ಸಾಧಕರಿಗೆ ಸೂಚನೆ

ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ, ಎಲ್ಲೆಡೆ ಇರುವ ಸನಾತನದ ಸಾಧಕರಿಗೆ ಯುದ್ಧಕಾಲಕ್ಕಾಗಿ ಶ್ರೀಕೃಷ್ಣನ ಮತ್ತು ರಾಮರಾಜ್ಯಕ್ಕಾಗಿ ಶ್ರೀರಾಮನ ಆಶೀರ್ವಾದವನ್ನು ಪಡೆಯುವುದು ಅವಶ್ಯಕವಾಗಿದೆ. ಕಲಿಯುಗದಲ್ಲಿ, ಮಹರ್ಷಿ ನಾರದರಿಂದ ಸಮಸ್ತ ಮಾನವಕುಲಕ್ಕಾಗಿ ‘ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ । ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ।।’ ಈ ಮಹಾಮಂತ್ರವು ಲಭಿಸಿದೆ.
ಪ್ರಸ್ತುತ ಸಾಧಕರು ಮಾಡುತ್ತಿರುವ ನಿಯಮಿತ ನಾಮಜಪಗಳೊಂದಿಗೆ, ಇನ್ನು ಮುಂದೆ ಮೇಲಿನ ಮಹಾಮಂತ್ರವನ್ನು ಪ್ರತಿದಿನ ೧೦೮ ಬಾರಿ ಹೇಳಬೇಕು. ಈ ಮಹಾಮಂತ್ರಕ್ಕೆ ಸ್ಥಳ-ಕಾಲದ ಬಂಧನವಿಲ್ಲ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣ ಈ ಎರಡೂ ದೇವತೆಗಳ ತತ್ತ್ವಗಳಿರುವುದರಿಂದ, ಎಲ್ಲಾ ಸಾಧಕರು ಈ ಮಹಾಮಂತ್ರವನ್ನು ಹೇಳುವಾಗ ಗುರುದೇವರ ಸ್ಮರಣೆ ಮಾಡಬೇಕು.
– ಸಪ್ತರ್ಷಿ ಜೀವನಾಡಿ (ಪೂ. ಡಾ. ಓಂ ಉಲಗನಾಥನ್ ಅವರು ಮಾಡಿದ ನಾಡಿವಾಚನ, ೨೦.೧೦.೨೦೨೫)
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !