ಭಾರತದಲ್ಲಿ ದೀಪಾವಳಿ ಹಬ್ಬವನ್ನು ಬಹಳ ಹಿಂದಿನಿಂದಲೂ ಆಚರಿಸುತ್ತಾರೆ. ‘ದೀಪೋತ್ಸವ’ ಎಂಬ ಹಬ್ಬದ ಉಲ್ಲೇಖಗಳು ಪುರಾಣ ಕಥೆಗಳಲ್ಲೂ ಕಂಡುಬರುತ್ತವೆ. ಪೇಶ್ವೆಯವರ (ಮಹಾರಾಷ್ಟ್ರದಲ್ಲಿನ ರಾಜಮನೆತನಗಳು) ಕಾಲದಲ್ಲಿ ಮತ್ತು ಸಂತ ಪರಂಪರೆಯಲ್ಲಿ ಕೂಡ ಈ ಹಬ್ಬದ ಉಲ್ಲೇಖಗಳಿವೆ.

ವೈದಿಕ ಸಾಹಿತ್ಯದಲ್ಲಿ ‘ಅಶ್ವಾಯುಜಿ’ ಅಥವಾ ‘ನವಾನ್ನಪೂರ್ಣಿಮಾ’ ಯಜ್ಞಗಳ ಉಲ್ಲೇಖ
ವೈದಿಕ ಸಾಹಿತ್ಯಗಳಲ್ಲಿ ‘ಅಶ್ವಾಯುಜಿ’ ಅಥವಾ ‘ನವಾನ್ನಪೂರ್ಣಿಮಾ’ ಈ ಯಜ್ಞಗಳ ಉಲ್ಲೇಖ ಬರುತ್ತದೆ. ದೀಪಾವಳಿ ಇದರ ಹತ್ತಿರ ಬರುವ ಹಬ್ಬವಾಗಿದೆ. ಹೊಲಗಳಲ್ಲಿ ಹೊಸ ಧಾನ್ಯ ಬಂದಾಗ, ‘ಕಾಮಸೂತ್ರ ಯಕ್ಷರಾತ್ರಿ’ ಎಂಬ ಹೆಸರಿನಲ್ಲಿ ಕುಬೇರನ ಪೂಜೆ, ಅಂದರೆ ‘ಲಕ್ಷ್ಮೀಪೂಜೆ’ಯ ಉಲ್ಲೇಖವಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿಯೂ ‘ದೀಪಾವಳಿ’ ಎಂಬ ಪದದ ಉಲ್ಲೇಖ ಇಲ್ಲದಿದ್ದರೂ, ಅದರ ಬೀಜರೂಪವಿದೆ ಎಂದು ಹೇಳಬಹುದು.
ಪುರಾಣಗಳಲ್ಲಿ ‘ದೀಪಗಳನ್ನು ಹೇಗೆ ಹಚ್ಚಬೇಕು ?’ ಇದರ ಉಲ್ಲೇಖವಿದೆ !
‘ಚತುರ್ವರ್ಗ ಚಿಂತಾಮಣಿ’ ಅಥವಾ ‘ನೀಲಮತಪುರಾಣ’ ಈ ಗ್ರಂಥಗಳಲ್ಲಿ ‘ದೀಪ ಗಳನ್ನು ಹೇಗೆ ಹಚ್ಚಬೇಕು ?’ ಎಂಬುದರ ಬಗ್ಗೆ ವರ್ಣನೆ ಬರುತ್ತದೆ. ಪಾಡ್ಯದ ಬಲಿಯ ಕಥೆಯಲ್ಲಿ ವಾಮನಾವತಾರವಿದೆ, ಆ ‘ಬಲಿಪ್ರತಿಪದೆ’ಯ ಉಲ್ಲೇಖ ಪುರಾಣದಲ್ಲಿ ಬಂದಿದೆ.
ಹನ್ನೊಂದನೇ ಶತಮಾನದಲ್ಲಿ ಮರಾಠಿ ಭಾಷೆಯಲ್ಲಿ (‘ದಿವಾಳಿ’) ದೀಪಾವಳಿ ಶಬ್ದದ ಉಲ್ಲೇಖ ಬಂದಿದೆ
‘ದೀಪಾವಳಿ’ ಎಂಬ ಪದದ ಸ್ಪಷ್ಟ ಉಲ್ಲೇಖ ಹನ್ನೊಂದನೇ ಶತಮಾನದ ನಂತರ ಮರಾಠಿ ಭಾಷೆಯ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ; ಆದರೆ ಅದಕ್ಕಿಂತ ಮೊದಲು ‘ದೀಪೋತ್ಸವ’ ಎಂಬ ಉಲ್ಲೇಖವಿದೆ. ಇದೇ ಕಾಲಾವಧಿಯಲ್ಲಿ ಬರೆದ ‘ಲೀಲಾಚರಿತ್ರೆ’ಯಲ್ಲಿ ಭಾವುಬೀಜ್‌ದ (ಸಹೋದರ ಬಿದಿಗೆ) ವರ್ಣನೆ ಬರುತ್ತದೆ.
ಪೇಶ್ವೆಗಳ ಕಾಲದಲ್ಲಿ ಪಟಾಕಿಗಳನ್ನು ತಂದ ಉಲ್ಲೇಖವಿದೆ !
ಶನಿವಾರವಾಡದಲ್ಲಿ (ಪುಣೆ ಪಟ್ಟಣದ ಒಂದು ಭಾಗ) ಈಗ ದೀಪೋತ್ಸವದ ನಿಮಿತ್ತ ಎಷ್ಟು ದೀಪಗಳನ್ನು ಹಚ್ಚಲಾಗುತ್ತದೆಯೋ, ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ದೀಪಗಳನ್ನು ಪೇಶ್ವೆಯವರ ಕಾಲದಲ್ಲಿ ಹಚ್ಚಲಾಗುತ್ತಿತ್ತು. ಆ ಕಾಲದ ಪಟಾಕಿಗಳ ಹೆಸರುಗಳೂ ಕೂಡ ಕುತೂಹಲಕಾರಿಯಾಗಿದ್ದವು, ಉದಾಹರಣೆಗೆ ಚಂದ್ರಜ್ಯೋತಿ, ನೀಳೆ ಸಿಂಗಟಿ, ಫುಲಬಾಜಿ (ಮರಾಠಿ) ಇತ್ಯಾದಿ. ‘ರಾಜಶ್ರೀ ಪಂತ ನಾನಾ ಸ್ವಾಮಿಗಳು ಆಟವಾಡಲು ಪಟಾಕಿಗಳನ್ನು ತಂದರು’, ಎಂದು ೧೭೪೦ ರ ಉಲ್ಲೇಖದಲ್ಲಿ ಸಿಗುತ್ತದೆ, ಹೀಗೆ ಇತಿಹಾಸತಜ್ಞ (ಇತಿಹಾಸದ ಅಭ್ಯಾಸಕ) ಮಂದಾರ ಲವಾಟೆ ಹೇಳಿದ್ದಾರೆ.
ಸವಾಯಿ ಮಾಧವರಾವ್ ಇವರು ಪರ್ವತದ ಮೇಲೆ ‘ಆತಿಶಬಾಜಿ’ ಮಾಡಿದ ಉಲ್ಲೇಖವಿದೆ !
ಮಹಾದಜಿ ಶಿಂದೆ ಅವರು ರಾಜಸ್ಥಾನದ ಕೋಟಾದಲ್ಲಿ ನಡೆಯುವ ಆತಿಶಬಾಜಿಯ (ಪಟಾಕಿ ಸಿಡಿಸುವ ಹಬ್ಬ) ವರ್ಣನೆ ಬಗ್ಗೆ ಪುಣೆಗೆ ಬಂದು ಹೇಳಿದರು. ನಂತರ ‘ಅಂತಹ ಒಂದು ಮೋಜನ್ನು ಸವಾಯಿ ಮಾಧವರಾವ್ ಪೇಶ್ವೆ ಅವರೂ ನೋಡಬೇಕು,’ ಎಂದು ಬೇಡಿಕೆ ಇಟ್ಟಾಗ, ಪುಣೆಯಲ್ಲಿ ೮ ರಿಂದ ೧೦ ದಿನಗಳ ವರೆಗೆ ಅದರ ಸಿದ್ಧತೆಯನ್ನು ಶಿಂದೆ ಅವರು ಮಾಡಿದರು. ನಂತರ ಶಿಂದೆ ಅವರು ಸವಾಯಿ ಮಾಧವರಾವ್ ಅವರಿಗಾಗಿ ಪರ್ವತದ ಮೇಲೆ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುವ ಉತ್ಸವವನ್ನು ಆಯೋಜಿಸಿದ್ದರು. ‘ಈ ಪಟಾಕಿಗಳ ಉತ್ಸವವನ್ನು ನೋಡಲು ಅನೇಕ ಜನರು ಸಂಜೆಯ ಸಮಯದಲ್ಲಿ ಪರ್ವತದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಳಿತು ಕೊಂಡಿರುತಿದ್ದರು’ ಈ ರೀತಿ ಇತಿಹಾಸತಜ್ಞ ಲವಾಟೆ ಅವರು ಮಾಹಿತಿ ನೀಡಿದ್ದಾರೆ.
ಬ್ರಿಟಿಷರ ಕಾಲದಲ್ಲಿ ಪಟಾಕಿಗಳ ಮಹೋತ್ಸವವನ್ನು ನೋಡಲು ಜನರು ಟಿಕೆಟ್ ತೆಗೆದುಕೊಂಡು ಬರುತ್ತಿದ್ದರು !
೧೮ ನೇ ಶತಮಾನದ ಮೊದಲು ಲಂಡನ್ನಿನ ಅರಮನೆಯಲ್ಲಿ ಚಾರ್ಲ್ಸ್ ಟಾಮಸ್ ಬ್ರಾಕ್ ಪ್ರಾರಂಭಿಸಿದ ಪಟಾಕಿಗಳ ಮಹೋತ್ಸದ ಸಂಪ್ರದಾಯ ೭೦ ವರ್ಷಗಳ ಕಾಲ ಮುಂದುವರೆದಿತ್ತು. ಆರಂಭದಲ್ಲಿ ಶಬ್ದ ಮತ್ತು ಚಿತ್ರಗಳು ಹಾಗೂ ನಂತರ ವ್ಯಕ್ತಿಚಿತ್ರಗಳನ್ನು ಪಟಾಕಿಗಳಿಂದ ರಚಿಸಲಾಯಿತು. ಈ ಪಟಾಕಿಗಳ ಮಹೋತ್ಸವವನ್ನು ನೋಡಲು ೮೦ ಸಾವಿರದವರೆಗೆ ಪ್ರೇಕ್ಷಕರು ಟಿಕೆಟ್ ತೆಗೆದುಕೊಂಡು ಬರುತ್ತಿದ್ದರು. (ಸಂದರ್ಭ : ಮರಾಠಿ ವಿಶ್ವಕೋಶ)
ಸೈನ್ಯದಲ್ಲಿ ಅಲಂಕಾರಿಕ ಪಟಾಕಿಗಳ ಬಳಸುವುದು !
ಯಾವುದಾದರೊಂದು ಪ್ರದೇಶವನ್ನು ಪ್ರಕಾಶಮಾನಗೊಳಿಸಲು ತೇಜಸ್ವಿ ಬೆಳಕು ಮತ್ತು ಸಂದೇಶ ರವಾನೆಗಾಗಿ ಸಾಂಕೇತಿಕ ಬಣ್ಣದ ಬೆಳಕು ಅಥವಾ ಹೊಗೆಯನ್ನು ನಿರ್ಮಿಸಿ, ಅದನ್ನು ಸೈನ್ಯದ ಕಾರ್ಯಗಳಿಗಾಗಿ ಬಳಸಲಾಗುತ್ತಿತ್ತು. ರಷ್ಯಾದ ಮೊದಲ ನಿಕೋಲಸ್ ರಾಜನು ಆಸ್ಟ್ರಿಯನ್ ಮುಂಭಾಗದಲ್ಲಿ ವಾರ್ಸಾದಿಂದ ಸೇಂಟ್ ಪೀಟರ್ಸ್‌ಬರ್ಗ್‌ವರೆಗೆ ಸಂದೇಶ ರವಾನೆಗಾಗಿ ೨೨೦ ಅಲಂಕಾರಿಕ ಪಟಾಕಿ ಕೇಂದ್ರಗಳ ವ್ಯವಸ್ಥೆಯನ್ನು ಮಾಡಿದ್ದನು ಎಂಬ ಉಲ್ಲೇಖ ಇತಿಹಾಸದಲ್ಲಿ ಸಿಗುತ್ತದೆ.
ವಿವಿಧ ಗುಂಪುಗಳ ನಡುವೆ ಮೊದಲೇ ನಿರ್ಧರಿಸಿದ ಸಂಕೇತಗಳಿಗಾಗಿ ಬೆಳಕನ್ನು ಹೊರಸೂಸುವ ಮತ್ತು ಹೊಗೆಯನ್ನು ಉತ್ಪಾದಿಸುವ ವಸ್ತುಗಳನ್ನು ಬಳಸಿ ಸಂದೇಶ ರವಾನೆಗಾಗಿ ಕೂಡ ಅಲಂಕಾರಿಕ ಪಟಾಕಿಗಳನ್ನು ಬಳಸುವ ಪ್ರಯೋಗಗಳು ನಡೆದವು. ಅದೇ ರೀತಿ, ಯುದ್ಧದ ಸಮಯದಲ್ಲಿ ವಿಮಾನ ಇಳಿಯುವಾಗ ರನ್‌ವೇಯನ್ನು ಪ್ರಕಾಶಗೊಳಿಸಲು ಛತ್ರಿಯುಕ್ತ ಜ್ಯೋತಿಗಳನ್ನು ಮತ್ತು ಯುದ್ಧಭೂಮಿಯನ್ನು ಬೆಳಗಿಸಲು ಬೆಳಕನ್ನು ಸೃಷ್ಟಿಸುವ ಪಟಾಕಿಗಳನ್ನು ಬಳಸಲಾಗುತ್ತಿತ್ತು. (ಸಂದರ್ಭ : ಮರಾಠಿ ವಿಶ್ವಕೋಶ) ಭಂಡಾರ್ಕರ್ ಇನ್‌ಸ್ಟಿಟ್ಯೂಟ್ ಮತ್ತು ತಿಲಕ್ ಮಹಾರಾಷ್ಟ್ರ ವಿದ್ಯಾಪೀಠ, ಹಾಗೆಯೆ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ಸಂಸ್ಕೃತ ವಿಷಯದ ಪ್ರಾಧ್ಯಾಪಕಿ ಮತ್ತು ವೈದಿಕ ವಿಷಯದಲ್ಲಿ ಸಂಶೋಧನೆ ನಡೆಸಿದ ಡಾ. ಸುಚೇತಾ ಪರಾಂಜಪೆ ಅವರು ‘ಸಕಾಳ’ ದಿನಪತ್ರಿಕೆಯೊಂದಿಗೆ ಈ ವಿಷಯದ ಸಂದರ್ಭದಲ್ಲಿ ಸಂವಾದ ನಡೆಸಿದರು. ಆ ಸಂದರ್ಭದಲ್ಲಿ ಅವರು ಮೇಲಿನ ಮಾಹಿತಿಯನ್ನು ನೀಡಿದರು.
– ಶ್ರದ್ಧಾ ಕೊಳೆಕರ್ (ಸೌಜನ್ಯ : ದಿನಪತ್ರಿಕೆ ‘ಸಕಾಳ’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು