ಅಕ್ಟೋಬರ್ ೨೧ ರಂದು ಲಕ್ಷ್ಮಿಪೂಜೆ ಇದೆ.
ಸ್ಪಂದನಶಾಸ್ತ್ರಕ್ಕನುಸಾರ ಯಾವುದೇ ದೇವತೆಯ ಚಿತ್ರ ಅಥವಾ ಮೂರ್ತಿಯು ಅದರ ಮೂಲ ರೂಪಕ್ಕೆ ಎಷ್ಟು ಹೆಚ್ಚು ಹೋಲುತ್ತದೆಯೋ, ಅಷ್ಟು ಆ ಚಿತ್ರದಲ್ಲಿ ಅಥವಾ ಮೂರ್ತಿಯಲ್ಲಿ ಆ ದೇವತೆಯ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತವೆ. ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆ ಅಲ್ಲ, ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ ಎಂದು ಹಾಗೂ ಸ್ಪಂದನಶಾಸ್ತ್ರದ ಅಧ್ಯಯನ ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಂತೆ ಬಿಡಿಸಿದ್ದಾರೆ. ಆ ಚಿತ್ರಗಳಲ್ಲಿ ಆಯಾ ದೇವತೆಗಳ ತತ್ತ್ವ (ಚೈತನ್ಯ) ಬಂದಿದೆ. ಅವು ಸಾತ್ತ್ವಿಕವಾಗಿವೆ.

ವೈಜ್ಞಾನಿಕ ಪರೀಕ್ಷಣೆಯಲ್ಲಿ ಸಕಾರಾತ್ಮಕ ಊರ್ಜೆ ಕಂಡುಬರುವುದು
ದೇವತೆಯ ತತ್ತ್ವವನ್ನು ಆಕರ್ಷಿಸುವ ಯಂತ್ರ, ದೇವತೆಯ ಸಾತ್ತ್ವಿಕ ಚಿತ್ರ ಮತ್ತು ಸಾತ್ತ್ವಿಕ ರಂಗೋಲಿಯಿಂದ ಪ್ರಕ್ಷೇಪಿಸುವ ಸ್ಪಂದನಗಳ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ೧೬.೧೦.೨೦೧೮ ರಂದು ಪರೀಕ್ಷಣೆ ಮಾಡಲಾಯಿತು. ಅದಕ್ಕಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣ ಬಳಸಲಾಯಿತು. ಆಗ ಸನಾತನ-ನಿರ್ಮಿತ ಶ್ರೀ ಲಕ್ಷ್ಮಿದೇವಿಯ ಸಾತ್ತ್ವಿಕ ಚಿತ್ರದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೪.೫೪ ಮೀ. ಕಂಡುಬಂದಿತು.

ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಕೋಟಿ ಕೋಟಿ ನಮನಗಳು
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ರಾಷ್ಟ್ರದ ಏಳಿಗೆಗಾಗಿ ಇಂದು ಮುಂಬಯಿಯಲ್ಲಿ ನಡೆಯಲಿದೆ ಶ್ರೀ ರಾಜಮಾತಂಗಿ ಮಹಾಯಜ್ಞ!