‘ಆಹಾರ ಸೇವನೆಯು ನಮಗೆ ಎಲ್ಲಕ್ಕಿಂತ ಮಹತ್ವದ ಮತ್ತು ಮೂಲಭೂತ ಅವಶ್ಯಕತೆಯಾಗಿದೆ ! ನಾವೆಲ್ಲರೂ ಬದುಕಲು ಆಹಾರವನ್ನೇ ಸಂಪೂರ್ಣವಾಗಿ ಅವಲಂಬಿಸಿ ದ್ದೇವೆ ಮತ್ತು ಅದಕ್ಕಾಗಿಯೇ ಜೀವನವೆಲ್ಲ ನಾವು ಶ್ರಮಪಡುತ್ತಿರುತ್ತೇವೆ. ನಮ್ಮಲ್ಲಿನ ಕೆಲವರು ಮನೆಯಲ್ಲಿ ಸಿದ್ಧಪಡಿಸಿದ ಆಹಾರ ವನ್ನು ಸೇವಿಸುತ್ತೇವೆ, ಇನ್ನು ಕೆಲವರು ಹೊರಗಿನ ಆಹಾರವನ್ನು ಸೇವಿಸುತ್ತಾರೆ ! ಶೀರ್ಷಿಕೆ ಮತ್ತು ಪ್ರಸ್ತಾವನೆಯನ್ನು ಓದಿ ನಮ್ಮಲ್ಲಿ ಕೆಲವರಿಗೆ, ಈ ಲೇಖನದ ವಿಷಯ ‘ಹೊರಗಿನ ಆಹಾರವನ್ನು ಸೇವಿಸಬೇಡಿ’, ಎಂದು ಇರಬಹುದು ಎಂದು ಅನಿಸಬಹುದು; ಏಕೆಂದರೆ ಅದು ಕಲಬೆರಕೆಯುಕ್ತ, ಅಶುದ್ಧ ವಾತಾವರಣದಲ್ಲಿ ತಯಾರಿಸಿದ್ದು ಅಥವಾ ಅದನ್ನು ತಯಾರಿಸಲು ಕೊಳಚೆ ನೀರನ್ನು ಬಳಸಿದ್ದು ಇರಬಹುದು ಅಥವಾ ಇಲಿ, ಜಿರಳೆ, ಹಲ್ಲಿಗಳು ಎಂಜಲು ಮಾಡಿದ್ದು, ಇನ್ನು ಕೆಲವು ಸಲ ಜಿಹಾದಿಗಳು ಉಗುಳು ಹಾಕಿದ್ದು ಇರಬಹುದು. ಇರಲಿ. ಈ ಎಲ್ಲ ವಿಷಯಗಳು ನಮಗೆ ಸಾಮಾನ್ಯವಾದ ಅಥವಾ ರೂಢಿಯಾದ ಕಾರಣದಿಂದ, ಬಹುಶಃ ಈ ಲೇಖನ ಓದಲು ಬೇಸರವೆನಿಸಬಹುದು; ಏಕೆಂದರೆ ಈ ವಿಷಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಈಗೀಗ ಸಾಕಷ್ಟು ಜಾಗೃತಿ ಮೂಡುತ್ತಿದೆ. ನಿಜವಾದ ಅರ್ಥದಲ್ಲಿ ಜಾಗೃತರಾಗಿರುವವರು ಈ ಬಗ್ಗೆ ಅಗತ್ಯವಿರುವ ಕಾಳಜಿ ವಹಿಸುತ್ತಾರೆ ಮತ್ತು ಕೆಲವು ಜಾಗೃತ ನಾಗರಿಕರು ಹೊರಗಿನ ಆಹಾರ ತಿನ್ನುವ ಆಸೆಗೆ ಮರುಳಾಗಿ, ಅದು ಕೆಟ್ಟದ್ದು ಅಥವಾ ಕಳಪೆ ಗುಣಮಟ್ಟದ್ದು ಎಂದು ಗೊತ್ತಿದ್ದರೂ ಕಣ್ಣು ಮುಚ್ಚಿಕೊಂಡು ಅದನ್ನು ಸೇವಿಸುತ್ತಾರೆ.
ನಿಜ ಹೇಳಬೇಕೆಂದರೆ, ಇದು ವ್ಯಕ್ತಿಸ್ವಾತಂತ್ರ್ಯದ ವಿಷಯ ಆಗಿರುವುದರಿಂದ, ಯಾರು ಎಲ್ಲಿ ಮತ್ತು ಯಾವ ಆಹಾರವನ್ನು ತಿನ್ನಬೇಕು ಎಂದು ನಾವು ಒತ್ತಾಯಿಸುವುದಿಲ್ಲ; ಆದರೆ, ಇಂದು ನಾವು ಓದಲು ಹೊರಟಿರುವ ವಿಷಯವು ನಿಮ್ಮ ಅನುಭವದಲ್ಲಿದ್ದರೂ, ತಿಳಿದೋ ತಿಳಿಯದೇ ನಾವು ಅದನ್ನು ಅಷ್ಟು ಗಂಭೀರವಾಗಿ ನೋಡುವುದಿಲ್ಲ ಮತ್ತು ಅದಕ್ಕಾಗಿಯೇ ನಮಗೆ ಅನೇಕ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆಹಾರ ಸೇವನೆಯ ಮೂಲಕ ಆಗುವ ತೊಂದರೆಗಳು ನಮಗೆ ಆಗಬಾರದು, ಆ ತೊಂದರೆಗಳ ಸ್ವರೂಪ ಮತ್ತು ಅವು ಆಗದಂತೆ ತಡೆಯಲು ಮಾಡಬೇಕಾದ ಪ್ರಯತ್ನಗಳು ಎಂಬ ಕೆಲವು ಅಂಶಗಳನ್ನು ಈ ಲೇಖನದಲ್ಲಿ ಮಂಡಿಸುತ್ತಿದ್ದೇನೆ. ‘ಈ ಅಂಶಗಳನ್ನು ಕಾರ್ಯರೂಪಕ್ಕೆ ತರುವ ಬುದ್ಧಿಯನ್ನು ಭಗವಂತನು ನಮಗೆ ನೀಡಲಿ’ ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥನೆ !

೧. ಆಹಾರದಿಂದ ಮನಸ್ಸಿನ ರಚನೆಯಾಗುತ್ತದೆ !
ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ, ಅದರಿಂದ ನಮ್ಮ ಮನಸ್ಸಿನ ರಚನೆಯಾಗುತ್ತದೆ. ಸಾಮಾನ್ಯವಾಗಿ, ಸಾತ್ತ್ವಿಕ ಆಹಾರವನ್ನು ಸೇವಿಸುವ ವ್ಯಕ್ತಿಯು ಮನಸ್ಸಿನಿಂದ ಸಾತ್ತ್ವಿಕನಾಗಿರುತ್ತಾನೆ, ಆದರೆ ಮಾಂಸಾಹಾರ ಮೊದಲಾದ ಆಹಾರವನ್ನು ಸೇವಿಸುವ ವ್ಯಕ್ತಿಯು ಮನಸ್ಸಿನಿಂದಲೂ ತಾಮಸಿಕನಾಗಿರುತ್ತಾನೆ. ಇದನ್ನು ನಾವೆಲ್ಲರೂ ಸಾಮಾನ್ಯವಾಗಿ ಅನುಭವಿಸುತ್ತೇವೆ. ಕೆಲವರಿಗೆ ಇದು ಬುದ್ಧಿಯಿಂದ ಒಪ್ಪಿಗೆಯಾಗುವುದಿಲ್ಲ; ಆದರೆ ಆಹಾರದಿಂದ ಆಗುವ ಸಂಸ್ಕಾರವು ಕಾಲಕ್ರಮೇಣ ನೊಡಲು ಸಿಗುತ್ತದೆ.

ಸಾತ್ತ್ವಿಕ ಆಹಾರ ಸೇವಿಸುವ ವ್ಯಕ್ತಿಯು ಪ್ರತಿಕೂಲ ಪರಿಸ್ಥಿತಿಗಳಲ್ಲಿ ತನ್ನ ಮೇಲೆ ನಿಯಂತ್ರಣ ಸಾಧಿಸಲು ಸಶಕ್ತನಾಗಿರುತ್ತಾನೆ. ತಾಮಸಿಕ ಆಹಾರ ಸೇವಿಸುವ ವ್ಯಕ್ತಿಗಳಿಗೆ ಹೋಲಿಸಿದರೆ, ಇವರಲ್ಲಿ ಸಹನೆಯು ಹೆಚ್ಚಿರುತ್ತದೆ ಮತ್ತು ಇಂತಹ ವ್ಯಕ್ತಿಯು ಸದ್ವಿವೇಕ ಬುದ್ಧಿಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಇದರ ವಿರುದ್ಧ, ತಾಮಸಿಕ ಆಹಾರ ಸೇವಿಸುವ ವ್ಯಕ್ತಿಗಳು ಅಸಹನೆಯವರÀÄ, ಅವಸರ ಮತ್ತು ಸ್ವಭಾವದೋಷಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕೆಲವು ಅಪವಾದದ ಉದಾಹರಣೆಗಳಿರಬಹುದು; ಆದರೆ ಹೆಚ್ಚಿನ ಜನರ ಮೇಲೆ ಆಹಾರದ ಪರಿಣಾಮ ಆಗಿಯೇ ಆಗುತ್ತದೆ. ಆದ್ದರಿಂದಲೇ ನಮ್ಮಲ್ಲಿ ಚಾತುರ್ಮಾಸದಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಅಥವಾ ಸೇವಿಸಬಾರದು ಎಂಬ ನಿಯಮಾವಳಿ ಇರುತ್ತದೆ. ಈ ನಿಯಮಗಳನ್ನು ಕೇವಲ ಧಾರ್ಮಿಕ ನಿಯಮವೆಂದು ದುರ್ಲಕ್ಷಿಸುವುದು ಹಾನಿಕರ ವಾಗಬಹುದು; ಏಕೆಂದರೆ ಆಯುರ್ವೇದದ ಪ್ರಕಾರ, ಆರೋಗ್ಯದ ದೃಷ್ಟಿಯಿಂದಲೂ ಅವು ಅಪಾಯಕಾರಿಯಾಗಿರುತ್ತವೆ.
೨. ಆಹಾರದ ಮೇಲೆ ವ್ಯಕ್ತಿಯ ವೃತ್ತಿಯ ಸಂಸ್ಕಾರ ಆಗುತ್ತದೆ !
ಆಹಾರದಿಂದ ಮನಸ್ಸಿನ ರಚನೆಯಾಗುತ್ತದೆ, ಅಂದರೆ ಆಹಾರದಿಂದ ವ್ಯಕ್ತಿಯ ಮನಸ್ಸಿನಲ್ಲಿ ಸಂಸ್ಕಾರಗಳು ಆಗುತ್ತವೆ, ಅದೇ ರೀತಿ ಯಾವ ವ್ಯಕ್ತಿಯು ಆಹಾರವನ್ನು ತಯಾರಿಸುತ್ತಾನೆಯೋ, ಆ ವ್ಯಕ್ತಿಯ ಮನೋವೃತ್ತಿಯ ಸಂಸ್ಕಾರವು ಆಹಾರದ ಮೇಲೂ ಆಗುತ್ತದೆ. ನಮ್ಮ ಮನೆಯ ಒಂದು ಉದಾಹರಣೆಯನ್ನು ಅಧ್ಯಯನದ ದೃಷ್ಟಿಯಿಂದ ನೋಡೋಣ. ನಾವೆಲ್ಲರೂ ನಮ್ಮ ತಾಯಿಯ ಕೈ ತುತ್ತು, ಸಹೋದರಿಯು ತಯಾರಿಸಿದ ಊಟವನ್ನು ಸೇವಿಸಿರುತ್ತೇವೆ. ವಿವಾಹಿತರು ಪತ್ನಿಯ ಕೈ ರುಚಿಯನ್ನು ಸಹ ನೋಡಿರುತ್ತಾರೆ. ಕೆಲವು ಬಾರಿ ನಾವು ಹೊರಗೆ ಸಂಬಂಧಿಕರ ಮನೆಗೆ ಅಥವಾ ಉಪಾಹಾರಗೃಹಕ್ಕೆ (ರೆಸ್ಟೋರೆಂಟ್‌ಗೆ) ಊಟಕ್ಕೆ ಹೋದಾಗ, ಸಂಬಂಧಿಕರು ಅಥವಾ ಅಡುಗೆಯವರು ತಯಾರಿಸಿದ ಮತ್ತು ‘ವೇಟರ್’ (ಬಡಿಸುವವರು) ಬಡಿಸಿದ ಊಟವನ್ನು ಮಾಡುತ್ತೇವೆ. ಈಗ, ಆಹಾರದ ಮೇಲೆ ಇವರೆಲ್ಲರ ಮನೋವೃತ್ತಿಯ ಪರಿಣಾಮವಾಗುತ್ತದೆ.

ತಾಯಿಯು ಮಗುವಿಗೆ ಊಟ ಬಡಿಸುವಾಗ, ಅವಳಿಗೆ ಮಗುವಿನಿಂದ ಯಾವುದೇ ರೀತಿಯ ಅಪೇಕ್ಷೆ ಇರುವುದಿಲ್ಲ. ‘ಮಗು ಹೊಟ್ಟೆ ತುಂಬ ಊಟ ಮಾಡಬೇಕು, ದಷ್ಟಪುಷ್ಟವಾಗಬೇಕು’ ಎಂದು ಪ್ರತಿ ತಾಯಿಗೂ ಅನಿಸುತ್ತದೆ ಮತ್ತು ಇದಕ್ಕಾಗಿ ಅವಳು ಪ್ರಸಂಗ ಬಂದಾಗ ತಾನು ಉಪವಾಸ ಇರುತ್ತಾಳೆ. ಆದ್ದರಿಂದ, ತಾಯಿಯ ಕೈ ತುತ್ತಿನಲ್ಲಿ ನಮಗೆ ಮಮತೆ, ವಾತ್ಸಲ್ಯ ಅನುಭವಕ್ಕೆ ಬರುತ್ತದೆ. ಇದೇ ಅನುಭವ ಸ್ವಲ್ಪ ಮಟ್ಟಿಗೆ ವ್ಯತ್ಯಾಸದೊಂದಿಗೆ ಸಹೋದರಿಯ ಕೈ ತುತ್ತನ್ನು ತಿಂದಾಗಲೂ ಬರುತ್ತದೆ; ಆದರೆ ಸಹೋದರಿಗೆ ಸಹೋದರನಿಂದ ಅಪೇಕ್ಷೆ ಇರಬಹುದು. ಕನಿಷ್ಠಪಕ್ಷ ‘ಸಹೋದರನು ಊಟದ ಬಗ್ಗೆ ಹೊಗಳಬೇಕು, ಚೆನ್ನಾಗಿದೆ ಎನ್ನಬೇಕು’ ಎಂಬ ವಿಚಾರ ಸಹೋದರಿಯ ಮನಸ್ಸಿನಲ್ಲಿ ಉಳಿದಿರುವುದರಿಂದ ನಮಗೆ ಬಹುಶಃ ಶೇಕಡಾ ೧೦೦ ರಷ್ಟು ತೃಪ್ತಿ ಸಿಗುವುದಿಲ್ಲ. ಪತ್ನಿಯು ತನ್ನ ಪತಿಗೆ ಊಟ ಬಡಿಸುವಾಗ, ಸಹಜವಾಗಿ ‘ಪತಿಯು ಊಟದ ಬಗ್ಗೆ ಹೊಗಳಬೇಕು’ ಎಂಬ ಅಪೇಕ್ಷೆ ಪತ್ನಿಯ ಮನಸ್ಸಿನಲ್ಲಿರುತ್ತದೆ. ಕೆಲವು ಹೆಂಡತಿಯರು ಗಂಡನಿಂದ ತಮ್ಮ ಬೇಡಿಕೆಗಳು ಅಥವಾ ಹಠಗಳನ್ನು ಪೂರೈಸಿಕೊಳ್ಳಲು ಪತಿಗೆ ಇಷ್ಟವಾದ ಪದಾರ್ಥಗಳನ್ನು ತಯಾರಿಸುತ್ತಾರೆ ಎಂದು ಸಹ ನಾವು ಕೇಳಿದ್ದೇವೆ. ಆದ್ದರಿಂದ, ಪತ್ನಿಯು ಬಡಿಸಿದ ಆಹಾರದ ಮೇಲೂ ಅವಳ ಸಾಪೇಕ್ಷತೆಯ (ಅಪೇಕ್ಷೆಯ) ಸಂಸ್ಕಾರವಾಗುತ್ತದೆ. ಹೊರಗೆ ಉಪಾಹಾರಗೃಹದಲ್ಲಿ ನಾವು ಊಟ ಮಾಡುವಾಗ, ಉಪಾಹಾರಗೃಹದ ಮಾಲೀಕರಿಗೆ ‘ಅಲ್ಲಿಗೆ ಬಂದ ವ್ಯಕ್ತಿಯು ಹೆಚ್ಚು ಹೆಚ್ಚು ಊಟ ಮಾಡಬೇಕು ಮತ್ತು ಇದರಿಂದ ನಮಗೆ ಹೆಚ್ಚು ಹಣ ಸಿಗಬೇಕು’ ಎಂಬ ಆರ್ಥಿಕ ದೃಷ್ಟಿಕೋನವಿರುವುದರಿಂದ, ಆ ಊಟದ ಮೇಲೆ ಅದೇ ರೀತಿಯ ಪರಿಣಾಮವಾಗುತ್ತದೆ. ಅಲ್ಲಿನ ಅಡುಗೆಯವನು ಅಥವಾ ಬಡಿಸುವ ‘ವೇಟರ್’ ಯಾವ ಮನೋವೃತ್ತಿಯವರು ಆಗಿರುತ್ತಾರೆಯೋ, ಅವರ ಮನೋವೃತ್ತಿಯ ಪರಿಣಾಮವು ಆಹಾರದ ಮೇಲೆ ಆಗುತ್ತದೆ. ಉಪಾಹಾರಗೃಹದಲ್ಲಿ ಯಾವುದೇ ರೀತಿಯ ಭಾವ-ಭಾವನೆಗಳು, ಪ್ರೀತಿ, ವಾತ್ಸಲ್ಯ ಇರುವುದಿಲ್ಲ. ಇರುವುದು ಕೇವಲ ಆರ್ಥಿಕ ಸಮೀಕರಣ ಮಾತ್ರ ! ಆದ್ದರಿಂದ, ತಾಯಿ ಅಥವಾ ಮನೆಯವರ ಕೈ ತುತ್ತಿನಲ್ಲಿ ಇರುವಂತಹ ತೃಪ್ತಿಯು ಹೊರಗಿನ ಊಟದಲ್ಲಿ ನಮಗೆ ಸಿಗುವುದಿಲ್ಲ. ಆ ಊಟದಲ್ಲಿ ಒಂದು ರೀತಿಯ ಜಡತ್ವವಿರುತ್ತದೆ.
೩. ಆಹಾರದ ಬಗೆಗಿನ ವಾಸನೆ ಮತ್ತು ಅದರ ಪರಿಣಾಮ !
ಧರ್ಮಶಾಸ್ತ್ರದ ಪ್ರಕಾರ, ಭೋಜನವನ್ನು ೨ ವಿಧಗಳಲ್ಲಿ ಮಾಡಲಾಗುತ್ತದೆ, ಒಂದು ನೇರವಾಗಿ ಆಹಾರ ಸೇವಿಸಿ ಮತ್ತು ಇನ್ನೊಂದು ಆಹಾರದ ವಾಸನೆಯನ್ನು ತೆಗೆದುಕೊಂಡು. ಆದ್ದರಿಂದಲೇ ದೇವರಿಗೆ ನೈವೇದ್ಯ ಅಥವಾ ಪಿತೃಗಳಿಗಾಗಿ ಶ್ರಾದ್ಧದ ಊಟವನ್ನು ತಯಾರಿಸುವಾಗ ವಿಶೇಷ ಕಾಳಜಿ ವಹಿಸುವ ಪದ್ಧತಿ ನಮ್ಮಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವ ಹೆಚ್ಚಿನ ಅಡುಗೆಯವರು ಆ ಸ್ಥಳದಲ್ಲಿ ಊಟ ಮಾಡುವುದಿಲ್ಲ; ಏಕೆಂದರೆ ಅಡುಗೆ ಮಾಡಿದ ನಂತರ ಆಹಾರದ ವಾಸನೆಯಿಂದ ಅವರ ಊಟದ ಬಗೆಗಿನ ಆಸೆಯು ಕಡಿಮೆಯಾಗಿರುತ್ತದೆ. ಅವರು ಊಟ ಮಾಡದೆಯೇ ಹೊಟ್ಟೆ ತುಂಬಿದಂತೆ ಅವರಿಗೆ ಅನಿಸುತ್ತದೆ.

ಈಗ ಆಹಾರದ ವಾಸನೆಯಿಂದ ತಿನ್ನುವ ಆಸೆಯು ಹೇಗೆ ಜಾಗೃತವಾಗುತ್ತದೆ ಎಂದು ನೋಡೋಣ. ನಾವು ಉಪಾಹಾರಗೃಹದ (ರೆಸ್ಟೋರೆಂಟ್‌ನ) ಪಕ್ಕದಿಂದ ಹಾದು ಹೋಗುವಾಗ, ಅಲ್ಲಿ ಪಲ್ಯಕ್ಕೆ ಒಗ್ಗರಣೆ ಹಾಕಿದ್ದರೆ, ಆ ವಾಸನೆಯಿಂದ ನಮ್ಮ ತಿನ್ನುವ ಆಸೆಯು ಜಾಗೃತವಾಗುತ್ತದೆ. ನಮ್ಮ ಆಹಾರದ ವಾಸನೆಯ (ತಿನ್ನುವ ಬಯಕೆಯ) ಪ್ರಭಾವವು ಆ ಆಹಾರದ ಮೇಲೆ ಆಗುತ್ತದೆ. ಒಂದು ರೀತಿಯಲ್ಲಿ ನಮ್ಮ ಆಸೆಯು ಆ ಆಹಾರದ ಮೇಲೆ ಹೋಗಿರುವುದರಿಂದ ಅದು ಸ್ವಲ್ಪ ಮಟ್ಟಿಗಾದರೂ ಕಲುಷಿತವಾಗಿರುತ್ತದೆ. ಅಂತಹ ಆಹಾರವನ್ನು ಬೇರೆ ವ್ಯಕ್ತಿಯು ಸೇವಿಸಿದಾಗ, ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಅಂತಹ ಆಹಾರ ಸೇವಿಸುವುದರಿಂದ ವ್ಯಕ್ತಿಗೆ ಹೊಟ್ಟೆಯ ತೊಂದರೆಗಳು ಬರಬಹುದು. ನಿಜ ಹೇಳಬೇಕೆಂದರೆ, ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ ನಮಗೆ ಅದು ಸುಲಭವಾಗಿ ಗಮನಕ್ಕೆ ಬರುವುದಿಲ್ಲ; ಆದರೆ ಹೊರಗೆ ಊಟ ಮಾಡಿ ಬಂದ ನಂತರ ದೇಹಕ್ಕೆ ಜಡತ್ವ ಬರುವುದು, ಆಲಸ್ಯ ಹೆಚ್ಚಾಗುವುದು, ಮೈಕೈ ನೋವು, ನಿದ್ರೆ ಬಂದಂತೆ ಅನಿಸುವುದು ಇಂತಹ ಅನುಭವಗಳು ಆಗುವ ಸಾಧ್ಯತೆ ಇರುತ್ತದೆ. ಈ ಎಲ್ಲ ಅನುಭವಗಳು ಆ ಆಹಾರದ ಮೇಲೆ ಆ ವ್ಯಕ್ತಿಯ ಆಸೆಗಳ ಪ್ರಭಾವದಿಂದಾದ ಸಂಸ್ಕಾರಗಳ ಕಣ್ಣಿಗೆ ಕಾಣುವ (ದೃಶ್ಯ) ಪರಿಣಾಮವಾಗಿರುತ್ತವೆ.
೪. ಸೂಕ್ಷ್ಮ ಶಕ್ತಿಗಳ ಆಸೆಗಳ ಪರಿಣಾಮವೂ ಆಹಾರದ ಮೇಲಾಗುತ್ತದೆ !
ನಾವು ದೇಹವನ್ನು ಹೊಂದಿದ್ದೇವೆ, ನಮ್ಮ ಮನಸ್ಸು, ಬುದ್ಧಿ ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ ನಮಗೆ ಯಾವುದೇ ಆಹಾರ ತಿನ್ನಬೇಕೆನಿಸಿದರೆ ಅಥವಾ ಆಹಾರದ ಮೇಲೆ ನಮ್ಮ ಆಸೆ ಹೋದರೆ, ಅದು ನಮಗೆ ತಿಳಿಯುತ್ತದೆ; ಆದರೆ ಜಗತ್ತಿನಲ್ಲಿ ಕೆಲವು ಸೂಕ್ಷ್ಮ ಶಕ್ತಿಗಳೂ ಇರುತ್ತವೆ. ಅವುಗಳ ಆಸೆಗಳ ಪರಿಣಾಮವೂ ಆಹಾರದ ಮೇಲಾಗುತ್ತದೆ. ಈ ಶಕ್ತಿಗಳು ನೇರವಾಗಿ ದೇಹದಲ್ಲಿ ಇರುವುದಿಲ್ಲ; ಆದರೆ ಅವುಗಳಿಗೆ ನಿರ್ದಿಷ್ಟ ಪದಾರ್ಥಗಳನ್ನು ತಿನ್ನುವ ಆಸಕ್ತಿ ಇರುವುದರಿಂದ ಅವುಗಳ ಮನಸ್ಸು ಆ ಪದಾರ್ಥದಲ್ಲಿ ಇರುತ್ತದೆ. ಇದರಿಂದಲೂ ಆ ಪದಾರ್ಥವು ದೂಷಿತವಾಗುತ್ತದೆ. ಕೆಲವು ಬಾರಿ ಈ ಸೂಕ್ಷ್ಮ ಶಕ್ತಿಗಳು ಇತರರ ಮಾಧ್ಯಮದಿಂದ ತಮ್ಮ ತಿನ್ನುವ ಆಸೆಗಳನ್ನು ಪೂರೈಸಿಕೊಳ್ಳುತ್ತವೆ. ಉದಾಹರಣೆಗೆ, ನಮ್ಮ ಒಬ್ಬ ಹಿತೈಷಿಯ ಅಜ್ಜಿ ಕೆಲವು ಆಧ್ಯಾತ್ಮಿಕ ತೊಂದರೆಗಳಿಂದ ಪ್ರತಿದಿನ ಊಟದ ನಂತರ ಸಮೋಸಾಗಳನ್ನು ತಿನ್ನಲು ಕೇಳುತ್ತಿದ್ದಳು. ಅವಳ ಮೊಮ್ಮಗ ಬುದ್ಧಿಜೀವಿ ಮತ್ತು ಸುಶಿಕ್ಷಿತನಾಗಿದ್ದರಿಂದ, ಇವು ಆಧ್ಯಾತ್ಮಿಕ ಕಾರಣಗಳಿಂದ ಆಗುತ್ತದೆ ಎಂಬುದು ಅವನಿಗೆ ಒಪ್ಪಿಗೆ ಇರಲಿಲ್ಲ, ಆದ್ದರಿಂದ ಅವನು ನಿಯಮಿತವಾಗಿ ಅಜ್ಜಿಗೆ ಸಮೋಸಾಗಳನ್ನು ತಂದು ಕೊಡುತ್ತಿದ್ದನು. ಕಾಲಕ್ರಮೇಣ ಅಜ್ಜಿ ನಿಧನರಾದರು ಮತ್ತು ಅದರ ಮರುದಿನದಿಂದ ಆ ಮೊಮ್ಮಗನಿಗೆ ಪ್ರತಿದಿನ ಊಟದ ನಂತರ ಸಮೋಸಾ ತಿನ್ನಬೇಕೆಂಬ ಬಯಕೆ ಶುರುವಾಯಿತು. ಈ ಉದಾಹರಣೆಯಿಂದ, ಸೂಕ್ಷ್ಮ ಶಕ್ತಿಗಳಿಗೆ ಆಹಾರದ ಮೇಲಿರುವ ವಾಸನೆ (ಬಯಕೆ) ಹೇಗೆ ಇರುತ್ತದೆ ಮತ್ತು ಅದರ ಪರಿಣಾಮ ಹೇಗೆ ಆಗುತ್ತದೆ ಎಂಬುದು ನಮಗೆ ತಿಳಿಯಿತು.
೫. ಆಹಾರ ಸಂಸ್ಕಾರವಾಗಲು ಮಾಡಬೇಕಾದ ಪ್ರಯತ್ನಗಳು !
೫ ಅ. ಅನೇಕ ಗೃಹಿಣಿಯರು ಅಡುಗೆ ಮಾಡುವಾಗ ಮೊಬೈಲ್ ಫೋನ್ ಬಳಸುತ್ತಾರೆ. ಕೆಲವರು ಚಿತ್ರಗೀತೆ ಕೇಳುತ್ತಾರೆ. ಕೆಲವು ಕಡೆಗಳಲ್ಲಿ ಮನೆಯೊಳಗಿನ ಕಲಹದಿಂದ ಅಡುಗೆ ಮಾಡುವ ಗೃಹಿಣಿಯ ಮನಃಸ್ಥಿತಿ ಹದೆಗೆಟ್ಟಿರುತ್ತದೆ. ಇವೆಲ್ಲದರ ಪರಿಣಾಮ ಅಡುಗೆಯ ಮೇಲೆ ಆಗುತ್ತದೆ. ಇದನ್ನು ತಪ್ಪಿಸಲು, ಅಡುಗೆ ಮಾಡುವಾಗ ಶ್ಲೋಕ ಅಥವಾ ಮಂತ್ರಗಳನ್ನು ಪಠಿಸಿ ಅಥವಾ ಆಗ ಉಪಾಸ್ಯ ದೇವತೆಯ ನಾಮಜಪ ಮಾಡಿ. ಇದು ಆಗದಿದ್ದರೆ, ಅಡುಗೆಮನೆಯಲ್ಲಿ ನಾಮಜಪ ಕೇಳಿಸುವಂತೆ ಮೊಬೈಲ್ ಫೋನಿನಲ್ಲಿ ಹಾಕಿ ಇಡಿ. ಹೀಗೆ ಮಾಡುವುದರಿಂದ ಆ ಆಹಾರದ ಮೇಲೆ ನಾಮಜಪದ ಸಾತ್ವಿಕ ಪರಿಣಾಮ ಆಗುತ್ತದೆ.

೫ ಆ. ಮನೆಯಲ್ಲಿ ಅಥವಾ ಹೊರಗೆ ಊಟ ಮಾಡುವಾಗ ಆದಷ್ಟು ಊಟದ ತಟ್ಟೆಯ ಸುತ್ತಲೂ ಪ್ರಾರ್ಥನೆಪೂರ್ವಕವಾಗಿ ನೀರನ್ನು ಗೋಲಾಕಾರವಾಗಿ ತಿರುಗಿಸಿ. ಹೀಗೆ ಮಾಡಲು ಆಗದಿದ್ದರೆ, ಯಾವುದೇ ತೀರ್ಥಕ್ಷೇತ್ರದ ವಿಭೂತಿ ಅಥವಾ ತೀರ್ಥವನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಅಥವಾ ಗೋಮೂತ್ರ ಅರ್ಕದ (ಸಾರ) ನೀರನ್ನು ಸಿದ್ಧಪಡಿಸಿ ಅದರಿಂದ ಆಹಾರದ ಮೇಲೆ ಪ್ರೋಕ್ಷಣೆ ಮಾಡಬಹುದು. ಇದೂ ಆಗದಿದ್ದರೆ ಚಿಟಿಕೆಯಷ್ಟು ವಿಭೂತಿಯನ್ನು ಆಹಾರದ ಮೇಲೆ ಹಾಕಬಹುದು. ಇದರಿಂದ ಆಹಾರದ ಮೇಲೆ ಸಾತ್ತ್ವಿಕತೆಯ ಸಂಸ್ಕಾರವಾಗಿ, ಅದರಲ್ಲಿರುವ ದೂಷಿತ ಸ್ಪಂದನಗಳು ನಾಶವಾಗಲು ಸಹಾಯವಾಗುತ್ತದೆ.
೫ ಇ. ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ಮೊದಲು ಭಗವಂತನ ಚರಣಗಳಲ್ಲಿ ಅರ್ಪಿಸಿ, ಅದನ್ನು ಪ್ರಸಾದ ರೂಪದಲ್ಲಿ ನಾವು ಸೇವಿಸಬೇಕು. ಹೀಗೆ ಮಾಡುವುದರಿಂದ ಆ ಆಹಾರದ ಮೇಲಾದ ಬಾಹ್ಯ ಕುಸಂಸ್ಕಾರಗಳು ನಾಶವಾಗಿ ಭಗವಂತನ ಆಶೀರ್ವಾದದ ಸಂಸ್ಕಾರಗಳಾಗುತ್ತವೆ ಮತ್ತು ಇದರಿಂದ ನಮಗೆ ಲಾಭವಾಗುತ್ತದೆ.
೫ ಈ. ಎಲ್ಲಿಯೂ ಆಹಾರ ಸೇವಿಸುವಾಗ ‘ನಮಗೆ ಭಗವಂತನ ಕೃಪೆಯಿಂದ ಆಹಾರ ಸಿಕ್ಕಿದೆ’ ಎನ್ನುವ ಕೃತಜ್ಞತಾಭಾವದಿಂದ ನಾಮಜಪ ಮಾಡುತ್ತಾ ಆಹಾರ ಸೇವಿಸಿ. ‘ಇದರಿಂದ ಅದೂ ಒಂದು ಯಜ್ಞಕರ್ಮವಾಗುತ್ತದೆ’, ಎಂದು ಸಂತರು ಹೇಳಿದ್ದಾರೆ.
ಇಂತಹ ಕೆಲವು ಆಧ್ಯಾತ್ಮಿಕ ಸ್ತರದ ಪ್ರಯತ್ನಗಳನ್ನು ನಾವು ನಿಯಮಿತವಾಗಿ ಮಾಡಿದರೆ, ಆಹಾರದಿಂದ ನಮ್ಮ ಮನಸ್ಸಿನ ಮೇಲಾಗುವ ಕುಸಂಸ್ಕಾರಗಳು ದೂರವಾಗಿ ಖಂಡಿತವಾಗಿಯೂ ಉತ್ತಮ ಸಂಸ್ಕಾರಗಳಾಗುತ್ತವೆ.
– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ಪ್ರಸಾರಮಾಧ್ಯಮ. (೨೮.೯.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು