾದ ನಾದವೇ ‘ಓಂ’ಕಾರ. ಶಿವಪುರಾಣದಲ್ಲಿ ‘ಭಗವಾನ ಶಿವನ ಡಮರುವಿನ ನಾದದಿಂದ ‘ಓಂ’ಕಾರ ಸ್ವರೂಪವು ‘ನಾದಬ್ರಹ್ಮ’ವು ಪ್ರಕಟವಾಯಿತು. ಆ ನಾದದ ಮೂಲಕ ಸೃಷ್ಟಿಯ ನಿರ್ಮಿತಿಯ ಪ್ರಕ್ರಿಯೆ ನಡೆಯಿತು’ ಎಂದು ಹೇಳಲಾಗುತ್ತದೆ. ಶ್ರೀವಿಷ್ಣುಪುರಾಣ ಮತ್ತು ಶಿವಪುರಾಣ ಇವೆರಡು ಪುರಾಣಗಳ ಪ್ರಕಾರ ‘ಓಂ’ಕಾರವು ಬ್ರಹ್ಮಾಂಡದ ಸೃಷ್ಟಿ ನಿರ್ಮಿತಿಯಲ್ಲಿ ಮೊದಲ ನಾದವೆಂದು ಪರಿಗಣಿಸಲಾಗಿದೆ.
೧ ಆ. ಶಾಸ್ತ್ರಗಳಲ್ಲಿ ಹೇಳಿರುವ ‘ಓಂ’ಕಾರದ ಮಹತ್ವ !
೧. ರಸೋಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ |
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೭, ಶ್ಲೋಕ ೮
ಅರ್ಥ : ಹೇ ಕುಂತಿಪುತ್ರ ಅರ್ಜುನನೇ, ನಾನು ನೀರಿನಲ್ಲಿ ರುಚಿಯಾಗಿದ್ದೇನೆ, ಚಂದ್ರ-ಸೂರ್ಯರಲ್ಲಿನ ಪ್ರಕಾಶವಾಗಿದ್ದೇನೆ, ಎಲ್ಲ ವೇದಗಳಲ್ಲಿನ ‘ಓಂ’ಕಾರನಾಗಿದ್ದೇನೆ, ಆಕಾಶದಲ್ಲಿನ ಶಬ್ದ ಮತ್ತು ಪುರುಷರಲ್ಲಿನ ಪುರುಷತ್ವನಾಗಿದ್ದಾನೆ.
೨. ಓಮಿತ್ಯೇತದಕ್ಷರಮಿದಂ ಸರ್ವಂ ತಸ್ಯೋಪವ್ಯಾಖ್ಯಾನಂ ಭೂತಂ ಭವದ್ ಭವಿಷ್ಯದಿತಿ ಸರ್ವಮೋಙ್ಕಾರ ಏವ |
ಯಚ್ಚಾನ್ಯತ್ ತ್ರಿಕಾಲಾತೀತಂ ತದಪ್ಯೋಙ್ಕಾರ ಏವ | – ಮಾಂಡುಕ್ಯೋಪನಿಷದ್, ವಾಕ್ಯ ೧
ಅರ್ಥ : ‘ಓಂ’ ಇದೇ ಅಕ್ಷರವಾಗಿದೆ, ಇದೇ ಸಂಪೂರ್ಣ ವಿಶ್ವ ವಾಗಿದೆ, ಇದೇ ಇದರ ವ್ಯಾಖ್ಯೆಯಾಗಿದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲ ಇವೆಲ್ಲವೂ ‘ಓಂ’ಕಾರವೇ ಆಗಿದೆ ಮತ್ತು ಬೇರೆ ಏನಾದರೂ ಕಾಲಾತೀತವಾಗಿದ್ದರೆ, ಅದು ಕೂಡ ‘ಓಂ’ಕಾರವೇ ಆಗಿದೆ.
೧ ಇ. ‘ಓಂ’ಕಾರದಿಂದಲೇ ವೇದಗಳ ನಿರ್ಮಿತಿ : ವೇದಗಳು ಅನಾದಿ ಮತ್ತು ಅಪೌರುಷೇಯವಾಗಿವೆ. ‘ಓಂ’ಕಾರದಿಂದಲೇ ವೇದಗಳ ನಿರ್ಮಿತಿಯಾಯಿತು’ ಎಂದು ಪುರಾಣಗಳಲ್ಲಿ ಬರೆಯಲಾಗಿದೆ.‘ ನಾಲ್ಕು ವೇದಗಳು ಅ, ಉ, ಮ ಮತ್ತು ಸೂಕ್ಷ್ಮ ನಾದಗಳಿಂದ ಸೃಷ್ಟಿಯಾಗಿವೆ’ – ಶಿವಪುರಾಣ, ವಾಯವೀಯ ಸಂಹಿತೆ, ಉತ್ತರಭಾಗ, ಅಧ್ಯಾಯ ೬, ಶ್ಲೋಕ ೨೭೧
೧. ಈ. ನಾಲ್ಕು ವೇದಗಳಿಂದ ಕಲೆಗಳ ಸೃಷ್ಟಿಯಾಗುವುದು
೧. ಪ್ರಾಚೀನ ಕಾಲದ ಋಷಿಮುನಿಗಳು ನಿರ್ಗುಣ ‘ಓಂ’ಕಾರದಿಂದ ಪ್ರಕಟವಾದ ೪ ವೇದಗಳ ಸಾರವನ್ನು ಸೂಕ್ಷ್ಮದಿಂದ ಗ್ರಹಿಸಿದರು.
೨. ಭಾರತೀಯ ಸಂಸ್ಕೃತಿಯ ಅಡಿಪಾಯವಾಗಿರುವ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಈ ೪ ವೇದಗಳಲ್ಲಿಯೇ ಭಾರತೀಯ ಸಂಸ್ಕೃತಿಯ ಎಲ್ಲ ಘಟಕಗಳಾದ ಅಂದರೆ ಹಿಂದೂ ಶಾಸ್ತ್ರ, ಹಿಂದೂ ಜೀವನದರ್ಶನ, ಕಲೆ, ನೈತಿಕಮೌಲ್ಯಗಳು, ತತ್ತ್ವಜ್ಞಾನ ಮುಂತಾದವುಗಳ ಬೀಜಗಳು ಸುಪ್ತಾವಸ್ಥೆಯಲ್ಲಿ ಅಡಗಿದ್ದವು. ಇದರಿಂದಲೇ ಭಾರತೀಯ ಸಂಸ್ಕೃತಿಯು ಸಾಕಾರಗೊಂಡಿತು ಮತ್ತು ಅದರೊಂದಿಗೆ ವಿವಿಧ ಕಲೆಗಳು ಜನಿಸಿದವು. ಭಾರತೀಯ ಕಲೆಗಳು ಭಾರತೀಯ ತತ್ತ್ವಜ್ಞಾನವನ್ನು ಸಾಕಾರಗೊಳಿಸುತ್ತವೆ.
೩. ಋಷಿಮುನಿಗಳು ವೇದಗಳ ಮೂಲಕ ವಿದ್ಯೆ ಮತ್ತು ಕಲೆಗಳನ್ನು ಗ್ರಹಿಸಿದರು. ನಂತರ ಅವರು ಭೂಮಿಯ ಮಾನವರಿಗೆ ವಿದ್ಯೆ ಮತ್ತು ಕಲೆಗಳನ್ನು ಕಲಿಸಲು ಪ್ರಾರಂಭಿಸಿದರು. ಅದರಿಂದಲೇ ಭೂಮಿಯಲ್ಲಿ ಭಾರತೀಯ ವೇದಸಂಸ್ಕೃತಿಯ (ವಿದ್ಯೆ ಮತ್ತು ಕಲೆಗಳ) ಆರಂಭವಾಯಿತು.
೨. ಪ್ರಾಚೀನ ಭಾರತದಲ್ಲಿನ ಕಲಾಪ್ರವಾಹ
ಪ್ರಾಚೀನ ಕಾಲದಿಂದಲೂ ಕಲೆಯು ಲೋಕಧರ್ಮಿ ಮತ್ತು ನಾಟ್ಯಧರ್ಮಿ ಎನ್ನುವ ೨ ಪ್ರವಾಹಗಳಲ್ಲಿ ಮುಂದುವರಿದಿದೆ.
೨ ಅ. ಲೋಕಧರ್ಮಿ ಕಲೆಗಳು (ಜಾನಪದ ಕಲೆ) : ಲೋಕಧರ್ಮಿ ಕಲೆ ಎಂದರೆ ಜನರು ಸಾಮೂಹಿಕವಾಗಿ ಜನರಿಗಾಗಿ ಸಹಜವಾಗಿ ಮತ್ತು ಸ್ವಯಂಪ್ರೇರಣೆಯಿಂದ ನಿರ್ಮಿಸಿದ ಕಲೆಯಾಗಿದೆ. ಇದನ್ನು ‘ಜನರ ಸಾಮೂಹಿಕ ಪ್ರಜ್ಞೆಯಿಂದ ಸಾಮೂಹಿಕವಾಗಿ ಆದ ಕಲೆಯ ಅಭಿವ್ಯಕ್ತಿ’ ಎನ್ನಬಹುದು. ‘ಜಾನಪದ ಕಲೆಗಳು’ ಪ್ರಾಕೃತ ಭಾಷೆಯಿಂದ ಮತ್ತು ಪ್ರಾಚೀನ ಭಾರತದ ವಿವಿಧ ಪ್ರದೇಶಗಳ ಜಾತಿ-ಪಂಗಡಗಳಿಂದ ಹುಟ್ಟಿಕೊಂಡಿರಬಹುದು’ ಎಂದು ಕೆಲವು ತಜ್ಞರ ಅಭಿಪ್ರಾಯವಾಗಿದೆ. ಸಾಮೂಹಿಕ ಈಶ್ವರನ ಆರಾಧನೆಗಾಗಿ ಈ ಜಾನಪದ ಕಲೆಗಳ ಆರಂಭವಾಗಿತ್ತು. ಎಲ್ಲ ರೀತಿಯ ಜಾನಪದ ಗೀತೆಗಳು, ಜಾನಪದ ಗಾಯನ, ಜಾನಪದ ನೃತ್ಯಗಳು, ಜಾನಪದ ಕಥಾಗಾಯನ ಮತ್ತು ಜಾನಪದ ನಾಟಕಗಳು ಈ ವರ್ಗದಲ್ಲಿ ಸೇರುತ್ತವೆ. ಉದಾಹರಣೆಗೆ, ಗುಜರಾತಿನಲ್ಲಿ ದೇವಿಯ ಆರಾಧನೆಗಾಗಿ ಗಾಯನದೊಂದಿಗೆ ಮಾಡುವ ಗರಬಾ ನೃತ್ಯ, ಮಹಾರಾಷ್ಟ್ರದಲ್ಲಿ ದೇವಿಗಾಗಿ ಮಾಡುವ ಗೊಂದಳ (ಕ್ಷಾತ್ರಭಾವದಲ್ಲಿ ದೇವಿಯನ್ನು ಸ್ತುತಿಸುವ ಗೀತೆ), ದಕ್ಷಿಣ ಭಾರತದಲ್ಲಿ ಈಶ್ವರನ ಲೀಲಾನಾಟಕವನ್ನು ಸಾಕಾರಗೊಳಿಸುವ ಯಕ್ಷಗಾನ.)
೨ ಆ. ನಾಟಕ ಕಲೆಗಳು : ಕಲೆಯ ವಿದ್ವಾಂಸರು ಕಲೆಗಳ ಆಳ ಅಧ್ಯಯನದಿಂದ ಕೆಲವು ನಿಯಮಗಳು ಮತ್ತು ಪದ್ಧತಿಗಳನ್ನು ಸಿದ್ಧಪಡಿಸಿ ಕಲೆಗಳನ್ನು ಶಾಸ್ತ್ರದಲ್ಲಿ ಜೋಡಿಸಿಟ್ಟರು. ಶಾಸ್ತ್ರಗಳಲ್ಲಿ ಬಂಧಿಸಲ್ಪಟ್ಟ ಕಲೆಗಳನ್ನು ‘ನಾಟಕ ಕಲೆಗಳು’ ಎಂದು ಕರೆಯಲಾಗುತ್ತದೆ. ನಾಟಕ ಕಲೆಗಳ ಅಧ್ಯಯನ ಮತ್ತು ಪ್ರಸ್ತುತಿಕರಣ ವನ್ನು ಧರ್ಮಗ್ರಂಥಗಳಲ್ಲಿ ನಿರ್ಮಿಸಲಾದ ಪದ್ಧತಿಗನುಸಾರ ಮಾಡಲಾಗುತ್ತದೆ, ಉದಾಹರಣೆಗೆ, ಭರತಮುನಿ ನಾಟ್ಯಶಾಸ್ತ್ರದಲ್ಲಿ ಪ್ರಾಯೋಗಿಕ ಕಲೆಯ ತಾತ್ತ್ವಿಕ ಮತ್ತು ಪ್ರಾಯೋಗಿಕ ಶಾಸ್ತ್ರವನ್ನು ವಿವರಿಸಿದ್ದಾರೆ. ಅದರಂತೆ, ಕಲೆಯ ಪ್ರಸ್ತುತಿಯನ್ನು ನಾಟಕ ಕಲೆಗಳು ಎಂದು ಕರೆಯಲಾಗುತ್ತದೆ (ಶಾಸ್ತ್ರೀಯ ಎಂದರೆ ಪ್ರಾಚೀನ ಅತ್ಯುತ್ತಮ ಕಲೆ). ‘ಸಂಸ್ಕೃತ ರಂಗಭೂಮಿ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ ಮತ್ತು ವಾದನ’, ಇವು ನಾಟಕ ಕಲೆಗಳ ಕೆಲವು ಉದಾಹರಣೆಗಳಾಗಿವೆ.
ಈ ಲೇಖನದ ಮುಂದಿನ ಭಾಗದಲ್ಲಿ ನಾವು ‘ಕಾಲಾನುಸಾರ ಕಲೆಗಳ ಪ್ರಸ್ತುತಿಗೆ ಸ್ಫೂರ್ತಿ ಮತ್ತು ಕಾಲಕ್ಕೆ ಅನುಗುಣವಾಗಿ ಕಲೆಗಳು ಒದಗಿಸುವ ರಂಜನೆ’ ಎಂಬ ವಿಷಯವನ್ನು ನಾವು ನೋಡುವವರಿದ್ದೇವೆ.
– ಸೌ. ಶುಭಾಂಗಿ ಶೇಳಕೆ (ಎಂ.ಎ. ನಾಟ್ಯಶಾಸ್ತ್ರ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೯.೨೦೨೫)
ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಿ. – ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ಸಂಪರ್ಕಕ್ಕಾಗಿ ವಿಳಾಸ ಶ್ರೀ. ಅಭಿಜಿತ ಸಾವಂತ, ಸಂಪರ್ಕ ಸಂಖ್ಯೆ : 8793678178 ವಿ-ಅಂಚೆ : [email protected] |
| ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. |

ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !