|

ನವದೆಹಲಿ – ನಾನು ನಿನ್ನೆ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಏಜೆನ್ಸಿಗಳು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಚರ್ಚೆಗಳು ನಡೆಯುತ್ತಿದ್ದವು. ಮಾಹಿತಿಯ ವಿನಿಮಯವಾಗುತ್ತಿತ್ತು. ನಮ್ಮ ತನಿಖಾ ಏಜೆನ್ಸಿಗಳು ಈ ಪಿತೂರಿಯ ಮೂಲಕ್ಕೆ ತಲುಪುತ್ತವೆ. ಈ ಸಂಚು ರೂಪಿಸಿದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಈ ಘಟನೆಗೆ ಯಾರು ಹೊಣೆಯಾಗಿದ್ದಾರೋ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಘಟನೆಯ ಕುರಿತು ದೃಢ ನಿಶ್ಚಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ದೇಶದ ಪ್ರವಾಸಕ್ಕೆ ತೆರಳಿದ್ದು, ಅಲ್ಲಿಂದ ಈ ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ.
कल शाम दिल्ली में हुई भयावह घटना ने सभी के मन को व्यथित किया है। मैं पीड़ित परिवारों का दुख समझता हूं। पूरा देश उनके साथ खड़ा है।
मैं हर किसी को आश्वस्त करता हूं कि हमारी जांच एजेंसियां इस षड्यंत्र की तह तक जाएंगी। जो भी लोग इसके लिए जिम्मेदार हैं, उन्हें किसी भी कीमत पर नहीं… pic.twitter.com/RnjaEbLuzA
— Narendra Modi (@narendramodi) November 11, 2025
ದೋಷಿಗಳನ್ನು ಬಿಡುವುದಿಲ್ಲ! – ರಕ್ಷಣಾ ಸಚಿವ ರಾಜನಾಥ ಸಿಂಗ್

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಈ ಘಟನೆಯ ಕುರಿತು ಮಾತನಾಡಿ, ಸ್ಫೋಟದ ಘಟನೆಯಲ್ಲಿ ದೋಷಿಗಳಾದವರನ್ನು ಯಾವುದೇ ಪರಿಸ್ಥಿತಿಯಲ್ಲಿ ಬಿಡುವುದಿಲ್ಲ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ, ಎಂದು ಹೇಳಿದರು.
I wish to assure my fellow citizens that the country’s leading investigative agencies are conducting a swift and thorough inquiry into the incident. The findings of the investigation will soon be made public. I want to firmly assure the nation that those responsible for this…
— रक्षा मंत्री कार्यालय/ RMO India (@DefenceMinIndia) November 11, 2025
ಸ್ಫೋಟದ ಹಿಂದೆ ‘ಜೈಶ್-ಎ-ಮಹಮ್ಮದ್’ ಕೈವಾಡ!
ನವೆಂಬರ್ 10 ರಂದು ಕೆಂಪುಕೋಟೆ ಬಳಿಯ ಚಾಂದನಿ ಚೌಕ್ ನ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ 1 ರ ಹೊರಗೆ ನಡೆದ ಭೀಕರ ಸ್ಫೋಟವನ್ನು ಜಿಹಾದಿ ಭಯೋತ್ಪಾದಕರು ನಡೆಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಘಟನೆಗೆ ಮುಂಚಿತವಾಗಿ ಹರಿಯಾಣದ ಫರಿದಾಬಾದ್‌ನಿಂದ 2 ಸಾವಿರದ 900 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಈ ಪ್ರಕರಣದಲ್ಲಿ ಡಾ. ಆದಿಲ್, ಡಾ. ಮುಜಮ್ಮಿಲ್ ಮತ್ತು ಅವನ ಪ್ರೇಯಸಿ ಡಾ. ಶಾಹೀನ್ ಶಾಹಿದ್ ಅವರನ್ನು ಬಂಧಿಸಲಾಗಿತ್ತು. ಇವರ ಸಹಚರನಾಗಿದ್ದ ಡಾ. ಉಮರ್ ನಬಿ ಎಂಬಾತನೇ ಕೆಂಪುಕೋಟೆ ಬಳಿ ಆತ್ಮಾಹುತಿ ಸ್ಫೋಟ ನಡೆಸಿದ್ದಾನೆ. ಇದರಲ್ಲಿ ಆತನೂ ಸಾವನ್ನಪ್ಪಿದ್ದಾನೆ. ಆತ ‘ಹ್ಯುಂಡೈ’ ಕಂಪನಿಯ ‘ಐ20’ ಕಾರನ್ನು ಬಳಸಿದ್ದನು. ಇದರಲ್ಲಿ ಇನ್ನು ಇಬ್ಬರು ಇದ್ದು, ಅವರೂ ಸಹ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅವರು ‘ಜೈಶ್-ಎ-ಮಹಮ್ಮದ್’ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರು ಎಂಬ ಮಾಹಿತಿಯೂ ಹೊರಬಿದ್ದಿದೆ. ಸದ್ಯ ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್, ಇಂಧನ ಮತ್ತು ಒಂದು ಡಿಟೋನೇಟರ್ ಅನ್ನು ಬಳಸಲಾಗಿದೆ.
ಯೋಜಿತವಲ್ಲದ ಸ್ಫೋಟ!
ಡಾ. ಆದಿಲ್, ಡಾ. ಮುಜಮ್ಮಿಲ್ ಮತ್ತು ಡಾ. ಶಾಹೀನ್ ಬಂಧನವಾದ ನಂತರ ಮತ್ತು ಫರಿದಾಬಾದನಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರ, ಡಾ. ಉಮರ್ ಉಳಿದ ಸ್ಫೋಟಕಗಳನ್ನು ಏನು ಮಾಡಬೇಕು ಎಂಬ ಆತುರದಲ್ಲಿ ಈ ಸ್ಫೋಟವನ್ನು ನಡೆಸಿದ್ದಾನೆ ಎಂಬ ಸಂಶಯ ವ್ಯಕ್ತಪಡಿಸಲಾಗಿದೆ. ಈ ಸ್ಫೋಟಕಗಳ ಸಂಗ್ರಹವನ್ನು ಬೇರೆಡೆ ಇಡಲು ಸಾಧ್ಯವಾಗದ ಕಾರಣ ಅವರು ಸ್ಫೋಟ ನಡೆಸಲು ನಿರ್ಧರಿಸಿರಬಹುದು ಎಂದು ಶಂಕಿಸಲಾಗಿದೆ. ಈ ಎಲ್ಲರಿಗೂ ಬೇರೆ ಯಾರೋ ಆದೇಶ ನೀಡುತ್ತಿದ್ದರು ಮತ್ತು ಅವರ ಆದೇಶದಂತೆ ಇವರು ಕಾರ್ಯನಿರ್ವಹಿಸುತ್ತಿದ್ದರು. ಈ ಭಯೋತ್ಪಾದಕರ ಗುರಿ ದೆಹಲಿಯ ಬೇರೆ ಸ್ಥಳಗಳಾಗಿರಬೇಕಿತ್ತು; ಆದರೆ ಬಂಧನ ಮತ್ತು ಶಸ್ತ್ರಾಸ್ತ್ರ ಸಂಗ್ರಹವನ್ನು ವಶಪಡಿಸಿಕೊಂಡ ಕಾರಣ ಕೆಂಪುಕೋಟೆ ಬಳಿ ಸ್ಫೋಟ ನಡೆಸಲಾಗಿದೆ.
ಮೃತರಾದವರಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಿರುವ ಸಾಧ್ಯತೆ
ಈ ಸ್ಫೋಟಗಳಲ್ಲಿ ಅಧಿಕೃತವಾಗಿ 12 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ; ಆದರೆ ಡಾ. ಉಮರ್ ಹೊರತುಪಡಿಸಿ ಬೇರೆ ಯಾರ ಹೆಸರೂ ಹೊರಬಿದ್ದಿಲ್ಲ; ಆದರೆ ಈ ಸ್ಫೋಟ ನಡೆದ ಸ್ಥಳವು ಮುಸಲ್ಮಾನರ ಜನಸಂಖ್ಯೆ ಹೆಚ್ಚಿರುವ ಪ್ರದೇಶ ಎಂದು ಹೇಳಲಾಗುತ್ತದೆ. ಆದ್ದರಿಂದ, ಮೃತರಾದವರಲ್ಲಿ ಮುಸಲ್ಮಾನರು ಹೆಚ್ಚಿರುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ. ಮೃತರಾದವರಲ್ಲಿ 2 ಮಹಿಳೆಯರು ಇದ್ದು, 24 ಜನರು ಗಾಯಗೊಂಡಿದ್ದಾರೆ. ಈ ಸ್ಥಳದಿಂದ 100 ಮೀಟರ್ ದೂರದಲ್ಲಿ ಗೌರಿ ಶಂಕರ ಮಂದಿರ ಮತ್ತು ಜೈನ ಮಂದಿರವಿದೆ. ಡಾ. ಉಮರ್ ಈ ದೇವಸ್ಥಾನಗಳನ್ನು ಗುರಿಯಾಗಿಸಲು ಕಾರನ್ನು ತೆಗೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿಯೇ ಸ್ಫೋಟ ಸಂಭವಿಸಿರಬಹುದು ಎಂಬ ಸಾಧ್ಯತೆಯೂ ಇದೆ.
ಡಾ. ಉಮರ್ 3 ಗಂಟೆಗಳ ಕಾಲ ಕಾರಿನಲ್ಲಿಯೇ ಕುಳಿತುಕೊಂಡಿದ್ದನು!
ಈ ಸ್ಫೋಟಕ್ಕೂ ಮುನ್ನ ಡಾ. ಉಮರ್ ಕಾರಿನ ಸಮೇತ ಇಲ್ಲಿನ ಸುನಹರಿ ಮಸೀದಿಯ ಹೊರಗಿನ ವಾಹನ ನಿಲುಗಡೆಯಲ್ಲಿ 3 ಗಂಟೆಗಳ ಕಾಲ ನಿಂತಿದ್ದನು. ಈ ಸಮಯದಲ್ಲಿ ಆತ ಕಾರಿನಿಂದ ಒಮ್ಮೆಯೂ ಹೊರಗೆ ಬಂದಿಲ್ಲ. ಇಲ್ಲಿ ಆತ ಯಾರಿಗೋ ಕಾಯುತ್ತಿದ್ದನು ಮತ್ತು ದೂರವಾಣಿಯಲ್ಲಿ ಮಾತನಾಡುತ್ತಿದ್ದನು ಎಂಬ ಮಾಹಿತಿ ‘ಸಿಸಿಟಿವಿ’ ಚಿತ್ರೀಕರಣದಿಂದ ತಿಳಿದುಬಂದಿದೆ.
ಸ್ಫೋಟಕ್ಕಾಗಿ ಬಳಸಿದ ಕಾರು ಮುಸಲ್ಮಾನನದ್ದು!
ಪೊಲೀಸರ ಮಾಹಿತಿಯ ಪ್ರಕಾರ, ಸ್ಫೋಟಗೊಂಡ ಕಾರಿನಲ್ಲಿ 3 ಜನರು ಇದ್ದರು. ಈ ಕಾರು ಹರಿಯಾಣದ ಗುರುಗ್ರಾಮದಲ್ಲಿ ಸಲ್ಮಾನ ಎಂಬುವವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಪೊಲೀಸರು ಸಲ್ಮಾನನನ್ನು ವಶಕ್ಕೆ ಪಡೆದಿದ್ದಾರೆ. ಸಲ್ಮಾನ್ ಈ ಕಾರನ್ನು ಪುಲ್ವಾಮಾದ ತಾರೀಕ್ ಎಂಬುವವರಿಗೆ ಮಾರಾಟ ಮಾಡಿದ್ದನು. ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದಾರೆ. ಒಂದು ವರ್ಷದಲ್ಲಿ ಈ ಕಾರನ್ನು 7 ಬಾರಿ ಮಾರಾಟ ಮಾಡಲಾಗಿದೆ. ಪ್ರಸ್ತುತ ಅದರ ನೋಂದಣಿ ಗುರುಗ್ರಾಮದಲ್ಲಿದೆ.
ಫರಿದಾಬಾದನಿಂದ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳ ವಶ
ಫರಿದಾಬಾದನ ಸೆಕ್ಟರ್ 56 ಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಇನ್ನಷ್ಟು ವಶಪಡಿಸಿಕೊಳ್ಳಲಾಗಿದೆ. ಈ ಮೊದಲು ಇಲ್ಲಿ 2 ಸಾವಿರದ 900 ಕ್ಕಿಂತ ಹೆಚ್ಚು ಅಮೋನಿಯಂ ನೈಟ್ರೇಟ್ ಸ್ಫೋಟಕ ಪತ್ತೆಯಾಗಿತ್ತು.
ಪುಲ್ವಾಮಾದಿಂದ ಡಾ. ಸಜ್ಜಾದ್ ಅಹಮದ್ ಬಂಧನ
ಸ್ಫೋಟದ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಿಂದ ಡಾ. ಸಜ್ಜಾದ್ ಅಹಮದ್ ಎಂಬುವವರನ್ನು ಬಂಧಿಸಲಾಗಿದೆ. ಡಾ. ಸಜ್ಜಾದ್ ಡಾ. ಉಮರನ ಸ್ನೇಹಿತವಾಗಿದ್ದಾನೆ.
ಡಾ. ಶಾಹೀನಾ ಶಾಹಿದ್ ‘ಜೈಶ್’ನ ಮಹಿಳಾ ವಿಭಾಗದ ಕಮಾಂಡರ

ಮೂಲಗಳ ಪ್ರಕಾರ, ಡಾ. ಶಾಹೀನಾ ಶಾಹಿದ್ ಕೇವಲ ವೈದ್ಯೆಯಾಗಿರಲಿಲ್ಲ, ಬದಲಾಗಿ ಜೈಶ್-ಎ-ಮಹಮ್ಮದನ ಮಹಿಳಾ ವಿಭಾಗ ‘ಜಮಾತ್-ಉಲ್-ಮೋಮಿನಾತ್’ ನ ಕಮಾಂಡರ್ ಆಗಿದ್ದಳು. ಆಕೆ ಲಖನೌ (ಉತ್ತರ ಪ್ರದೇಶ) ದ ಲಾಲಬಾಗನಲ್ಲಿ ವಾಸಿಸುತ್ತಿದ್ಧಳು. ಈ ಸಂಘಟನೆಯ ಪಾಕಿಸ್ತಾನದ ಮುಖ್ಯಸ್ಥೆ ಎಂದರೆ ಸಾದಿಯಾ ಅಜರ್, ಇವಳು ಭಯೋತ್ಪಾದಕ ಮಸೂದ್ ಅಜಹರನ ಸಹೋದರಿ, ಮತ್ತು ಕಂದಹಾರನ ಭಾರತೀಯ ವಿಮಾನ ಅಪಹರಣದ ಮುಖ್ಯ ಸೂತ್ರಧಾರ ಯೂಸುಫ್ ಅಜಹರನ ಪತ್ನಿಯಾಗಿದ್ದಾಳೆ.
ಗೃಹ ಸಚಿವ ಅಮಿತ ಶಾಹ ಅವರಿಂದ ಸಭೆ!
ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾಹ ಅವರ ನಿವಾಸದಲ್ಲಿ ನವೆಂಬರ್ 11 ರಂದು ಬೆಳಿಗ್ಗೆ ಉನ್ನತ ಮಟ್ಟದ ಭದ್ರತಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆ ಒಂದೂವರೆ ಗಂಟೆ ನಡೆಯಿತು.
ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವಿಚಾರಣೆ ಮುಂದುವರಿಕೆ
ಫರಿದಾಬಾದ ಪೊಲೀಸರು ಇಲ್ಲಿನ ಅಲ್ ಫಲಾಹ್ ವಿಶ್ವವಿದ್ಯಾಲಯವನ್ನು ಸುತ್ತುವರಿದಿದ್ದಾರೆ. ಇಲ್ಲಿ ದೊಡ್ಡ ಪೊಲೀಸ್ ಪಡೆ ನಿಯೋಜಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಡಾ. ಆದಿಲ್, ಶಾಹೀನ್ ಮತ್ತು ಮುಜಮ್ಮಿಲ್ ಈ ಮೂವರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದರು. ಇದರೊಂದಿಗೆ ಫರಿದಾಬಾದನ ಫತೇಪುರ ತಗಾ ಗ್ರಾಮದ ಮಸೀದಿಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೇ ಗ್ರಾಮದ ಬಾಡಿಗೆ ಮನೆಯಲ್ಲಿ ಡಾ. ಮುಜಮ್ಮಿಲ್ 2 ಸಾವಿರದ 563 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ಇರಿಸಿದ್ದನು.
ಡಾ. ಉಮರನ ತಾಯಿ ಮತ್ತು ಸಹೋದರ ಪೊಲೀಸ್ ವಶದಲ್ಲಿ
ಕಾರಿನಲ್ಲಿ ಸ್ಫೋಟ ನಡೆಸಿದ ಡಾ. ಉಮರ್ ನಬಿ ಕಾಶ್ಮೀರದ ಪುಲ್ವಾಮಾದ ನಿವಾಸಿಯಾಗಿದ್ದು. ಈ ಘಟನೆಯ ನಂತರ ಪೊಲೀಸರು ಡಾ. ಉಮರನ ತಾಯಿ ಮತ್ತು ಸಹೋದರನನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿಚಾರಣೆ ನಡೆಯುತ್ತಿದ್ದು, ಉಮರನ ದೇಹದ ಗುರುತು ಪತ್ತೆಹಚ್ಚಲು ಅವರ ಡಿ.ಎನ್.ಎ. (‘ಡಿಆಕ್ಸಿರಿಬೋ ನ್ಯೂಕ್ಲಿಯಿಕ್ ಆಸಿಡ್’, ಅಂದರೆ ವ್ಯಕ್ತಿಯ ಮೂಲ ಗುರುತು ಪತ್ತೆಹಚ್ಚುವ ಶರೀರದ ಅಂಶಗಳು) ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಡಾ. ಉಮರ್ 2೦17 ರಲ್ಲಿ ಶ್ರೀನಗರದ ಸರಕಾರಿ ವೈದ್ಯಕೀಯ ಕಾಲೇಜಿನಿಂದ ಎಂ.ಬಿ.ಬಿ.ಎಸ್. ಶಿಕ್ಷಣವನ್ನು ಪೂರ್ಣಗೊಳಿಸಿದ್ದನು. ಉಮರ್ ಫರಿದಾಬಾದನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿದ್ದನು.
500 ಅಧಿಕಾರಿಗಳ ತನಿಖಾ ತಂಡ
ಈ ಸ್ಫೋಟದ ಪ್ರಕರಣದಲ್ಲಿ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ಸಂಸ್ಥೆ, ರಾಷ್ಟ್ರೀಯ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸ್ ಸೇರಿದಂತೆ ವಿವಿಧ ಏಜೆನ್ಸಿಗಳ 500 ಕ್ಕೂ ಹೆಚ್ಚು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ಅಧಿಕಾರಿಗಳು ಸಣ್ಣ ಸಣ್ಣ ಗುಂಪುಗಳಾಗಿ ಇದರ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಚಿತ್ರೀಕರಣವನ್ನು ಪರಿಶೀಲಿಸಲಾಗುತ್ತಿದೆ.
ಪಾಕಿಸ್ತಾನದ ವಾಯುಪಡೆಯಿಂದ ಎಚ್ಚರಿಕೆಯ ಸೂಚನೆ!

ದೆಹಲಿಯ ಬಾಂಬ್ ಸ್ಫೋಟದ ನಂತರ ಭಯಭೀತರಾದ ಪಾಕಿಸ್ತಾನವು ರಾಜಸ್ಥಾನದ ಗಡಿಯಲ್ಲಿ ವಾಯುಪಡೆಯ ಗಸ್ತು ಪ್ರಾರಂಭಿಸಿದೆ. ಅವರ ಸಶಸ್ತ್ರ ಪಡೆಗಳ ಮುಖ್ಯಸ್ಥರು ತುರ್ತು ಸಭೆಯನ್ನು ನಡೆಸಿದರು. ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರು ಹಿರಿಯ ಅಧಿಕಾರಿಗಳೊಂದಿಗೆ ತಡರಾತ್ರಿಯವರೆಗೆ ಸಭೆಗಳನ್ನು ನಡೆಸಿದರು.
ಸಂಪಾದಕೀಯ ನಿಲುವು
|
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)