
‘ಸದ್ಯದ ಕಾಲದಲ್ಲಿ ಕೆಲವು ಸಾಧಕರು ಸಾಧನೆಯನ್ನು ಬಿಟ್ಟು ಪುನಃ ವ್ಯವಹಾರಕ್ಕೆ ಹೋಗುತ್ತಿದ್ದಾರೆ. ಇದರ ಮುಖ್ಯ ೨ ಕಾರಣಗಳೆಂದರೆ ೧. ಕಾಲಮಹಾತ್ಮೆ ಮತ್ತು ೨. ಸಾಧನೆ ಯೋಗ್ಯ ರೀತಿಯಲ್ಲಿ ಆಗದಿರುವುದು.
೧. ಕಾಲಮಹಾತ್ಮೆ
ಮನೆಯಲ್ಲಿ ಆರ್ಥಿಕ ಅಡಚಣೆಗಳು ಬರುವುದು ಅಥವಾ ತಂದೆ-ತಾಯಂದಿರು ಅಥವಾ ಮನೆಯ ಇತರರು ಅನಾರೋಗ್ಯ ಪೀಡಿತರಾಗುವುದು, ಇಂತಹ ಸಾಧನೆಗೆ ಬಾಧಕ ವಾಗುವಂತಹ ತೊಂದರೆಗಳು ಕಾಲಮಹಾತ್ಮೆಯಿಂದಾಗಿ ಬರುತ್ತವೆ; ಆದರೆ ಇಂತಹ ಪರಿಸ್ಥಿತಿಯಲ್ಲಿ ಆ ಸಾಧಕನು ತನ್ನ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬಹುದು.
೨. ಸಾಧನೆ ಯೋಗ್ಯ ರೀತಿಯಲ್ಲಿ ಆಗದಿರುವುದು
ಸಾಧನೆ ಮಾಡುವಾಗ ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಇರುವ ಪ್ರಯತ್ನಗಳು ಕಡಿಮೆಯಾದ ಕಾರಣ ಸಾಧಕರಿಗೆ ಪರಿಸ್ಥಿತಿಗೆ ಅನುಗುಣವಾಗಿ ಸಾಧನೆಯ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರುವುದಿಲ್ಲ. ಆದುದರಿಂದ ಅವರಿಗೆ ವಿಕಲ್ಪಗಳು ಉಂಟಾಗಿ ಅವರು ಸಾಧನೆ ಮಾಡುವುದನ್ನು ನಿಲ್ಲಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಧಕರು ಸಾಧನೆಯನ್ನು ಬಿಡಲು ಇದೇ ಕಾರಣವಾಗಿರುತ್ತದೆ. ಇಂತಹ ಸಾಧಕರು ಮುಂದೆ ಮಾಯೆಯಲ್ಲಿ ಸಿಲುಕಿದರೆ, ಅವರಿಗೆ ಪುನಃ ಸಾಧನೆಯನ್ನು ಆರಂಭಿಸುವುದು ಕಠಿಣವಾಗುತ್ತದೆ. ಆದ್ದರಿಂದ ಸಾಧಕರೇ, ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿ ಮತ್ತು ನಿಮಗೆ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರದಿದ್ದರೆ ತಕ್ಷಣ ಜವಾಬ್ದಾರ ಸಾಧಕರ ಮಾರ್ಗದರ್ಶನವನ್ನು ಪಡೆಯಿರಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !