ಯಾವಾಗ ಅನ್ಯಾಯ ಆಗುತ್ತದೋ, ಆಗ ಜಿಹಾದ್ ಆಗುತ್ತದೆ’ ಎಂದು ಮದನಿ ವಿವಾದಾತ್ಮಕ ಹೇಳಿಕೆ ನೀಡಿದ್ದರು

ಭೋಪಾಲ್ (ಮಧ್ಯಪ್ರದೇಶ) – ‘ಜಮಿಯತ್ ಉಲೇಮಾ-ಎ-ಹಿಂದ್’ ಎಂಬ ಇಸ್ಲಾಮಿ ಸಂಸ್ಥೆಯ ಮುಖ್ಯಸ್ಥ ಮೌಲಾನಾ (ಇಸ್ಲಾಂನ ಧಾರ್ಮಿಕ ಮುಖಂಡ) ಅರ್ಶದ್ ಮದನಿ ಅವರು ಅಲ್-ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷರನ್ನು ಬಂಧಿಸಿದ ನಂತರ, ಅದನ್ನು ವಿರೋಧಿಸಿ, ‘ಯಾವಾಗ ಅನ್ಯಾಯ ಆಗುತ್ತದೋ, ಆಗ ಜಿಹಾದ್ ಆಗುತ್ತದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ನಗರದ ರೋಷನ್‌ಪುರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಮದನಿ ಅವರ ಪ್ರತಿಕೃತಿಗೆ ಚಪ್ಪಲಿ ಮತ್ತು ಬೂಟುಗಳ ಹಾರವನ್ನು ಹಾಕಿ, ಚಪ್ಪಲಿಗಳನ್ನು ಎಸೆದರು. ನಂತರ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ‘ಮದನಿ ನೀಡಿದ ಹೇಳಿಕೆಯು ದೇಶ ಮತ್ತು ಹಿಂದೂಗಳ ವಿರೋಧಿಯಾಗಿದೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
🔥 Bhopal Erupts Against Madani’s Statement! 🔥
VHP & Bajrang Dal held a strong protest demanding action against Maulana Madani.
Protesters even hit his effigy with shoes before burning it, after he claimed: “Jihad will happen whenever injustice occurs.” 😡
VHP leaders say… https://t.co/y6GXodf0Rc pic.twitter.com/fHoiXrR8CH
— Sanatan Prabhat (@SanatanPrabhat) December 1, 2025
ಮುಸಲ್ಮಾನರನ್ನು ಪ್ರಚೋದಿಸಿ ದೇಶದಲ್ಲಿ ಗೃಹಯುದ್ಧಕ್ಕೆ ತಯಾರಿ! – ಜಿತೇಂದ್ರ ಚೌಹಾಣ್, ಪ್ರಾಂತ ಸಹ-ಮಂತ್ರಿ, ವಿಹಿಂಪ
ಸ್ವಾತಂತ್ರ್ಯಕ್ಕೆ ಮುನ್ನ ದೇಶ ವಿಭಜನೆಯಾಯಿತು. ಮುಸಲ್ಮಾನರು ಪಾಕಿಸ್ತಾನ ಕೇಳಿದರು. ಅದನ್ನು ಅವರಿಗೆ ನೀಡಲಾಯಿತು. ಈಗ ಅವರಿಗೆ ಇನ್ನಾವ ಪಾಕಿಸ್ತಾನ ಬೇಕಿದೆ? ನಿರಂತರವಾಗಿ ವಂದೇ ಮಾತರಂ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ವಿರೋಧಿಸಿ ಈ ಜನರು ಮುಸಲ್ಮಾನ ಯುವಕರನ್ನು ಪ್ರಚೋದಿಸಿ ಜಿಹಾದ್ ಮತ್ತು ಗೃಹಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮುಸಲ್ಮಾನರ ಮೇಲೆ ಎಲ್ಲಿ ದೌರ್ಜನ್ಯ ಆಗುತ್ತಿದೆ ಎಂಬುದನ್ನು ಮದನಿ ಅವರು ಹೇಳಬೇಕು.
ರಾಷ್ಟ್ರೀಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಪ್ರಯತ್ನ! – ವಿನೋದ್ ಬನ್ಸಲ್, ರಾಷ್ಟ್ರೀಯ ವಕ್ತಾರ, ವಿಶ್ವ ಹಿಂದೂ ಪರಿಷತ್
ಮದನಿಯವರಂತಹ ಜನರು ಮುಸಲ್ಮಾನ ಯುವಕರನ್ನು ‘ದೌರ್ಜನ್ಯ, ಜನ್ನತ್ (ಸ್ವರ್ಗ) ಮತ್ತು ಜಿಹಾದ್’ನಂತಹ ಘೋಷಣೆಗಳ ಹೆಸರಿನಲ್ಲಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಕಟ್ಟರವಾದಿ ಅಂಶಗಳು ದೇಶದ ನ್ಯಾಯವ್ಯವಸ್ಥೆ ಮತ್ತು ರಾಷ್ಟ್ರೀಯ ಸ್ವಾಭಿಮಾನಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ. ಮುಸಲ್ಮಾನ್ ಸಮಾಜ ಕೂಡ ಇಂತಹ ಅಂಶಗಳಿಂದ ದೂರವಿರಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವುಮುಸಲ್ಮಾನರ ಕಟ್ಟರವಾದಿ ಚಟುವಟಿಕೆಗಳನ್ನು ತಡೆಯುವ ಬದಲು, ಹಿಂದೂಗಳಿಗೆ ದೂಷಣೆ ನೀಡಿ ಅವರನ್ನು ‘ಖಳನಾಯಕರು’ ಎಂದು ಬಿಂಬಿಸುವ ಮೌಲಾನಾ ಮದನಿಯಂತಹ ಇಸ್ಲಾಮಿ ನಾಯಕರ ವಿರುದ್ಧ ಈಗ ಹಿಂದೂಗಳು ಆಕ್ರಮಕರಾಗಿ ವಿರೋಧಿಸಿದರೆ ಆಶ್ಚರ್ಯವಿಲ್ಲ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !