
ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದ ಹಿತಾಸಕ್ತಿಗಾಗಿ ಅನೇಕ ದೇಶಗಳ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೇರಿದ್ದರು; ಆದರೆ ಈಗ ಅದರ ವಿರುದ್ಧ ಪರಿಣಾಮಗಳು ಗೋಚರಿಸುತ್ತಿದ್ದು, ಈ ನೀತಿಯಿಂದ ಅಮೆರಿಕಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಅಮೆರಿಕ ವಿವಿಧ ದೇಶಗಳ ಮೇಲೆ ಆಮದು ಸುಂಕವನ್ನು ವಿಧಿಸಿ ಆರು ತಿಂಗಳಾಗಿದೆ. ಆಮದು ಸುಂಕದಿಂದಾಗಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದಾದ್ಯಂತದ ದೇಶಗಳ ಮೇಲೆ ಆಮದು ಸುಂಕವನ್ನು ವಿಧಿಸಿ ಅಮೆರಿಕ ಏನನ್ನು ಸಾಧಿಸಿತು?” ಎಂಬ ಪ್ರಶ್ನೆಯನ್ನು ಸಹ ಅವರು ಮುಂದಿಟ್ಟಿದ್ದಾರೆ.
ಗೀತಾ ಗೋಪಿನಾಥ್ ಅವರು,
೧. ಆಮದು ಸುಂಕ ವಿಧಿಸುವುದರಿಂದ ಅಮೆರಿಕದ ಆದಾಯವು ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ; ಆದರೆ ಅದನ್ನು ಅಮೆರಿಕದ ಕಂಪನಿಗಳಿಂದಲೇ ಸಂಗ್ರಹಿಸಲಾಗಿದೆ.
೨. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ವ್ಯಾಪಾರ ಸಮತೋಲನವನ್ನು ಸುಧಾರಿಸಲು ಆಮದು ಸುಂಕ ನೀತಿಯನ್ನು ಜಾರಿಗೆ ತರಲಾಯಿತು; ಆದರೆ ವ್ಯಾಪಾರ ಸಮತೋಲನದಲ್ಲಿ ಸುಧಾರಣೆಯಾಗಲಿ ಅಥವಾ ಅಮೆರಿಕದ ಉತ್ಪಾದನಾ ವಲಯದ ಮೇಲೆ ಸಕಾರಾತ್ಮಕ ಪರಿಣಾಮವಾಗಲಿ ಆದ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
೩. ಸರಕಾರದ ಈ ನೀತಿಯಿಂದಾಗಿ ದೇಶದಲ್ಲಿ ದುಬಾರಿ (ಹಣದುಬ್ಬರ) ಹೆಚ್ಚಾಗಿದೆ. ಗೃಹೋಪಯೋಗಿ ಉಪಕರಣಗಳು, ಪೀಠೋಪಕರಣಗಳು ಮತ್ತು ಕಾಫಿಯಂತಹ ವಸ್ತುಗಳ ಬೆಲೆಗಳು ಹೆಚ್ಚಿವೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು