ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ನೃತ್ಯದ ಶಾಸ್ತ್ರೀಯ ಮತ್ತು ಆಧ್ಯಾತ್ಮಿಕ ಪರಿಭಾಷೆ !

ಈ ವಾರ ನಾವು ‘ನಾಟ್ಯಕಲೆ’ ಪ್ರಾಚೀನ ನಾಟ್ಯಾಚಾರ್ಯರು ಮಾಡಿದ ನಾಟಕದ ಪರಿಭಾಷೆ ಹಾಗೆಯೇ ನಾಟ್ಯಕಲೆ ಮತ್ತು ಸಾಧನೆಯ ಸಂಬಂಧ’, ಈ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.(ಲೇಖನ ಕ್ರಮಾಂಕ ೫)

‘ಭಾರತೀಯ ವಿಚಾರವಂತರು ರಂಗಮಂಟಪದ ಮೇಲಷ್ಟೇ ಅಲ್ಲ, ಬ್ರಹ್ಮಾಂಡದ ಕಣಕಣಗಳಲ್ಲಿ ‘ನಾಟಕ’ವನ್ನು ನೋಡಿದ್ದಾರೆ. ಅವರು ಜಗತ್ತಿನ ಎಲ್ಲಾ ಘಟಕಗಳು ಮತ್ತು ಚಲನವಲನಗಳನ್ನು ‘ಈಶ್ವರೀಯ ನಾಟಕ’ ಎಂದು ಕರೆದಿದ್ದಾರೆ. ‘ಜಗತ್ತಿನ ಸೃಷ್ಟಿ, ವಿಷ್ಣುವಿನ ದಶಾವತಾರಗಳು, ವೇದಗಳು, ಉಪನಿಷತ್ತುಗಳು, ಪುರಾಣಗಳು, ಪ್ರಕೃತಿಯ ಲೀಲಾನಾಟಕ (ಉದಾ. ಆಕಾಶದಲ್ಲಿ ಕಾಮನಬಿಲ್ಲು ಕಾಣಿಸುವುದು, ಭೂಕಂಪ, ನೆರೆ, ಜನನ, ಮರಣ ಇತ್ಯಾದಿ; ಪಶು-ಪಕ್ಷಿಗಳ ಅನೇಕ ನಾಟಕೀಯ ಆವಿಷ್ಕಾರಗಳು (ಉದಾ. ಕೋಗಿಲೆಯ ಹಾಡು, ನವಿಲಿನ ನೃತ್ಯ, ಆನೆಯ ನಡಿಗೆ ಇತ್ಯಾದಿ)’, ಇದೆಲ್ಲವನ್ನೂ ನಾಟಕಪದ್ಧತಿಯಲ್ಲೂ ತೋರಿಸಲಾಗುತ್ತದೆ. ಮನುಷ್ಯನ ದೈನಂದಿನ ಜೀವನದಲ್ಲಿಯೂ ಎಲ್ಲೆಡೆ ‘ನಾಟಕ’ ಕಂಡುಬರುತ್ತದೆ. ‘ಹುಡುಗಿಯರು ಚಿಕ್ಕವರಿದ್ದಾಗ ‘ಅಡುಗೆ ಆಟ’ ಆಡುವುದು, ಅದರಲ್ಲಿ ‘ಸುಳ್ಳು-ಸುಳ್ಳೇ ಅಡುಗೆ’ ಮಾಡುವುದು, ಅಜ್ಜಿಯು ನಾಟಕೀಯ ಪದ್ಧತಿಯಲ್ಲಿ ಕಥೆ ಹೇಳುವುದು’, ಇದು ಕೂಡ ನಾಟಕವೇ ಆಗಿದೆ; ಏಕೆಂದರೆ ಅದರಲ್ಲಿ ಅನುಕರಣೆಯೊಂದಿಗೆ ಎಲ್ಲಾನಾಟ್ಯತತ್ವಗಳಿವೆ.

ಸೌ. ಶುಭಾಂಗಿ ಶೇಳ್ಕೆ

ಸೌ. ರೇಣುಕಾ ಕ್ರಾಕ್‌

೧. ‘ನಾಟಕ’ ಈ ಪದದ ಉತ್ಪತ್ತಿ ಮತ್ತು ವ್ಯಾಖ್ಯೆ (ಪರಿಭಾಷೆ)

೧ ಅ. ಉತ್ಪತ್ತಿ : ಮೂಲ ಸಂಸ್ಕೃತ ಧಾತು ‘ನಟ್’ (ಅಭಿನಯಕ್ರಿಡಾಯಾಮ್) ಇದರ ಅರ್ಥ ‘ಅಭಿನಯಿಸುವುದು’, ‘ಆಟ ಆಡುವುದು’ ಅಥವಾ ‘ರೂಪವನ್ನು ಧರಿಸುವುದು’ ಎಂದಾಗುತ್ತದೆ. ನಾಟ್ಯ ಎಂದರೆ ನಟ-ನಟಿಯರು ಮಾಡಿದ ಅಭಿನಯ ಅಥವಾ ನಾಟಕ.

೧ ಆ. ಪ್ರಚಲಿತ ಅರ್ಥ : ಸಾಮಾನ್ಯವಾಗಿ, ‘ನಟ-ನಟಿಯರು ರಂಗಮಂಟಪದ ಮೇಲೆ ಯಾವುದಾದರೊಂದು ಕಥೆ ಅಥವಾ ಘಟನೆಯನ್ನು ಸಂವಾದಾತ್ಮಕ, ಅಭಿನಯಮಯ, ನೃತ್ಯಮಯ ಅಥವಾ ಕಾವ್ಯಮಯ ದೃಶ್ಯ-ಶ್ರಾವ್ಯ ಸ್ವರೂಪದಲ್ಲಿ ಪ್ರಸ್ತುತಪಡಿಸಿದ ಕಲಾಕೃತಿ, ಎಂದರೆ ನಾಟಕವಾಗಿದೆ’, ಇದು ನಾಟ್ಯಕಲೆಯ ಪ್ರಚಲಿತ ಅರ್ಥವಾಗಿದೆ. ‘ಸಂಹಿತಾಲೇಖನ, ನಿರ್ದೇಶನ, ಅಭಿನಯ, ನಟ, ನೇಪಥ್ಯ (ಪ್ರೇಕ್ಷಕರಿಗೆ ಕಾಣದಭಾಗ), ಬೆಳಕಿನ ಸಂಯೋಜನೆ, ಸಂಗೀತ ಸಂಯೋಜನೆ ಮತ್ತು ಪ್ರೇಕ್ಷಕರು’, ಈ ಘಟಕಗಳಿಂದ ನಾಟಕವು ಸಿದ್ಧವಾಗುತ್ತದೆ.

೧ ಇ. ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ಹೇಳಿದ ಅರ್ಥ: 

೧. ‘ನಾಟ್ಯ’ವನ್ನು ಬ್ರಹ್ಮದೇವರು ನಿರ್ಮಿಸಿದ್ದು, ಅದು ನಾಲ್ಕೂ ವೇದಗಳ ಸಾರವಾಗಿದೆ. ಬ್ರಹ್ಮದೇವರು ನಾಟ್ಯಕ್ಕೆ ‘ಪಂಚಮ ವೇದ’ ಎಂದು ಹೇಳಿದ್ದಾರೆ.

೨. ನೃತ್ಯ, ಗಾಯನ, ವಾದನ ಮತ್ತು ಅಭಿನಯ ಇವುಗಳ ಒಟ್ಟುಗೂಡಿದ ಪ್ರಸ್ತುತಿಗೆ ‘ನಾಟ್ಯ’ ಎಂಬ ಸಂಜ್ಞೆಯನ್ನು ನೀಡಲಾಗಿದೆ.

೧ ಈ. ‘ನಾಟಕ’ ಎಂದರೆ ಶಕ್ತಿಯ ಪ್ರಕಟ ಸ್ವರೂಪ 

೧. ‘ನಾಟಕ (ಇಲ್ಲಿ ‘ಎಲ್ಲಾ ಕಲೆಗಳು’ ಎಂಬ ಅರ್ಥದಲ್ಲಿ), ಎಂದರೆ ಶಿವನು ತನ್ನ ಆನಂದಕ್ಕಾಗಿ ತನ್ನಲ್ಲಿಯೇ ಮಾಡಿಕೊಂಡ ಎರಡು ಭಾಗಗಳಾಗಿವೆ. ಕಲೆಯು ಅದರ ದೃಶ್ಯ ಸ್ವರೂಪವಾಗಿದೆ. ಕಲೆಯು ಶಿವನ ಶಕ್ತಿಯೇ ಆಗಿದೆ. ಕಲೆಯೆಂದರೆ ಶಿವ-ಶಕ್ತಿಯ ತಾದ್ಯಾತ್ಮ್ಯದ ಸಾಕ್ಷಾತ್‌ ದರ್ಶನ !’ (ಆಧಾರ : ಮೂಲ ಗ್ರಂಥ : ‘ನಾಟ್ಯಶಾಸ್ತ್ರ’, ವಿವೇಚನ ಗ್ರಂಥ : ಭಾರತೀಯ ಕಲೆ : ಉದ್ಗಮ ಮತ್ತು ವಿಕಾಸ, ಶ್ರೀ. ವಿ.ಯ. ಕುಲಕರ್ಣಿ)

ವಿವರಣೆ : ‘ಬ್ರಹ್ಮಾಂಡದ ನಿರ್ಮಿತಿ ಮತ್ತು ಅದರ ಕಾರುಬಾರು ಇದು ಒಂದು ಈಶ್ವರೀಯ ನಾಟಕವೇ ಆಗಿದೆ’, ಈ ಅರ್ಥದಲ್ಲಿ ಮೇಲಿನ ಸಾಲುಗಳಿವೆ, ಅಂದರೆ ಬ್ರಹ್ಮಾಂಡದ ಪ್ರಾರಂಭದಲ್ಲಿ ಕೇವಲ ಶಿವತತ್ತ್ವವು ಅಸ್ತಿತ್ವದಲ್ಲಿತ್ತು. ಶಿವ (ಪುರುಷ) ಸ್ಥಿರ, ಅಚಲ ಮತ್ತು ತ್ರಿಗುಣಾತೀತ ಆಗಿದ್ದಾನೆ; ಏಕೆಂದರೆ ಅವನು ಕೇವಲ ಧ್ಯಾನಮಗ್ನ ನಾಗಿದ್ದಾನೆ. ಶಿವನು ಆನಂದಕ್ಕಾಗಿ ತನ್ನನ್ನು ತಾನು ಎರಡು ಭಾಗಗಳಾಗಿ ವಿಭಜಿಸಿದಾಗ, ಶಿವ (ಪುರುಷ) ಮತ್ತು ಶಕ್ತಿ (ಪ್ರಕೃತಿ) ಪ್ರಕಟರಾದರು. ಶಕ್ತಿಯು (ಪ್ರಕೃತಿಯು) ತ್ರಿಗುಣಾತ್ಮಕವಾಗಿದೆ, ಅಂದರೆ ಅದರಲ್ಲಿ ಸತ್ತ್ವ, ರಜ ಮತ್ತು ತಮ ಎಂಬ ಗುಣಗಳಿವೆ. ಆದ್ದರಿಂದ, ಪ್ರಕೃತಿಯ ಮೂಲಕ ನಾಟಕಕ್ಕೆ ಪೋಷಕವಾದ ವಿವಿಧ ರಸಗಳು ಮತ್ತು ಘಟಕಗಳು ನಿರ್ಮಾಣವಾದವು. ಪರಿಣಾಮವಾಗಿ ಪ್ರಸಂಗಗಳು ಮತ್ತು ಘಟನೆಗಳಾಗಲು ಪ್ರಾರಂಭಿಸಿದವು. ಅವು ನಾಟಕೀಯವಾಗಿವೆ, ಉದಾ. ತ್ರೇತಾಯುಗದಲ್ಲಿ ‘ರಾಮಾಯಣ’ ನಡೆಯಿತು. ಸಂಕ್ಷಿಪ್ತವಾಗಿ, ಶಿವನು ತನ್ನ ಅರ್ಧ ಭಾಗವನ್ನು (ಅಂದರೆ ಪ್ರಕೃತಿ (ಶಕ್ತಿ)ಯನ್ನು) ಕಾರ್ಯೋನ್ಮುಖಗೊಳಿಸಿದಾಗ, ಜಗತ್ತಿನ ನಾಟಕವು ನಡೆಯಲು ಪ್ರಾರಂಭಿಸಿತು; ಆದ್ದರಿಂದ ಶಕ್ತಿಯನ್ನು ‘ಕಲೆ’ ಎಂದು ಸಂಬೋಧಿಸಲಾಗಿದೆ.

೨. ‘ಶಕ್ತಿ’ (ಪ್ರಕೃತಿ) ತ್ರಿಗುಣಾತ್ಮಕವಾಗಿದ್ದು ಅದು ಅನೇಕ ಲೋಕ ಚರಿತ್ರೆಗಳ ಮೂಲಕ ಪ್ರಕಟವಾಗುತ್ತದೆ. ನಾಟಕಗಳಲ್ಲಿ ತ್ರಿಗುಣಾತ್ಮಕ ಪ್ರವೃತ್ತಿಗಳನ್ನು ಹೊಂದಿರುವ ಜನರ ವಿವಿಧ ರಸಗಳ ಚರಿತ್ರೆಗಳು ಕಾಣುತ್ತವೆ’, ಎಂದು ಭರತಮುನಿಗಳು ನಂಬುತ್ತಾರೆ.’

(ಆಧಾರ : ಮೂಲ ಗ್ರಂಥ: ನಾಟ್ಯಶಾಸ್ತ್ರ, ವಿವೇಚನ ಗ್ರಂಥ : ಭಾರತೀಯ ಕಲೆ – ಉದ್ಗಮ ಮತ್ತು ವಿಕಾಸ, ಶ್ರೀ. ವಿ.ಯ. ಕುಲಕರ್ಣಿ)

ವಿವರಣೆ : ಭರತಮುನಿಗಳ ಪ್ರಕಾರ, ‘ಶಕ್ತಿ’ಯು ಸತ್ವ-ರಜ-ತಮ ಈ ತ್ರಿಗುಣಗಳನ್ನು ಧರಿಸುವುದರಿಂದ, ಅದು ಜಗತ್ತಿನಲ್ಲಿ ಘಟಿಸುವ ವಿವಿಧ ಲೋಕಚರಿತ್ರೆಗಳು, ಅವುಗಳಲ್ಲಿನ ಘಟನೆಗಳು, ಪ್ರಸಂಗಗಳು ಮತ್ತು ಪಾತ್ರಗಳು ಈ ಎಲ್ಲದರಲ್ಲೂ ಸತ್ತ್ವ್ವ-ರಜ-ತಮ ಈ ತ್ರಿಗುಣಗಳ ರೂಪದಲ್ಲಿ ಅಸ್ತಿತ್ವದಲ್ಲಿದ್ದು ಪ್ರಕಟಗೊಳ್ಳುತ್ತಿರುತ್ತವೆ. (ಆದ್ದರಿಂದಲೇ ನಾವು ಮಾತನಾಡುವಾಗ, ಆ ವ್ಯಕ್ತಿಯ ಪ್ರಕೃತಿಯೇ ಹಾಗಿದೆ, ಅಂದರೆ ಅವನ ಸ್ವಭಾವ ಶಾಂತವಿದೆ ಅಥವಾ ಕೋಪಿಷ್ಠವಿದೆ ಎಂದು ಹೇಳುತ್ತೇವೆ.) ಜಗತ್ತಿನಲ್ಲಿ ಘಟಿಸುವ ಈ ಚರಿತ್ರೆಗಳು ಮತ್ತು ಅವುಗಳಲ್ಲಿನ ಪಾತ್ರಗಳ ಚಾರಿತ್ರ್ಯ ಚಿತ್ರಣದ ಮೇಲೆ ನಾಟಕವು ಸಿದ್ಧವಾಗುತ್ತದೆ. ಅದರಿಂದ ನವರಸಗಳ ನಿಷ್ಪತ್ತಿಯಾಗುತ್ತದೆ.

೧ ಉ. ಆಧ್ಯಾತ್ಮಿಕ ವ್ಯಾಖ್ಯೆ

೧. ‘ಯಾವುದಾದರೊಂದು ಆವಿಷ್ಕಾರದಲ್ಲಿ ಪಂಚಮಹಾಭೂತೀಯ ತತ್ತ್ವಗಳು ಮತ್ತು ತ್ರಿಗುಣಗಳ ಪ್ರಮಾಣಬದ್ಧ ಮಿಶ್ರಣವು ಒಂದಾಗಿರುತ್ತದೆ, ಹಾಗೆಯೇ ಅದರಲ್ಲಿ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಮತ್ತು ಮನಸ್ಸು, ಬುದ್ಧಿ ಮತ್ತು ಅಹಂಕಾರ, ಇವುಗಳೆಲ್ಲವುದರ ಆವಿಷ್ಕಾರ ದೇಹದ ಮಾಧ್ಯಮದಿಂದ ಆಗುತ್ತಿರುತ್ತದೆ, ಆಗ ನಾಟ್ಯವು ಸಾಕಾರಗೊಳ್ಳುತ್ತದೆ. ಈ ರೀತಿಯಲ್ಲಿ, ನಾಟ್ಯವು ಪ್ರಕೃತಿಯನ್ನೇ ಮತ್ತೆ ಸಾಕಾರಗೊಳಿಸುತ್ತದೆ. ನಾಟ್ಯವು ದೃಶ್ಯ-ಶ್ರಾವ್ಯ ಸ್ವರೂಪದ ಅನುಭೂತಿಯಾಗಿದೆ.’

– ಸೌ. ಶುಭಾಂಗಿ ಶೇಳ್ಕೆ (ಎಂ.ಎ. (ನಾಟ್ಯಶಾಸ್ತ್ರ)) (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (ವರ್ಷ ೨೦೧೬)

೨. ‘ನಾಟಕವು ಪಂಚಮಹಾಭೂತಗಳು ಮತ್ತು ತ್ರಿಗುಣಗಳ ಮಿಶ್ರಣ ವಾಗಿದೆ. ‘ಈ ಪಂಚಮಹಾಭೂತಗಳು ಮತ್ತು ತ್ರಿಗುಣಗಳನ್ನು ಅನುಭವಿಸಿ ಅವುಗಳ ಆಚೆಗೆ ಹೋಗುವುದು’, ಎಂದರೆ ಗುಣಾತೀತ ಸ್ಥಿತಿಯನ್ನು ತಲಪುವುದು ಮತ್ತು ಆನಂದದಲ್ಲಿ ಸ್ಥಿರವಾಗುವುದು, ಎಂದರೆ ನಿಜವಾದ ನಾಟ್ಯವಾಗಿದೆ.’ – ಸೌ. ರೇಣುಕಾ ಕ್ರಾಕ್‌ (ನಾಟ್ಯ ಅಭ್ಯಾಸಕಿ) (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (ವರ್ಷ ೨೦೨೪)

೨. ನಾಟ್ಯಕಲೆಯ ಮಹತ್ವ

ನಾಟಕಗಳ ಮಹತ್ವವು ಅನನ್ಯಸಾಧಾರಣವಾಗಿದೆ. ‘ನಾಟಕ’ ದೃಶ್ಯ-ಶ್ರಾವ್ಯ ಸ್ವರೂಪದ್ದಾಗಿರುವುದರಿಂದ, ಅದು ಹೆಚ್ಚು ಪರಿಣಾಮಕಾರಿ ಮಾಧ್ಯಮವಾಗಿದೆ. ‘ನಾಸಿಕ್‌ನಲ್ಲಿದ್ದಾಗ ಸ್ವಾ. ಸಾವರಕರರು ಹೀಗೆ ಹೇಳಿದ್ದರು, ‘ಯಾವ ಕೆಲಸ ಸಾವಿರ ಉಪನ್ಯಾಸಗಳಿಂದ ಆಗುವುದಿಲ್ಲವೋ, ಅದು ಒಂದು ಒಳ್ಳೆಯ ನಾಟಕದಿಂದ ಆಗುತ್ತದೆ.’’ – ಶ್ರೀ. ಶಂಕರ ದತ್ತಾತ್ರೇಯ ಗೋಖಲೆ (ಆಧಾರ : ‘ಸ್ವಾತಂತ್ರ್ಯವೀರ ಜನ್ಮೋತ್ಸವ ವಿಶೇಷಾಂಕ ೨೦೦೮’, ಪುಟ ೨೬)

೩. ವೈಶಿಷ್ಟ್ಯಗಳು

೩ ಅ. ವಿಭಿನ್ನ ಅಭಿರುಚಿಗಳ ವ್ಯಕ್ತಿಗಳನ್ನು ಸಮಾಧಾನ ಪಡಿಸುವುದು

ನಾಟ್ಯಂ ಭಿನ್ನರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್‌ – ಮಾಲವಿಕಾಗ್ನಿಮಿತ್ರ, ಅಂಕ ೧, ಶ್ಲೋಕ ೪

ಅರ್ಥ : ‘ನಾಟಕ’ವು ವಿಭಿನ್ನ ಆಸಕ್ತಿಗಳಿರುವ ಜನರ ಮನೋರಂಜನೆಯ ಸಮಾನ ಸಾಧನವಾಗಿದೆ. ‘ಮಾಲವಿಕಾಗ್ನಿಮಿತ್ರ’ವು ಕಾಳಿದಾಸನ ಒಂದು ಸಂಸ್ಕೃತ ನಾಟಕವಾಗಿದೆ. ಈ ನಾಟಕದ ಮೊದಲ ಭಾಗದ ಆರಂಭದಲ್ಲಿಯೇ ನಾಟಕದಲ್ಲಿನ ನಟಿಯ ‘ಪ್ರತಿಯೊಂದು ವ್ಯಕ್ತಿಯ ಅಭಿರುಚಿ ಭಿನ್ನವಾಗಿರುತ್ತದೆ, ಹಾಗಾದರೆ ಒಂದೇ ನಾಟಕ ಹೇಗೆ ಎಲ್ಲರಿಗೂ ಇಷ್ಟವಾಗಲು ಸಾಧ್ಯ ?’, ಎಂಬ ಪ್ರಶ್ನೆಗೆ ಉತ್ತರ ನೀಡುವಾಗ ನಾಟಕದ ಸೂತ್ರಧಾರನು, ‘ನಾಟಕ’ದ ಕಲೆಯು ಏಕಕಾಲದಲ್ಲಿ ವೈವಿಧ್ಯಮಯ ಅಭಿರುಚಿಗಳನ್ನು ಹೊಂದಿರುವ ಎಲ್ಲಾ ವೀಕ್ಷಕರನ್ನು ಜಾಗೃತಗೊಳಿಸುತ್ತದೆ ಮತ್ತು ಅದೇ ಸಮಯದಲ್ಲಿ ಅವರು ಶುದ್ಧ ಆನಂದವನ್ನು ಸಹ ಅನುಭವಿಸುತ್ತಾರೆ’’, ಎಂದು ಹೇಳುತ್ತಾನೆ.

೩ ಆ. ಎಲ್ಲಾ ಕಲೆಗಳ ಸಮಾವೇಶವಿರುವುದು : ನಾಟಕದಲ್ಲಿ ಎಲ್ಲಾ ಕಲೆಗಳು ಇರುತ್ತವೆ.

೧. ‘ದೃಶ್ಯ ಕಲೆಗಳು’, ಉದಾ. ಶಿಲ್ಪಕಲೆ, ಚಿತ್ರಕಲೆ ಇತ್ಯಾದಿ

೨. ‘ಪ್ರಯೋಗಾತ್ಮಕ ಕಲೆಗಳು (Performing Arts) ಅಂದರೆ ನೃತ್ಯ, ಗಾಯನ, ವಾದನ ಮತ್ತು ಅಭಿನಯ

೩. ಸುಲಭವಾಗಿ ಹೇಳಬೇಕೆಂದರೆ,

ಅ. ನಾಟಕದ ಪ್ರಯೋಗಕ್ಕಾಗಿ ಅಭಿನಯ,

ಆ. ನೇಪಥ್ಯಕ್ಕಾಗಿ (ಹಿನ್ನೆಲೆಯಲ್ಲಿ) ಚಿತ್ರಕಲೆ, ಶಿಲ್ಪಗಳು ಇತ್ಯಾದಿಗಳ,

ಇ. ವೇಷಭೂಷಣಕ್ಕಾಗಿ ಹೊಲಿಗೆ ಕಲೆ, ಶೃಂಗಾರ ಕಲೆ (ಮೇಕಪ್) ಇವುಗಳ ಅವಶ್ಯಕತೆ ಇರುತ್ತದೆ.

ಈ. ನಾಟಕದ ಸಂಹಿತೆಗಾಗಿ ಸಾಹಿತ್ಯ, ಅಂದರೆ ಇತಿಹಾಸ, ಕಾವ್ಯಗಳು, ಕಥೆಗಳು ಇತ್ಯಾದಿ ಬೇಕಾಗುತ್ತವೆ.

ಉ. ನಾಟಕದಲ್ಲಿ ಜೀವ ತುಂಬಲು ಗಾಯನ-ವಾದನ-ನೃತ್ಯಗಳ ಅವಶ್ಯಕತೆ ಇರುತ್ತದೆ.

೩ ಇ. ‘ನಾಟಕದಲ್ಲಿನ ಘಟನೆಗಳು ಪ್ರತ್ಯಕ್ಷ ನಡೆಯುತ್ತಿವೆ’, ಎಂದು ವೀಕ್ಷಕರಿಗೆ ಅನಿಸುವುದು ಮತ್ತು ಅವರ ಮನಸ್ಸಿನಲ್ಲಿ ಅಂತಹ ಭಾವ-ಭಾವನೆಗಳು ನಿರ್ಮಾಣವಾಗುವುದು : ನಾಟಕಗಳ ಪ್ರಯೋಗಗಳು ಕೇವಲ ರಂಗಮಂಟಪಕ್ಕೆ ಸೀಮಿತವಾಗಿರುವುದಿಲ್ಲ, ಬದಲಾಗಿ ಪ್ರೇಕ್ಷಕರು ಆ ಘಟನೆಗಳನ್ನು ವಾಸ್ತವವೆಂದು ನೋಡುತ್ತಾರೆ, ಉದಾ. ನಾಟಕದಲ್ಲಿನ ಖಳನಾಯಕನ ಷಡ್ಯಂತ್ರಗಳನ್ನು ನೋಡಿ ವೀಕ್ಷಕರ ಮನಸ್ಸಿನಲ್ಲಿ ಸಿಟ್ಟು ಬರುತ್ತದೆ. ರಾಮಾಯಣದ ಪ್ರಯೋಗಗಳನ್ನು ನೋಡಲು ಬರುವ ವೀಕ್ಷಕರು ಪ್ರಯೋಗವನ್ನು ಪೂಜೆ-ಆರಾಧನೆ ಎಂದು ನೋಡುತ್ತಾರೆ. ವೀಕ್ಷಕರು ‘ರಾಮ’ನ ಪಾತ್ರವನ್ನು ನಿರ್ವಹಿಸುವ ನಟನ ಕಾಲಿಗೆ ಬೀಳುತ್ತಾರೆ. ಇಂದಿಗೂ ‘ಸಂತ ತುಕಾರಾಮ’ ಈ ಕಪ್ಪುಬಿಳುಪು ಚಲನಚಿತ್ರದಲ್ಲಿನ ‘ತುಕೋಬಾರ ವೈಕುಂಠಗಮನ’ ಈ ದೃಶ್ಯವನ್ನು ನೋಡುವಾಗ ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಬರುತ್ತವೆ. ಈ ಎಲ್ಲಾ ಘಟನೆಗಳು ನಿಜವೆಂದು ಅನಿಸುವುದರಿಂದ ಹೀಗೆ ಆಗುತ್ತದೆ. ಅಂತಹ ಸಾತ್ತ್ವಿಕ ನಾಟಕಗಳಿಂದ ಸಮಾಜದಲ್ಲಿ ಭಾವವೃದ್ಧಿಯಾಗುತ್ತದೆ ಮತ್ತು ಸಮಾಜವು ಸಾಧನೆಯನ್ನು ಮಾಡತೊಡಗುತ್ತದೆ.

೩ ಈ. ಮಾನವನಿಗೆ ಹಿತಕರ ಮತ್ತು ಜ್ಞಾನದಾಯಕವಾಗಿರುವುದು : ‘ನಾಟಕದಲ್ಲಿ ಕೇವಲ ದೇವತೆಗಳ ಚರಿತ್ರೆಯ ಅನುಕರಣೆಯಿಲ್ಲ, ಬದಲಾಗಿ ತ್ರಿಲೋಕದಲ್ಲಿರುವ ಭಾವಗಳ ಪ್ರಸ್ತುತಿಯಿದೆ. ನಾಟಕದಲ್ಲಿ ಧರ್ಮ, ಅರ್ಥ (ರಾಜನೀತಿ, ಅರ್ಥನೀತಿ), ಹಾಸ್ಯ, ಯುದ್ಧ ಮತ್ತು ಕಾಮ (ಇಚ್ಛೆ, ಆಕಾಂಕ್ಷೆ) ಇವುಗಳ ಸಮಾವೇಶವಿದೆ. ನಾಟಕವು ಧರ್ಮಪರಾಯಣ ವ್ಯಕ್ತಿಗಳಿಗೆ ಧರ್ಮವಾಗಿದೆ. ನಾಟಕವು ವೀರತ್ವವನ್ನು ಉತ್ಪನ್ನ ಮಾಡುವ, ಅಜ್ಞಾನಿಗಳಿಗೆ ಜ್ಞಾನವನ್ನು ಪ್ರದಾನಿಸುವ, ವಿದ್ವಾಂಸರ ಜ್ಞಾನವನ್ನು ಹೆಚ್ಚಿಸುವ, ದುಃಖಿತರಿಗೆ ಸ್ಥಿರತೆಯನ್ನು ನೀಡುವ ಸಾಧನವಾಗಿದೆ. ನಾಟಕವು ಧರ್ಮ, ಯಶಸ್ಸು, ಜೀವನ ಮತ್ತು ಉತ್ತಮ ಸಲಹೆಯನ್ನು ನೀಡುವ ಸಾಧನೆಯಾಗಿದೆ.’ (ಆಧಾರ : ನಾಟ್ಯಶಾಸ್ತ್ರ, ಅಧ್ಯಾಯ ೧) ಈ ರೀತಿ, ‘ನಾಟಕವು ಎಲ್ಲರಿಗೂ ಹಿತಕಾರಿ, ಜ್ಞಾನದಾಯಿನಿ, ಅವರ ಗುಣಗಳನ್ನು ಬೆಳೆಸುವ ಮತ್ತು ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವುದಾಗಿದೆ’, ಎಂಬುದು ಗಮನಕ್ಕೆ ಬರುತ್ತದೆ.

೪. ‘ಈಶ್ವರಪ್ರಾಪ್ತಿ’ಯು ನಾಟ್ಯಕಲೆಯ ಮೂಲ ಉದ್ದೇಶವಾಗಿದೆ

ಅ. ‘ಅಭಿನಯ = ಅಭಿ + ನಿ ಇದರಲ್ಲಿ ‘ಅಭಿ’ ಎಂದರೆ ಕಡೆ ಮತ್ತು ‘ನಿ-ನಯ’ ಎಂದರೆ ಮುನ್ನಡೆಸುವುದು. ವೀಕ್ಷಕರ ಮುಂದೆ ಪ್ರದರ್ಶನಗೊಳ್ಳುತ್ತಿರುವುದು, ಅದರ ನಿಜವಾದ ಸ್ವರೂಪಕ್ಕೆ ಕಾರಣವಾದರೆ, ಅದೇ ನಿಜವಾದ ಅಭಿನಯ.’ (ಆಧಾರ : ದೈನಿಕ ‘ಸನಾತನ ಪ್ರಭಾತ’, ೨೨.೪.೨೦೦೭)

ಆ. ಗಾಂಧರ್ವಞ್ಚೈವ ನಾಟ್ಯಞ್ಚ ಯಃ ಸಮ್ಯಗನುಪಶ್ಯತಿ |
ಲಭತೇ ಸದ್ಗತಿಂ ಪುಣ್ಯಾಂ ಸಮಂ ಬ್ರಹ್ಮರ್ಷಿಭಿರ್ನರಃ ||

– ನಾಟ್ಯಶಾಸ್ತ್ರದ ಮೇಲಿನ ಶ್ರೀ. ಬಾಬುಲಾಲ್‌ ಶುಕ್ಲ ಶಾಸ್ತ್ರಿಪ್ರಣೀತ ಟೀಕೆ (ಚೌಖಂಬಾ ಪ್ರಕಾಶನ)

ಅರ್ಥ : ಯಾವ ಕಲಾವಿದನು ಗಾಂಧರ್ವ ಮತ್ತು ನಾಟ್ಯ ಪ್ರಯೋಗಗಳನ್ನು ಸಂಪೂರ್ಣ ಉದ್ದೇಶಪೂರ್ವಕವಾಗಿ, ಜ್ಞಾನ ಪೂರ್ವಕವಾಗಿ ಮತ್ತು ಗಮನವಿಟ್ಟು ಅವಲೋಕಿಸುತ್ತಾನೆಯೋ, ಅವನೇ ಕೊನೆಗೆ ಬ್ರಹ್ಮರ್ಷಿಗಣಗಳಲ್ಲಿ ಸ್ಥಾನವನ್ನು ಪಡೆದು ಸದ್ಗತಿಯವರೆಗೆ ಹೋಗುತ್ತಾನೆ. ‘ನಾಟಕದ ನಿರ್ಮಿತಿಯು ಈಶ್ವರನ ಆರಾಧನೆಗಾಗಿಯೇ ಆಗಿದೆ’, ಎಂಬುದು ಈ ಶ್ಲೋಕದಿಂದ ತಿಳಿದುಬರುತ್ತದೆ.

ಇ. ಸಾತ್ತ್ವಿಕ ನಾಟಕಗಳಲ್ಲಿನ ಕಲಾವಿದರು ‘ಪಾತ್ರವು ಉತ್ತಮವಾಗಿ ನಿರ್ವಹಿಸಲ್ಪಡಲಿ’ ಎಂಬುದಕ್ಕಾಗಿ ಸಾಧನೆ ಮಾಡುತ್ತಾರೆ. ವೀಕ್ಷಕರ ಮೇಲೆ ಇಂತಹ ಕಲಾವಿದರ ಅಭಿನಯದ ಪ್ರಭಾವವು ಬೀಳುತ್ತದೆ. ಆದ್ದರಿಂದ ಕಲಾವಿದರು ಮತ್ತು ವೀಕ್ಷಕರ ಭಕ್ತಿಭಾವವು ಹೆಚ್ಚಾಗಲು ಸಹಾಯವಾಗುತ್ತದೆ. ಇದರ ಅರ್ಥ ಸಾತ್ತ್ವಿಕ ನಾಟಕದ ಮೂಲಕ ಕಲಾವಿದರು ಮತ್ತು ವೀಕ್ಷಕರು ಇವರಿಬ್ಬರ ಸಾಧನೆಯಾಗುತ್ತದೆ. ಇದರಿಂದ ‘ನಾಟಕದ ಕಲೆಯ ಈಗಿನ ಸ್ವರೂಪ ಭಿನ್ನವಾಗಿದ್ದರೂ, ನಾಟಕದ ಮೂಲ ಉದ್ದೇಶ ‘ಈಶ್ವರಪ್ರಾಪ್ತಿ’ಯೇ ಆಗಿತ್ತು ಎಂಬುದು ಗಮನಕ್ಕೆ ಬರುತ್ತದೆ.

– ಸೌ. ರೇಣುಕಾ ಕ್ರಾಕ್, ನಾಟ್ಯ ಅಭ್ಯಾಸಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೯.೨೦೨೫)

(ಈ ಲೇಖನ ಮಾಲೆಯ ಮುಂದಿನ ಭಾಗದಿಂದ ನಾವು ಗಾಯನ, ವಾದನ, ನೃತ್ಯ ಮತ್ತು ನಾಟಕ ಈ ಕಲೆಗಳಿಗೆ ಇರುವ ಆಧ್ಯಾತ್ಮಿಕ ಅಧಿಷ್ಠಾನದ ಇತಿಹಾಸವನ್ನು ತಿಳಿದುಕೊಳ್ಳಲಿದ್ದೇವೆ.)

ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಸನಾತನ ಪ್ರಭಾತ’ದಲ್ಲಿ ಪ್ರತಿವಾರ ‘ಗಾಯನ, ವಾದನ, ನೃತ್ಯ ಮತ್ತು ನಾಟ್ಯ ಈ ಕಲೆಗಳ ಮಾಧ್ಯಮದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆಯ ಪ್ರಾಸ್ತಾವಿಕ ವಿವೇಚನೆ !’ ಎಂಬ ಲೇಖನಮಾಲೆಯನ್ನು ನೀಡುತ್ತಿದ್ದೇವೆ. ಈ ಲೇಖನಮಾಲೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ‘ಕಲೆಗಳನ್ನು ಸಾಧನೆಯ ದೃಷ್ಟಿಯಿಂದ ಹೇಗೆ ನೋಡಬೇಕು ?’ ಎಂಬ ದೃಷ್ಟಿಕೋನದಿಂದ ಮಾರ್ಗದರ್ಶನ ನೀಡಿದ ಲೇಖನಗಳು ಇರಲಿವೆ. ನಿಮ್ಮ ಸಂಪರ್ಕದಲ್ಲಿರುವ ಕಲಾಪ್ರೇಮಿಗಳು, ಕಲಾವಿದರು ಮತ್ತು ಕಲಾ ಆಸಕ್ತರ ವರೆಗೆ ಈ ಲೇಖನಗಳನ್ನು ತಲುಪಿಸಲು ಪ್ರಯತ್ನಿಸಿ.

ಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಿ.

ಸಂಪರ್ಕಕ್ಕಾಗಿ ವಿಳಾಸ

ಶ್ರೀ. ಅಭಿಜಿತ ಸಾವಂತ

ಸಂಪರ್ಕ ಸಂಖ್ಯೆ : 8793678178

ವಿ-ಅಂಚೆ : [email protected]

– ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಲೇಖನದಲ್ಲಿನ ಕೆಲವು ಪರಿಭಾಷೆಗಳ ಅರ್ಥಗಳು :

೧. ನೇಪಥ್ಯ : ನಾಟಕದಲ್ಲಿನ ಪ್ರಸಂಗಕ್ಕನುಸಾರ ರಂಗಮಂಟಪದ ಮೇಲೆ ಮಾಡಲಾದ ದೃಶ್ಯಾವಳಿ, ಉದಾ. ಮನೆ, ಕಾಡು, ಮೈದಾನ ಇತ್ಯಾದಿ.
೨. ನವರಸಗಳು : ಶೃಂಗಾರ, ವೀರ, ಕರುಣೆ, ಹಾಸ್ಯ, ರೌದ್ರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತ.
೩. ಗಾಂಧರ್ವ ಸಂಗೀತ : ಇದು ಒಂದು ಆಧ್ಯಾತ್ಮಿಕ ಸಂಗೀತವಾಗಿದೆ. ಇದನ್ನು ಸ್ವರ್ಗಲೋಕದ ಗಂಧರ್ವರು ಮೋಕ್ಷ ಸಾಧನೆಗಾಗಿ ಹಾಡುತ್ತಾರೆ ಅಥವಾ ನುಡಿಸುತ್ತಾರೆ. ಇದಕ್ಕೆ ‘ಮಾರ್ಗಿ ಸಂಗೀತ ಎಂದೂ ಕರೆಯುತ್ತಾರೆ.