೧. ಸಮಾಜದಲ್ಲಿನ ವ್ಯಕ್ತಿಗಳು ವಿಡಿಯೋ ತಯಾರಿಸುವುದು

೧ ಅ. ಸಮಾಜದಲ್ಲಿನ ವ್ಯಕ್ತಿಗಳು ವಿಡಿಯೋಗಳನ್ನು ತಯಾರಿಸುವುದರ ಹಿಂದಿನ ಉದ್ದೇಶ ! : ‘ಸದ್ಯ ಸಮಾಜದಲ್ಲಿನ ವ್ಯಕ್ತಿಗಳು ಪ್ರಸಾರಕ್ಕಾಗಿ ವಿವಿಧ ವಿಡಿಯೋಗಳನ್ನು (ಚಲನಚಿತ್ರ) ತಯಾರಿಸುತ್ತಿದ್ದಾರೆ. ಈ ಎಲ್ಲ ವಿಡಿಯೋಗಳನ್ನು ತಯಾರಿಸುವ ಹಿಂದೆ ಆ ವ್ಯಕ್ತಿಗಳ ಉದ್ದೇಶ ‘ಜನರಿಗೆ ಮನೋರಂಜನೆಯಾಗಬೇಕು, ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಮತ್ತು ವಿಡಿಯೋಗಳಿಗೆ ಬಹಳಷ್ಟು ಲೈಕ್ಸ್ (ಪ್ರಶಂಸೆ) ಸಿಗಬೇಕು’, ಎಂಬುದಾಗಿರುತ್ತದೆ. ಸ್ವಾಭಾವಿಕವಾಗಿಯೇ ವಿಡಿಯೋಗಳನ್ನು ಹೆಚ್ಚೆಚ್ಚು ವೈವಿಧ್ಯಮಯವಾಗಿ ಮಾಡುವ ಪ್ರಯತ್ನವಿರುತ್ತದೆ.
೧ ಆ. ಸಮಾಜದಲ್ಲಿನ ವ್ಯಕ್ತಿಗಳು ತಯಾರಿಸಿದ ವಿಡಿಯೋಗಳ ಸ್ವರೂಪ : ಈ ವಿಡಿಯೋಗಳ ವೇಗ ಬಹಳ ಹೆಚ್ಚಿರುತ್ತದೆ. ಅದರಲ್ಲಿ ನಿರೂಪಣೆಗೆ ಹೋಲಿಸಿದರೆ ಚಿತ್ರಗಳ ಸಂಖ್ಯೆ ಮತ್ತು ನಿರೂಪಣೆಯ ಮಾತಿನ ವೇಗ ಇವೆರಡೂ ಹೆಚ್ಚಿರುತ್ತವೆ. ‘ವಿಡಿಯೋಗಳಲ್ಲಿನ ಚಿತ್ರಗಳು ಎದ್ದು ಕಾಣಬೇಕು’, ಎಂಬುದಕ್ಕಾಗಿ ಅದರಲ್ಲಿನ ಬಣ್ಣಗಳ ಸಂಯೋಜನೆ ಗಾಢವಾಗಿರುತ್ತದೆ. ವಿಡಿಯೋಗಳ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಶೈಲಿಯ ಆಕರ್ಷಕ ಸಂಗೀತ ಇರುತ್ತದೆ.

೨. ವಿಡಿಯೋಗಳನ್ನು ತಯಾರಿಸುವ ಹಿಂದಿನ ಸನಾತನದ ದೃಷ್ಟಿಕೋನ !
ಸದ್ಯ ‘ಎಷ್ಟು ವೀಕ್ಷಕರು ಹೆಚ್ಚೋ, ಅಷ್ಟು ಜನಪ್ರಿಯತೆ ಹೆಚ್ಚು’, ಎಂಬ ಸಮೀಕರಣವಿರುವುದರಿಂದ ಸ್ವಾಭಾವಿಕವಾಗಿ ಸಾಧಕರಿಗೂ ‘ಸನಾತನ ಸಂಸ್ಥೆಯ ವತಿಯಿಂದ ತಯಾರಿಸಿದ ವಿಡಿಯೋಗಳನ್ನು ಹೆಚ್ಚೆಚ್ಚು ಜನರು ನೋಡಬೇಕು’, ಎಂಬ ಅಪೇಕ್ಷೆ ಇರುವುದು ಸ್ವಾಭಾವಿಕವಾಗಿದೆ; ಆದರೆ ಸನಾತನ ಸಂಸ್ಥೆಯ ಉದ್ದೇಶ ‘ಜನರ ಮನೋರಂಜನೆ ಮಾಡುವುದು’ ಆಗಿರದೇ ‘ಜನರಿಗೆ ಧರ್ಮಶಿಕ್ಷಣ ನೀಡುವುದು’ ಆಗಿದೆ. ‘ಸ್ಪರ್ಧೆಯಲ್ಲಿ ಕೊನೆಯವರೆಗೂ ಉಳಿಯಲು ಸಮಾಜದ ವ್ಯಕ್ತಿಗಳು ತಯಾರಿಸಿದ ವಿಡಿಯೋಗಳಂತೆ ಸನಾತನ ಸಂಸ್ಥೆಯೂ ವಿಡಿಯೋಗಳನ್ನು ತಯಾರಿಸಬೇಕು’, ಎಂಬ ಸೂಚನೆಗಳು ಬರುತ್ತಿರುತ್ತವೆ. ಇದಕ್ಕನುಗುಣವಾಗಿ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿ ತೆಗೆದುಕೊಳ್ಳಬೇಕು.
೨ ಅ. ಸಮಾಜದಲ್ಲಿನ ವ್ಯಕ್ತಿಗಳ ಸಾತ್ತ್ವಿಕತೆಯನ್ನು ಹೆಚ್ಚಿಸಲು ಪ್ರಯತ್ನಶೀಲರಾಗಿರುವುದು : ಸನಾತನವು ಆರಂಭದಿಂದಲೇ ‘ಜನರಿಗೆ ಏನು ಇಷ್ಟವಾಗುತ್ತದೆ ?’, ಎಂಬುದಕ್ಕಿಂತ ‘ಅವರಿಗೆ ಏನು ಆವಶ್ಯಕವಾಗಿದೆ ?’, ಎಂಬುದಕ್ಕೆ ಹೆಚ್ಚು ಒತ್ತು ನೀಡಿದೆ. ಸನಾತನ ಸಂಸ್ಥೆಯ ಕಾರ್ಯವು ಆರಂಭವಾದಾಗಲೂ ಸಮಾಜದಲ್ಲಿ ರಜ-ತಮದ ಪ್ರಮಾಣ ಹೆಚ್ಚಿತ್ತು. ಈಗ ಮಾತ್ರ ರಜ-ತಮದ ಪ್ರಮಾಣ ಬಹಳಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ‘ಅಧ್ಯಾತ್ಮದ ಪ್ರಸಾರ ಮಾಡುವುದು ಮತ್ತು ಜನರಿಗೆ ಧರ್ಮಶಿಕ್ಷಣ ನೀಡುವುದು’, ಎಂದರೆ ‘ಸಮಾಜದ ವ್ಯಕ್ತಿಗಳ ಸಾತ್ತ್ವಿಕತೆ ಹೆಚ್ಚಿಸಲು ಪ್ರಯತ್ನ ಮಾಡುವುದು’, ಇದು ದೊಡ್ಡ ಸಾಹಸದ ಕೆಲಸವಾಗಿತ್ತು ಮತ್ತು ಈಗ ಆ ರೀತಿ ಮಾಡುವುದು ಬಹಳ ಕಠಿಣವಾಗಿದೆ. ಹೀಗಿದ್ದರೂ ಸನಾತನವು ಆರಂಭದಿಂದಲೇ ಪ್ರತಿಯೊಂದು ವಿಷಯವನ್ನು ಸಾತ್ತ್ವಿಕ ಮಾಡುವುದರ ಕಡೆಗೆ ಒತ್ತು ನೀಡಿದೆ ಮತ್ತು ಇದೇ ದೃಷ್ಟಿಕೋನವನ್ನು ಸನಾತನ ಸಂಸ್ಥೆಯು ಇಂದಿಗೂ ಪಾಲಿಸಿಕೊಂಡು ಬಂದಿದೆ.
ಸನಾತನ ಸಂಸ್ಥೆಯು ತಯಾರಿಸಿದ ವಿಡಿಯೋಗಳಿಗೆ ಹೆಚ್ಚಿನ ವೀಕ್ಷಕರ ಸಂಖ್ಯೆ ಅಥವಾ ಹೆಚ್ಚು ‘ಲೈಕ್ಸ್’ಗಳು ಸಿಗದೇ ಇದ್ದರೂ, ಆ ವಿಡಿಯೋಗಳ ಮಾಧ್ಯಮದಿಂದ ಸಮಾಜದಲ್ಲಿ ಸಾತ್ತ್ವಿಕತೆಯು ಪ್ರಸಾರವಾಗುತ್ತಿರುವುದರಿಂದ ಅವುಗಳ ಉಪಯುಕ್ತತೆ ಹೆಚ್ಚಿದೆ. ‘ಸನಾತನ ಸಂಸ್ಥೆಯು ತಯಾರಿಸಿದ ಚಲನಚಿತ್ರಗಳನ್ನು ಕಡಿಮೆ ಜನರು ನೋಡಿದರೂ ‘ಯಾವ ವ್ಯಕ್ತಿಗಳು ಆ ವಿಡಿಯೋಗಳನ್ನು ನೋಡುವರೋ, ಅವರ ಮೇಲೆ ಸಾತ್ತ್ವಿಕತೆಯ ಸಂಸ್ಕಾರವಾಗಿ ಎಂದಾದರೂ ಅವರು ಸಾಧನೆಯನ್ನು ಆರಂಭಿಸುವರು’, ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಪ್ರತಿಯೊಂದು ಕೃತಿಯನ್ನು ಸಾತ್ತ್ವಿಕ ಮಾಡುವ ಕಡೆಗೇ ಹೆಚ್ಚು ಗಮನ ನೀಡಬೇಕು.
೨ ಆ. ಸದ್ಯದ ಕಾಲವು ಮನೋರಂಜನೆ ಮಾಡುವ ಸಮಯವಲ್ಲ, ಬದಲಾಗಿ ಸತ್ತ್ವಪ್ರಧಾನ ಸಮಾಜವನ್ನು ನಿರ್ಮಿಸುವ ಸಮಯವಾಗಿದೆ ! : ಸದ್ಯ ಮನೋರಂಜನೆ ಮಾಡುವ ಕಾಲವು ಇಲ್ಲದಿರುವುದರಿಂದ ‘ಸಮಾಜಕ್ಕೆ ಏನು ಇಷ್ಟವಾಗುತ್ತದೆ ?’, ಎಂಬುದಕ್ಕಿಂತ ‘ಸಮಾಜಕ್ಕೆ ಏನು ಆವಶ್ಯಕವಾಗಿದೆ ?’, ಎಂಬುದಕ್ಕೆ ಹೆಚ್ಚು ಒತ್ತು ನೀಡಲು ಸಾಧಕರು ಪ್ರಯತ್ನಿಸಬೇಕು ಮತ್ತು ಆ ದೃಷ್ಟಿಯಿಂದಲೇ ತಮ್ಮ ಸಾಧನೆಯ ದೃಷ್ಟಿಕೋನವನ್ನು ವಿಕಸಿತಗೊಳಿಸಬೇಕು. ನೀವು ತಯಾರಿಸುವ ವಿಡಿಯೋಗಳನ್ನು ಮನೋರಂಜನೆಗೆ ಸಂಬಂಧಿಸಿದಂತೆ ಮಾಡಿದರೆ ಅವು ಜನರಿಗೆ ಇಷ್ಟವಾಗಬಹುದು; ಆದರೆ ಅಧ್ಯಾತ್ಮ ಮತ್ತು ಸಾಧನೆಯ ದೃಷ್ಟಿಯಿಂದ ಅವುಗಳ ಫಲಿತಾಂಶವು ಅತಿ ಕಡಿಮೆಯಾಗಿರುತ್ತದೆ. ನೀವು ಜನರಿಗೆ ಮನೋರಂಜನೆಗೆ ಸಂಬಂಧಿಸಿದ ವಿಡಿಯೋಗಳನ್ನು ತಯಾರಿಸಿ ಕೊಟ್ಟರೆ ಅದರಿಂದ ಅವರಿಗೆ ಸಾತ್ತ್ವಿಕತೆಯ ಲಾಭವಾಗದೇ ಅವರಲ್ಲಿ ರಜ-ತಮವು ಹೆಚ್ಚಾಗುತ್ತದೆ. ಆದ್ದರಿಂದ ತಿಳಿದೂ, ತಿಳಿಯದೇ ಅವರ ಮೇಲೆಯೂ ರಜ-ತಮದ ಸಂಸ್ಕಾರವಾಗಿ ಅವರು ಅಧ್ಯಾತ್ಮ ಮತ್ತು ಧರ್ಮದಿಂದ ದೂರ ಹೋಗುತ್ತಾರೆ ಮತ್ತು ಯಾವ ಉದ್ದೇಶದಿಂದ ನಾವು ಸಾಧನೆಯನ್ನು ಮಾಡುತ್ತಿರುವೆವೋ ಆ ಉದ್ದೇಶವು ಅವರಿಂದ ಈಡೇರುವುದಿಲ್ಲ.
ಸಾಧಕರ ಅಧ್ಯಯನಕ್ಕಾಗಿ ಈ ಲೇಖನದೊಂದಿಗೆ ೨ ಚಿತ್ರಗಳನ್ನು ೧೨ ನೆಯ ಪುಟಕ್ಕೆ ಮುದ್ರಿಸಲಾಗಿದೆ. ‘ಸಾಧಕರು ಯಾವ ಚಿತ್ರದ ಕಡೆಗೆ ನೋಡಿ ಹೆಚ್ಚು ಒಳ್ಳೆಯದೆನಿಸುತ್ತದೆ ?’, ಎಂಬುದರ ಅಧ್ಯಯನ ಮಾಡಬೇಕು.
‘ಸತ್ತ್ವಪ್ರಧಾನ ಸಮಾಜದ ನಿರ್ಮಿತಿಯೇ’, ಸನಾತನ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ದೃಷ್ಟಿಯಿಂದಲೇ ಸಾಧಕರು ತಮ್ಮ ವಿಚಾರಸರಣಿಯನ್ನು ವಿಕಸಿತಗೊಳಿಸಬೇಕು.’
ಕಲೆಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರಿಗೆ ಅಸಾತ್ತ್ವಿಕ ಮತ್ತು ಸಾತ್ತ್ವಿಕ ಚಿತ್ರಗಳನ್ನು ತಯಾರಿಸುವಾಗ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳು
‘ಒಮ್ಮೆ ಓರ್ವ ಸಾಧಕನ ವಿವಾಹದ ನಿಮಿತ್ತ ತೆಗೆದ ಛಾಯಾಚಿತ್ರಗಳ ‘ಅಲ್ಬಮ್’ನ (ಛಾಯಾಚಿತ್ರಗಳನ್ನು ಸಂಗ್ರಹಿಸಿದ ವಹಿಯ) ಮುಖಪುಟವನ್ನು ತಯಾರಿಸಲಿಕ್ಕಿತ್ತು.
|
|
|
೧. ಸಮಾಜದಲ್ಲಿ ಪ್ರಚಲಿತವಿರುವ ಪದ್ಧತಿಯಲ್ಲಿ ಚಿತ್ರವನ್ನು ತಯಾರಿಸುವಾಗ ಸಾಧಕಿಗೆ ಉತ್ಸಾಹ ಅನಿಸದಿರುವುದು
ಓರ್ವ ಸಾಧಕಿಯು ಸದ್ಯಸಮಾಜದಲ್ಲಿ ಪ್ರಚಲಿತವಿರುವ ಕೆಲವು ‘ಅಲ್ಬಮ್’ನ ಮೇಲಿರುವ ಚಿತ್ರಗಳ ಅಧ್ಯಯನ ಮಾಡಿದಳು ಮತ್ತು ಅದೇ ರೀತಿಯಲ್ಲಿ ಒಂದು ಚಿತ್ರ ತಯಾರಿಸಿದಳು. (ಚಿತ್ರ ಸಂಖ್ಯೆ ೧)
ಆ ಸೇವೆಯನ್ನು ಮಾಡುತ್ತಿರುವಾಗ ಆ ಸಾಧಕಿಗೆ ೫ ರಿಂದ ೧೦ ನಿಮಿಷಗಳ ಕಾಲ ಉತ್ಸಾಹವೆನಿಸಿತು. ನಂತರ ನಿಧಾನವಾಗಿ ಅವಳಿಗೆ ಹೊಳೆಯದಂತಾಯಿತು. ಅವಳ ನಾಮಜಪ ನಿಂತಿತು. ಅವಳಿಗೆ ಒಂದು ರೀತಿಯ ನಿರುತ್ಸಾಹವೆನಿಸತೊಡಗಿತು.
೨. ಸನಾತನ ಸಂಸ್ಥೆಯು ಕಲಿಸಿದ ಪದ್ಧತಿಗನುಸಾರ ಚಿತ್ರವನ್ನು ತಯಾರಿಸುವಾಗ ಭಾವಜಾಗೃತಿಯಾಗಿ ಆನಂದ ಸಿಗುವುದು (ಚಿತ್ರ ಸಂಖ್ಯೆ ೨)
ನಂತರ ಅವಳು ದೇವರಿಗೆ ಪ್ರಾರ್ಥನೆಯನ್ನು ಮಾಡಿದಳು. ಅವಳು ‘ಸನಾತನ ಸಂಸ್ಥೆಯು ಕಲಿಸಿದ ಪದ್ಧತಿಯಗನುಸಾರ ಮುಖಪುಟವನ್ನು ತಯಾರಿಸೋಣ’, ಎಂದು ನಿರ್ಧರಿಸಿದಳು. (ಚಿತ್ರ ಸಂಖ್ಯೆ ೨) ಅದಕ್ಕನುಸಾರ ಸಾಧಕಿಯು ಸೇವೆಯನ್ನು ಮಾಡತೊಡಗಿದಾಗ ಅವಳಿಗೆ ಉತ್ಸಾಹವೆನಿಸತೊಡಗಿತು. ಅವಳಿಗೆ ಹಗುರವೆನಿಸತೊಡಗಿತು. ಅವಳು ‘ತಿಳಿ, ಹಾಗೆಯೇ ಸಾತ್ತ್ವಿಕ ಬಣ್ಣಗಳ ಮತ್ತು ದೇವರ ಸಾತ್ತ್ವಿಕ ಚಿತ್ರ’ಗಳನ್ನು ಆಯ್ದುಕೊಂಡಳು. ಆಗ ಅವಳ ಭಾವಜಾಗೃತವಾಯಿತು ಮತ್ತು ಅವಳಿಗೆ ಆನಂದ ಸಿಗತೊಡಗಿತು. ಮುಖಪುಟ ಪೂರ್ಣಗೊಂಡ ನಂತರ ಅವಳಿಗೆ ಬಹಳ ಸಮಾಧಾನವೆನಿಸಿತು. ಅವಳ ಈ ಸ್ಥಿತಿ ಕೆಲವು ಗಂಟೆಗಳ ಕಾಲ ಉಳಿಯಿತು.
೩. ಮುಖಪುಟದಲ್ಲಿನ ಬಣ್ಣಗಳ ಸಂದರ್ಭದಲ್ಲಿ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳು !
‘ಎರಡೂ ಚಿತ್ರಗಳ ಕಡೆಗೆ ೧-೧ ನಿಮಿಷ ನೋಡಿ ಏನು ಅನಿಸಿತು ?’, ಎಂಬುದರ ಪ್ರಯೋಗ ಮಾಡಬಹುದು.
೩ ಅ. ಪ್ರಯೋಗದ ಉತ್ತರ : ಚಿತ್ರ ಸಂಖ್ಯೆ ೧ ರಲ್ಲಿ ಗಾಢ ಬಣ್ಣಗಳನ್ನು ಬಳಸಲಾಗಿದೆ. ‘ಆ ಬಣ್ಣಗಳ ಕಡೆಗೆ ಹೆಚ್ಚು ನೋಡಬಾರದು’, ಎಂದೆನಿಸುತ್ತದೆ. ಚಿತ್ರ ಸಂಖ್ಯೆ ೨ ರಲ್ಲಿ ತಿಳಿ ಬಣ್ಣವನ್ನು ಬಳಸಲಾಗಿದೆ. ಆ ಚಿತ್ರದ ಕಡೆಗೆ ನೋಡುವಾಗ ಹಗುರ ಅನಿಸುತ್ತದೆ ಮತ್ತು ಭಾವಜಾಗೃತವಾಗುತ್ತದೆ.
೩ ಆ. ವಿಶ್ಲೇಷಣೆ : ಗಾಢ ಬಣ್ಣಗಳು ಮೊದಲು ನಿಮ್ಮ ಗಮನವನ್ನು ಸೆಳೆಯುತ್ತವೆ; ಆದರೆ ಗಾಢ ಬಣ್ಣಗಳು ರಜೋಗುಣಿ ಆಗಿರುವುದರಿಂದ ಅವುಗಳ ಕಡೆಗೆ ನಾವು ಹೆಚ್ಚು ಸಮಯ ನೋಡಲು ಸಾಧ್ಯವಾಗುವುದಿಲ್ಲ್ಲ. ತಿಳಿ ಬಣ್ಣಗಳ ಕಡೆಗೆ ನೋಡಿ ಹೆಚ್ಚು ಒಳ್ಳೆಯದೆನಿಸುತ್ತದೆ; ಏಕೆಂದರೆ ತಿಳಿ ಬಣ್ಣಗಳು ಸತ್ತ್ವಗುಣಿಯಾಗಿರುತ್ತವೆ. ಕಣ್ಣುಗಳಿಗೆ ಗಾಢ ಬಣ್ಣ ಮತ್ತು ಮನಸ್ಸಿಗೆ ತಿಳಿ ಬಣ್ಣ ಒಳ್ಳೆಯದೆನಿಸುತ್ತದೆ. ಕಣ್ಣುಗಳಿಗೆ ಯಾವುದು ಆಕರ್ಷಕವೆನಿಸುತ್ತದೆಯೋ, ಅದಕ್ಕಿಂತಲೂ ಮನಸ್ಸಿಗೆ ಏನು ಅನಿಸುತ್ತದೆಯೋ, ಅದು ಹೆಚ್ಚು ಸರಿಯಾಗಿರುತ್ತದೆ.
‘ಸಾಧನೆಯ ಪ್ರವಾಸವು ಯಾವಾಗಲೂ ಜಡತ್ವದಿಂದ ನಿರ್ಗುಣದ ಕಡೆಗೆ, ಅಂದರೆ ಸ್ಥೂಲದಿಂದ ಸೂಕ್ಷ್ಮದ ಕಡೆಗೆ’, ಇರುತ್ತದೆ. ಎಷ್ಟು ಸೂಕ್ಷ್ಮವೋ, ಅಷ್ಟು ಆನಂದಮಯವಾಗಿರುತ್ತದೆ. ಗಾಢ ಬಣ್ಣಗಳಿಂದ ಹಂತಹಂತವಾಗಿ ದೃಷ್ಟಿಯನ್ನು ತಿಳಿ ಬಣ್ಣಗಳ ಕಡೆಗೆ ತಿರುಗಿಸುವಾಗ (ಅಂದರೆ ಚಿತ್ರ ಸಂಖ್ಯೆ ೧ ರಿಂದ ಸಂಖ್ಯೆ ೨ ರ ಕಡೆಗೆ ನೋಡುವಾಗ) ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವ ಅನುಭೂತಿ ಪಡೆಯಲು ಬರುತ್ತದೆ. ತಿಳಿಯಾಗುತ್ತಾ ಹೋದ ಬಣ್ಣಗಳು ಕೊನೆಗೆ ಬಿಳಿ ಬಣ್ಣದಲ್ಲಿ ವಿಲೀನಗೊಳ್ಳುತ್ತವೆ. ಅಲ್ಲಿ ಮನಸ್ಸು ಸ್ಥಿರಗೊಳ್ಳುತ್ತದೆ, ಅಂದರೆ ಮನಸ್ಸಿಗೆ ನಿರ್ಗುಣದ ಅನುಭವವಾಗುತ್ತದೆ.
೪. ಸಂಬಂಧಿತ ಸಾಧಕರಿಗೆ ಮುಖಪುಟಗಳನ್ನು ತೋರಿಸಿದಾಗ ಅವರಿಗೆ ಮುಖಪುಟ ಸಂಖ್ಯೆ ೨ ಒಳ್ಳೆಯದೆನಿಸುವುದು
‘ಮೊದಲ ಮುಖಪುಟವನ್ನು ತಯಾರಿಸುವಾಗ ಸಾಧಕಿಗೆ ಅರಿವಾದ ಉತ್ಸಾಹ, ತೋರಿಕೆಯದ್ದಾಗಿತ್ತು’, ಎಂಬುದು ಗಮನಕ್ಕೆ ಬಂದಿತು. ‘ಚಿತ್ರದ ಕಡೆಗೆ ನೋಡಿ ನಮ್ಮ ಮನಸ್ಸಿಗೆ ಏನೆನಿಸುತ್ತದೆ ?’, ಎಂಬುದು ಬಹಳ ಮಹತ್ವದ್ದಾಗಿದೆ. ಚಿತ್ರವು ಪೂರ್ಣಗೊಂಡ ನಂತರ ಸಂಬಂಧಿತ (ವಿವಾಹವಾದ) ಸಾಧಕರಿಗೆ ಎರಡೂ ಮುಖಪುಟಗಳನ್ನು ತೋರಿಸಿದಾಗ ಅವರಿಗೂ ಮುಖಪುಟ ಸಂಖ್ಯೆ ೧ ರ ತುಲನೆಯಲ್ಲಿ ಮುಖಪುಟ ಸಂಖ್ಯೆ ೨ ಒಳ್ಳೆಯದೆನಿಸಿತು. ಆಗ ‘ಸಾತ್ತ್ವಿಕ ಪದ್ಧತಿಯಲ್ಲಿ ಚಿತ್ರವನ್ನು ತಯಾರಿಸಿದರೆ ಚಿತ್ರವನ್ನು ತಯಾರಿಸುವ ವ್ಯಕ್ತಿ ಮತ್ತು ಚಿತ್ರವನ್ನು ನೋಡುವ ವ್ಯಕ್ತಿ ಈ ಇಬ್ಬರ ಮೇಲೆ ಯಾವ ರೀತಿ ಒಳ್ಳೆಯ ಪರಿಣಾಮವಾಗುತ್ತದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು.
೫. ಚಿತ್ರಗಳ ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಿ ದಾಖಲಿಸಲಾದ ನಿರೀಕ್ಷಣೆ
ಈ ಚಿತ್ರಗಳ ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆ ಮಾಡಿ ಮುಂದಿನ ನಿರೀಕ್ಷಣೆಯನ್ನು ದಾಖಲಿಸಲಾಯಿತು.

ಅದರಿಂದ ‘ಸಾಧಕಿಗೆ ಎರಡನೇ ಮುಖಪುಟವನ್ನು ನೋಡಿ ಒಳ್ಳೆಯದೆನಿಸಿತು’, ಅದು ಸರಿಯಾಗಿದೆ’, ಎಂಬುದು ಸಿದ್ಧವಾಯಿತು.’
– ಕಲೆಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರು (೧೨.೮.೨೦೨೪)
ಕಲೆಯ ಕಡೆಗೆ ನೋಡುವ ವಿಭಿನ್ನ ದೃಷ್ಟಿಕೋನವನ್ನು ನೀಡುವ ಸನಾತನದ ಕಾರ್ಯದಲ್ಲಿ ಭಾಗವಹಿಸಿ !
ಕಲೆಯ ಮಾಧ್ಯಮದಿಂದ ಮನೋರಂಜನೆಯಲ್ಲ, ಮಾನವನ ಜೀವನದ ಧ್ಯೇಯವಾಗಿರುವ ಈಶ್ವರಪ್ರಾಪ್ತಿ !ಎಷ್ಟು ಹೊಸ ಕಲ್ಪನೆ ಇದೆಯಲ್ಲವೇ ? ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲೆಯ ಮಾಧ್ಯಮದಿಂದ ಸೇವೆಯನ್ನು ಮಾಡುವ ಸಾಧಕರ ಮಾಧ್ಯಮದಿಂದ ಈ ಕಲ್ಪನೆಯನ್ನು ನಿಜವಾಗಿ ಸಾಕಾರಗೊಳಿಸಿದ್ದಾರೆ. ಚಿತ್ರ, ಮೂರ್ತಿ, ಸಂಗೀತ, ಇತ್ಯಾದಿಗಳ ಮಾಧ್ಯಮದಿಂದ ಸಾಧನೆಯನ್ನು ಮಾಡುವ ಸನಾತನದ ಸಾಧಕರು ಸಂತ ಪದವಿಯತ್ತ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಸಂಗೀತ, ಮೂರ್ತಿಕಲೆ, ಇತ್ಯಾದಿ ಕ್ಷೇತ್ರದ ವಿವಿಧ ಸಂತರನ್ನು ಗುರುತಿಸಿ ಅವರನ್ನು ಸಮಾಜದೆದುರು ತರುವ ಕಾರ್ಯವನ್ನೂ ಸನಾತನ ಸಂಸ್ಥೆಯು ಮಾಡಿದೆ. ಸನಾತನ ಸಂಸ್ಥೆಯ ಈ ಮಹದ್ಕಾರ್ಯದಲ್ಲಿ ಪ್ರತ್ಯಕ್ಷ ಕೊಡುಗೆ ನೀಡುವ ಅವಕಾಶವೂ ಈಗ ಎಲ್ಲರಿಗಾಗಿ ತೆರೆದಿದೆ. ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಕಾರಗೊಳಿಸುವುದು, ಗ್ರಂಥಗಳ ಮುಖಚಿತ್ರಗಳ ತಯಾರಿ, ಸನಾತನ ಪಂಚಾಂಗಗಳ ರಚನೆ, ಜಾಹಿರಾತುಗಳ ಸಂರಚನೆ, ಇವುಗಳಂತಹ ಸೇವೆಗಳಿಗಾಗಿ ಸೇವೆ ಸಲ್ಲಿಸಲು ಇಚ್ಛಿಸುವವರ ಅವಶ್ಯಕತೆ ಇದೆ. ತಮ್ಮ ಪೈಕಿ ಯಾರಿಗೆ ‘ಕೊರಲ್ ಡ್ರಾ’ ಮತ್ತು ‘ಫೋಟೊಶಾಪ್’ ಈ ವ್ಯವಸ್ಥೆಯ ಜ್ಞಾನ ಇದೆಯೋ ಅಥವಾ ಈ ವ್ಯವಸ್ಥೆಯನ್ನು ಕಲಿತು ಸೇವೆ ಮಾಡಲು ಬಯಸುವ ಸಾಧಕರು, ಹಿತಚಿಂತಕರು, ಜಿಜ್ಞಾಸುಗಳು ಜಿಲ್ಲಾಸೇವಕರ ಮಾಧ್ಯಮದಿಂದ ಸಂಪರ್ಕ ಸಾಧಿಸಬಹುದು. ಸಂಪರ್ಕ : ಸೌ. ಭಾಗ್ಯಶ್ರೀ ಸಾವಂತ ಸಂಪರ್ಕ ಸಂಖ್ಯೆ : 7058885610 ವಿ-ಅಂಚೆ : [email protected] |



ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !