ತಾಲಿಬಾನ್ ಕುರಿತು ಪಾಕಿಸ್ತಾನದ ಸಂಸತ್ತಿನಲ್ಲಿ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರಿಂದ ಸೇನೆ ಮತ್ತು ಅಂದಿನ ಇಮ್ರಾನ ಖಾನ್ ಸರಕಾರದ ಮೇಲೆ ಟೀಕೆ

ಇಸ್ಲಾಮಾಬಾದ (ಪಾಕಿಸ್ತಾನ) – ಆಫ್ಘಾನ್ ತಾಲಿಬಾನನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ ಡಾರ್ ಅವರು ಮಾಜಿ ಪ್ರಧಾನಿ ಇಮ್ರಾನ ಖಾನ ಅವರ ಸರಕಾರ ಮತ್ತು ಆ ಕಾಲದ ಸೇನಾ ನಾಯಕತ್ವದ ಮೇಲೆ ಆರೋಪ ಮಾಡಿದ್ದಾರೆ. ಡಾರ್ ಅವರು, 2021 ರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ನ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಆಂತರಿಕ ಸೇವಾ ಗುಪ್ತಚರ ಸಂಸ್ಥೆ) ಅಂದಿನ ಮುಖ್ಯಸ್ಥರಾಗಿದ್ದ ಫೈಜ್ ಹಮೀದ್ ಅವರು ಕೈಗೊಂಡ ಕಾಬೂಲ್ ಪ್ರವಾಸವು ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಘಟನೆಗಳಿಗೆ ಮೂಲ ಕಾರಣವಾಗಿದೆ ಎಂದು ಹೇಳಿದ್ದಾರೆ. ಅವರು ಅಲ್ಲಿ ಕುಡಿದ ಒಂದು ಕಪ್ ಚಹಾ ನಮಗೆ ತುಂಬಾ ದುಬಾರಿಯಾಗಿದೆ. ಆ ಒಂದು ಕಪ್ ಚಹಾದಿಂದಾಗಿ ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಗಳ ಬಾಗಿಲು ಮತ್ತೆ ತೆರೆಯಲ್ಪಟ್ಟವು ಮತ್ತು ಆ ಕಾಲದ ಸರಕಾರವು 100 ಕ್ಕೂ ಹೆಚ್ಚು ಕುಖ್ಯಾತ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತು. ಈ ನಿರ್ಧಾರಗಳಿಂದಾಗಿಯೇ ದೇಶದಲ್ಲಿ ಭಯೋತ್ಪಾದಕ ದಾಳಿಗಳ ಪ್ರವಾಹ ಉಂಟಾಗಿದೆ ಮತ್ತು ಇದಕ್ಕೆ ಮಾಜಿ ಸರಕಾರವೇ ನೇರವಾಗಿ ಹೊಣೆಯಾಗಿದೆ.
ಡಾರ್ ಅವರ ಈ ಹೇಳಿಕೆಯು, ಕಳೆದ ತಿಂಗಳು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಡುವೆ ಗಡಿಯಲ್ಲಿ ಸಶಸ್ತ್ರ ಸಂಘರ್ಷ ನಡೆದಿದ್ದ ಸಮಯದಲ್ಲಿ ಬಂದಿದೆ.
ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ನಂತರ ಎರಡೂ ದೇಶಗಳು ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿವೆ, ಅದು ಪ್ರಸ್ತುತ ಜಾರಿಯಲ್ಲಿದೆ; ಆದರೆ ಗಡಿಯ ಸಮೀಪದಲ್ಲಿ ಉದ್ವಿಗ್ನತೆ ಮುಂದುವರಿದಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು