ನಿಷೇಧವನ್ನು ತಕ್ಷಣವೇ ಹಿಂಪಡೆಯಲು ಆಗ್ರಹ

ವಿಜಯಪುರ – ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಮತ್ತು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಕರ್ನಾಟಕ ಸರಕಾರವು ಪೂ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ $2$ ತಿಂಗಳ ಅವಧಿಗೆ ವಿಜಯಪುರ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಸಮಿತಿಯು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ,
1. ಸಮಾಜ ಪರಿವರ್ತನೆಗೆ ಕೊಡುಗೆ ನೀಡುತ್ತಿರುವ ಪೂ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿದ್ದು, ಕೋಟ್ಯಂತರ ಜನರ ಹೃದಯದಲ್ಲಿ ಭಕ್ತಿ, ನೈತಿಕತೆ ಮತ್ತು ಸನಾತನ ಸಂಸ್ಕೃತಿಯ ದೀಪವನ್ನು ಬೆಳಗಿಸಿದ್ದಾರೆ. ಅವರ ಮೇಲಿನ ಈ ನಿಷೇಧವು ಸನಾತನ ಗೌರವಯುತ ಸಂತ ಪರಂಪರೆಗೆ ಮಾಡಿದ ಅವಮಾನವಾಗಿದೆ.
2. ಇದು ಸರಕಾರದ ಅಧಿಕಾರದ ದುರುಪಯೋಗ ಮತ್ತು ಸಂತರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ.
3. ಒಂದು ಕಡೆ ಕಾಂಗ್ರೆಸ್ ಸರಕಾರವು ಸರಕಾರಿ ಕಾರ್ಯಕ್ರಮಗಳಲ್ಲಿ ಕುರಾನ್ ಪಠಣ ಮಾಡಿಸುತ್ತದೆ, ಮತ್ತೊಂದೆಡೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜ ಪರಿವರ್ತನೆಯ ಕಾರ್ಯ ಮಾಡುತ್ತಿರುವ ಸ್ವಾಮೀಜಿಯವರ ಮೇಲೆ ನಿಷೇಧ ಹೇರುತ್ತದೆ.
4. ಭಾರತದಲ್ಲಿ ಹಿಂದೂಗಳ ಒಬ್ಬ ಸಂತರಿಗೆ ಜಿಲ್ಲಾ ಪ್ರವೇಶ ನಿಷೇಧ ಹೇರಬಹುದು; ಆದರೆ ಭಾರತದ ಯಾವುದೇ ರಾಜ್ಯ ಅಥವಾ ಜಿಲ್ಲೆಯಲ್ಲಿ ಮತಾಂತರ ಮಾಡುವ ಮಿಷನರಿಗಳ ಮೇಲೆ ನಿಷೇಧವಿಲ್ಲ, ಲವ್ ಜಿಹಾದ್ ಕೃತ್ಯಗಳಿಗೆ ನಿಷೇಧವಿಲ್ಲ, ಗಲಭೆಕೋರರ ಮೇಲೆ ನಿಷೇಧವಿಲ್ಲ, ಮೂರ್ತಿಗಳನ್ನು ಒಡೆಯುವವರ ಮೇಲೆ ನಿಷೇಧವಿಲ್ಲ, ಗೋಮಾತೆಯನ್ನು ಕಸಾಯಿ ಖಾನೆಗೆ ಕರೆದುಕೊಂಡು ಹೋಗಿ ಕೊಲ್ಲುವುದರ ಮೇಲೆ ನಿಷೇಧವಿಲ್ಲ. ಕೇವಲ ಗೋರಕ್ಷಣೆ, ಸಂಸ್ಕೃತಿ ರಕ್ಷಣೆ, ಧರ್ಮರಕ್ಷಣೆ ಮಾಡುವ ಹಿಂದೂ ಸಂತನ ಮೇಲೆ ನಿಷೇಧ ಹೇರಲಾಗುತ್ತದೆ. ನಾವು ಭಾರತದಲ್ಲಿದ್ದೇವೆಯೋ ಅಥವಾ ಪಾಕಿಸ್ತಾನದಲ್ಲಿದ್ದೇವೆಯೋ?
5. ಅಸದುದ್ದೀನ್ ಓವೈಸಿ ಅವರಂತಹ ಜನರು ಬಹಿರಂಗವಾಗಿ ಪ್ರಚೋದನಕಾರಿ ಭಾಷಣಗಳನ್ನು ನೀಡುತ್ತಾರೆ; ಆದರೆ ಅವರ ಹೆಸರಿನಲ್ಲಿ ಎಂದಿಗೂ ನಿಷೇಧದ ಧ್ವನಿ ಕೇಳಿಬಂದಿಲ್ಲ, ಕೇವಲ ಹಿಂದೂ ಸಂತರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ.
ಏನಿದು ಪ್ರಕರಣ?

ಇತ್ತೀಚೆಗೆ ಮಹಾರಾಷ್ಟ್ರದ ಜತ್ ತಾಲೂಕಿನ ಬಿಳೂರು ಗ್ರಾಮದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಪೂ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕೆಲವು ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಟೀಕೆ ಮಾಡಿದ್ದರು. ‘ಕಳೆದ 2 ತಿಂಗಳಿಂದ ‘ದೇವಾಲಯಕ್ಕೆ ಹೋಗಬೇಡಿ’ ಎಂದು ಪ್ರಚಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಯವರು ಆಶ್ರಯ ನೀಡಿದ ಲಿಂಗಾಯತ ಮಠಾಧೀಶರ ಸಂಘಟನೆಯ ‘ಕಲಾವಿದರು’ ಒಟ್ಟಾಗಿ ರಾಜ್ಯಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ ಎಂಬ ನಾಟಕ ಮಾಡುತ್ತಿದ್ದಾರೆ. ‘ದೇವಾಲಯದಲ್ಲಿ ದೇವರಿಲ್ಲ. ಮನೆಯ ದೇವರನ್ನು ನದಿಯಲ್ಲಿ ಎಸೆಯಿರಿ’ ಎಂದು ಅವರು ಹೇಳುತ್ತಿದ್ದಾರೆ. ಇವರಿಗೆ ನಾನೇ ಬುದ್ಧಿ ಕಲಿಸಬೇಕು’ ಎಂದು ಹೇಳುವ ಮೂಲಕ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಣದಿಂದಾಗಿ ಅವರಿಗೆ ವಿಜಯಪುರ ಪ್ರವೇಶ ನಿಷೇಧ ಹೇರಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ