|
ವಾಷಿಂಗ್ಟನ್ (ಅಮೆರಿಕ) – ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಿದ್ಧರಾಗಿದ್ದಾರೆ. ಅವರು ಇಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ, ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದರು. ಇದರ ಅಡಿಯಲ್ಲಿ ಟ್ರಂಪ್ ಅವರು 20 ಅಂಶಗಳ ಕದನ ವಿರಾಮ ಯೋಜನೆಯ ರೂಪರೇಖೆಯನ್ನು ಸಿದ್ಧಪಡಿಸಿದರು. ಟ್ರಂಪ್ ಅವರು, ಈ ಯೋಜನೆಗೆ ಹಮಾಸ್ ಸಿದ್ಧವಿಲ್ಲದಿದ್ದರೆ, ಕದನ ವಿರಾಮವನ್ನು ರದ್ದುಗೊಳಿಸಲು ಇಸ್ರೇಲ್ ಗೆ ಸಂಪೂರ್ಣ ಹಕ್ಕಿದೆ. ಹೀಗಾದರೆ ನಾವು ಕೂಡ ಇಸ್ರೇಲ್ ಅನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ಇನ್ನೊಂದೆಡೆ ನೆತನ್ಯಾಹು ಅವರು, ಗಾಜಾದಲ್ಲಿ ಶಾಂತಿಯುತ ಆಡಳಿತವಿರುತ್ತದೆ. ಹಮಾಸ್ ನ ನಿಶ್ಯಸ್ತ್ರೀಕರಣ (ಶಸ್ತ್ರಾಸ್ತ್ರಗಳನ್ನು ನಾಶಪಡಿಸುವುದು) ಮಾಡಲಾಗುವುದು ಮತ್ತು ಇಸ್ರೇಲ್ ನಿಧಾನವಾಗಿ ಗಾಜಾದಿಂದ ಹಿಂದೆ ಸರಿಯಲಿದೆ ಎಂದು ಹೇಳಿದರು. ಈ ಕೆಲಸ ಸುಲಭವಾಗಿರಲಿ ಅಥವಾ ಕಠಿಣವಾಗಿರಲಿ, ಅದನ್ನು ಸಾಧಿಸಲಾಗುವುದು ಎಂದು ನೆತನ್ಯಾಹು ಎಚ್ಚರಿಕೆ ನೀಡಿದರು.
🇺🇸 Trump’s 20-point Gaza plan after meeting Netanyahu
📝 Ceasefire, Hamas disarmament, hostages freed in 72 hrs, Gaza run by temporary council with Trump as head
🔁 Israel to withdraw gradually, release 1,950 prisoners⚠ Trump: If Hamas rejects, Israel free to resume war with… pic.twitter.com/K7zsT4kNav
— Sanatan Prabhat (@SanatanPrabhat) October 1, 2025
ಆದಾಗ್ಯೂ, ಹಮಾಸ್ ಈ ಯೋಜನೆಗೆ ಔಪಚಾರಿಕ ಪ್ರಸ್ತಾವನೆಯನ್ನು ಪಡೆಯದ ಕಾರಣ ಶಸ್ತ್ರಾಸ್ತ್ರಗಳನ್ನು ಕೆಳಗಿಡಲು ನಿರಾಕರಿಸಿತು. ಆದರೆ, ಪ್ಯಾಲೆಸ್ಟೀನ್ ಸರಕಾರ ಟ್ರಂಪ್ ಅವರ ಯೋಜನೆಯನ್ನು ಸ್ವಾಗತಿಸಿದೆ.

ಕದನ ವಿರಾಮ ಪ್ರಸ್ತಾವನೆಯಲ್ಲಿನ ಕೆಲವು ಮಹತ್ವದ ಅಂಶಗಳು!
1. ಯೋಜನೆಯಲ್ಲಿ ಗಾಜಾದಲ್ಲಿ ಯುದ್ಧ ನಿಲ್ಲಿಸುವುದು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಮತ್ತು ಗಾಜಾದ ಆಡಳಿತವನ್ನು ನಡೆಸಲು ಒಂದು ತಾತ್ಕಾಲಿಕ ಮಂಡಳಿಯನ್ನು ಸ್ಥಾಪಿಸುವ ಪ್ರಸ್ತಾಪವಿದೆ. ಟ್ರಂಪ್ ಸ್ವತಃ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ, ಹಾಗೆಯೇ ಬ್ರಿಟನ್ ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರೂ ಇದರಲ್ಲಿ ಸೇರಿರುತ್ತಾರೆ.
2. ಇಸ್ರೇಲ್ ಮತ್ತು ಹಮಾಸ್ ನಡುವೆ ಒಪ್ಪಂದವಾದರೆ, ಗಾಜಾದಲ್ಲಿನ ಯುದ್ಧ ತಕ್ಷಣವೇ ಕೊನೆಗೊಳ್ಳುತ್ತದೆ.
3. ಒಪ್ಪಂದದ ಪ್ರಕಾರ, ಇಸ್ರೇಲ್ ಗಾಜಾದಿಂದ ತನ್ನ ಸೈನ್ಯವನ್ನು ನಿಧಾನವಾಗಿ ಹಿಂತೆಗೆದುಕೊಳ್ಳುತ್ತದೆ.
4. ಹಮಾಸ್ 72 ಗಂಟೆಗಳೊಳಗೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ.
5. ಯುದ್ಧದ ಕೊನೆಯಲ್ಲಿ ಇಸ್ರೇಲ್, ಗಾಜಾದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 250 ಜನರನ್ನು ಮತ್ತು ಇನ್ನೂ 1 ಸಾವಿರ 700 ಕೈದಿಗಳನ್ನು ಬಿಡುಗಡೆ ಮಾಡುತ್ತದೆ.
6. ಗಾಜಾದಲ್ಲಿನ ಹಮಾಸ್ ನ ಎಲ್ಲಾ ನೆಲೆಗಳನ್ನು ಮುಚ್ಚಲಾಗುವುದು ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗುವುದು.
7. ಗಾಜಾ ಸರಕಾರ ರಚನೆಯಲ್ಲಿ ಹಮಾಸ್ ಭಾಗವಹಿಸುವುದಿಲ್ಲ.
ಸಂಪಾದಕೀಯ ನಿಲುವುಕಾಫಿರ್ (ಇಸ್ಲಾಂ ವಿರೋಧಿ) ಗಳಾಗಿರುವ ಇಸ್ರೇಲಿಗಳ ವಿರುದ್ಧ ಜಿಹಾದ್ ಮಾಡುವ ಹಮಾಸ್ ಎಂದಾದರೂ ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತದೆಯೇ? ಅದರ ಉದ್ದೇಶ ಇಸ್ರೇಲ್ ಅನ್ನು ‘ದಾರುಲ್ ಇಸ್ಲಾಮ್’ಗೆ (ಇಸ್ರೇಲ್‌ನ ಭೂಮಿ ಇಸ್ಲಾಂನ ಆಧಿಪತ್ಯಕ್ಕೆ) ಪರಿವರ್ತಿಸುವುದು ಆಗಿದೆ. ಆದ್ದರಿಂದ ಟ್ರಂಪ್ ಎಷ್ಟೇ ಹಗಲುಗನಸು ಕಂಡರೂ, ಇತಿಹಾಸವನ್ನು ನೋಡಿದರೆ, ಇಸ್ರೇಲ್ ರಾಷ್ಟ್ರ ಹಿತಾಸಕ್ತಿಗಾಗಿ ಕದನ ವಿರಾಮವನ್ನು ತಿರಸ್ಕರಿಸಿ ಹಮಾಸ್ ಅನ್ನು ಧೂಳೀಪಟ ಮಾಡಿದರೆ ಆಶ್ಚರ್ಯವೇನಿಲ್ಲ! |

ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !