ವಿವಿಧ ತೊಂದರೆಗಳಿಗೆ ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಗನುಸಾರ ಜಪವನ್ನು ಹುಡುಕುವುದರಿಂದಾಗುವ ಲಾಭಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪ್ರಶ್ನೆ : ‘ಗುರುಗಳು ಶಿಷ್ಯನಿಗೆ ಗುರುಮಂತ್ರ ನೀಡಿದರೆಂದರೆ, ಅದರಿಂದ ಶಿಷ್ಯನ ಸರ್ವಾಂಗೀಣ ಕಲ್ಯಾಣ ಆಗುತ್ತದೆ. ಇದಕ್ಕೆ ಬದಲಾಗಿ ಸನಾತನ ಸಂಸ್ಥೆಯಲ್ಲಿ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ತೊಂದರೆಗಳನ್ನು ದೂರಗೊಳಿಸಲು ಪ್ರತಿ ೧೫ ದಿನಗಳಿಗೊಮ್ಮೆ ‘ಪ್ರಾಣಶಕ್ತಿವಹನ ಉಪಚಾರಪದ್ಧತಿ’ಗನುಸಾರ ಜಪವನ್ನು ಹುಡುಕಬೇಕಾಗುತ್ತದೆ. ಹೀಗೇಕೆ ?

ಶ್ರೀ. ರಾಮ ಹೊನಪ

೧. ಸಾಧಕರಿಗಾಗುತ್ತಿರುವ ತೊಂದರೆಗಳ ಸ್ವರೂಪ

೧ ಅ. ಮೋಕ್ಷಾರಿ : ‘ಅರಿ’, ಈ ಶಬ್ದದ ಅರ್ಥ ‘ಶತ್ರು’ ಎಂದಾಗಿದೆ. ಸಾಧಕನ ಮೋಕ್ಷಪ್ರಾಪ್ತಿಯಲ್ಲಿ ಅಡೆತಡೆಗಳನ್ನುಂಟು ಮಾಡುವ ಶತ್ರುಗಳಿಗೂ ‘ಮೋಕ್ಷಾರಿ’, ಎನ್ನುತ್ತ್ತಾರೆ. ಸಾಧಕನ ಆಧ್ಯಾತ್ಮಿಕ ಪ್ರಗತಿಯಾದ ನಂತರ ಅವನ ಸಾತ್ತ್ವಿಕತೆಯು ಅನೇಕ ಪಟ್ಟು ಹೆಚ್ಚಾಗುತ್ತದೆ. ಈ ಸಾಧಕನು ಸಮಾಜದಲ್ಲಿ ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡಿದಾಗ ಜನರು ಸಾಧನೆಯತ್ತ ಹೊರಳುತ್ತಾರೆ. ಆದ್ದರಿಂದ ಕೆಟ್ಟ ಶಕ್ತಿಗಳಿಗೆ ಕಾರ್ಯ ಮಾಡಲು ಅಡಚಣೆಯಾಗತೊಡಗುತ್ತದೆ. ‘ಹೀಗಾಗಬಾರದು’, ಎಂದು ಕೆಟ್ಟ ಶಕ್ತಿಗಳು ಸಾಧಕನ ಸಾಧನೆಯಲ್ಲಿ ಸೂಕ್ಷ್ಮದಿಂದ ಸತತ ಅಡಚಣೆ ತರುತ್ತವೆ.

೧ ಆ. ಆಪ್ತಶತ್ರು : ಸಾಧಕನ ಹತ್ತಿರದ ಅಥವಾ ಸಂಬಂಧಿಕರಲ್ಲಿನ ವ್ಯಕ್ತಿಗಳು ಕೆಲವು ಕಾರಣಗಳಿಂದ ಸಾಧಕನ ಶತ್ರುಗಳಾಗಿರುತ್ತಾರೆ. ಅವರಿಗೆ ‘ಆಪ್ತಶತ್ರು’,  ಎನ್ನುತ್ತಾರೆ. ಮೃತ್ಯುವಿನ ನಂತರ ಈ ಶತ್ರು ಗಳು ಸಾಧಕನಿಗೆ ಸೂಕ್ಷ್ಮದಿಂದ ವಿವಿಧ ರೀತಿಯ ತೊಂದರೆ ಕೊಡುತ್ತಿರುತ್ತಾರೆ.

೧ ಇ. ಪೀಡೆ : ಹಿಂದಿನ ಜನ್ಮಗಳಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಸಾಧಕನಿಗೆ ಕರ್ಮದೋಷಗಳು ತಗಲಿರುತ್ತವೆ. ಸಾಧನೆಯನ್ನು ಮಾಡುವಾಗ ಈ ಕರ್ಮ ದೋಷಗಳು ಉಕ್ಕಿಬರುತ್ತವೆ. ಆದ್ದರಿಂದ ಸಾಧಕನಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಸ್ವರೂಪದಲ್ಲಿನ ಪೀಡೆಗಳು ಆಗುತ್ತಿರುತ್ತವೆ. ಈ ಪೀಡೆಗಳು ಸಾಧನೆಯಲ್ಲಿ ಅಡಚಣೆಗಳನ್ನುಂಟು ಮಾಡುತ್ತವೆ.

೨. ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಗನುಸಾರ ಜಪವನ್ನು ಹುಡುಕುವುದರ ಮಹತ್ವ !

೨ ಅ. ಪರಾತ್ಪರ ಗುರು ಡಾ. ಆಠವಲೆಯವರು ಕಾಲಕ್ಕನುಸಾರ ‘ಪ್ರಾಣಶಕ್ತಿವಹನ ಉಪಾಯ ಪದ್ಧತಿ’ಯಿಂದ ಸಾಧಕರಿಗೆ ಸಾಧನೆಗಾಗಿ ಸಂಜೀವನಿ ಲಭ್ಯಗೊಳಿಸುವುದು : ಸದ್ಯ ಹೆಚ್ಚಾಗುತ್ತಿರುವಆಧ್ಯಾತ್ಮಿಕ ತೊಂದರೆಗಳ ತೀವ್ರತೆಯಿಂದ ಸಾಧಕನಿಗೆ ಸಾಧನೆ ಮಾಡುವಾಗ ಅಸಂಖ್ಯ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾಧಕನ ಆಧ್ಯಾತ್ಮಿಕ ಪ್ರಗತಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ. ವಿವಿಧ ತೊಂದರೆಗಳಿಗೆ ಒಂದೇ ಜಪವನ್ನು ದೀರ್ಘಕಾಲದ ಮಾಡಿದರೆ ಅದರ ಪರಿಣಾಮವಾಗಲು ಸಮಯ ಬೇಕಾಗುತ್ತದೆ.

ಸದ್ಯದ ಕಾಲವು ಪ್ರತಿಕೂಲವಾಗಿದೆ. ಅಲ್ಲದೇ ಪ್ರತಿಯೊಬ್ಬರ ಸರಾಸರಿ ಜೀವಿತಾವಧಿ ಸೀಮಿತವಾಗಿದೆ. ಆದ್ದರಿಂದ ‘ಸಾಧಕರ ತೊಂದರೆಗಳು ಬೇಗ ದೂರವಾಗಿ ಅವರ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗಬೇಕು’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರೀ ಪ್ರೇರಣೆಗನುಸಾರ ಸಾಧಕರಿಗಾಗಿ’ಪ್ರಾಣಶಕ್ತಿವಹನ ಉಪಾಯಪದ್ಧತಿ’ಯನ್ನು ಹುಡುಕಿದ್ದಾರೆ. ಈ ಉಪಾಯಪದ್ಧತಿಯು ಸಾಧಕರಿಗಾಗಿ ಸಂಜೀವಿನಿಯಂತೆ ಕಾರ್ಯ ಮಾಡುತ್ತದೆ. ತನಗಾಗುತ್ತಿರುವ ತೊಂದರೆಯು ಈ ಉಪಾಯ ಪದ್ಧತಿಯಿಂದ ಯಾವ ನಾಮಜಪ ಮಾಡಿದರೆ ದೂರವಾಗುವುದು ?’, ಎಂಬುದನ್ನು ಸಾಧಕನಿಗೆ ಹುಡುಕಲು ಸಾಧ್ಯವಾಗಿ ‘ಸಾಧಕನ ತೊಂದರೆ ಬೇಗ ಕಡಿಮೆಯಾಗುತ್ತದೆ ಮತ್ತು ಅವನ ಶೀಘ್ರ ಆಧ್ಯಾತ್ಮಿಕ ಪ್ರಗತಿಯೂ ಆಗುವುದು’, ಇದು ಸಾಧ್ಯವಾಗುತ್ತದೆ.

೨ ಆ. ತೊಂದರೆಗಳನ್ನು ನಿವಾರಿಸಲು ಗುರುಕೃಪೆಯಿಂದ ಸ್ವಾವಲಂಬಿ ಆಗುವುದು : ಸಾಧಕನು ‘ಪ್ರಾಣಶಕ್ತಿವಹನ ಉಪಚಾರಪದ್ಧತಿ’ಯಿಂದ ತೊಂದರೆಯ ಸ್ವರೂಪವನ್ನು ಗುರುತಿಸಿ ಅದಕ್ಕಾಗಿ ನಿಖರವಾದ ಜಪವನ್ನು ಹುಡುಕುತ್ತಾನೆ. ಇದರಿಂದ ಸಾಧಕನಲ್ಲಿನ ‘ಸೂಕ್ಷ್ಮದ ಅರಿವು ಮತ್ತು ತೊಂದರೆಗಳನ್ನು ನಿವಾರಣೆ’ ಎಂಬ ಕ್ಷಮತೆಯಲ್ಲಿ ಹೆಚ್ಚಳವಾಗುತ್ತವೆ. ಇಂತಹ ಸಾಧಕನು ತೊಂದರೆಗಳಿಂದ ಹೊರ ಬರಲು ಇತರ ಯಾರ ಮೇಲೆ ಅವಲಂಬಿಸದೇ ಗುರುಕೃಪೆಯಿಂದ ಸ್ವಾವಲಂಬಿಯಾಗತೊಡಗುತ್ತಾನೆ.’

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೬.೨೦೨೫)