
೧. ಒಮ್ಮೆ ರೈಲಿನಲ್ಲಿ ಕುಳಿತಿರುವ ಇಬ್ಬರು ಮಕ್ಕಳು ತಮ್ಮ ತಾಯಿ-ತಂದೆಯರೊಂದಿಗೆ ಆಡುತ್ತಿದ್ದರು. ಆಡುತ್ತ ಆಡುತ್ತ ಅದರಲ್ಲಿನ ಒಬ್ಬನು ತಂದೆಗೆ ಹೊಡೆಯುವಂತೆ ಕೈಯ ಮುಷ್ಠಿಯನ್ನು ಮಾಡಿ ತಂದೆಯ ಮುಂದೆ ಹಿಡಿದನು. ಕೆಲವು ನಿಮಿಷಗಳ ನಂತರ ಇನ್ನೊಬ್ಬನು ತಂದೆಯ ದಿಶೆಯಿಂದ ಬಂದೂಕು ಹಿಡಿದಿರುವ ಕೃತಿಯನ್ನು ಮಾಡಿ ಗುಂಡು ಹಾರಿಸಿದಂತೆ ಮಾಡಿದನು. ತಾಯಿ-ತಂದೆಯರ ಪೈಕಿ ಯಾರೂ ಆ ಮಕ್ಕಳಿಗೆ ಏನು ಹೇಳಲಿಲ್ಲ, ಬದಲಾಗಿ ಅವರು ಮಕ್ಕಳ ಮುಂದೆ ನಕ್ಕು ಬೆಂಬಲ ನೀಡುತ್ತಿದ್ದರು.
೨. ಓರ್ವ ಮಹಿಳೆಯು ಒಂದು ಅಂಗಡಿಯಲ್ಲಿ ೮ ಜಿಬಿಯ ಹೊಸ ಡೆಟಾಕಾರ್ಡನ್ನು ಖರೀದಿಸಿದಳು ಮತ್ತು ಅಂಗಡಿಯವನಿಗೆ ಆ ಕಾರ್ಡನಲ್ಲಿ ಚಲನಚಿತ್ರಗಳ ಹೊಸ ಹಾಡುಗಳು, ವಿಡಿಯೋ, ಕಾರ್ಟೂನು ಇತ್ಯಾದಿಗಳನ್ನು ಹಾಕಲು ಹೇಳಿದಳು. ಅವಳ ೧೦-೧೨ ವರ್ಷದ ಮಗನು ಈ ಬೇಡಿಕೆಯನ್ನು ಮಾಡಿರುವುದಾಗಿ ನಂತರ ತಿಳಿಯಿತು.
೩. ಓರ್ವ ತಂದೆಯು ೧೦ ವರ್ಷದ ಮಗನಿಗೆ ಸ್ವಲ್ಪ ಹಣವನ್ನು ಕೊಟ್ಟು ಪಕ್ಕದ ಅಂಗಡಿಯಿಂದ ತಿನಿಸು ತರಲು ಹೇಳಿದನು. ಅದರಲ್ಲಿನ ೨೦ ರೂಪಾಯಿಗಳು ಉಳಿದಿದ್ದವು. ಮಗನು ತಂದೆಗೆ ಕೇಳದೇ ಆ ೨೦ ರೂಪಾಯಿಗಳನ್ನು ತನ್ನ ಬಳಿಯೇ ಇಟ್ಟುಕೊಂಡನು. ತಂದೆಯೂ ಅದರ ಬಗ್ಗೆ ಮಗನಲ್ಲಿ ಏನೂ ಕೇಳಲಿಲ್ಲ.
೪. ಒಬ್ಬ ಹುಡುಗನು ಊಟ ಮಾಡುವಾಗ ಸ್ವತಃ ದೂರಚಿತ್ರವಾಹಿನಿಯಲ್ಲಿ (ಟಿ.ವಿ) ಕಾರ್ಟೂನ್ ಹಾಕಿದನು ಮತ್ತು ಅದನ್ನೇ ನೋಡುತ್ತ ಕುಳಿತನು. ಅವನ ಗಮನ ಊಟದ ಕಡೆಗೆ ಕಡಿಮೆ ಮತ್ತು ಕಾರ್ಟೂನ ನೋಡುವುದರಲ್ಲಿಯೇ ಹೆಚ್ಚಿತ್ತು.

೫. ಒಂದು ಸ್ಥಳದಲ್ಲಿ ೧೪ – ೧೫ ವರ್ಷದ ಹುಡುಗಿಯ ತಾಯಿ ಮತ್ತು ಅಜ್ಜಿಯು ಅವಳಿಗೆ ಮನೆಯ ಒಂದು ಕೆಲಸವನ್ನು ಮಾಡಲು ಅನೇಕ ಬಾರಿ ಹೇಳುತ್ತಿದ್ದರು. ಕೋಪದಿಂದ ಗಟ್ಟಿಯಾಗಿ ಹೇಳಿದರೂ, ಅವಳು ಕೇಳುತ್ತಿರಲಿಲ್ಲ ಮತ್ತು ಸರಿಯಾಗಿ ಉತ್ತರವನ್ನೂ ಕೊಡುತ್ತಿರಲಿಲ್ಲ. ಅವಳ ತಂದೆ ಹತ್ತಿರವೇ ಕುಳಿತಿದ್ದರು. ಕೊನೆಗೆ ಆ ಹುಡುಗಿಯು ಸಿಟ್ಟಿನಿಂದ ತಾಯಿಗೆ ”ನಾನುಮಾಡುವುದಿಲ್ಲ,’’ ಎಂದು ಉದ್ಧಟತನದಿಂದ ಉತ್ತರಿಸಿದಳು. ಇದಕ್ಕೆ ಅವಳ ತಂದೆಯು ತಕ್ಷಣ ಮಗಳನ್ನು ಪ್ರಶಂಸಿಸುತ್ತ, ”ನನ್ನ ಮಗಳು ‘ಸ್ಟ್ರೇಟ್ ಫಾರ್ವರ್ಡ’ (ಆಧುನಿಕ ವಿಚಾರ ಉಳ್ಳವಳು) ಆಗಿದ್ದಾಳೆ,’’ ಎಂದು ಹೇಳಿದರು.
೬. ಉತ್ತರಪ್ರದೇಶದಲ್ಲಿನ ಓರ್ವ ಹುಡುಗನು ಪಬಜಿ ಆಡಲು ವಿರೋಧಿಸುವ ತನ್ನ ತಾಯಿಯನ್ನು ಕೊಂದನು. ತಾಯಿಯ ಮೃತದೇಹವು ಮನೆಯಲ್ಲಿ ೩ ದಿನಗಳ ವರೆಗೆ ಹಾಗೆಯೇ ಇತ್ತು ಮತ್ತು ಮಗನು ಪಬಜಿ ಆಟವನ್ನು ಆಡುವುದರಲ್ಲಿ ಮಗ್ನನಾಗಿದ್ದನು.
– ಸೌ. ನಮ್ರತಾ ದಿವೇಕರ, ಸನಾತನ ಆಶ್ರಮ, ದೇವದ, ಪನವೇಲ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು