ಸಂಗೀತದ (ವಾದನದ) ವ್ಯಾಖ್ಯೆ ಮತ್ತು ಆಧ್ಯಾತ್ಮಿಕ ಪರಿಭಾಷೆ !

೨೭/೬ ನೆಯ ಸಂಚಿಕೆಯಿಂದ ಪ್ರಾರಂಭವಾದ ಈ ಲೇಖನಮಾಲೆಯಲ್ಲಿ, ಈ ವಾರ ನಾವು ಸಂಗೀತದ ಒಂದು ಭಾಗವಾದ ‘ವಾದನ’ (ವಾದ್ಯಗಳನ್ನು ಬಾರಿಸುವುದು) ಈ ಕಲೆಯ ವ್ಯಾಖ್ಯೆಯನ್ನು ನೋಡೋಣ.
‘ಗಾಯನ, ವಾದನ ಮತ್ತು ನೃತ್ಯ ಇವುಗಳ ಒಟ್ಟು ಆವಿಷ್ಕಾರಕ್ಕೆ ‘ಸಂಗೀತ’ ಎಂದು ಹೇಳುತ್ತಾರೆ. ಆದ್ದರಿಂದ ‘ವಾದನ’ವು ಸಂಗೀತದ ಅವಿಭಾಜ್ಯ ಅಂಗವಾಗಿದೆ. ಸಂಗೀತಕ್ಕೆ ಉಪಯೋಗವಾಗುವ ನಾದವನ್ನು ನಿರ್ಮಿಸುವ ಸಾಧನಗಳನ್ನು ಉಪಯೋಗಿಸಿ ಸ್ವರ ಮತ್ತು ಲಯವನ್ನು ವ್ಯಕ್ತ ಮಾಡುವ ಪ್ರಕ್ರಿಯೆ ಅಂದರೆ ವಾದ್ಯವಾದನ. ‘ವಾದ್ಯಗಳ ಸಹಾಯದಿಂದ ಸುರ, ತಾಲ ಮತ್ತು ಲಯ ಇವುಗಳ ಅವಿಷ್ಕಾರ ಮಾಡುತ್ತ ವಿವಿಧ ರಸಗಳನ್ನು ಸೃಷ್ಟಿಸುವುದು’ ಇದನ್ನೂ ‘ವಾದ್ಯವಾದನ’ವೆಂದು ಕರೆಯುತ್ತಾರೆ. ಈ ರೀತಿಯಾಗಿ ವಾದ್ಯಗಳ ಮೂಲಕ ಸಿದ್ಧವಾದ ಸಂಗೀತಕ್ಕೆ ‘ವಾದ್ಯಸಂಗೀತ ‘ Instrumental Music’ ’ ಎಂದು ಕರೆಯುತ್ತಾರೆ.
ಭಾರತೀಯ ಸಂಗೀತದ ವಿವಿಧ ವಾದ್ಯಗಳು, ಉದಾ. ಕೊಳಲಿನ ಮಧುರ ನಾದ, ವೀಣೆಯ ಝೇಂಕಾರದ ತಂತಿಗಳಿಂದ ಸೃಷ್ಟಿಯಾದ ಸ್ವರ ನಮಗೆ ಒಂದು ವಿಭಿನ್ನವಾದ ಅನುಭೂತಿಯನ್ನು ನೀಡುತ್ತದೆ. ವಾದ್ಯಗಳ ನಾದದಿಂದಾಗಿ ಕೆಲವೊಮ್ಮೆ ನಾವು ಭಾವಸ್ಥಿತಿಗೆ ಹೋಗಿ ಅಂತರ್ಮುಖರಾಗುತ್ತೇವೆ. ಭಾರತೀಯ ವಾದ್ಯಗಳ ನಾದದಿಂದಾಗಿ ವಾದನ ಮಾಡುವವರು ಹಾಗೂ ಕೇಳುವವರಿಗೆ ಪಂಚಮಹಾಭೂತಗಳ ಸ್ತರಗಳಲ್ಲಿನ ವಿವಿಧ ಸೂಕ್ಷ್ಮ ಅನುಭೂತಿಗಳನ್ನು ಪಡೆಯಲು ಬರುತ್ತದೆ. ಇದೇ ಭಾರತೀಯ ವಾದ್ಯಗಳ ನಾದದ ವೈಶಿಷ್ಟ್ಯವಾಗಿದೆ.
![]() ‘ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ; ಆದ್ದರಿಂದ ಪೃಥ್ವಿ, ಆಪ, ತೇಜ ಮತ್ತು ವಾಯು ಈ ತತ್ತ್ವಗಳಿಗೆ ಸಂಬಂಧಿಸಿದ ಕಲೆಗಳಿಗಿಂತ ಸಂಗೀತಕ್ಕೆ ಸಂಬಂಧಿಸಿದ ಅನುಭೂತಿಗಳು ಮೇಲಿನ ಸ್ತರದ್ದಾಗಿರುತ್ತವೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. |
|
ಈ ಲೇಖನದಲ್ಲಿನ ಕೆಲವು ಪರಿಭಾಷೆಗಳ ಅರ್ಥಗಳು ೧. ಸ್ವರಗಳ ಪಟ್ಟಿ (ಶೃತಿ) : ಸಪ್ತಕದಲ್ಲಿನ ಇಂತಹ ಸ್ವರವನ್ನು ‘ಷಡ್ಜ’ (ಸಾ) ಎಂದು ಭಾವಿಸಿ ಮುಂದಿನ ಸ್ವರವನ್ನು ಹಾಡಲಾಗುತ್ತದೆ ಅಥವಾ ನುಡಿಸಲಾಗುತ್ತದೆ, ಆ ‘ಸಾ’ ಎಂಬ ಸ್ವರಕ್ಕೆ ‘ಸ್ವರಗಳ ಪಟ್ಟಿ’ ಎಂದು ಹೇಳುತ್ತಾರೆ. ೨. ಸಪ್ತಕ : ಸಾ, ರೆ, ಗ, ಮ, ಪ, ಧ, ನಿ ಈ ಏಳು ಸ್ವರಗಳ ಸಮೂಹಕ್ಕೆ ‘ಸಪ್ತಕ’ ಎಂದು ಹೇಳುತ್ತಾರೆ. ೩. ಮಾತ್ರಾ : ತಾಳದ ಪ್ರತಿಯೊಂದು ಭಾಗಕ್ಕೆ ‘ಮಾತ್ರಾ’ ಎಂದು ಕರೆಯುತ್ತಾರೆ. ೪. ಲಯ : ಎರಡು ಮಾತ್ರಾಗಳ ನಡುವಿನ ಸಮನಾದ ವೇಗದ ಅಂತರ. ೫. ತಾಳ : ನಿಯಮಬದ್ಧ ಮಾತ್ರಾಗಳ ಸಮೂಹ. |

೧. ನಾದ
ನಾದ ಎಂದರೆ ಬ್ರಹ್ಮ ಅಥವಾ ಈಶ್ವರ. ಭಾರತೀಯ ಸಂಗೀತದಲ್ಲಿ ನಾದವು ಕೇವಲ ಕೇಳಿಸುವ ಧ್ವನಿಯಾಗಿರದೇ, ಅದು ಚೇತನಾ ಅಥವಾ ಕಂಪನವನ್ನು ಸೃಷ್ಟಿಸುವ ಒಂದು ಶಕ್ತಿ(ಊರ್ಜೆ)ಯಾಗಿದೆ. ನಾದದ ಸ್ವರೂಪವು ಸ್ಥೂಲ ಮತ್ತು ಸೂಕ್ಷ್ಮ ಎರಡೂ ಸ್ತರಗಳಲ್ಲಿದೆ. ಭಾರತೀಯ ಸಂಗೀತವು ‘ನಾದಬ್ರಹ್ಮ’ ಎಂಬ ತತ್ತ್ವದ ಮೇಲಿದೆ. ನಾದವನ್ನು ‘ಸಂಗೀತದ ಆತ್ಮ’ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಂಗೀತಕ್ಕೆ ಉಪಯುಕ್ತವಾದ ಧ್ವನಿಯನ್ನು ‘ನಾದ’ ಎಂದು ಕರೆಯುತ್ತಾರೆ. ನಾದದಲ್ಲಿ ಎರಡು ವಿಧಗಳಿವೆ – ಆಹತ ನಾದ ಮತ್ತು ಅನಾಹತ ನಾದ.
೧ ಅ. ಆಹತ ನಾದ : ಆಘಾತ ಅಥವಾ ಘರ್ಷಣೆಯಿಂದ ನಿರ್ಮಾಣವಾಗುವ ಮತ್ತು ನಮ್ಮ ಕಿವಿಗಳಿಗೆ ಕೇಳಿಸುವ ನಾದ, ಉದಾ. ಗಾಯನ, ವಾದನ.
೧ ಆ. ಅನಾಹತ ನಾದ : ಆಘಾತ ಅಥವಾ ಘರ್ಷಣೆ ಇಲ್ಲದೆ ನಿರ್ಮಾಣ ಆಗುವ ಮತ್ತು ಕಿವಿಗಳಿಗೆ ಕೇಳಿಸದ ಅತ್ಯಂತ ಸೂಕ್ಷ್ಮ ನಾದ. ಈ ಸೂಕ್ಷ್ಮ ನಾದವನ್ನು ಯೋಗಿಗಳು, ಅಂದರೆ ಉನ್ನತ ಆಧ್ಯಾತ್ಮಿಕ ಸ್ಥಿತಿಯಲ್ಲಿರುವ ಸಂತರು ತಮ್ಮ ಅಂತಃಕರಣದಲ್ಲಿ ಅನುಭವಿಸುತ್ತಾರೆ.
೨. ವಾದ್ಯ
೨ ಅ. ವ್ಯಾಖ್ಯೆ : ಯಾವ ಉಪಕರಣವನ್ನು ಬಾರಿಸಿದಾಗ ಅದರಿಂದ ಸಂಗೀತಕ್ಕೆ ಉಪಯುಕ್ತವಾದ ನಾದವು ನಿರ್ಮಾಣ ಆಗುತ್ತದೆಯೋ, ಅದನ್ನು ‘ವಾದ್ಯ’ ಎಂದು ಕರೆಯುತ್ತಾರೆ.
೨ ಆ. ವ್ಯುತ್ಪತ್ತಿ : ‘ಸಂಸ್ಕೃತದಲ್ಲಿನ ‘ವದ’ ಧಾತುವಿಗೆ ‘ಯತ್’ ಪ್ರತ್ಯಯವನ್ನು ಸೇರಿಸಿದರೆ ‘ವಾದ್ಯ’ ಎಂಬ ಶಬ್ದವು ಸಿದ್ಧವಾಗುತ್ತದೆ. ಇದರ ಅರ್ಥ ಬಾರಿಸಲು ಯೋಗ್ಯ ಯಂತ್ರ ಎಂದಾಗಿದೆ. ನಾವು ಏಕಾಗ್ರತೆಯಿಂದ ವಾದನವನ್ನು ಕೇಳಿದರೆ, ಅದರಲ್ಲಿನ ಸ್ವರ ಮತ್ತು ಅದರಿಂದ ಉತ್ಪತ್ತಿಯಾದ ಶಬ್ದಗಳು ಕೇಳಿಸಬಹುದು.’ (ಆಧಾರ : ಗ್ರಂಥ – ‘ಪಖವಾಜ ಕೀ ಉತ್ಪತ್ತಿ, ವಿಕಾಸ ಏವಂ ವಾದನ ಶೈಲಿಯಾಂ’, ಡಾ. ಅಜಯ ಕುಮಾರ್, ಪುಟ ಸಂಖ್ಯೆ ೫೯)
೨ ಇ. ವಾದ್ಯಗಳ ವಿಧಗಳು : ನಾಟ್ಯಶಾಸ್ತ್ರದಲ್ಲಿ ಭರತಮುನಿಗಳು ವಾದ್ಯಗಳ ಮುಖ್ಯ ೪ ವಿಧಗಳನ್ನು ಹೇಳಿದ್ದಾರೆ.
ತತಂ ಚೈವಾವನದ್ಧಂ ಚ ಘನಂ ಸುಷಿರಮೇವ ಚ |
ಚತುರ್ವಿಧಂ ತು ವಿಜ್ಞೇಯಮಾತೋದ್ಯಂ ಲಕ್ಷಣಾನ್ವಿತಮ್ ||
– ನಾಟ್ಯಶಾಸ್ತ್ರ, ಅಧ್ಯಾಯ ೨೮, ಶ್ಲೋಕ ೧
ಅರ್ಥ : ‘ತತ್ (ತಂತಿಯುಕ್ತ ವಾದ್ಯಗಳು), ಅವನದ್ಧ (ಢೋಲು ಇತ್ಯಾದಿ ವಾದ್ಯಗಳು), ಘನ (ಘನಿಷ್ಠ ವಾದ್ಯಗಳು – ತಾಳ ಇತ್ಯಾದಿ) ಮತ್ತು ಸುಷಿರ (ಗಾಳಿಯಿಂದ ನುಡಿಸಲಾಗುವ ವಾದ್ಯಗಳು)’ ಹೀಗೆ ೪ ವಿಧಗಳಾಗಿ ವರ್ಗಿಕರಿಸಲಾಗಿದೆ. ‘ಈ ವಿಧಗಳಿಗನುಸಾರವಾಗಿ ವಾದ್ಯಗಳ ವರ್ಗೀಕರಣವನ್ನು ತಿಳಿದುಕೊಳ್ಳಬೇಕು’, ಎಂದು ಈ ಶ್ಲೋಕದಲ್ಲಿ ಹೇಳಲಾಗಿದೆ.
೨ ಇ ೧. ತತ್ವಾದ್ಯ (ತಂತಿವಾದ್ಯ) : ಈ ವಾದ್ಯಗಳಲ್ಲಿ ತಂತಿಗಳ ಮೇಲಿನ ಆಘಾತ ಅಥವಾ ಘರ್ಷಣೆಯಿಂದ ಸ್ವರಗಳು ಸೃಷ್ಟಿಯಾಗುತ್ತವೆ. ಈ ವಾದ್ಯಗಳಲ್ಲಿ ತಂತಿಯ ಉದ್ದ ಮತ್ತು ಅದರ ಬಿಗಿತದ ಮೇಲೆ ಸ್ವರಗಳ ಪಟ್ಟಿ ನಿರ್ಧರಿತವಾಗಿದ್ದು, ಅದನ್ನು ಸ್ವಲ್ಪ ಕಡಿಮೆ ಅಥವಾ ಹೆಚ್ಚು ಮಾಡಬಹುದು, ಉದಾ. ಸಿತಾರ್, ಸಂತೂರ್, ವೀಣೆ, ಏಕತಾರಿ (ಒಂದೇ ತಂತಿಯ ವಾದ್ಯ).

೨ ಇ ೨. ಅವನದ್ಧ (ಚರ್ಮದ ವಾದ್ಯಗಳು) : ಈ ವಾದ್ಯಗಳಲ್ಲಿ ಎಳೆದ ಚರ್ಮದ ಮೇಲೆ ಆಘಾತ ಮಾಡುವ ಮೂಲಕ ಶಬ್ದವು ಸೃಷ್ಟಿಯಾಗುತ್ತದೆ. ಸಂಗೀತದಲ್ಲಿ ಈ ವಾದ್ಯಗಳ ಉಪಯೋಗವನ್ನು ಲಯ ಮತ್ತು ತಾಳ ನೀಡಲು ಮಾಡಲಾಗುತ್ತದೆ, ಉದಾ. ತಬಲಾ, ಢೋಲು, ಮೃದಂಗ, ಡಫ್(ಟಮ್ಕಿ), ಡಮರು.
೨ ಇ ೩. ಘನವಾದ್ಯ : ಈ ವಾದ್ಯಗಳಲ್ಲಿ ಘನ ಪದಾರ್ಥದ ಮೇಲೆ ಆಘಾತ ಮಾಡಿ ನಾದವನ್ನು ಸೃಷ್ಟಿಸಲಾಗುತ್ತದೆ. ಇದರಲ್ಲಿ ಮರ, ಲೋಹ ಅಥವಾ ಕಲ್ಲುಗಳನ್ನು ಬಳಸಲಾಗುತ್ತದೆ. ಲಯವನ್ನು ತೋರಿಸಲೂ ಇದರ ಉಪಯೋಗವಾಗುತ್ತದೆ, ಉದಾ. ತಾಳ, ಜಾಗಟೆ, ಚಿಪಳ, ಜಲತರಂಗ.
೨ ಇ ೪. ಸುಷಿರವಾದ್ಯ : ಈ ವಾದ್ಯಗಳಲ್ಲಿ ಗಾಳಿಯ ಸಹಾಯ ದಿಂದ ಸ್ವರಗಳನ್ನು ಸೃಷ್ಟಿಸಲಾಗುತ್ತದೆ. ಇದರಲ್ಲಿ ಅನೇಕ ವಾದ್ಯ ಗಳನ್ನು ಬಾಯಿಂದ ಗಾಳಿ ಊದಿ ನುಡಿಸಲಾಗುತ್ತದೆ. ಈ ರೀತಿ ಗಾಳಿಯ ಸಹಾಯದಿಂದ ನುಡಿಸಲಾಗುವ ವಾದ್ಯಗಳಿಗೆ ‘ಸುಷಿರ ವಾದ್ಯಗಳು’ ಎನ್ನುತ್ತಾರೆ, ಉದಾ. ಕೊಳಲು, ಶಹನಾಯಿ, ಶಂಖ, ತುತ್ತೂರಿ ಇತ್ಯಾದಿ.
೩. ವಾದನದ ಮಾಧ್ಯಮದಿಂದ ಈಶ್ವರನೊಂದಿಗೆ ಅನುಸಂಧಾನವನ್ನು ಹೇಗೆ ಸಾಧಿಸಲಾಗುತ್ತದೆ ?
ವಾದ್ಯಸಂಗೀತದ ನಾದವು ಕೇವಲ ಕಿವಿಗಳಿಗೆ ಆನಂದ ನೀಡುವುದು ಮಾತ್ರವಲ್ಲ, ಅದು ನಮ್ಮ ಅಂತಃಕರಣದೊಂದಿಗೆ ನೇರವಾಗಿ ಸಂವಾದಿಸುತ್ತದೆ. ಭಾರತೀಯ ವಾದ್ಯಗಳ ನಾದವು ಆರಂಭದಲ್ಲಿ ಸಾಧಕರ ಮನಸ್ಸನ್ನು ಏಕಾಗ್ರಗೊಳಿಸಲು ಬಾಹ್ಯ ಆಧಾರವಾಗಿರುತ್ತದೆ; ಆದರೆ ಈ ನಾದವು ಮುಂದೆ ಈಶ್ವರೀ ಅನುಸಂಧಾನವನ್ನು ಬೇಗನೆ ಸಾಧಿಸಲು ಉಪಯುಕ್ತವಾಗುತ್ತದೆ. ಭಾರತದ ಪ್ರಾಚೀನ ನಾದಯೋಗ ಪರಂಪರೆಯಲ್ಲಿ ಕೊಳಲು, ವೀಣೆ, ಮೃದಂಗ ಮುಂತಾದ ಸಾತ್ತ್ವಿಕ ವಾದ್ಯಗಳ ನಾದದ ಮಾಧ್ಯಮದಿಂದ ಅನುಸಂಧಾನವನ್ನು ಸಾಧಿಸಿ ಧ್ಯಾನ-ಧಾರಣೆ ಇತ್ಯಾದಿ ಉಪಾಸನೆಯನ್ನು ಮಾಡಿದ ಅನೇಕ ಯೋಗಿಗಳು ಆಗಿ ಹೋಗಿದ್ದಾರೆ ಮತ್ತು ಇಂದಿಗೂ ಇದ್ದಾರೆ.
೩ ಅ. ಗ್ರಂಥಗಳಲ್ಲಿ ಹೇಳಲಾದ ನಾದೋಪಾಸನೆಯ ಮಹತ್ವ : ಶಾರ್ಙ್ಗದೇವರಚಿತ ‘ಸಂಗೀತರತ್ನಾಕರ’ ಎಂಬ ಗ್ರಂಥದಲ್ಲಿ ಮುಂದಿನಂತೆ ಹೇಳಲಾಗಿದೆ,
ನಾದೋಪಾಸನಯಾ ದೇವಾ ಬ್ರಹ್ಮವಿಷ್ಣುಮಹೇಶ್ವರಾಃ |
ಭವಂತ್ಯುಪಾಸಿತಾ ನೂನಂ ಯಸ್ಮಾದೇತೇ ತದಾತ್ಮಕಾಃ ||
– ಸಂಗೀತರತ್ನಾಕರ, ಅಧ್ಯಾಯ ೧, ಪ್ರಕರಣ ೩, ಶ್ಲೋಕ ೨
ಅರ್ಥ : ಯಾರ ಉಪಾಸನೆಯ ಮೂಲಕ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ಮೂರೂ ದೇವತೆಗಳ ಆರಾಧನೆಯಾಗುತ್ತದೆಯೋ, ಆ ನಾದಬ್ರಹ್ಮನ ಉಪಾಸನೆ ನಾನು ಮಾಡುತ್ತೇನೆ; ಏಕೆಂದರೆ ಈ ಮೂರೂ ದೇವರು ‘ತದಾತ್ಮಕ’, ಅಂದರೆ ‘ನಾದಾತ್ಮಕ’ರಾಗಿದ್ದಾರೆ.
ಮೇಲಿನ ಶ್ಲೋಕದಿಂದ ನಮಗೆ ‘ನಾದೋಪಾಸನೆಯಿಂದ ಈಶ್ವರನ ಆರಾಧನೆಯು ಹೇಗೆ ಆಗುತ್ತದೆ ?’ ಎಂಬುದು ಗಮನಕ್ಕೆ ಬರುತ್ತದೆ.
೩ ಆ. ಆಧ್ಯಾತ್ಮಿಕ ಪರಿಭಾಷೆಯಿಂದ ವಾದನಕಲೆ ! : ನಾದಾನುಸಂಧಾನವು ಸಾಧಕರ ಸಾಧನೆಗೆ ಉಪಯುಕ್ತವಾಗಿದೆ. ‘ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಿಂದ ವಾದನಕಲೆಯ ಕಡೆಗೆ ಸಾಧಕನ ದೃಷ್ಟಿಕೋನ ಹೇಗಿರಬೇಕು ?’ ಇದನ್ನು ಸೂಕ್ಷ್ಮ ಜ್ಞಾನಪ್ರಾಪ್ತಿಯನ್ನು ಮಾಡಿಕೊಂಡ ಸಾಧಕ ಶ್ರೀ. ರಾಮ ಹೊನಪ ಇವರಿಗೆ ಜ್ಞಾನದಿಂದ ಪ್ರಾಪ್ತವಾದ ಮುಂದಿನ ಪರಿಭಾಷೆಗಳ ಮೂಲಕ ನಮ್ಮ ಗಮನಕ್ಕೆ ಬರುತ್ತದೆ.
೧. ‘ವಾದ್ಯದಿಂದ ಸೃಷ್ಟಿಯಾಗುವ ನಾದವು ಮಂತ್ರವಾಗಿದೆ, ಅದು ಈಶ್ವರಿ ಅನುಸಂಧಾನವನ್ನು ಸಾಧಿಸಿ ಕೊಡುತ್ತದೆ.
೨. ವಾದ್ಯದ ನಾದವು ಕೇವಲ ಧ್ವನಿಯಲ್ಲ, ಅದು ಒಂದು ಸ್ಪಂದನವಾಗಿದ್ದು, ಅದು ಶರೀರ, ಮನಸ್ಸು ಮತ್ತು ಆತ್ಮವನ್ನು ಸ್ಪರ್ಶಿಸುತ್ತದೆ.
೩. ವಾದ್ಯಗಳ ನಾದವು ಕೇವಲ ಸಂಗೀತವಲ್ಲ, ಅದು ಒಂದು ಆಧ್ಯಾತ್ಮಿಕ ಕೊಂಡಿಯಾಗಿದ್ದು, ಅದು ಸಾಧಕನನ್ನು ಬಾಹ್ಯ ಜಗತ್ತಿನಿಂದ ಅಂತರ್ಮನದೊಂದಿಗೆ ಮತ್ತು ಅಲ್ಲಿಂದ ಪರಮಾತ್ಮನೊಂದಿಗೆ ಜೋಡಿಸುತ್ತದೆ.
೪. ಯಾವುದೇ ವಿಷಯದ ಜ್ಞಾನವು ಮೊದಲು ಮನಸ್ಸು ಮತ್ತು ಬುದ್ಧಿಗೆ ಆಗುತ್ತದೆ. ಅನಂತರ ಅದು ಅಂತರ್ಮನದ ವರೆಗೆ ತಲುಪುತ್ತದೆ. ವಾದ್ಯಗಳಿಂದ ಉತ್ಪನ್ನವಾಗುವ ನಾದವು ನೇರವಾಗಿ ಅಂತರ್ಮನದ ವರೆಗೆ ತಲುಪುತ್ತದೆ. ಆದ್ದರಿಂದ ಅಧ್ಯಾತ್ಮದಲ್ಲಿ ನಾದಕ್ಕೆ ಅಸಾಧಾರಣ ಮಹತ್ವವಿದೆ.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.
೪. ಸಾರಾಂಶ
ಮೇಲಿನ ಆಧ್ಯಾತ್ಮಿಕ ಪರಿಭಾಷೆಗಳನ್ನು ಅಧ್ಯಯನ ಮಾಡಿದರೆ, ‘ವಾದನಕಲೆಯನ್ನು ಸಾಧನೆಯೆಂದು ನೋಡಿದರೆ ಕಲಾವಿದನಿಗೆ ವಾದ್ಯಗಳ ನಾದದ ಮಾಧ್ಯಮದಿಂದ ಈಶ್ವರೀ ಅನುಸಂಧಾನವನ್ನು ನಿಶ್ಚಿತವಾಗಿಯೂ ಸಾಧಿಸಲು ಸಾಧ್ಯವಾಗುತ್ತದೆ’, ಎಂಬುದು ಗಮನಕ್ಕೆ ಬರುತ್ತದೆ.
– ಶ್ರೀ ಮನೋಜ ಸಹಸ್ರಬುದ್ಧೆ, ವಾದ್ಯ ಅಧ್ಯಯನಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೫.೯.೨೫)
ಸಂಗೀತ-ಸಾಧನೆಯ ಬಗ್ಗೆ ಪ್ರಸಿದ್ಧ ವಾದಕ-ಕಲಾವಿದರ ಅಮೂಲ್ಯ ವಿಚಾರಗಳುಅ. ‘ಹಣ, ಪ್ರಸಿದ್ಧಿ, ಪ್ರಶಸ್ತಿ ಇತ್ಯಾದಿ ಎಲ್ಲವುಗಳಿಂದ ದೂರ ಹೋಗಿ ಸಂಪೂರ್ಣ ಪರಮೇಶ್ವರನ ಪ್ರಾಪ್ತಿಗಾಗಿ ಸಂಗೀತವನ್ನು ಮಾಡಿದರೆ ಮಾತ್ರ ಅದರಿಂದ ಆತ್ಮಿಕ ಸಮಾಧಾನ, ಆನಂದ ಮತ್ತು ಪರಮೇಶ್ವರನ ಪ್ರಾಪ್ತಿಯಾಗಲು ಸಾಧ್ಯ; ಇಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ.’ – ಪೂ. ಪಂಡಿತ ಕೇಶವ ಗಿಂಡೆ, ಕೊಳಲು ವಾದಕರು, ಪುಣೆ. ಆ. ‘ಸಂಗೀತಕ್ಕೆ ಭಾವವನ್ನು ಜೋಡಿಸಿದರೆ ಸಂಗೀತದಲ್ಲಿನ ಸ್ವರಗಳಿಂದ ನಾಲ್ಕೂ ದಿಕ್ಕುಗಳಲ್ಲಿ ಭಗವಂತನು ಕಾಣತೊಡಗುತ್ತಾನೆ.’ – ಪದ್ಮವಿಭೂಷಣ ಪಂ. ಹರಿಪ್ರಸಾದ ಚೌರಸಿಯಾ, ಕೊಳಲು ವಾದಕರು, ಮುಂಬಯಿ. |
ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಸನಾತನ ಪ್ರಭಾತ’ದಲ್ಲಿ ಪ್ರತಿವಾರ ‘ಗಾಯನ, ವಾದನ, ನೃತ್ಯ ಮತ್ತು ನಾಟ್ಯ ಈ ಕಲೆಗಳ ಮಾಧ್ಯಮದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆಯ ಪ್ರಾಸ್ತಾವಿಕ ವಿವೇಚನೆ !’ ಎಂಬ ಲೇಖನಮಾಲೆಯನ್ನು ನೀಡುತ್ತಿದ್ದೇವೆ. ಈ ಲೇಖನಮಾಲೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ‘ಕಲೆಗಳನ್ನು ಸಾಧನೆಯ ದೃಷ್ಟಿಯಿಂದ ಹೇಗೆ ನೋಡಬೇಕು ?’ ಎಂಬ ದೃಷ್ಟಿಕೋನದಿಂದ ಮಾರ್ಗದರ್ಶನ ನೀಡುವ ಲೇಖನಗಳು ಇರಲಿವೆ. ನಿಮ್ಮ ಸಂಪರ್ಕದಲ್ಲಿರುವ ಕಲಾಪ್ರೇಮಿಗಳು, ಕಲಾವಿದರು ಮತ್ತು ಕಲಾ ಆಸಕ್ತರ ವರೆಗೆ ಈ ಲೇಖನಗಳನ್ನು ತಲುಪಿಸಲು ಪ್ರಯತ್ನಿಸಿ. ಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಿ. – ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ಸಂಪರ್ಕಕ್ಕಾಗಿ ವಿಳಾಸ ಶ್ರೀ. ಅಭಿಜಿತ ಸಾವಂತ ಸಂಪರ್ಕ ಸಂಖ್ಯೆ : 8793678178 ಅಂಚೆ : [email protected] |

ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !