|
(ಬ್ರಾಂಡೆಡ್ ಎಂದರೆ ಹೆಸರಾಂತ)

ವಾಷಿಂಗ್ಟನ್ (ಅಮೆರಿಕ) – ಆಮದು ಸುಂಕವನ್ನು ಹೆಚ್ಚಿಸಿದ ನಂತರ, ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರಾಂಡೆಡ್ (ಹೆಸರಾಂತ) ಅಥವಾ ಪೇಟೆಂಟ್ (ಒಂದು ಆವಿಷ್ಕಾರಕ್ಕಾಗಿ ಸರಕಾರದಿಂದ ನೀಡಲಾಗುವ ಕಾನೂನು ಹಕ್ಕು) ಮಾಡಿದ ಔಷಧಿಗಳ ಮೇಲೆ ಶೇ. 100 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ತೆರಿಗೆಯು ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ. ಅಮೆರಿಕದಲ್ಲಿ ತಮ್ಮದೇ ಆದ ಔಷಧ ಕಾರ್ಖಾನೆಗಳನ್ನು ಸ್ಥಾಪಿಸುವ ಸಂಸ್ಥೆಗಳಿಗೆ ಈ ತೆರಿಗೆ ಅನ್ವಯಿಸುವುದಿಲ್ಲ.
ಭಾರತವು ಅಮೆರಿಕಕ್ಕೆ ಜೆನೆರಿಕ್ (Generic) ಔಷಧಿಗಳ (ಇವು ಬ್ರಾಂಡೆಡ್ ಔಷಧಿಗಳಂತೆಯೇ ಸಕ್ರಿಯ ಘಟಕಾಂಶಗಳನ್ನು ಹೊಂದಿರುತ್ತವೆ, ಅದೇ ರೀತಿಯಲ್ಲಿ ಕೆಲಸ ಮಾಡುತ್ತವೆ ಮತ್ತು ಸಮಾನ ಫಲಿತಾಂಶ ನೀಡುತ್ತವೆ) ಅತಿದೊಡ್ಡ ರಫ್ತುದಾರ ಆಗಿದೆ. 2024 ರಲ್ಲಿ ಭಾರತವು ಅಂದಾಜು 77 ಸಾವಿರ ಕೋಟಿ ರೂಪಾಯಿ ಮೌಲ್ಯದ ಔಷಧಿಗಳನ್ನು ಅಮೆರಿಕಕ್ಕೆ ಕಳುಹಿಸಿದೆ, ಇದು ಭಾರತದ ಒಟ್ಟು ಔಷಧ ರಫ್ತಿನ ಅಂದಾಜು ಶೇ 31 ರಷ್ಟು ಆಗಿದೆ.
ಅಮೆರಿಕದ ವೈದ್ಯರು ಬರೆಯುವ ಪ್ರತಿ 10 ಪ್ರಿಸ್ಕ್ರಿಪ್ಷನ್ ಗಳಲ್ಲಿ (ಆಧುನಿಕ ವೈದ್ಯರು ರೋಗಿಗಳಿಗೆ ಬರೆದುಕೊಡುವ ಔಷಧಿಗಳ ಪಟ್ಟಿ) ಸುಮಾರು 4 ಪ್ರಿಸ್ಕ್ರಿಪ್ಷನ್ ಗಳಲ್ಲಿ ಭಾರತೀಯ ಸಂಸ್ಥೆಗಳು ತಯಾರಿಸಿದ ಔಷಧಿಗಳನ್ನು ಬರೆದಿರುತ್ತಾರೆ.
ಸಂಪಾದಕೀಯ ನಿಲುವುಟ್ರಂಪ್ ಅವರ ತುಘಲಕ್ ನಿರ್ಧಾರಗಳ ಪರಿಣಾಮವನ್ನು ಅಮೆರಿಕ ಮತ್ತು ಅಮೆರಿಕದ ಜನರು ಎದುರಿಸಬೇಕಾಗುತ್ತದೆ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !