ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರವಸೆ

ಮಾಸ್ಕೋ (ರಷ್ಯಾ) – ರಷ್ಯಾ ಎಂದಿಗೂ ಯೂರೋಪ್ ಮೇಲೆ ಆಕ್ರಮಣ ಮಾಡುವುದಿಲ್ಲ. ಯೂರೋಪ್ ಬಯಸಿದರೆ, ಲಿಖಿತ ಭರವಸೆ ನೀಡಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿಕೆ ನೀಡಿದ್ದಾರೆ. ಪುಟಿನ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಈ ಹಿಂದೆ ಜರ್ಮನಿಯ ವಿದೇಶಾಂಗ ಸಚಿವ ಯೋಹಾನ್ ವೇಡ್‌ಫುಲ್ ಅವರು, ರಷ್ಯಾ ಮುಂದಿನ ೪ ವರ್ಷಗಳಲ್ಲಿ ಯಾವುದೇ ‘ನ್ಯಾಟೋ’ (NATO – ‘ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್’ ಎಂಬ ವಿಶ್ವದ ೨೯ ದೇಶಗಳನ್ನೊಳಗೊಂಡ ಸೇನಾ ಸಂಘಟನೆ) ದೇಶದ ಮೇಲೆ ಆಕ್ರಮಣ ಮಾಡಬಹುದು ಎಂದು ಆರೋಪಿಸಿದ್ದರು. ಪುಟಿನ್ ಅವರು, “ಯೂರೋಪಿನ ನಾಯಕರು ಕೇವಲ ಶಸ್ತ್ರಾಸ್ತ್ರ ತಯಾರಿಸುವ ಸಂಸ್ಥೆಗಳ ಜನರ ಓಲೈಕೆ ಮಾಡುತ್ತಿದ್ದಾರೆ. ಅವರು ತಮ್ಮ ಜನತೆಯಲ್ಲಿ ಒಂದು ಸುಳ್ಳು ಭ್ರಮೆಯನ್ನು ಸೃಷ್ಟಿಸಲು ಬಯಸುತ್ತಿದ್ದಾರೆ,” ಎಂದು ಹೇಳಿದ್ದರು.
ಉಕ್ರೇನ್ ಸೈನಿಕರು ಹಿಮ್ಮೆಟ್ಟಲೇಬೇಕು!
ರಷ್ಯಾದ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಉಕ್ರೇನ್ ಸೈನ್ಯವು ಹಿಮ್ಮೆಟ್ಟಲೇಬೇಕು ಎಂದು ಪುಟಿನ್ ತಿಳಿಸಿದರು. ರಷ್ಯಾ ಮಾತುಕತೆಗೆ ಸಿದ್ಧವಿದೆ; ಆದರೆ ಅಗತ್ಯ ಬಿದ್ದರೆ ಹೋರಾಟವನ್ನು ಮುಂದುವರಿಸುವ ಆಯ್ಕೆಯೂ ತೆರೆದಿರುತ್ತದೆ. ಉಕ್ರೇನ್ ಸೈನಿಕರು ಹಿಮ್ಮೆಟ್ಟದಿದ್ದರೆ, ನಾವು ಈ ಗುರಿಯನ್ನು ಸೇನಾ ಕಾರ್ಯಾಚರಣೆಯ ಮೂಲಕ ಸಾಧಿಸುತ್ತೇವೆ ಎಂದು ಪುಟಿನ್ ಸ್ಪಷ್ಟಪಡಿಸಿದರು. ಪ್ರಸ್ತುತ ರಷ್ಯಾ ಸೇನೆಯು ಉಕ್ರೇನ್‌ನ ಶೇ.೧೯% ಕ್ಕಿಂತ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತಿದೆ. ಪ್ರಮುಖವಾಗಿ ಡೋನಬಾಸ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳು ರಷ್ಯಾ ನಿಯಂತ್ರಣದಲ್ಲಿವೆ.
ಡಿಸೆಂಬರ್ ೪ ರಂದು ಪುಟಿನ್ ಭಾರತಕ್ಕೆ ಭೇಟಿ
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ ೪ ರಂದು ಪುಟಿನ್ ಭಾರತಕ್ಕೆ ಬರಲಿದ್ದು, ಡಿಸೆಂಬರ್ ೫ ರಂದು ಹಿಂದಿರುಗಲಿದ್ದಾರೆ. ಈ ಭೇಟಿಯನ್ನು ಭಾರತ-ರಷ್ಯಾ ನಡುವಿನ ೨೩ನೇ ವಾರ್ಷಿಕ ಶೃಂಗಸಭೆಯ ಭಾಗವಾಗಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. |

ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !