
ತಮಿಳುನಾಡಿನ ಹಿರಿಯ ನ್ಯಾಯವಾದಿ ಕೆ. ಪರಾಸರನ್ (ವಯಸ್ಸು ೯೭ ವರ್ಷ) ಅವರು ತಮ್ಮ ಆರೋಗ್ಯ ಅಡೆತಡೆಗಳ ನಡುವೆಯೂ ತಮ್ಮ ಸಹೋದ್ಯೋಗಿಗಳ ಸಹಾಯದಿಂದ ಶ್ರೀರಾಮ ಮಂದಿರದ ವಿಚಾರಣೆಯಲ್ಲಿ ಭಾಗವಹಿಸಿದರು. ಹಿಂದಿನ ಸವಾಲುಗಳನ್ನು ಮೀರಿ, ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ನ್ಯಾಯವಾದಿಗಳ ತಂಡವನ್ನು ಅವರು ಮುನ್ನಡೆಸಿದರು. ಪ್ರಭು ಶ್ರೀರಾಮನ ಮೊಕದ್ದಮೆಯ ಪರವಾಗಿ ನಿಂತು ವಾದ ಮಂಡಿಸುವ ಅವರ ನಾಯಕತ್ವ ಮತ್ತು ಅಚಲ ಸಮರ್ಪಣೆ ಮಹತ್ವದ್ದಾಗಿತ್ತು.
೧. ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ ನ್ಯಾಯವಾದಿಗಳ ತಂಡಕ್ಕೆ ಬಂದ ಅಡಚಣೆಗಳು

ಅಯೋಧ್ಯಾ ಪ್ರಕರಣದ ಮಹತ್ವದ ವಿಚಾರಣೆಯ ಹಿಂದಿನದಿನದಂದು, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ವಿವಾದಿತ ಜಾಗದ ಹಕ್ಕಿಗಾಗಿ ವಾದ ಮಂಡಿಸುತ್ತಿದ್ದ ನ್ಯಾಯ ವಾದಿಗಳ ತಂಡವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಹಿರಿಯ ನ್ಯಾಯವಾದಿಗಳಾದ ಕೆ. ಪರಾಸರನ್ ಅವರಿಗೆ, ಅವರು ಮೊಕದ್ದಮೆಗಾಗಿ ಸಿದ್ಧಪಡಿಸಿದ್ದ ಟಿಪ್ಪಣಿಗಳು ಕಾಣೆಯಾಗಿ ರುವುದು ಕಂಡುಬಂದಿತು. ಇದರ ಜೊತೆಗೆ, ಅವರಿಗೆ ಜ್ವರ ವಿತ್ತು ಮತ್ತು ಕಣ್ಣಿನ ಗ್ಲುಕೋಮಾದಿಂದಾಗಿ ಓದುವುದು ಬಹುತೇಕ ಅಸಾಧ್ಯವಾಗಿತ್ತು. ಇದಕ್ಕಿಂತ ದುಗ್ವಸ್ಥೆಯೆಂದರೆ, ನ್ಯಾಯವಾದಿವೃತ್ತಿಯ ‘ಪಿತಾಮಹ ಭೀಷ್ಮ’ ಎಂದು ಹಲವು ಬಾರಿ ಕರೆಯಲ್ಪಡುವ ಅವರಂತಹ ನ್ಯಾಯವಾದಿಗಳ ನೆನಪಿನ ಶಕ್ತಿ ಆಗಾಗ ಕೈಕೊಡುತ್ತಿತ್ತು. ಮೊದಲ ಬಾರಿಗೆ ನನ್ನ ನೆನಪಿನ ಶಕ್ತಿ ಕುಗ್ಗಿದೆ ಎಂದು ದುಃಖಿತರಾಗಿ ಪರಾಸರನ್ ಒಪ್ಪಿಕೊಂಡಿದ್ದರು.
೨. ಕೆ. ಪರಾಸರನ್ ಅವರಿಗೆ ಮೊಕದ್ದಮೆಗೆ ಸಂಬಂಧಿಸಿದ ಸರಿಯಾದ ಸಾಲು ನೆನಪಾಗಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ಬದಲಾಯಿತು !
ವಿಚಾರಣೆಯ ಪೂರ್ವಸಿದ್ಧತಾ ಅವಧಿಯಲ್ಲಿ, ಈ ಅನುಭವಿ ನ್ಯಾಯವಾದಿಗಳು ಸಿದ್ಧಪಡಿಸಿದ್ದ ವಾದವನ್ನು ಪುನರ್ನಿರ್ಮಿಸಲು ಪರಾಸರನ್ ಅವರ ಸಹೋದ್ಯೋಗಿಗಳು ಪ್ರಾರಂಭಿಸಿದರು ಮತ್ತು ಬೆಳಗಿನ ಜಾವ ೪ ಗಂಟೆಯವರೆಗೆ ಕೆಲಸ ಮಾಡಿದರು. ಕೆ. ಪರಾಸರನ್ ಅವರಿಗೆ ವಾದ ನೆನಪಾಗಿ, ಅವರಿಗೆ ಬೇಕಾದ ಆ ನಿರ್ದಿಷ್ಟ ಸಾಲು ನೆನಪಾಯಿತು ಮತ್ತು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ತಿರುಗಿಸಲು ಆ ಸಾಲು ಮಹತ್ವದ್ದಾಯಿತು. ಪ್ರಭು ಶ್ರೀರಾಮನ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಬದಲಾಯಿಸಲು ಪರಾಸರನ್ ಮತ್ತು ಅವರಿಗೆ ಸಹಾಯ ಮಾಡಿದ ಸಮರ್ಪಿತ ಯುವ ನ್ಯಾಯವಾದಿಗಳ ತಂಡವು ೧ ವರ್ಷದ ವರೆಗೆ ಅವಿರತವಾಗಿ ಶ್ರಮಿಸಿತು.
೩. ಪ್ರಭು ಶ್ರೀರಾಮನ ನ್ಯಾಯಾಲಯದ ಪಯಣವನ್ನು ಹೇಳುವ ಪುಸ್ತಕ ‘ಕೇಸ್ ಫಾರ್ ರಾಮ್: ದಿ ಅನ್‌ಟೋಲ್ಡ್ ಇನ್‌ಸೈಡರ್ಸ್ ಸ್ಟೋರಿ’

ಶ್ರೀರಾಮ ಮಂದಿರದ ತೀರ್ಪು ಮತ್ತು ವಿವಾದಿತ ಸ್ಥಳದಲ್ಲಿ ಮಂದಿರದ ನಿರ್ಮಾಣದ ಕುರಿತು ೬ ವರ್ಷಗಳ ನಂತರ, ಕೆ. ಪರಾಸರನ್ ಅವರ ತಂಡದ ನ್ಯಾಯವಾದಿಗಳಾದ ಅನಿರುದ್ಧ ಶರ್ಮಾ ಮತ್ತು ಶ್ರೀಧರ ಪೊತರಾಜು ಎಂಬ ಇಬ್ಬರು ಯುವ ನ್ಯಾಯವಾದಿಗಳು, ಮುಖ್ಯ ನ್ಯಾಯಮೂರ್ತಿ ರಂಜನ ಗೋಗೊಯ ಅವರ ಅಧ್ಯಕ್ಷತೆಯ ೫ ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ಮತ್ತು ಸರ್ವೋಚ್ಚ ನ್ಯಾಯಾಲಯದ ಅತಿ ದೊಡ್ಡ ನ್ಯಾಯಾಂಗದ ಕೋಣೆಯಲ್ಲಿ ಪ್ರಭು ಶ್ರೀರಾಮನ ಕಾನೂನು ಪ್ರಯಾಣವನ್ನು ‘ಕೇಸ್ ಫಾರ್ ರಾಮ : ದಿ ಅನ್‌ಟೋಲ್ಡ್ ಇನ್‌ಸೈಡರ್ಸ್ ಸ್ಟೋರಿ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪರಾಸರನ್ ಅವರ ದೃಷ್ಟಿಕೋನದಿಂದ, ಅವರ ೭ ದಶಕಗಳ ವೃತ್ತಿಜೀವನದಲ್ಲಿ ಇದು ಒಂದು ಸೂಕ್ತವಾದ ಅಂತ್ಯವಾಗಿದೆ.
೪. ಭಾರತದ ಅತ್ಯಂತ ಐತಿಹಾಸಿಕ ಮತ್ತು ಮಹತ್ವದ ಶ್ರೀರಾಮಜನ್ಮಭೂಮಿ ಮೊಕದ್ದಮೆ
ಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯ ಮಾಲೀಕತ್ವದ ವಿವಾದವು ಭಾರತದ ಅತ್ಯಂತ ಐತಿಹಾಸಿಕವಾಗಿ ಮಹತ್ವದ ಮೊಕದ್ದಮೆಗಳಲ್ಲಿ ಒಂದಾಗಿದೆ. ಈ ಮೊಕದ್ದಮೆಯಲ್ಲಿ, ಭಕ್ತರು ತಲೆತಲಾಂತರದಿಂದ ಶ್ರೀರಾಮನ ಜನ್ಮಸ್ಥಳವೆಂದು ನಂಬುವ ಜಾಗದಲ್ಲಿರುವ ‘ರಾಮಲಲ್ಲಾ ವಿರಾಜಮಾನ್’ ಆ ಭೂಮಿಯ ಒಂದು ತುಂಡಿನ ಮೇಲೆ ಜನ್ಮಸ್ಥಳದ ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಬೇಡಿಕೆ ಇಡುವ ದೂರುದಾರರಾಗಿದ್ದರು. ಈ ವಿವಾದವು ಒಂದು ವಿಭಿನ್ನ ಆದರ್ಶವನ್ನು ತೆಗೆದುಕೊಂಡಿತ್ತು ಮತ್ತು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ನನೆಗುದಿಗೆ ಬಿದ್ದಿತ್ತು. ಇದರಲ್ಲಿ ೭೦ ವರ್ಷಗಳು ವಿವಿಧ ನ್ಯಾಯಾಲಯಗಳಲ್ಲಿ ಕಳೆಯಲ್ಪಟ್ಟಿದ್ದವು. ಡಿಸೆಂಬರ್ ೧೯೯೨ ರಲ್ಲಿ ಕೆಡವಲಾದ ಬಾಬರಿ ಕಟ್ಟಡದ ಭೂಮಿಯ ಮೇಲಿನ ಹಕ್ಕು ಹಿಂದೂಗಳದ್ದಾಗಿತ್ತೇ ಅಥವಾ ಮುಸಲ್ಮಾನರದ್ದಾಗಿತ್ತೇ ? ಎಂಬ ಪ್ರಶ್ನೆ ಸರ್ವೋಚ್ಚ ನ್ಯಾಯಾಲಯದ ಮುಂದಿತ್ತು.
೫. ಶ್ರೀರಾಮಜನ್ಮಭೂಮಿ ಮೊಕದ್ದಮೆ ಗೆಲ್ಲುವಲ್ಲಿ ವಿವಿಧ ನ್ಯಾಯವಾದಿಗಳ ಕೊಡುಗೆ
|
|
|
ದೃಷ್ಟಿ ಮತ್ತು ಶ್ರವಣ ಶಕ್ತಿ ಕಡಿಮೆಯಾದ ಕಾರಣ ಅಸಹಾಯಕರಾಗಿದ್ದ ಕೆ. ಪರಾಸರನ್ ಅವರಿಗೆ, ಈ ಪ್ರಕರಣವು ಅವರ ಸುಮಾರು ೭ ದಶಕಗಳ ವೃತ್ತಿಜೀವನಕ್ಕೆ ಒಂದು ಸೂಕ್ತವಾದ ಅಂತ್ಯವಾಗಿತ್ತು. ಶ್ರೀರಾಮಜನ್ಮಭೂಮಿ ಪ್ರಕರಣ ಅವರಿಗೆ ಅತ್ಯಂತ ವೈಯಕ್ತಿಕವಾಗಿತ್ತು. ‘ಶ್ರೀರಾಮನು ನನ್ನ ಜೀವನವನ್ನು ವ್ಯಾಖ್ಯಾನಿಸಿದ್ದಾನೆ ಮತ್ತು ಬದಲಾಯಿಸಿದ್ದಾನೆ. ಅವನ ಜನ್ಮಸ್ಥಳದಲ್ಲಿ ಮಂದಿರವಾಗಬೇಕು ಎಂಬುದು ನನ್ನ ಕೊನೆಯ ಇಚ್ಛೆ,’ ಎಂದು ಅವರು ಹೇಳಿದ್ದರು ಎಂದು ಅವರು ಬರೆದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಒಂದೆಡೆ ಪರಾಸರನ್ ಅವರು ವಿವಾದಿತ ಭೂಮಿಯ ಮೇಲೆ ನಿರಂತರ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹಿಂದೂಗಳ ಒಡೆತನವನ್ನು ಸಿದ್ಧಪಡಿಸಲು ಗಮನ ಹರಿಸಿದರೆ, ಹಿರಿಯ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಅವರು ಪುರಾತತ್ವ ಇಲಾಖೆಯ ಪುರಾವೆಗಳ ಮೂಲಕ ಮಸೀದಿಯನ್ನು ಕಟ್ಟಲಾಗಿದ್ದ ಜಾಗದಲ್ಲಿ ದೊಡ್ಡ ಮಂದಿರದ ಅಸ್ತಿತ್ವವಿತ್ತು ಎಂದು ಸೂಚಿಸಿ ನ್ಯಾಯಾಲಯದ ಮೊರೆ ಹೋದರು. ಹಿರಿಯ ನ್ಯಾಯವಾದಿ ರಣಜಿತ ಕುಮಾರ್ ಮತ್ತು ಪಿ.ಎಸ್. ನರಸಿಂಹ (ಈಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ) ಅವರು ಸಹ ವಾದ ಮಂಡಿಸಿದರು.
೬. ‘ಬಾಬರಿ ರಚನೆಯ ಕೆಳಗೆ ಹಿಂದೂಗಳ ಮಂದಿರವಿತ್ತು’ ಎಂದು ನ್ಯಾಯವಾದಿಗಳು ಮಂಡಿಸಿದ ವಾದ

‘ಮಂದಿರ’ದ ಅಂಶದ ಬಗ್ಗೆ ಕೆ. ಪರಾಸರನ್ ಅವರ ತಮ್ಮ ತಂಡದ ಸಹೋದ್ಯೋಗಿಗಳ ನಡುವೆ ಅಭಿಪ್ರಾಯ ಭೇದವಿತ್ತು. ಪಿ.ವಿ. ಯೋಗೀಶ್ವರನ್ ಮತ್ತು ಅದಿತಿ ಅವರಂತಹ ಕೆಲವರಿಗೆ ಕಾನೂನಿನ ದೃಷ್ಟಿಯಿಂದ ಈ ವಾದವು ಅಪಾಯಕಾರಿ ಎಂದು ಅನಿಸುತ್ತಿತ್ತು. ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ, ಹಿಂದೂ ಶ್ರದ್ಧೆ ಮತ್ತು ಸಂಪ್ರದಾಯಗಳ ಪ್ರತಿಬಿಂಬವಾಗಿ ಈ ಪ್ರಸ್ತಾವನೆಯನ್ನು ಬೆಂಬಲಿಸಲು ಪರಾಸರನ್ ಸಿದ್ಧರಿದ್ದರು. ವೈದ್ಯನಾಥನ್ ಅವರು ಭಾರತೀಯ ಪುರಾತತ್ವ ಸಮೀಕ್ಷೆ (ಎ.ಎಸ್.ಐ.) ಯ ವರದಿಯನ್ನು ಅಧ್ಯಯನ ಮಾಡಿದರು. ಇದರಲ್ಲಿ ಬಾಬರಿ ರಚನೆಯ ಕೆಳಗೆ ಹಿಂದೂ ಮಂದಿರದಂತಹ ಭವ್ಯ ರಚನೆಯ ಅವಶೇಷಗಳನ್ನು ತೋರಿಸಲಾಗಿತ್ತು. ಕೆ. ಪರಾಸರನ್ ಅವರು ‘ಕಂಬಗಳ ಅಡಿಪಾಯ, ಗೋಲಾಕಾರದ ಮಂದಿರ, ಹಿಂದೂ ದೇವತೆಗಳ ಕೆತ್ತನೆ ಕೆಲಸಗಳು ಮತ್ತು ಶಾಸನಗಳ ಪುರಾವೆಗಳನ್ನು ಸಲ್ಲಿಸಿ, ಈ ಸ್ಥಳವು ಶತಮಾನಗಳಿಂದ ಹಿಂದೂಗಳ ಪೂಜಾಸ್ಥಳವಾಗಿತ್ತು’ ಎಂದು ವಾದಿಸಿದರು ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ.
೭. ಹಿರಿಯ ನ್ಯಾಯವಾದಿ ಕೆ. ಪರಾಸರನ್ ಮತ್ತು ಪ್ರಭು ಶ್ರೀರಾಮನ ವಿಜಯ
ಕೊನೆಗೆ ೯ ನವೆಂಬರ್ ೨೦೧೯ ರಂದು, ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪು ಸಂಪೂರ್ಣ ವಿವಾದಿತ ಸ್ಥಳವನ್ನು ಹಿಂದೂ ಪಕ್ಷಕ್ಕೆ ಹಸ್ತಾಂತರಿಸಿತು. ಇದರಿಂದ ಶ್ರೀರಾಮ ಮಂದಿರಕ್ಕೆ ಮಾರ್ಗ ತೆರವಾಗಿದ್ದು, ಕೆ. ಪರಾಸರನ್ ಮತ್ತು ಪ್ರಭು ಶ್ರೀರಾಮನ ಸಂಘರ್ಷಮಯ ವಿಜಯವಾಯಿತು.
– ಧನಂಜಯ ಮಹಾಪಾತ್ರಾ
(ಆಧಾರ: ದೈನಿಕ ‘ಟೈಮ್ಸ್ ಆಫ್ ಇಂಡಿಯಾ’, ೬.೧೦.೨೦೨೫)
ಸರ್ವೋಚ್ಚ ನ್ಯಾಯಾಲಯವು ಕುಳಿತು ಮೊಕದ್ದಮೆ ಹೋರಾಡಲು ಅನುಮತಿ ನೀಡಿದರೂ, ‘ಪ್ರಭು ಶ್ರೀರಾಮನ ಮೊಕದ್ದಮೆಯನ್ನು ನಿಂತು ಹೋರಾಡಬೇಕು’ ಎಂಬ ಭಾವನೆ ಹೊಂದಿದ್ದ ಹಿರಿಯ ವಕೀಲ ಕೆ. ಪರಾಸರನ್![]() ‘ಕೇಸ್ ಫಾರ್ ರಾಮ್ : ದಿ ಅನ್‌ಟೋಲ್ಡ್ ಇನ್‌ಸೈಡರ್ಸ್ ಸ್ಟೋರಿ’ ಪುಸ್ತಕದಲ್ಲಿ ಹೇಳಿರುವಂತೆ, ಆಗಸ್ಟ್ ೨೦೧೯ ರಲ್ಲಿ, ಅಂದಿನ ಮುಖ್ಯ ನ್ಯಾಯಮೂರ್ತಿ ಗೋಗೊಯ್ ಅವರು ‘ಕೆ. ಪರಾಸರನ್ ಅವರು ಕುಳಿತು ವಾದ ಮಂಡಿಸಬಹುದು’ ಎಂದು ಅಭೂತಪೂರ್ವ ಅನುಮತಿ ನೀಡಿದರು; ಆದರೆ ಪರಾಸರನ್ ನಿರಾಕರಿಸಿದರು. ಅವರು, ನೀವು ಬಹಳ ದಯಾಳುಗಳು; ಆದರೆ ನಿಂತು ವಾದ-ವಿವಾದ ಮಾಡುವುದು ನ್ಯಾಯಾಲಯದ ಸಂಪ್ರದಾಯವಾಗಿದೆ, ಎಂದರು. ಪರಾಸರನ್ ಅವರಿಗೆ ನ್ಯಾಯಾಲಯದಲ್ಲಿ ನಿಲ್ಲುವುದು ನ್ಯಾಯಾಲಯದ ಗೌರವ ಮತ್ತು ವಿಶೇಷವಾಗಿ ಅವರ ಪ್ರಭುವಿನ ಬಗ್ಗೆ ಗೌರವದ ಸಂಕೇತವಾಗಿತ್ತು. ಇದು ನನ್ನ ಪ್ರಭುವಿನ ಪ್ರಕರಣ. ನಾನು ಎಲ್ಲಾ ರೀತಿಯ ಮೊಕದ್ದಮೆಗಳಲ್ಲಿ ನಿಂತು ವಾದ ಮಾಡಿದ್ದೇನೆ. ನಾನು ನನ್ನ ಪ್ರಭುವಿನ ಮೊಕದ್ದಮೆಯಲ್ಲಿ ಕುಳಿತು ವಾದ ಮಾಡಲು ಸಾಧ್ಯವಿಲ್ಲ. ನಾನು ನಿಂತು ವಾದ ಮಾಡುವಾಗ ಮರಣ ಹೊಂದಿದರೂ ಪರವಾಗಿಲ್ಲ ಎಂದು ಹೇಳಿದರು. ಈ ಪ್ರಕರಣದಲ್ಲಿ ಅತ್ಯಂತ ಹೊಸ ಕಾನೂನು ಪ್ರಶ್ನೆಗಳು ಸೇರಿದ್ದವು, ಅಂದರೆ, ‘ಈ ಭೂಮಿಯನ್ನು (ರಾಮಜನ್ಮಭೂಮಿ) ತಾನೇ ಮೊಕದ್ದಮೆ ಹೂಡುವ ಅಧಿಕಾರವನ್ನು ಹೊಂದಿರುವ ‘ಕಾನೂನುಬದ್ಧ ವ್ಯಕ್ತಿ’ ಎಂದು ಪರಿಗಣಿಸಬಹುದೇ ? ಜನ್ಮಸ್ಥಳವು ಕಾನೂನುಬದ್ಧ ವ್ಯಕ್ತಿತ್ವವನ್ನು ಹೇಗೆ ಹೊಂದಬಹುದು ?’ ಎಂಬ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯ ಕೇಳಿತು ಎಂದು ಈ ಪುಸ್ತಕವು ಬಹಿರಂಗಪಡಿಸುತ್ತದೆ. ಪರಾಸರನ್ ಅವರು ಹಿಂದೂ ಧರ್ಮಗ್ರಂಥಗಳ ಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ, ‘ಧರ್ಮದಲ್ಲಿ ಕೇವಲ ವಿಗ್ರಹಗಳನ್ನು ಮಾತ್ರ ಪೂಜೆಯ ವಸ್ತುಗಳೆಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ನದಿಗಳು, ಸೂರ್ಯ ಮತ್ತು ಜನ್ಮಸ್ಥಳಗಳೂ ಸಹ ಪವಿತ್ರ ವಾಗಿರಬಹುದು’ ಎಂದು ವಾದ ಮಂಡಿಸಿದರು. |



|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು