
೧. ಪರಾತ್ಪರ ಗುರು ಡಾ. ಆಠವಲೆಯವರು ಹುಟ್ಟಿದ ಕೋಣೆಯನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹುಡುಕುವುದು
‘ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನಾಗೋಠಣೆಯಲ್ಲಿ ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮವಾಯಿತು. ನಾನು ೧೦-೧೨ ವರ್ಷಗಳ ಹಿಂದೆ ಅವರು ಜನಿಸಿದ ಸ್ಥಳದ ಚಿತ್ರೀಕರಣವನ್ನು ಮಾಡಲು ಅಲ್ಲಿ ಹೋಗಿದ್ದೆ. ಪರಮ ಪೂಜ್ಯರ ದಿವ್ಯ ಸ್ಪರ್ಶದಿಂದ ಪಾವನವಾಗಿರುವ ಆ ವಾಸ್ತುವನ್ನು ಇಂದಿಗೂ ಹಾಗೆಯೇ ಜೋಪಾನ ಮಾಡಿ ಇಟ್ಟಿದ್ದಾರೆ. ಅಲ್ಲಿ ಅವರ ಸಂಬಂಧಿಕರಾದ ಶ್ರೀ. ನಾನಾ ವರ್ತಕ (ದಿ. ವಿಜಯ (ನಾನಾ) ವರ್ತಕ, ಆಧ್ಯಾತ್ಮಿಕ ಮಟ್ಟ ಶೇ. ೬೫) ಇವರು ಇರುತ್ತಿದ್ದರು.
ನಾನು ಅಲ್ಲಿ ಹೋದಾಗ, ನನಗೆ ‘ಪರಾತ್ಪರ ಗುರುದೇವರು ಹುಟ್ಟಿದ ಕೋಣೆ ಯಾವುದು ?’ ಎಂಬುದು ಗೊತ್ತಾಗುತ್ತಿರಲಿಲ್ಲ; ಅಲ್ಲಿ ಅದು ಯಾರಿಗೂ ಗೊತ್ತಿರಲಿಲ್ಲ. ನಾನು ಸಂಚಾರವಾಣಿಯಿಂದ ಪರಾತ್ಪರ ಗುರುದೇವರಿಗೆ ಕೇಳಿದೆನು, ಆಗ ಅವರು ಸಹ, ”ನನಗೂ ಈಗ ಮನೆಯ ರಚನೆ ಗೊತ್ತಿಲ್ಲ. ನೀವು ಸೂಕ್ಷ್ಮದಲ್ಲಿ ನಾನು ಹುಟ್ಟಿದ ಕೋಣೆ ಯಾವುದು ? ಎಂದು ದೇವರಲ್ಲಿಯೇ ಕೇಳಬೇಕು. ದೇವರು ನಿಮಗೆ ಹೇಳುವನು,’’ ಎಂದು ಹೇಳಿದರು. ನಾನು ಸೂಕ್ಷ್ಮದಿಂದ ಕೇಳಿದಾಗ ನನಗೆ ಪರಾತ್ಪರ ಗುರುದೇವರು ಹುಟ್ಟಿದ ಕೋಣೆ ಯಾವುದು ಎಂಬುದನ್ನು ತಕ್ಷಣ ಈಶ್ವರನು ಹೇಳಿದನು ಮತ್ತು ಆ ಕೋಣೆಗೆ ಹೋದ ನಂತರ ಈಗಲೂ ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರುದೇವರ ಚೈತನ್ಯವನ್ನು ಅನುಭವಿಸಬಹುದು.
೨. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ಅವರ ಉಡುಗೆತೊಡುಗೆಗಳಿಂದ ನೆನಪಿನಲ್ಲಿಡುವುದು
ಆಶ್ರಮದಲ್ಲಿ ಈ ಹಿಂದೆ ದಿನವಿಡಿ ಅನೇಕ ಸಾಧಕರು ಪರಾತ್ಪರ ಗುರುದೇವರನ್ನು ಸೇವೆಯ ನಿಮಿತ್ತ ಭೇಟಿಯಾಗುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಪ್ರತಿಯೊಬ್ಬರ ಹೆಸರು ನೆನಪು ಇರುತ್ತಿರಲಿಲ್ಲ. ಅವರ ಉಡುಗೆತೊಡುಗೆಯಿಂದ ಪರಾತ್ಪರ ಗುರುದೇವರು ಅವರನ್ನು ಗಮನದಲ್ಲಿಡುತ್ತಿದ್ದರು, ಉದಾ. ಓರ್ವ ಸಾಧಕಿಯ ವೈಶಿಷ್ಟ್ಯಪೂರ್ಣ ಕೇಶಾಲಂಕಾರ, ಟಿಕಲಿ, ಕುಂಕುಮ ಇತ್ಯಾದಿಗಳು. ಒಬ್ಬ ಸಾಧಕಿಯು ಉದ್ದ ಟಿಕಲಿಯನ್ನು ಹಚ್ಚುತ್ತಿದ್ದಳು, ಅವಳಿಗೆ ‘ಆ ಉದ್ದ ಟಿಕಲಿಯನ್ನು ಹಚ್ಚುವ ಸಾಧಕಿ’ ಎಂದು ತಮಾಷೆ ಮಾಡಿ ನೆನಪಿಡುತ್ತಿದ್ದರು. ನಾನು ಸಹ ಈ ಮೊದಲು ಒಂದು ಜಡೆಯನ್ನು ಹಾಕುತ್ತಿದ್ದೆನು ಮತ್ತು ಎರಡೂ ಬದಿಗಳಿಂದ ಒಂದೊಂದು ಪಟ್ಟನ್ನು ಎತ್ತಿ ಹೇರ್‌ಪಿನ್ (ಕೂದಲಿಗೆ ಹಾಕುವ ಪಿನ್ನು) ಹಾಕುತ್ತಿದ್ದೆನು. ಆ ಎತ್ತರ ಪಿನ್ನುಗಳನ್ನು ಹಾಕುವವರು ಗಾಡಗೀಳಕಾಕೂ ಅಲ್ಲವೇ ? ಎಂದು ಒಮ್ಮೆ ನನ್ನ ಬಗ್ಗೆ ಮಾತನಾಡುವಾಗ ಓರ್ವ ಸಾಧಕಿಗೆ ಗುರುದೇವರು ಕೇಳಿದ್ದರು. ಇದರಿಂದ ‘ಗುರುದೇವರ ಸೂಕ್ಷ್ಮದಿಂದ ಅರಿತುಕೊಳ್ಳುವುದರೊಂದಿಗೆ ಅವರ ನಿರೀಕ್ಷಣೆ ಕ್ಷಮತೆಯೂ ತುಂಬಾ ಇದೆ,’ ಎಂಬುದು ಕಂಡುಬರುತ್ತದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !