
೧. ಮತಾಂತರದ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !
ಬೀಡ್(ಮಹಾರಾಷ್ಟ್ರ)ನ ಕಾರಾಗೃಹದಲ್ಲಿ ಕೈದಿಗಳನ್ನು ಮತಾಂತರ ಮಾಡಲಾಗುತ್ತಿದೆ. ಅಲ್ಲಿನ ಮಹಾಪುರುಷರ ಭಾವಚಿತ್ರಗಳನ್ನು ತೆಗೆದು ಆ ಸ್ಥಳದಲ್ಲಿ ಬೈಬಲ್‌ನ ಸಾಲುಗಳನ್ನು ಬರೆಯಲಾಗಿದೆ. ಅಲ್ಲಿನ ಕೀರ್ತನೆಯನ್ನು ನಿಲ್ಲಿಸಲಾಗಿದೆ ಎಂದು ಭಾಜಪ ಶಾಸಕ ಗೋಪಿಚಂದ ಪಡಳಕರರು ಆರೋಪಿಸಿದ್ದಾರೆ.
೨. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಏರಿಸುವುದು ಹಿಂದೂಗಳಿಗೆ ಅಪಾಯಕಾರಿ !
ಹುಬ್ಬಳ್ಳಿಯ ಒಂದು ಸರಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಮುಸಲ್ಮಾನ ಸಮುದಾಯದ ಹಾಫೀಜ್ ಎಂಬ ವ್ಯಕ್ತಿ ಕುರಾನ್ ಪಠಣದ ಮೂಲಕ ಪ್ರಾರಂಭಿಸಿದರು. ಈ ವೇಳೆ ಪಾಲಿಕೆ ಆಯುಕ್ತರು ಸೇರಿದಂತೆ ಅನೇಕ ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
೩. ಇಂತಹ ಜಾಗೃತಿ ಎಲ್ಲೆಡೆ ಇರಬೇಕು !
ಮಥುರಾದಲ್ಲಿ (ಉತ್ತರಪ್ರದೇಶ) ಸ್ಥಳೀಯ ಮಹಿಳೆಯರ ಗುಂಪು, ನಗರದ ಹಿಂದೂ ಮಹಿಳೆಯರಿಗೆ ‘ಮುಸಲ್ಮಾನ ಕುಶಲಕರ್ಮಿಗಳಿಂದ ಮೆಹಂದಿ ಹಾಕಿಸಿಕೊಳ್ಳದೆ ಕೇವಲ ಹಿಂದೂ ಮಹಿಳೆಯರಿಂದಲೇ ಮೆಹಂದಿ ಹಾಕಿಸಿಕೊಳ್ಳಬೇಕು, ಇದರಿಂದ ಹಿಂದೂ ಸಹೋದರಿಯರಿಗೆ ಆರ್ಥಿಕ ಪ್ರೋತ್ಸಾಹ ಸಿಗುತ್ತದೆ’ ಎಂದು ಮನವಿ ಮಾಡಿದ್ದಾರೆ.
೪. ಹಿಂದೂ ವ್ಯಾಪಾರಿಗಳಿಂದಲೇದೀಪಾವಳಿಯ ಖರೀದಿ ಮಾಡಿ !
ಹಿಂದೂ ವ್ಯಾಪಾರಿಗಳ ಬಳಿಯೇ ದೀಪಾವಳಿಯ ಖರೀದಿಯನ್ನು ಮಾಡಬೇಕು. ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಈಗ ಹಿಂದೂಗಳು ಸುಮ್ಮನಿರುವುದಿಲ್ಲ ಎಂಬುದನ್ನು ಜಿಹಾದಿಗಳು ನೆನಪಿಡಬೇಕು ಎಂದು ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಸಂಗ್ರಾಮ್ ಜಗತಾಪ ಅವರು ಕರಮಾಳಾ (ಸೋಲಾಪುರ)ದಲ್ಲಿ ನಡೆದ ಹಿಂದೂ ಜನಆಕ್ರೋಶ ಮೋರ್ಚಾದಲ್ಲಿ ಗುಡುಗಿದರು.
೫. ಇಂತಹವರು ನೀಡಿದ ತೀರ್ಪುಗಳನ್ನು ಮರುಪರಿಶೀಲಿಸಬೇಕು !
ಮುಂಬೈ ಉಚ್ಚ ನ್ಯಾಯಾಲಯವು ಸಾತಾರಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಧನಂಜಯ್ ನಿಕಮ್ ಮತ್ತು ಪಾಲ್ಘರ್ ಸಿವಿಲ್ ನ್ಯಾಯಾಧೀಶರಾದ (ಹಿರಿಯ ವಿಭಾಗ) ಇರ್ಫಾನ್ ಶೇಖ್ ಅವರನ್ನು ಭ್ರಷ್ಟಾಚಾರದ ನಡತೆ ಮತ್ತು ಅವರಿಗೆ ನೀಡಲಾದ ನ್ಯಾಯಾಂಗ ಅಧಿಕಾರಗಳಿಗೆ ಅನುಗುಣವಾಗಿ ವರ್ತಿಸದ ಕಾರಣಕ್ಕೆ ವಜಾಗೊಳಿಸಿದೆ.
೬. ಇಸ್ಲಾಮಿ ದೇಶಗಳಲ್ಲಿನ ಹಿಂದೂಗಳಂತೆಯೇ ಭಾರತದಲ್ಲಿಯೂ ಹಿಂದೂಗಳು ಅಸುರಕ್ಷಿತ !
ಅಲವಾರ್ (ರಾಜಸ್ಥಾನ) ನ ಬಖ್ತಲ್ ಪ್ರದೇಶದಲ್ಲಿ ಮುಸಲ್ಮಾನರು ಕರಣ್ ಮಲ್ಹೋತ್ರಾ ಎಂಬವÀರ ಮೇಲೆ ಕಬ್ಬಿಣದ ಶಸ್ತ್ರದಿಂದ ಆಕ್ರಮಣ ಮಾಡಿದ್ದಾರೆ. ಇದರಲ್ಲಿ ಅವರು ಮೃತಪಟ್ಟಿದ್ದಾರೆ. ಈ ಘಟನೆಯಿಂದ ಅಲ್ಲಿ ಉದ್ವಿಗ್ನ ಪರಿಸ್ಥಿತಿಯುಂಟಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !