
ಭಾರತದಲ್ಲಿ ಸಾಮ್ಯವಾದದಂತಹ ಕ್ರೂರ, ನಿರ್ದಯಿ, ತಾತ್ಕಾಲಿಕ ತತ್ತ್ವಜ್ಞಾನವು ಎಂದೂ ಉದಯಿಸಲಿಲ್ಲ ಮತ್ತು ಅದರ ಪ್ರಸಾರ ಇನ್ನೂ ಆಗುತ್ತಿಲ್ಲ; ಏಕೆಂದರೆ ಭಾರತವರ್ಷದ ವೇದ ಮತ್ತು ಭಗವದ್ಗೀತೆಯಂತಹ ಶ್ರೇಷ್ಠ ಗ್ರಂಥಗಳು ಮೂಲತಃ ಶೋಷಣೆಯ ವಿರುದ್ಧವಾಗಿ ಔದಾರ್ಯವನ್ನು ಪ್ರೋತ್ಸಾಹಿಸುವಂತಿದೆ, ಸ್ವಾರ್ಥ ವಿರೋಧಿಯಾಗಿವೆ. ಸಂತಪರಂಪರೆಯೂ ವೇದಗಳು ಮತ್ತು ಭಗವದ್ಗೀತೆಯ ಮಾರ್ಗವನ್ನೇ ಅನುಸರಿಸುತ್ತವೆ. ಶ್ರೀ ಜ್ಞಾನೇಶ್ವರ ಮಹಾರಾಜರು ‘ಜಗತ್ತಿಗೆ ವೇದಗಳಂತಹ ಇನ್ನೊಂದು ತಾಯಿ ಇಲ್ಲ’, ಎಂದು ಪ್ರೀತಿಯಿಂದ ಹೇಳುತ್ತಾರೆ. ಭಕ್ತಿಯ ದೇವಾಲಯದ ಕಳಸವೆಂದು ಕರೆಯಲ್ಪಡುವ ಸಂತ ತುಕಾರಾಮರಂತಹ ಸತ್ಪುರುಷರು ‘ಓದಿ ಮತ್ತು ಮಾತನಾಡಿ ವೇದಗಳ ನೀತಿಯನ್ನು, ಸಂತರು ನುಡಿದಂತೆ ನಾವು ಮಾಡೋಣ’, ಹೀಗೆ ತಮ್ಮ ಜೀವನದ ಉದ್ದೇಶವನ್ನು ಹೇಳುತ್ತಾರೆ. ಸಂತರ ಈ ನಂಬಿಕೆಯು ಸದ್ ಧರ್ಮದ ಆಚರಣೆಗೆ ಅನುಗುಣವಾಗಿದೆ. ಸದ್ ಧರ್ಮಚರಣೆಯು ಪರಲೋಕದಲ್ಲಿ ಶ್ರೇಯಸ್ಸನ್ನು ತರುತ್ತದೆ; ಪರಲೋಕವನ್ನು ನಂಬದವರಿಗೂ ಕೂಡ ಇದೇ ಸದ್ ಧರ್ಮಾಚರಣೆಯು ಅಭ್ಯುದಯದ ಅಂದರೆ ಇಹಲೋಕದ ಐಶ್ವರ್ಯದ, ವೈಭವದ ಸಾಧನವಾಗಿದೆ, ಎಂಬುದನ್ನು ಅವರು ಮರೆಯಬಾರದು. – ಪ.ಪೂ. ಸ್ವಾಮಿ ವರದಾನಂದ ಭಾರತಿ
(ಸೌಜನ್ಯ : ‘ಹಿಚ ಗುರುಪುಜಾ ಖರಿ’ (ಮರಾಠಿ) (ಇದುವೇ ನಿಜವಾದ ಗುರುಪೂಜೆ) ಗ್ರಂಥದಿಂದ)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !