
| ಕಲೆ ಮತ್ತು ಅಧ್ಯಾತ್ಮ ಇವುಗಳ ಸಂಬಂಧ
‘ಪ್ರಾಚೀನ ಕಾಲದಿಂದಲೇ ಭಾರತೀಯ ಸಂಗೀತ, ನೃತ್ಯ ಮತ್ತು ನಾಟಕ ಈ ಕಲೆಗಳು ಮತ್ತು ಅಧ್ಯಾತ್ಮ ಇವುಗಳ ಆಳವಾದ ಸಂಬಂಧವಿದೆ. ಡೊಂಬಿವಲಿ (ಠಾಣೆ ಜಿಲ್ಲೆ, ಮಹಾರಾಷ್ಟ್ರ) ಇಲ್ಲಿನ ಶಾಸ್ತ್ರೀಯ ಗಾಯಕ ಪೂ. ಕಿರಣ ಫಾಟಕರವರು ಹೇಳುತ್ತಾರೆ, ‘ಸಂಗೀತವು ಆತ್ಮದ ಹುಂಕಾರವಾಗಿದ್ದು ಪರಮಾತ್ಮನ ‘ಓಂ’ಕಾರವಾಗಿದೆ.’ ‘ಸಂಗೀತವು ನಮ್ಮ ಆತ್ಮದ ಭಾಷೆಯಾಗಿದೆ’, ಎಂದು ಅಮೇರಿಕಾದ ಪ್ರಬಂಧಕಾರ ಖಲಿಲ್ ಜಿಬ್ರಾನ್ ಹೇಳಿದ್ದಾರೆ. ‘ಅಧ್ಯಾತ್ಮವು ಆತ್ಮಶೋಧನೆಯ ಮಾರ್ಗವಾಗಿದೆ’, ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸಂಗೀತ, ನೃತ್ಯ, ನಾಟಕ ಈ ಎಲ್ಲ ಕಲೆಗಳು ಕೇವಲ ಮನೋರಂಜನೆಗಾಗಿ ಮಾತ್ರವಲ್ಲ, ಬದಲಾಗಿ ಜೀವಗಳ ಉನ್ನತಿಗಾಗಿ ಇವೆ. ಸಾಧನೆಯೆಂದರೆ ಈಶ್ವರಪ್ರಾಪ್ತಿಯ ಮಾರ್ಗವಾಗಿದ್ದು ಭಾರತೀಯ ಪರಂಪರೆಯಲ್ಲಿ ಕಲೆಯು ಒಂದು ಸಾಧನವಾಗಿದೆ. |

‘ಭಾರತೀಯ ಕಲೆಗಳು ಉಪಾಸನೆಗಾಗಿಯೇ ಇವೆ; ಆದರೆ ಇಂದು ಗಾಯನ, ವಾದನ ಮತ್ತು ನೃತ್ಯ ಈ ಕಲೆಗಳೆಂದರೆ ನಮ್ಮ ಕಣ್ಣೆದುರು ಬರುವುದು ಯಾರಾದರೊಬ್ಬರು ಸಮಾರಂಭದಲ್ಲಿ ಹಾಡುವ ಗಾಯಕರು, ವಾದ್ಯಗಳನ್ನು ನುಡಿಸುವ ವಾದ್ಯಕಾರರು ಅಥವಾ ರಂಗಮಂಟಪದಲ್ಲಿ ನೃತ್ಯ ಮಾಡುವ ನರ್ತಕಿಯರು. ಇದರೊಂದಿಗೆ ನಾಟಕವೆಂದರೆ ನಾಟ್ಯಮಂದಿರದಲ್ಲಿ ಕಲಾಕೃತಿಯನ್ನು ಅಭಿನಯದ ಮೂಲಕ ಪ್ರಸ್ತುತಪಡಿಸುವ ವ್ಯಕ್ತಿತ್ವ ನಮ್ಮ ಎದುರು ಬರುತ್ತದೆ.
ಇಂದು ಸಮಾಜಕ್ಕೆ ‘ಕಲೆಯೆಂದರೆ ಕೇವಲ‘ಕಲೆಗಳ ಪ್ರಸ್ತುತಿ (Performing arts)’, ಎಂಬ ಸಮೀಕರಣ ಮಾತ್ರ ತಿಳಿದಿದೆ; ಆದರೆ ‘ಕಲೆಯ ಉದ್ದೇಶ ಕೇವಲ ಕಲೆಗಳ ಪ್ರಸ್ತುತಿ ಮಾಡುವುದು ಇಷ್ಟೇ ಇದೆಯೇ ? ಶಾಸ್ತ್ರಗಳಲ್ಲಿ ಹೇಳಿರುವಂತೆ ಕಲೆ ಮತ್ತು ಅಧ್ಯಾತ್ಮವನ್ನು ಹೇಗೆ ಜೋಡಿಸುವುದು’, ಇಂತಹ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಬರಬಹುದು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಮಾಜಕ್ಕೆ ‘ಕೇವಲ ಕಲೆಗಾಗಿ ಕಲೆಯಲ್ಲ, ಬದಲಾಗಿ ಈಶ್ವರಪ್ರಾಪ್ತಿಗಾಗಿ ಕಲೆ’, ಎಂಬ ಮಾರ್ಗದರ್ಶನವನ್ನು ಮಾಡಿದ್ದಾರೆ. ಕಲಾವಿದರನ್ನು ಕಲೆಯ ಈ ಮೂಲ ಉದ್ದೇಶದತ್ತ ಕರೆದೊಯ್ಯಲು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ‘ಕಲಾವಿದರು ‘ಮನೋರಂಜನೆಯಿಂದ ಆತ್ಮರಂಜನೆಯತ್ತ’ ಹೋಗಲು ಪ್ರತ್ಯಕ್ಷ ಮಾರ್ಗ ಸಿಗಬೇಕೆಂಬ’, ಎಂಬ ಉದ್ದೇಶದಿಂದ ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ಕೃಪೆಯಿಂದಲೇ ಈ ಲೇಖನ ಓದಲು ಸಿಗಲಿದೆ.
೧. ಭಾರತೀಯ ತತ್ತ್ವಜ್ಞಾನದಲ್ಲಿ ಹೇಳಿರುವ ಕಲೆ ಮತ್ತು ಅಧ್ಯಾತ್ಮ ಇವುಗಳ ಸಂಬಂಧ
ಭಾರತೀಯ ತತ್ತ್ವಜ್ಞಾನದಲ್ಲಿ ಕಲೆಯನ್ನು ತುಂಬಾ ವ್ಯಾಪಕ ಅರ್ಥದಲ್ಲಿ ನೋಡಲಾಗಿದೆ. ಕಲೆಯೆಂದರೆ ಕಲಾವಿದನ ಒಳಗಿರುವ ವೈಶಿಷ್ಟ್ಯಪೂರ್ಣ ಕೌಶಲ್ಯ ವ್ಯಕ್ತವಾಗುವುದು. ಇದರಲ್ಲಿ ಕಲಾವಿದನ (ಭೌತಿಕ ಜೀವನದಲ್ಲಿನ) ಮಾಯೆಯ ಅನುಭವದಿಂದ ದಿವ್ಯ ಆತ್ಮಾನುಭೂತಿಯ ಕಡೆಗೆ ಹೋಗುವ ಪ್ರವಾಸವಿರುತ್ತದೆ ಮತ್ತು ಇದರಲ್ಲಿ ರಸನಿಷ್ಪತ್ತಿಗೆ ಅನನ್ಯಸಾಧಾರಣ ಮಹತ್ವವಿದೆ. ಇಂತಹ ಕಲೆಯ ದಿವ್ಯ ಅಭಿವ್ಯಕ್ತಿ ಕಲಾವಿದನಿಗೆ ಮತ್ತು ಪ್ರೇಕ್ಷಕರಿಗೂ ಈಶ್ವರಿತತ್ತ್ವ್ವದ ಅನುಭೂತಿಯನ್ನು ನೀಡುತ್ತದೆ. ಈ ದೈವೀ ಅನುಭೂತಿಯನ್ನು ಪಡೆಯುವುದೆಂದರೆ, ಕಲೆಯ ಮೂಲಕ ಈಶ್ವರಪ್ರಾಪ್ತಿಯ ಕಡೆಗೆ ಸಾಗುವ ಮಾರ್ಗವಾಗಿದೆ. ಉದಾ. ಭಾರತದ ಯಾವುದೇ ಪ್ರಾಚೀನ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ದೇವತೆಯ ಮೂರ್ತಿಯನ್ನು ನೋಡಿ ಭಕ್ತನಿಗೆ ಕ್ಷಣಮಾತ್ರದಲ್ಲಿ ಭಾವಜಾಗೃತಿಯಾಗುತ್ತದೆ ಮತ್ತು ಅವನಿಗೆ ಈಶ್ವರನ ಅಸ್ತಿತ್ವದ ಅರಿವಾಗಿ ಅಂತರ್ಮುಖನಾಗುತ್ತಾನೆ. ಇಲ್ಲಿ ಮೂರ್ತಿಕಾರನು ತನ್ನ ಕಲೆಯ ಮೂಲಕ ಈಶ್ವರನ ಆರಾಧನೆಯನ್ನೇ ಮಾಡುತ್ತಿರುತ್ತಾನೆ ಮತ್ತು ಅವನ ಆರಾಧನೆಯಿಂದ ಭಕ್ತರಿಗೆ ದೇವತ್ವದ ಅನುಭೂತಿ ಬಂದಿರುತ್ತದೆ. ಹೀಗೆಯೇ ಗಾಯನ, ವಾದನ, ನೃತ್ಯ ಮತ್ತು ನಾಟಕ ಈ ಪ್ರಯೋಗಾತ್ಮಕ ಕಲೆಗಳ ವಿಷಯದಲ್ಲಿಯೂ ಆಗುತ್ತದೆ.
ಭಾರತೀಯ ತತ್ವಜ್ಞಾನದಲ್ಲಿ ‘ಕಲೆ’ ಎಂದರೆ ಈಶ್ವರನೊಂದಿಗೆ ಜೋಡಿಸುವ ಒಂದು ಮಹತ್ವದ ಕೊಂಡಿ ಎಂದು ನಂಬಲಾಗಿದೆ; ಆದ್ದರಿಂದಲೇ ಕಲೆ ಮತ್ತು ಅಧ್ಯಾತ್ಮವು ಪರಸ್ಪರ ತುಂಬಾ ಹತ್ತಿರ ಇವೆ.
೨. ಶಾಸ್ತ್ರಗಳಲ್ಲಿ ಹೇಳಿರುವ ಕಲೆ ಮತ್ತು ಅಧ್ಯಾತ್ಮದ ಸಂಬಂಧ
೨ ಅ. ಗಾಯನ : ಗಾಯನವು ಈಶ್ವರಪ್ರಾಪ್ತಿಯ ಒಂದು ಮಾರ್ಗವಾಗಿದೆ. ಇದು ಜೀವದಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುವ ಮಾಧ್ಯಮವಾಗಿದೆ. ಯಾವಾಗ ಗಾಯನದ ಸ್ವರಗಳ ಅಂತಃಕರಣದಿಂದ ಆರ್ತಭಾವದಿಂದ ಮೂಡುತ್ತವೆಯೋ, ಆಗ ಅವು ನೇರವಾಗಿ ಪರಮೇಶ್ವರನೊಂದಿಗೆ ಸಂವಾದವನ್ನು ಸಾಧಿಸುತ್ತವೆ.
೨ ಆ. ವಾದನ : ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಸಂಗೀತಕ್ಕೆ ‘ನಾದಬ್ರಹ್ಮ’ ಎಂದು ಹೇಳಲಾಗಿದೆ, ಅಂದರೆ ಸಂಪೂರ್ಣ ವಿಶ್ವವು ನಾದದಿಂದ ಉತ್ಪನ್ನವಾಗಿದೆ. ಕೊಳಲು, ವೀಣೆ, ಸಿತಾರ, ಮೃದಂಗ ಇಂತಹ ವಾದ್ಯಗಳ ಮಾಧ್ಯಮಗಳಿಂದ ನಾದಬ್ರಹ್ಮನ ಉಪಾಸನೆ ಮಾಡಿ ನಾವು ಆ ಮೂಲ ನಾದದೊಂದಿಗೆ (ನಾದಬ್ರಹ್ಮನೊಂದಿಗೆ) ಏಕರೂಪರಾಗಬಹುದು.
೨ ಇ. ನೃತ್ಯ : ಯಾವ ರೀತಿ ಯಜ್ಞದಲ್ಲಿ ಹವಿರ್ಭಾಗವನ್ನು (ಟಿಪ್ಪಣಿ) ಅರ್ಪಿಸಿ ಈಶ್ವರನನ್ನು ಪ್ರಸನ್ನಗೊಳಿಸಲಾಗುತ್ತದೆಯೋ, ಅದೇ ರೀತಿ ನೃತ್ಯದ ಮಾಧ್ಯಮದಿಂದ ಪದಸಂಚಲನ, ಮುದ್ರೆ, ಅಭಿನಯ ಇವು ಸಾಧನಾ ಸ್ವರೂಪದ ಹವಿರ್ಭಾಗಗಳನ್ನು ಈಶ್ವರಚರಣಗಳಲ್ಲಿ ಅರ್ಪಿಸುವುದೇ ನೃತ್ಯ-ಯಜ್ಞ ಅಥವಾ ನೃತ್ಯ-ಆರಾಧನೆಯಾಗಿದೆ. ಈ ಆರಾಧನೆಯ ಮಾಧ್ಯಮದಿಂದ ಕಲಾವಿದ ಮತ್ತು ಪ್ರೇಕ್ಷಕ ಇಬ್ಬರೂ ಭಾವವಿಶ್ವದಲ್ಲಿ ರಮಿಸಿ ಈಶ್ವರನ ಅನುಭೂತಿಯನ್ನು ಪಡೆಯುತ್ತಾರೆ.
ಟಿಪ್ಪಣಿ – ಹವಿರ್ಭಾಗ : ಯಜ್ಞದಲ್ಲಿ ಆಹುತಿಗೆ ಬಳಸುವ ಸಾಮಗ್ರಿಗಳು
೨ ಈ. ನಾಟಕ : ‘ನಾಟಕ’ವು ಸಾಕಾರ ಭಕ್ತಿಯೋಗವೇ ಆಗಿದೆ. ನಾಟಕವು ಕೇವಲ ಕಲೆಯಾಗಿ ಉಳಿಯದೆ ಅಂತಃಕರಣದಿಂದ ಮಾಡಿದ ಉಪಾಸನೆಯಾದಾಗ, ಕಲಾವಿದನು ನಾಟಕದ ಕಲೆಯ ಮೂಲಕ ಈಶ್ವರನ ಸಾಮೀಪ್ಯವನ್ನು (ಸಾನಿಧ್ಯವನ್ನು) ಅನುಭವಿಸುತ್ತಾನೆ.
‘ಈ ಲೇಖನಮಾಲೆಯ ಮಾಧ್ಯಮದಿಂದ ಎಲ್ಲ ಕಲಾಪ್ರೇಮಿ ಜೀವಗಳಿಗೆ ಕಲೆಯ ಮಾಧ್ಯಮದಿಂದ ಆತ್ಮೋದ್ಧಾರದ ಪ್ರೇರಣೆ ದೊರೆಯಲಿ’, ಎಂದು ಶ್ರೀ ಗುರುಚರಣಗಳಲ್ಲಿ ಶರಣಾಗತ ಭಾವದಿಂದ ಪ್ರಾರ್ಥನೆ.
(ಈ ಲೇಖನಮಾಲೆಯ ಮುಂದಿನ ಕೆಲವು ಭಾಗಗಳಲ್ಲಿ ನಾವು ಶಾಸ್ತ್ರಗಳಲ್ಲಿ ಹೇಳಿರುವ ಕಲೆಗಳ ವಿವಿಧ ಪರಿಭಾಷೆಗಳು ಮತ್ತು ಕಲಾ-ಉಪಾಸಕನಿಗೆ ಸಾಧನೆಗಾಗಿ ಉಪಯುಕ್ತವಾಗುವ ಕಲೆಗಳ ಆಧ್ಯಾತ್ಮಿಕ ಪರಿಭಾಷೆಗಳನ್ನು ನೋಡಲಿದ್ದೇವೆ.)
– ಕು. ತೇಜಲ ಪಾತ್ರೀಕರ (ಸಂಗೀತ ವಿಶಾರದ) (ಆಧ್ಯಾತ್ಮಿಕ ಮಟ್ಟ ಶೇ. ೬೦), ಸಂಗೀತ ಸಮನ್ವಯಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೩.೦೮.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !