ಆಧುನಿಕ ಜೀವನಶೈಲಿಯಿಂದ ಬರುವ ಕಾಯಿಲೆಗಳಿಗೆ ಪರಿಹಾರಾತ್ಮಕ ಯೋಗಾಭ್ಯಾಸ !

ವರ್ಟಿಗೋ

(ಕುತ್ತಿಗೆ ಅಥವಾ ಕಿವಿಯ ಸಮಸ್ಯೆಗಳಿಂದ ತಲೆಸುತ್ತು ಬರುವುದು)

ಲಕ್ಷಣಗಳು : ತಲೆಸುತ್ತು ಬರುವುದು, ಸುತ್ತಮುತ್ತಲಿನ ವಸ್ತುಗಳು ತಿರುಗುತ್ತಿರುವಂತೆ ಅನಿಸುವುದು, ವಾಕರಿಕೆ ಬಂದಂತೆ ಅನಿಸುವುದು, ವಾಂತಿ ಆಗುವುದು, ಕೇಳುವ ಸಾಮರ್ಥ್ಯ ಕಡಿಮೆಯಾಗುವುದು, ತಲೆನೋವು, ಕಿವಿಯಲ್ಲಿ ಸಂವೇದನೆಗಳ ಅರಿವಾಗುವುದು

ಉಪಾಯಗಳು :

೧. ಅನುಲೋಮ-ವಿಲೋಮ ಕ್ರಿಯೆ (೫೦ ಬಾರಿ)

೨. ಭಸ್ತ್ರಿಕಾ (೫೦ ಬಾರಿ)

೩. ಭ್ರಾಮರಿ ಕ್ರಿಯೆ (೧೫ ಬಾರಿ)

೪. ಜಾಲಂಧರ ಬಂಧ (೫ ಸೆಕೆಂಡು, ೧೫ ಬಾರಿ)

೫. ಮೂಲಬಂಧ (೫ ಸೆಕೆಂಡುಗಳು, ೧೦ ಬಾರಿ)

೬. ನೀರಾಲಂಬಾಸನ

೭. ಮುಂದೆ ನಡೆಯುವುದು ಮತ್ತು ಹಿಂದೆ ನಡೆಯುತ್ತಾ ಬರುವುದು (ಎಲ್ಬೋ ವಾಕಿಂಗ್) (೧೦ ಬಾರಿ)

೮. ಕುತ್ತಿಗೆಯ ವ್ಯಾಯಾಮ ನಿಧಾನವಾಗಿ ಮಾಡುವುದು

೯. ಕುಳಿತುಕೊಂಡು ಕಾಲುಗಳನ್ನು ಮುಂದೆ ಚಾಚಿ, ಕಾಲುಗಳ ಸೂಕ್ಷ್ಮ ವ್ಯಾಯಾಮಗಳನ್ನು ಮಾಡುವುದು

೧೦. ವಿಪರೀತ ಕರಣಿ (ಕೆಳಗೆ ಮಲಗಿ ಕುರ್ಚಿಯ ಮೇಲೆ ಎರಡು ಕಾಲುಗಳನ್ನು ಎತ್ತಿಡುವುದು. ಕಣ್ಣುಗಳ ಮೇಲೆ ಬೆಡ್ ಶೀಟ್ ಅಥವಾ ಮೃದುವಾದ ಬಟ್ಟೆಯ ಮಡಿಕೆಯನ್ನು ಇಟ್ಟುಕೊಂಡು ಶಾಂತವಾಗಿ ಮಲಗಿರುವುದು) (೨೦ ನಿಮಿಷಗಳು)

೧೧. ಸೂರ್ಯನಮಸ್ಕಾರ (ಸಂಖ್ಯೆ : ೧೮)

೧೨. ತಾಡಾಸನ, ವೃಕ್ಷಾಸನ, ಉತ್ಕಟ ಆಸನ, ಮೃದಂಗಾಸನ, ನಟರಾಜ ಆಸನ (೨ ನಿಮಿಷಗಳು)

೧೩. ಉಷ್ಟ್ರಾಸನ (೧೦ ಬಾರಿ)

೧೪. ಅರ್ಧಮತ್ಸ್ಯೇಂದ್ರಾಸನ (೨ ಬದಿ ತಲಾ ೩ ನಿಮಿಷ)

೧೫. ಸೇತುಬಂಧಾಸನ (೧೦ ಬಾರಿ)

೧೬. ಉಜ್ಜಯೀ ಪ್ರಾಣಾಯಾಮ (೧೫-೨೦ ಬಾರಿ)

೧೭. ಭ್ರಾಮರಿ ಪ್ರಾಣಾಯಾಮ (೫ ಬಾರಿ)

೧೮. ಓಂಕಾರ (೫ ಬಾರಿ)

(ಈ ಲೇಖನದಲ್ಲಿನ ಬರವಣಿಗೆಯು  ಪುಣೆಯ ಸೌ. ವೈದೇಹಿ ಕುಲಕರ್ಣಿ, ಯೋಗ ಶಿಕ್ಷಕಿ, ಮೆಡಿಕಲ್ ಯೋಗ ಥೆರಪಿಸ್ಟ್, ನ್ಯೂರೋಥೆರಪಿಸ್ಟ್ ಅವರದ್ದಾಗಿದೆ.)

ಸ್ಥೂಲಕಾಯ / ಬೊಜ್ಜು (ಕೊಬ್ಬು ಹೆಚ್ಚಾಗುವುದು)

ಕಾರಣಗಳು : ಕೊಲೆಸ್ಟ್ರಾಲ್ ಹೆಚ್ಚಾಗುವುದು (ಕೋಶಗಳ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಮೇದಜನ್ಯ ಪದಾರ್ಥ), ರಕ್ತದೊತ್ತಡ (ಬಿ.ಪಿ), ರಕ್ತದಲ್ಲಿನ ಸಕ್ಕರೆಯ ಮಟ್ಟ ಅಧಿಕವಾಗಿರುವುದು, ತೂಕ ಹೆಚ್ಚಿರುವುದು, ಹೊಟ್ಟೆಯಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುವುದು, ಅತಿಯಾದ ಮದ್ಯಪಾನ, ಕೆಲವೊಮ್ಮೆ ವೈರಸ್‌ಗಳಿಂದಾಗಿ.

ಉಪಾಯಗಳು :

೧. ಬೆಳಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಮತ್ತು ಅರ್ಧ ಚಮಚ ಅರಿಶಿಣ ಹಾಕಿ ಆ ನೀರನ್ನು ಕುಡಿಯಬೇಕು.

೨. ಸಂಜೆ ೬.೩೦ ಕ್ಕೆ ಊಟ ಮಾಡಿದರೆ, ಮರುದಿನ ಬೆಳಗ್ಗೆ ೧೦.೩೦ ಕ್ಕೆ ಊಟ ಮಾಡಬೇಕು. ಮಧ್ಯದಲ್ಲಿ ಏನನ್ನೂ ತಿನ್ನಬಾರದು (೧೬ ಗಂಟೆ ಉಪವಾಸ).

೩. ಸೂರ್ಯನಮಸ್ಕಾರ (೧೮)

೪. ಅರ್ಧಮತ್ಸ್ಯೇಂದ್ರಾಸನ (ಎರಡೂ ಬದಿಯಿಂದ ೩-೩ ನಿಮಿಷಗಳು)

೫. ಭುಜಂಗಾಸನ (೧೦ ಬಾರಿ)

೬. ಶಲಭಾಸನ (೧೦ ಬಾರಿ)

೭. ಭುಜಂಗಾಸನ ಮತ್ತು ಶಶಾಂಕ ಆಸನವನ್ನು ಜೋಡಿಸಿ ಮಾಡುವುದು (೧೦ ಬಾರಿ)

೮. ಉಷ್ಟ್ರಾಸನ (೧೦ ಬಾರಿ)

೯. ಧನುರಾಸನ (೧೦ ಬಾರಿ)

೧೦. ಕಪಾಲಭಾತಿ (೧೨೦ ಬಾರಿ)

೧೧. ಸೈಕಲ್ ನಡೆಸುವುದು  (ಸೈಕ್ಲಿಂಗ್)

೧೨. ಈಜುವುದು

೧೩. ಪ್ರತಿದಿನ ೫ ಕಿ.ಮೀ. ನಡೆಯುವುದು

ನಿದ್ರಾನಾಶ

ಕಾರಣ : ನಿದ್ರೆಯ ಅನಿಯಮಿತ ವೇಳಾಪಟ್ಟಿ, ಕೆಟ್ಟ ಅಭ್ಯಾಸಗಳು, ಮಾನಸಿಕ ರೋಗ, ಹೆಚ್ಚು ಸಮಯ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ, ಅತಿ ಚಹಾ ಸೇವನೆ, ದಿನವಿಡೀ ಮೆದುಳಿಗೆ ಒತ್ತಡ ನೀಡುವುದ ರಿಂದ ಸಿಂಪೆಥೆಟಿಕ್ ನರ್ವಸ್ ಸಿಸ್ಟಮ್ (ದೇಹದಲ್ಲಿ ಒತ್ತಡ, ಶಕ್ತಿ, ಉಷ್ಣತೆ, ಬೆವರು, ಹೃದಯ ಬಡಿತ, ರಕ್ತದೊತ್ತಡವನ್ನು ಹೆಚ್ಚಿಸುವ ವ್ಯವಸ್ಥೆ) ಕಾರ್ಯನಿರತವಾಗಿರುವುದು.

ಉಪಾಯಗಳು :

೧. ಮಲಗುವ ಮುನ್ನ ಮೊಬೈಲ್ ನೋಡಬಾರದು.

೨. ಕೋಣೆಯಲ್ಲಿ ನೀಲಾಂಜನವನ್ನು (ದೀಪ) ಹಚ್ಚಿಡಬೇಕು.

೩. ಅನುಲೋಮ-ವಿಲೋಮ ಪ್ರಾಣಾಯಾಮ (೧೦ ಬಾರಿ)

೪. ಶೀತಲಿ ಪ್ರಾಣಾಯಾಮ (೫ ಬಾರಿ)

೫. ಶೀತಕಾರಿ ಪ್ರಾಣಾಯಾಮ (೫ ಬಾರಿ)

೬. ಭ್ರಾಮರಿ ಪ್ರಾಣಾಯಾಮ (೫ ಬಾರಿ)

೭. ಓಂಕಾರ ಉಚ್ಚಾರಣೆ (೫ ಬಾರಿ)

೮. ಗೋಡೆಯ ಹತ್ತಿರ ಮಲಗಬೇಕು. ಸೊಂಟವನ್ನು ಗೋಡೆಗೆ ತಗಲಿಸಿ, ಎರಡೂ ಕಾಲುಗಳನ್ನು ೨೦ ನಿಮಿಷ ಮೇಲಕ್ಕೆ (ಮುಂದಕ್ಕೆ) ಮಾಡಬೇಕು. ಸೊಂಟದ ಕೆಳಗೆ ದಿಂಬನ್ನು ಇಟ್ಟುಕೊಳ್ಳಬಹುದು ಮತ್ತು ಕಣ್ಣುಗಳ ಮೇಲೆ ದಪ್ಪನೆಯ ಬೆಡ್‌ಶೀಟ್ ಮಡಚಿ ಇಟ್ಟರೆ ಮೆದುಳು ಶಾಂತವಾಗುತ್ತದೆ.