‘ಶಾಲೆಯಲ್ಲಿ ಮಾಡಿದ ಅಧ್ಯಯನ ನೆನಪಿನಲ್ಲಿರುವುದಿಲ್ಲ; ಆದರೆ ಕೆಲವೇ ಕ್ಷಣಗಳ ಅಪಮಾನವು ಜೀವಮಾನಪರ್ಯಂತ ನೆನಪಿನಲ್ಲಿರುತ್ತದೆ’, ಇದರ ಕಾರಣವೇನು ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪೂ. ಭಾವೂಕಾಕಾರವರ ಪರಿಚಯ

ಪೂ. ಅನಂತ ಬಾಳಾಜಿ ಆಠವಲೆ (ಪೂ. ಭಾವೂಕಾಕಾ) ಇವರು ಸಿವಿಲ್‌ (ವಾಸ್ತುಶಿಲ್ಪ) ಎಂಜಿನಿಯರ್‌ [ಬಿ.ಇ. – ಸಿವಿಲ್‌] ಆಗಿದ್ದು ಅವರು ‘ಮಧ್ಯಪ್ರದೇಶ ಲಘು ಉದ್ಯೋಗ ನಿಗಮ’ ಎಂಬ ಸರಕಾರಿ ಸಂಸ್ಥೆಯಲ್ಲಿ ೩೧ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ೧೯೯೩ ರಲ್ಲಿ ಸೇವೆಯಿಂದ ನಿವೃತ್ತರಾಗುವ ಮೊದಲು ‘ಪ್ರಭಾರಿ ಮುಖ್ಯ ಮಹಾಪ್ರಬಂಧಕ’ ಈ ಹುದ್ದೆಯಲ್ಲಿದ್ದರು. ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವಾಗ, ‘ಇಂಜಿನಿಯರ್‌ ಆಗುವುದು’, ಇದು ಕೇವಲ ಜೀವನೋಪಾಯದ ಸಾಧನವಾಗಿದೆ ಮತ್ತು ‘ಬ್ರಹ್ಮಜ್ಞಾನವನ್ನು ಪಡೆಯುವುದು’, ಇದು ಜೀವನದ ಧ್ಯೇಯವಾಗಿದೆ’, ಎಂಬುದು ಅವರ ದೃಷ್ಟಿಕೋನವಾಗಿತ್ತು. ಇದರಿಂದಲೇ ಅವರು ಸಮಯ ಸಿಕ್ಕಾಗಲೆಲ್ಲಾ ತತ್ವಜ್ಞಾನದ ವಿವಿಧ ಗ್ರಂಥಗಳನ್ನು ಓದುತ್ತಿದ್ದರು. ಅವರು ‘ಯೋಗವಾಸಿಷ್ಠ’ದಂತಹ ಸಂಸ್ಕೃತ ಭಾಷೆಯ ಕೆಲವು ಗ್ರಂಥಗಳನ್ನು ಮೂಲ ರೂಪದಲ್ಲಿಯೇ ಅಧ್ಯಯನ ಮಾಡಿದರು ಮತ್ತು ಇಂದಿಗೂ ಅಧ್ಯಯನ ಮಾಡುತ್ತಿದ್ದಾರೆ. ಪೂ. ಭಾವೂಕಾಕಾ ಇವರು ‘ಗೀತಾಜ್ಞಾನದರ್ಶನ’ ಎಂಬ ಅತ್ಯುತ್ತಮ ಗ್ರಂಥವನ್ನು ಬರೆದಿದ್ದಾರೆ. ಈ ಗ್ರಂಥದಲ್ಲಿ ‘ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯದ ತತ್ವಜ್ಞಾನ, ಆತ್ಮಜ್ಞಾನಪ್ರಾಪ್ತಿಯ ವಿವಿಧ ಮಾರ್ಗಗಳು, ಅದಕ್ಕೆ ಅವಶ್ಯಕ ಗುಣಗಳು, ಭಕ್ತಿಯ ಪ್ರಕಾರಗಳು, ಕರ್ಮಫಲನ್ಯಾಯ’, ಇಂತಹ ಎಲ್ಲ ಭಾಗಗಳನ್ನು ಸಾಧನೆಯ ದೃಷ್ಟಿಯಿಂದ ಸರಳ ಭಾಷೆ ಯಲ್ಲಿ ವಿವರಿಸಿದ್ದಾರೆ. ಆದ್ದರಿಂದ, ಸಾಧಕನಿಗೆ ಭಗವದ್ಗೀತೆಯನ್ನು ಅರ್ಥಮಾಡಿ ಕೊಳ್ಳುವುದು ಮತ್ತು ಭಗವದ್ಗೀತೆಯ ನಿಜವಾದ ಸಾರವನ್ನು ತಿಳಿದುಕೊಳ್ಳುವುದು ಸುಲಭವಾಗಿದೆ. ಪೂ. ಭಾವೂಕಾಕಾ ಇವರು ೨೦೦೯ ರಿಂದ ಸನಾತನದ ಜಾಲತಾಣಕ್ಕಾಗಿ ಮರಾಠಿ ಭಾಷೆಯ ಲೇಖನಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡುತ್ತಿದ್ದಾರೆ. ಅವರು ತಮ್ಮ ೯೦ ನೇ ವಯಸ್ಸಿನಲ್ಲಿಯೂ ವಿವಿಧ ನಿಘಂಟುಗಳು (ಡಿಕ್ಷನರಿ) ಮತ್ತು ಉಲ್ಲೇಖ ಗ್ರಂಥಗಳ ಅಧ್ಯಯನ ಮಾಡುವ ಮೂಲಕ ತಮ್ಮ ಅನುವಾದವನ್ನು ಪೂರ್ಣಗೊಳಿಸುತ್ತಿದ್ದಾರೆ.

ಪೂ. ಅನಂತ ಆಠವಲೆ

ಗೋವಾದ ಫೋಂಡಾದಲ್ಲಿರುವ ಸನಾತನದ ೧೦೧ ನೇ ಜ್ಞಾನಯೋಗಿ ಸಂತ ಪೂ. ಅನಂತ ಬಾಳಾಜಿ ಆಠವಲೆ (ಪೂ. ಭಾವೂಕಾಕಾ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಿರಿಯ ಸಹೋದರರು) ಶ್ರಾವಣ ಕೃಷ್ಣ ಏಕಾದಶಿಯಂದು ಅವರ (೧೯.೦೮.೨೦೨೫) ೯೦ ನೇ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ಪೂ. ಅನಂತ ಆಠವಲೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನಡುವೆ ೫.೧೦.೨೦೨೪ ರಂದು ‘ಶಾಲೆಯಲ್ಲಿ ಮಾಡಿದ ಅಧ್ಯಯನ ನೆನಪಿನಲ್ಲಿರುವುದಿಲ್ಲ; ಆದರೆ ಕೆಲವೇ ಕ್ಷಣಗಳ ಅಪಮಾನವು ಜೀವಮಾನಪರ್ಯಂತ ನೆನಪಿನಲ್ಲಿರುತ್ತದೆ’, ಇದರ ಬಗ್ಗೆ ನಡೆದ ಸಂಭಾಷಣೆಯನ್ನು ಇಲ್ಲಿ ಕೊಡಲಾಗಿದೆ.

ಪೂ. ಅನಂತ ಆಠವಲೆ : ‘ನನಗೆ ಮನಸ್ಸಿನ ಸ್ಮರಣೆಯ ಬಗ್ಗೆ ಒಂದು ಪ್ರಶ್ನೆಯನ್ನು ಕೇಳುವುದಿದೆ. ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ‘ಎರಡ ಒಂದ್ಲೆ ಎರಡು, ಎರಡ ಎರಡ್ಲೆ ನಾಲ್ಕು, ಎರಡ ಮೂರಲೆ ಆರು’ ಹೀಗೆ ಮಗ್ಗಿಗಳನ್ನು ಬಾಯಿಪಾಠ ಮಾಡುತ್ತಿದ್ದೆವು. ಪುನಃ ಪುನಃ ಬಾಯಿಪಾಠ ಮಾಡುತ್ತಿದ್ದೆವು, ಆಗ ಅದು ನೆನಪಿನಲ್ಲಿರುತ್ತಿತ್ತು. ನಾವು ಶಾಲೆಯಲ್ಲಿ, ವಿಶ್ವವಿದ್ಯಾಲಯದಲ್ಲಿ (ಕಾಲೇಜ್‌ನಲ್ಲಿ) ಅಭ್ಯಾಸ ಮಾಡುತ್ತೇವೆ. ಮುಂದಿನ ಕಾಲೇಜ್‌ನಲ್ಲಿ ಪೋಸ್ಟ್ ಗ್ರ್ಯಾಜ್ಯುಯೇಶನ್‌ಗಾಗಿ ಅಭ್ಯಾಸ ಮಾಡುತ್ತೇವೆ. ಅವೆಲ್ಲವೂ ನಮಗೆ ನೆನಪಿನಲ್ಲಿರಲು ಪುನಃ ಪುನಃ ಓದಬೇಕಾಗುತ್ತದೆ; ಆದರೆ ತಾರುಣ್ಯದಲ್ಲಿ ಯಾರಾದರೂ ನಮ್ಮನ್ನು ಅವಮಾನಿಸಿದ್ದರೆ, ಅದು ಜೀವಮಾನಪರ್ಯಂತ ನೆನಪಿನಲ್ಲಿರುತ್ತದೆ. ಒಂದೇ ಬಾರಿ, ಒಂದು ಕ್ಷಣದಲ್ಲಿ ನಮ್ಮ ಅವಮಾನವಾಗುತ್ತದೆ; ಆದರೆ ಅದು ನಮಗೆ ಶಾಶ್ವತವಾಗಿ ನೆನಪಿನಲ್ಲಿರುತ್ತದೆ. ಹೀಗೇಕೆ ? ಯಾವುದು ಬೇಕಾಗಿದೆಯೋ, ಅದನ್ನು ನೆನಪಿನ್ನಲ್ಲಿಡಲು ಬಹಳಷ್ಟು ಪರಿಶ್ರಮ ಪಡಬೇಕಾಗುತ್ತದೆ. ಯಾವುದು ಬೇಡವೋ, ಅದು ನೆನಪಿನಲ್ಲಿರುತ್ತದೆ. ಹೀಗೇಕೆ ? ನನಗೆ ನಿಜವಾಗಿಯೂ ಉತ್ತರ ಗೊತ್ತಿಲ್ಲ. ನಿಮಗೂ ಗೊತ್ತಿಲ್ಲ ಎಂದು ಮಾತ್ರ ಉತ್ತರ ಕೊಡಬೇಡಿ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು. ಆದ ಅವಮಾನ ಮಾತ್ರ ನೆನಪಿನಲ್ಲಿರುತ್ತದೆ. ಮನುಷ್ಯನ ಜೀವನದಲ್ಲಿ ಹೀಗೆಕಾಗುತ್ತದೆ ?

ಪೂ. ಅನಂತ ಆಠವಲೆ : ಅಧ್ಯಯನ ಮಾಡಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವೇ ಕ್ಷಣಗಳಿಗಾಗಿ ಆದ ಅವಮಾನವು ಜೀವಮಾನಪರ್ಯಂತ ನೆನಪಿನಲ್ಲಿರುತ್ತದೆ. ಮಗ್ಗಿಗಳನ್ನು ಸತತ ೨-೩ ವರ್ಷಗಳ ಕಾಲ ನಿರಂತರವಾಗಿ ಬಾಯಿಪಾಠ ಮಾಡಿದರೂ, ಕೆಲವು ವರ್ಷಗಳ ನಂತರ ಮರೆತುಹೋಗುತ್ತವೆ. ಹೀಗೇಕಾಗುತ್ತದೆ ? ನಾನು ೪೦-೫೦ ವರ್ಷಗಳ ಕಾಲ ಭಗವದ್ಗೀತೆಯನ್ನು ಓದಿರಬಹುದು. ಈಗ ಇತ್ತೀಚೆಗೆ ೨-೩ ತಿಂಗಳು ನನಗೆ ಸಮಯ ಸಿಕ್ಕಿಲ್ಲ. ಈಗ ವೃದ್ಧಾಪ್ಯದಿಂದ ಅದು ನೆನಪಿನಲ್ಲಿರುವುದಿಲ್ಲ. ನನಗೆ ಶ್ಲೋಕಗಳು ನೆನಪಾಗುತ್ತವೆ; ಆದರೆ ಅವು ಕೂಡಲೇ ನೆನಪಾಗುವುದಿಲ್ಲ. ಈ ಮೊದಲು ಯಾವ ಕ್ಷಣ ಯಾವ ಶ್ಲೋಕ ಬೇಕಾಗುತ್ತಿತ್ತೋ, ಅದು ನನಗೆ ಕೂಡಲೇ ನೆನಪಾಗುತ್ತಿತ್ತು. ನನಗೆ ಭಗವದ್ಗೀತೆಯಲ್ಲಿ ಆಸಕ್ತಿ (ಇಟಿಣಎಡಿಎಸ್ಣ) ಇಲ್ಲವೆಂದಿಲ್ಲ ಅಥವಾ ನನ್ನ ವಿಷಯ ಮುಗಿದಿದೆ ಎಂದೂ ಇಲ್ಲ. ಭಗವದ್ಗೀತೆಯೇ ನನ್ನ ಆಧ್ಯಾತ್ಮಿಕ ಜೀವನವಾಗಿದೆ, ಆದರೂ ನಾನು ಮರೆಯುತ್ತೇನೆ. ಹೀಗೇಕೆ ? ಮತ್ತು ಬೇಡವಾದ ವಿಷಯ ಗಳು ನೆನಪಿನಲ್ಲಿರುತ್ತವೆ ಹೀಗೆಕೆ ? ನನಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಹೇಳಿ. ಅವನು ನನ್ನನ್ನು ಅವಮಾನಿಸಿದನು, ಇದು ಆ ಮನುಷ್ಯನ ಹೊಸ ಕ್ರಿಯಮಾಣ ವಾಗಿದೆ, ‘ನಾನು ೨೦ ವರ್ಷದ ಯುವಕನಿರುವಾಗ ಅವನು ನನ್ನನ್ನು ಅವಮಾನಿಸಿದನು’, ಎಂಬುದು ಇಂದಿಗೂ ನೆನಪಿನಲ್ಲಿರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅಂದರೆ ಯಾರಾದರೂ ಏನಾದರು ಕೆಲವು ಕ್ಷಣ ಮಾತನಾಡಿರುವುದು ಜೀವಮಾನಪರ್ಯಂತ ನೆನಪಿನಲ್ಲಿರುತ್ತದೆ. ಹೀಗೇಕೆ ? ೧೫ ಸೆಕೆಂಡ್‌ಗಳಲ್ಲಿ ಅಹಂ(ಸ್ವಾಭಿಮಾನಕ್ಕೆ)ಗೆ ಆದ ನೋವು ನಮಗೆ ಶಾಶ್ವತವಾಗಿ ಏಕೆ ನೆನಪಿನಲ್ಲಿರುತ್ತದೆ ? ಅದು ಅಹಂನ ಸ್ತರದಲ್ಲಿ ಸಂಭವಿಸಿರುತ್ತದೆ. ಆದ್ದರಿಂದ, ಅದರ ಪರಿಣಾಮವು ಸೂಕ್ಷ್ಮ ಅಂತರ್ಮನದ ವರೆಗೆ ಹೋಗುತ್ತದೆ ಮತ್ತು ಅದು ದೀರ್ಘ ಕಾಲದ ವರೆಗೆ ಇರುತ್ತದೆ. ಉಳಿದ ವಿಷಯಗಳು ಬುದ್ಧಿಯ ಸ್ತರದಲ್ಲಿರುತ್ತವೆ. ಆದ್ದರಿಂದ, ಬುದ್ಧಿಗನುಸಾರ ಅದರ ಭಾಗ ಕಡಿಮೆ-ಹೆಚ್ಚು ಆಗುತ್ತಾ ಹೋಗುತ್ತದೆ. ಯಾವಾಗ ವ್ಯಕ್ತಿಗೆ ತನಗಾದ ಅಪಮಾನವು ನೆನಪಿನಲ್ಲಿರುತ್ತದೆಯೋ, ಆಗ ‘ಅವನಲ್ಲಿ ಅಹಂ ಬಹಳ ಇದೆ’ ಎಂದು ಗಮನಕ್ಕೆ ಬರುತ್ತದೆ. ಈಗ ದೊಡ್ಡವರಾದ ಮೇಲೆ ಯಾರಾದರೂ ನಮ್ಮನ್ನು ಅವಮಾನಿಸಿದರೆ, ಯಾರಾದರೂ ನಮ್ಮನ್ನು ಬೈದರೆ, ಅದರ ಬೆಲೆ ಏನು ? ನಾವು ದುರ್ಲಕ್ಷ್ಯ ಮಾಡುತ್ತೇವಲ್ಲ ? ಸಂತ ಮಹಾತ್ಮರಿಗೆ ಎಷ್ಟೇ ಬೈದರೂ, ಅವರಿಗೆ ಆ ಬಗ್ಗೆ ಏನೂ ಅನಿಸುವುದಿಲ್ಲ; ಏಕೆಂದರೆ ಅವರಲ್ಲಿ ಅಹಂ ಇರುವುದಿಲ್ಲ. ‘ಅವನು ನನಗೆ ಹೀಗೆ ಹೇಳಿದನು’ ಎಂಬ ವಿಚಾರವನ್ನೇ ಅವರು ಮಾಡುವುದಿಲ್ಲ. ಅವರಿಗೆ, ‘ಎದುರಿಗಿರುವವನು ಏನಾದರೂ ಹೇಳಲಿ. ಅವನು ಮತ್ತು ಅವನ ದೇವರು ! ಭಗವಂತನು ಅದನ್ನು ನೋಡಿಕೊಳ್ಳುತ್ತಾನೆ’ ಎಂದು ಅನಿಸುತ್ತದೆ.

ಪೂ. ಅನಂತ ಆಠವಲೆ : ಇಲ್ಲ. ನನಗೆ ಅರ್ಥವಾಗಲಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅಂದರೆ ಮನಸ್ಸು, ಬುದ್ಧಿ ಮತ್ತು ಅಹಂ ಈ ಮೂರು ಸ್ತರಗಳನ್ನು ನೋಡಿದಾಗ, ‘ಓದುವುದು, ನೆನಪಿನಲ್ಲಿಟ್ಟುಕೊಳ್ಳುವುದು’ ಇದು ಬುದ್ಧಿಯ ಸ್ತರದಲ್ಲಾಗುತ್ತದೆ. ಆದ್ದರಿಂದ, ಅದರ ಮಿತಿ ಕಡಿಮೆಯಿರುತ್ತದೆ. ಯಾವುದಾದರೊಂದು ಪ್ರಸಂಗ ನಡೆದರೆ, ಅದು ಮನಸ್ಸಿನ ಸ್ತರದಲ್ಲಿ ಕೆಲವು ವರ್ಷಗಳ ವರೆಗೆ ಇರುತ್ತದೆ, ಆ ಭಾವನೆ ಜಾಗೃತವಾಗಿರುತ್ತದೆ ಮತ್ತು ಅವಮಾನ ಇತ್ಯಾದಿ ಅಹಂನ ಸ್ತರಕ್ಕೆ ಹೋಗುತ್ತವೆ. ಅದು ಸೂಕ್ಷ್ಮ ಮತ್ತು ಅಂತರ್ಮನದವರೆಗೆ ಹೋಗುತ್ತದೆ. ಆದ್ದರಿಂದ, ಅದರ ನೋವು ಶಾಶ್ವತವಾಗಿ ಉಳಿಯುತ್ತದೆ, ಪರಿಣಾಮವು ಉಳಿಯುತ್ತದೆ. ಯಾರಲ್ಲಿ ಅಹಂ ಇಲ್ಲವೋ, ಯಾರು ಸಾಧನೆಯಲ್ಲಿ ಮುಂದೆ ಹೋಗಿದ್ದಾರೆಯೋ, ಅವರು ಆ ಕ್ಷಣವೇ ಅದನ್ನು ಮರೆತುಬಿಡುತ್ತಾರೆ.

ಪೂ. ಅನಂತ ಆಠವಲೆ : ಚೆನ್ನಾಗಿ ಹೇಳಿದಿರಿ. ನಾನು ಅದನ್ನೇ ಬೇರೆ ಮಾತುಗಳಲ್ಲಿ ಹೇಳುತ್ತೇನೆ. ಮನುಷ್ಯನ ಅಂತಃಕರಣವು ಮನಸ್ಸು, ಬುದ್ಧಿ ಮತ್ತು ಅಹಂಕಾರ ಇವುಗಳಿಂದಾಗಿದೆ. ಇದರಲ್ಲಿನ ಅಹಂಕಾರವು ನಮ್ಮಲ್ಲಿ ಭಗವಂತನ ಅಂಶವಾಗಿರುವ ಆತ್ಮನಿಗೆ ಎಲ್ಲಕ್ಕಿಂತ ಹೆಚ್ಚು ಸಮೀಪವಾಗಿದೆ. ಈ ಅಹಂಕಾರವೆಂದರೆ ‘ನಾನು’ ಎಂಬ ಭಾವನೆ ಆತ್ಮಕ್ಕೆ ಜೋಡಿಸಲ್ಪಟ್ಟಿರುತ್ತದೆ. ನಮ್ಮ ಅವಮಾನವಾದಾಗ, ನಮ್ಮ ಅಹಂಕಾರಕ್ಕೆ ಅದರ ನೋವು ಆಗುತ್ತದೆ. ನಮ್ಮ ಸನ್ಮಾನವಾದಾಗ, ನಮ್ಮ ಅಹಂಕಾರ ಸಂತೋಷಪಡುತ್ತದೆ. ಇವೆರಡೂ ವಿಷಯಗಳ ಅರಿವು ಜೀವಾತ್ಮಕ್ಕೆ ಆಗುವುದರಿಂದ ಮತ್ತು ಆತ್ಮವು ನಿತ್ಯವಾಗಿರುವುದರಿಂದ ಆ ಘಟನೆಗಳು ಮರೆತುಹೋಗುವುದಿಲ್ಲ. ಆತ್ಮಜ್ಞಾನದ ಪ್ರತ್ಯಕ್ಷ ಅನುಭವವು ಜೀವಾತ್ಮಕ್ಕೆ ಆಗುವುದರಿಂದ ಆತ್ಮಜ್ಞಾನವಾದರೆ, ಅದು ಎಂದಿಗೂ ಮರೆತುಹೋಗುವುದಿಲ್ಲ. ನಾವು ವಿದ್ಯಾಲಯ-ವಿಶ್ವವಿದ್ಯಾಲಯಗಳಲ್ಲಿ ಏನು ಅಧ್ಯಯನ ಮಾಡುತ್ತೇವೆಯೋ ಅದನ್ನು ಬುದ್ಧಿಯಿಂದ ಮಾಡುತ್ತಿರುತ್ತೇವೆ. ಅದು ಜೀವಾತ್ಮಕ್ಕೆ ಅಂಟಿಕೊಳ್ಳದಿರುವುದರಿಂದ ಮರೆತುಹೋಗಬಹುದು. ವೃದ್ಧಾಪ್ಯ ದಲ್ಲಿ ಮರೆವು ಹೆಚ್ಚಾಗುವುದರ ಹಿಂದೆ ಶಾರೀರಿಕÀ ಕಾರಣಗಳು ಇರುತ್ತವೆ. ಅದಕ್ಕೆ ಆತ್ಮದೊಂದಿಗೆ ಸಂಬಂಧ ಇರುವುದಿಲ್ಲ.