ದೇಶವೇ ಎಚ್ಚರವಾಗಿರು, ರಾತ್ರಿಯೂ ವೈರಿಗಳದ್ದಾಗಿದೆ !

ಸೌ. ಶೆಫಾಲಿ ವೈದ್ಯ

೧೦ ನವೆಂಬರ್‌ ೨೦೨೫ ರ ರಾತ್ರಿ, ಭಾರತದ ರಾಜಧಾನಿ ದೆಹಲಿಯು ೨೦೧೪ ರ ನಂತರ ಮೊದಲ ಬಾರಿಗೆ ಇಸ್ಲಾಮಿ ಭಯೋತ್ಪಾದಕ ದಾಳಿಯಿಂದ ನಡುಗಿತು. ಈ ದಾಳಿಯನ್ನು ಮಾಡಿದವರು ಇಸ್ಲಾಮಿ ಆತ್ಮಾಹುತಿ ಭಯೋತ್ಪಾದಕರು ಎಂಬುದು ಈಗ ಸಾಬೀತಾಗಿದೆ.

೧. ಕೆಂಪು ಕೋಟೆಯ ಬಳಿ ನಡೆದ ಸ್ಫೋಟದ ಹಿಂದಿನ ಭೀಕರತೆ

ಡಾ. ಶಾಹೀನ್‌ ಶಾಹಿದ್‌

ನವೆಂಬರ್‌ ೧೦ ರಂದು ಕೆಂಪುಕೋಟೆಯ ಬಳಿ ಸಂಭವಿಸಿದ ಈ ಸ್ಫೋಟವು ಒಂದು ಅತ್ಯಂತ ಆಯೋಜನಾಬದ್ಧ ಜಿಹಾದಿ ಭಯೋತ್ಪಾದಕ ದಾಳಿಯ ಕೇವಲ ಒಂದು ಭಾಗವಾಗಿತ್ತು ಮತ್ತು ಈ ಒಳಸಂಚನ್ನು ರೂಪಿಸಿದವರು ಉನ್ನತ ಶಿಕ್ಷಣ ಪಡೆದ ಡಾಕ್ಟರರು ಆಗಿದ್ದರು. ಡಾ. ಮುಜಮ್ಮಿಲ್‌ ಶಕೀಲ್, ಡಾ. ಆದಿಲ್‌ ಅಹಮದ್‌ ರಾದರ್, ಡಾ. ಶಾಹೀನ್‌ ಶಾಹಿದ್‌ ಈ ‘ಜೈಶ್‌-ಎ-ಮೊಹಮ್ಮದ್‌’ನ ಭಯೋತ್ಪಾದಕರು ರಾಜಧಾನಿ ದೆಹಲಿಯಲ್ಲಿ ಒಟ್ಟು ೨,೯೦೦ ಕಿಲೋ ಸ್ಫೋಟಕಗಳನ್ನು ಬಳಸಿ ಸರಣಿ ಸ್ಫೋಟಗಳನ್ನು ನಡೆಸಲು ಸಂಚು ಮಾಡಿದ್ದರು.

೨. ಹಿಂದೂಗಳಿಗೆ ಪ್ರಸಾದದ ಮೂಲಕ ಅಪಾಯಕಾರಿ ವಿಷವನ್ನು ನೀಡುವ ಸಂಚು

ಉತ್ತರಪ್ರದೇಶದ ಆಜಾದ್‌ ಸುಲೈಮಾನ್‌ ಶೇಖ್‌ ಮತ್ತು ಮೊಹಮ್ಮದ್‌ ಸುಹೈಲ್‌ ಮೊಹಮ್ಮದ್‌ ಸಲೀಂ ಎಂಬ ಇಬ್ಬರು ಯುವಕರನ್ನು ಬಂಧಿಸಿದಾಗ, ಅವರ ಬಳಿ ‘ರಿಸಿನ್’ ತಯಾರಿಸಲು ಬಳಸುವ ನಾಲ್ಕು ಕಿಲೋ ಔಡಲ ಬೀಜಗಳ ಪ್ರಕ್ರಿಯೆ ಮಾಡಿ ಪ್ರಯೋಜನಕಾರಿ ಭಾಗವು ದೊರೆಯಿತು. ‘ರಿಸಿನ್’ ಜಗತ್ತಿನ ಅತ್ಯಂತ ಅಪಾಯಕಾರಿ ವಿಷಗಳಲ್ಲಿ ಒಂದಾಗಿದೆ. ಈ ವಿಷವನ್ನು ಹಿಂದೂ ದೇವಾಲಯಗಳಲ್ಲಿ ನೀಡಲಾಗುವ ಪ್ರಸಾದಗಳಲ್ಲಿ ಬೆರೆಸಿ ಜನರಿಗೆ ನೀಡಲು ಅವರು ಸಂಚು ಮಾಡಿದ್ದರು.

೩. ತಥಾಕಥಿತ ಮಾನವಹಕ್ಕುಗಳ ಪ್ರತಿಪಾದಕರು ಮತ್ತು ಬುದ್ಧಿಜೀವಿಗಳ ಬೊಬ್ಬೆ !

ಇಂದು ದೆಹಲಿ ರಕ್ತಸಿಕ್ತವಾಗಿರುವಾಗ, ಭಾರತದಲ್ಲಿನ ಕೆಲವು ದೇಶದ್ರೋಹಿಗಳು ಕೈಯಲ್ಲಿ ಮೇಣದ ಬತ್ತಿಗಳನ್ನು ಹಿಡಿದು ‘ಅಮನ್‌ ಕಾ ತಮಾಶಾ’ (ಶಾಂತಿಯ ನಾಟಕ) ಪ್ರದರ್ಶಿಸುತ್ತಿದ್ದಾರೆ. ನಮ್ಮ ಭದ್ರತಾ ವ್ಯವಸ್ಥೆಗಳು ಪ್ರತಿ ಬಾರಿಯೂ ಸರಿಯಾಗಿರಬೇಕಾಗುತ್ತದೆ; ಭಯೋತ್ಪಾದಕರಿಗೆ ಕೇವಲ ಒಂದು ಅವಕಾಶ ಸಾಕು. ಅನೇಕ ಬುದ್ಧಿಜೀವಿ ಮಳೆಹುಳಗಳು ‘ಈ ಪ್ರಕರಣಕ್ಕೆ ಸಾಂಪ್ರದಾಯಿಕ ಬಣ್ಣವನ್ನು ನೀಡಬೇಡಿ’ ಎಂದು ಹೇಳುತ್ತಿವೆ. ಜಗತ್ತಿನಾದ್ಯಂತದ ಪ್ರತಿಯೊಬ್ಬ ಭಯೋತ್ಪಾದಕನು ಒಂದೇ ಧರ್ಮಕ್ಕೆ ಏಕೆ ಸೇರಿದವನಾಗಿರುತ್ತಾನೆ ?

– ಸೌ. ಶೆಫಾಲಿ ವೈದ್ಯ, ಪ್ರಸಿದ್ಧ ಲೇಖಕಿ, ಪುಣೆ, (೧೧.೧೧.೨೦೨೫)