ಸಂಪಾದಕೀಯ : ಹಿಂದೂಗಳ ಮೇಲೆ ಸರ್ವೋಚ್ಚ ಆಘಾತ ?

ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ನ್ಯಾಯಪೀಠವು ಹಿಂದೂ ದೇವರ ಕುರಿತು ಮಾಡಿದ ವ್ಯಾಖ್ಯಾನ ನಿಜಕ್ಕೂ ಅಗತ್ಯವಿತ್ತೇ?

ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಶ್ರೀ ವಾಮನ ದೇವಸ್ಥಾನದಲ್ಲಿ ಮೊಘಲರಿಂದ ಹಾನಿಗೊಳಗಾದ ೭ ಅಡಿ ಎತ್ತರದ ಶ್ರೀವಿಷ್ಣುವಿನ ವಿಗ್ರಹವನ್ನು ಪುನಃ ಸ್ಥಾಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಈ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಯಿ ಇವರ ನ್ಯಾಯಪೀಠವು ಅರ್ಜಿದಾರ ರಾಕೇಶ ದಲಾಲ್‌ ಇವರ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿ, ”ವಿಗ್ರಹವು ಈಗಿರುವ ಸ್ಥಿತಿಯಲ್ಲಿಯೇ ಇರಲಿ. ಭಕ್ತರು ಪೂಜೆ ಮಾಡಬೇಕಿದ್ದರೆ, ಅವರು ಬೇರೆ ದೇವಸ್ಥಾನಕ್ಕೆ ಹೋಗಬಹುದು. ಇದು ಕೇವಲ ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿಯಾಗಿದೆ. ಹೋಗಿ ಮತ್ತು ದೇವರಿಗೇ ಏನಾದರೂ ಮಾಡಲು ಹೇಳಿ. ನೀವು ನಿಮ್ಮನ್ನು ಭಗವಾನ ವಿಷ್ಣುವಿನ ಪರಮ ಭಕ್ತರೆಂದು ಹೇಳಿಕೊಳ್ಳುತ್ತೀರಿ, ಹಾಗಿದ್ದರೆ ಹೋಗಿ ದೇವರಿಗೇ ಪ್ರಾರ್ಥಿಸಿ ಮತ್ತು ಧ್ಯಾನ ಮಾಡಿ !” ಎಂದು ಹೇಳಿತು.

ಅರ್ಜಿದಾರ ರಾಕೇಶ ದಲಾಲ್

ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠವು ನೀಡಿದ ಈ ಹೇಳಿಕೆಗಳು ಹಿಂದೂಗಳಿಗೆ ಆಘಾತಕಾರಿಯಾಗಿದ್ದವು. ಪ್ರಸ್ತುತ, ಹಿಂದೂ ವಾಸ್ತುಶಿಲ್ಪದ ಇಸ್ಲಾಮೀಕರಣದ ಬಗ್ಗೆ ಹಿಂದೂಗಳಲ್ಲಿ ಆಕ್ರೋಶವಿದೆ. ಈ ಕಟ್ಟಡಗಳನ್ನು ಮರಳಿ ಪಡೆಯಲು ಹಿಂದೂಗಳು ನ್ಯಾಯಮಾರ್ಗಗಳ ಮೂಲಕ ಹೋರಾಡುತ್ತಿದ್ದಾರೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಆದ್ದರಿಂದ, ಭಾರತದಾದ್ಯಂತ ಅನೇಕ ಕಡೆ ನ್ಯಾಯಾಲಯಗಳಲ್ಲಿ ಇಂತಹ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠವೇ ಇಂತಹ ಹೇಳಿಕೆಗಳನ್ನು ನೀಡಿದ್ದರಿಂದ ಹಿಂದೂಗಳಲ್ಲಿ ಆಕ್ರೋಶ ಹೆಚ್ಚಿದೆ. ಈ ಆಕ್ರೋಶವನ್ನು ಹಿಂದೂಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹೊರಹಾಕಿದ್ದಾರೆ. ಸ್ವಾತಂತ್ರ್ಯದ ನಂತರ ಅನೇಕ ದಶಕಗಳ ಕಾಲ ಸರಕಾರಗಳು ಬಂದವು ಮತ್ತು ಹೋದವು; ಆದರೆ ಹಿಂದೂಗಳ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ‘ಪೊಲೀಸರು, ಆಡಳಿತ ಅಥವಾ ರಾಜಕಾರಣಿಗಳು ಯಾರೂ ನ್ಯಾಯ ಕೊಡದಿದ್ದರೂ, ನ್ಯಾಯಾಲಯದ ಬಾಗಿಲು ತಟ್ಟಿದರೆ ಖಂಡಿತ ನ್ಯಾಯ ಸಿಗುತ್ತದೆ’ ಎಂಬ ಮೂಕ ಭರವಸೆಯನ್ನು ಹಿಂದೂಗಳು ಇಟ್ಟುಕೊಂಡಿದ್ದರು. ಸರ್ವೋಚ್ಚ ನ್ಯಾಯಾಲಯದ ಈ ನಿಲುವಿನಿಂದ ಆ ಭರವಸೆಯೂ ಮಸುಕಾಗಿದೆ ಎಂದು ನಾವು ತಿಳಿಯಬೇಕೇ ? ಹಿಂದೂಗಳ ಈ ನಿರೀಕ್ಷಾಭಂಗವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಹಿಂದೂಗಳೇ ಪೀಡಿತರು !

ಯಾವುದೇ ಪ್ರಕರಣದಲ್ಲಿ ತೀರ್ಪಿಗೆ ಬರಲು ನ್ಯಾಯಾಧೀಶರು ಎಲ್ಲ ಆಯಾಮಗಳನ್ನು ಪರಿಗಣಿಸಿ ಮತ್ತು ಕಾನೂನಿನ ಚೌಕಟ್ಟಿನಲ್ಲಿದ್ದು ನ್ಯಾಯ ನೀಡಬೇಕಾಗುತ್ತದೆ. ಈ ಅಂಶವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ದರಿಂದ, ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹಾಗೇನಾದರೂ ಕಂಡುಬಂದಿದ್ದರೆ, ಅದನ್ನು ದಾಖಲಿಸಿಕೊಂಡು ಅರ್ಜಿಯನ್ನು ವಜಾ ಮಾಡಬಹುದಿತ್ತು. ಉದಾಹರಣೆಗೆ, ನ್ಯಾಯಪೀಠಕ್ಕೆ ಈ ಅರ್ಜಿಯನ್ನು ಕೇವಲ ಪ್ರಚಾರಕ್ಕಾಗಿ ಸಲ್ಲಿಸಲಾಗಿದೆ ಎಂದು ಅನಿಸಿದ್ದರೆ, ಅರ್ಜಿದಾರರಿಗೆ ಎಚ್ಚರಿಕೆ ನೀಡಿ ಅಥವಾ ದಂಡ ವಿಧಿಸಿ ಅಂತಿಮ ತೀರ್ಪು ನೀಡಬಹುದಿತ್ತು. ಆದರೆ, ನ್ಯಾಯಪೀಠವು ಹಿಂದೂ ದೇವತೆಗಳ ಬಗ್ಗೆ ನೀಡಿದ ಹೇಳಿಕೆಗಳು ನಿಜವಾಗಿಯೂ ಆವಶ್ಯಕವಾಗಿತ್ತೇ ? ಎಂಬುದು ಹಿಂದೂಗಳ ಪ್ರಶ್ನೆಯಾಗಿದೆ. ಪ್ರಸ್ತುತ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ದೇವತೆ ಗಳು, ಧರ್ಮ ಮತ್ತು ಧರ್ಮಗ್ರಂಥಗಳ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡಲಾಗುತ್ತದೆ. ಈ ಬಗ್ಗೆ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಭಾರತದ ಸಂವಿಧಾನದಲ್ಲೂ ‘ಧಾರ್ಮಿಕ ಭಾವನೆ’ ಒಂದು ಪ್ರಮುಖ ಪರಿಕಲ್ಪನೆಯಾಗಿದೆ ಮತ್ತು ‘ಅದರ ಬಗ್ಗೆ ಸಂವೇದನಾಶೀಲರಾಗಿರುವುದು ಆವಶ್ಯಕ’ ಎಂಬ ಅಂಶದ ಬಗ್ಗೆ ಸಾಮಾಜಿಕ ನಾಯಕರು ಮತ್ತು ಕಾನೂನುತಜ್ಞರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೀಗಿರುವಾಗಲೂ, ‘ಸರ್ವೋಚ್ಚ ನ್ಯಾಯಾಲಯದ ಒಂದು ನ್ಯಾಯಪೀಠದಲ್ಲಿ ಸಾಕ್ಷಾತ್‌ ಮುಖ್ಯ ನ್ಯಾಯಾಧೀಶರು ವಿರಾಜಮಾನರಾಗಿದ್ದರೂ, ಆ ನ್ಯಾಯಪೀಠದಲ್ಲಿ ಹಿಂದೂ ದೇವತೆಗಳ ಬಗ್ಗೆ ಇಂತಹ ಹೇಳಿಕೆಗಳು ಹೇಗೆ ಬಂದವು ?’ ಎಂಬುದು ಹಿಂದೂಗಳಿಗೆ ತಿಳಿಯದ ವಿಷಯವಾಗಿದೆ. ಈ ಪ್ರಕರಣದಲ್ಲೂ ಹಿಂದೂಗಳು ನ್ಯಾಯಯುತ ಮಾರ್ಗಗಳಿಂದ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದು, ಮನವಿ ಸಲ್ಲಿಸುವುದು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಇವುಗಳಂತಹ ಕೃತಿಗಳಲ್ಲಿ ತೊಡಗಿರುವುದು ಕಂಡುಬರುತ್ತದೆ. ಒಂದು ವೇಳೆ ಮುಸಲ್ಮಾನರ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದಿದ್ದರೆ ಸರ್ವೋಚ್ಚ ನ್ಯಾಯಾಲಯವು ಇದೇ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತಿತ್ತೇ ? ಹಾಗೇನಾದರೂ ಆಗಿದ್ದರೆ, ಈ ವೇಳೆಗೆ ‘ಸರ್‌ ತನ್‌ ಸೆ ಜುದಾ’ ಎಂಬ ಘೋಷಣೆಯನ್ನು ನೀಡಿ, ನ್ಯಾಯಾಲಯಗಳ ಕಟ್ಟಡಗಳ ಮೇಲೆ ದಾಳಿ ಅಥವಾ ಹಿಂಸಾತ್ಮಕ ಕೃತ್ಯಗಳ ಸರಪಳಿ ಆರಂಭವಾಗುತ್ತಿತ್ತು !

ಅನೇಕ ದಶಕಗಳಿಂದ ಹಿಂದೂಗಳನ್ನು ಎಲ್ಲರೂ ಹಗುರವಾಗಿ ಪರಿಗಣಿಸಿದ್ದಾರೆ. ವ್ಯಕ್ತಿ, ಸಮೂಹ ಅಥವಾ ಸಮಾಜಕ್ಕೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ನ್ಯಾಯ ವ್ಯವಸ್ಥೆ ಇರುತ್ತದೆ. ಆದರೆ, ಹಿಂದೂಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯವ್ಯವಸ್ಥೆಯೂ ವಿಫಲವಾಗುತ್ತಿದೆ ಎಂದು ಹಿಂದೂಗಳು ಭಾವಿಸಬೇಕೇ ? ಹಾಗಿದ್ದರೆ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಅಥವಾ ಧಾರ್ಮಿಕ ಭಾವನೆಗಳನ್ನು ಉಳಿಸಿಕೊಳ್ಳಲು ಹಿಂದೂಗಳು ಯಾರ ಕಡೆಗೆ ಆಶೆಯಿಂದ ನೋಡಬೇಕು ?

ರಾಮಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳು ದೀರ್ಘ ಕಾಲ ಕಾನೂನು ಹೋರಾಟ ನಡೆಸಿದರು, ಅದು ಕೇವಲ ಮತ್ತು ಕೇವಲ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸದಿಂದಾಗಿಯೇ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿಯೇ ತಮ್ಮ ಪ್ರಮುಖ ಪೂಜಾಸ್ಥಳಗಳಿಗಾಗಿ ನೂರಾರು ವರ್ಷಗಳ ಕಾಲ ಕಾಯಬೇಕಾಯಿತು ಎಂಬುದು ಹಿಂದೂಗಳಿಗೆ ನಾಚಿಕೆಗೇಡಿನÀ ಸಂಗತಿಯಾಗಿದೆ; ಆದರೆ ನ್ಯಾಯವನ್ನು ಪ್ರೀತಿಸುವ ಹಿಂದೂಗಳು ಇದನ್ನೂ ಸಹಿಸಿ ಕೊಂಡರು. ಈಗ ಮಾತ್ರ ಜಾಗೃತ ಹಿಂದೂಗಳು ಪ್ರಶ್ನಿಸತೊಡಗಿದ್ದಾರೆ. ಹಿಂದೂಗಳ ಈ ಅಸ್ವಸ್ಥತೆಯ ಕಡೆಗೆ ನ್ಯಾಯಾಂಗವು ದುರ್ಲಕ್ಷಿಸಿದರೆ ನಡೆಯುವುದಿಲ್ಲ. ಸರ್ವೋಚ್ಚ ನ್ಯಾಯಾಲಯದ ಹೇಳಿಕೆಗಳು ಹಿಂದೂಗಳ ಮನಸ್ಸನ್ನು ಚುಚ್ಚಿದೆ, ಅವರಿಗೆ ನೋವಾಗಿದೆ ಎಂಬುದನ್ನು ಅದು ತಿಳಿದುಕೊಳ್ಳಬೇಕು. ನ್ಯಾಯಾಲಯದ ಯಾವುದೇ ತೀರ್ಪನ್ನು ಮೌನವಾಗಿ ಒಪ್ಪಿಕೊಳ್ಳುವ ಮತ್ತು ಧರ್ಮಭೀರು (ಪಾಪಗಳಿಗೆ ಹೆದರುವ) ಹಿಂದೂಗಳು ಇಂದು ನ್ಯಾಯವ್ಯವಸ್ಥೆಯ ಮೇಲೆ ಏಕೆ ಕೋಪಗೊಂಡಿದ್ದಾರೆÉ ? ಹಿಂದಿನ ಅನೇಕ ವರ್ಷಗಳಲ್ಲಿ ವಿವಿಧ ನ್ಯಾಯಾಲಯಗಳು ಹಿಂದೂ ಮತ್ತು ಇತರ ಧರ್ಮಿಯರ ಬಗ್ಗೆ ನೀಡಿದ ತೀರ್ಪುಗಳು, ಹಿಂದೂ ಸಮಾಜದ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಅನೇಕಬಾರಿ ನ್ಯಾಯಾಲಯಗಳು ಮುಸಲ್ಮಾನರ ಸಂದರ್ಭದಲ್ಲಿ ಯಾವಾಗಲೂ ಪುರಾವೆ, ಮಾಲೀಕತ್ವದ ಹಕ್ಕು ಧಾರ್ಮಿಕ ಸಂಪ್ರದಾಯ-ಪರಂಪರೆಗಳ ಆಧಾರದಲ್ಲಿ ತೀರ್ಪುಗಳನ್ನು ನೀಡಿವೆ; ಆದರೆ ‘ಹೋಗಿ ಮತ್ತು ನಮಾಜ ಮಾಡಿ’, ಎಂಬ ಹೇಳಿಕೆ ನೀಡಿಲ್ಲ. ಕ್ರೈಸ್ತರ ವಿಷಯದಲ್ಲಿಯೂ ನ್ಯಾಯಾಲಯ ಯಾವಾಗಲೂ ಸಂವಿಧಾನಕ್ಕನುಸಾರ ತೀರ್ಪು ನೀಡುತ್ತದೆ; ಆದರೆ ‘ಹೋಗಿ ಮತ್ತು ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಿ’, ಎಂಬ ಸಲಹೆಯನ್ನು ಎಂದಿಗೂ ನೀಡಿಲ್ಲ. ಹಿಂದೂಗಳ ಪ್ರತಿಯೊಂದು ಹಬ್ಬ ಮತ್ತು ಉತ್ಸವಗಳನ್ನು ಆಚರಿಸುವ ವಿಷಯದಲ್ಲಿ ಅನೇಕ ವಿಷಯಗಳು ಇಂದಿಗೂ ನ್ಯಾಯಾಲಯದ ಪರಿಶೀಲನೆಯಲ್ಲೇ ಇವೆ. ಕೆಲವು ವರ್ಷಗಳ ಹಿಂದೆ ಮುಸಲ್ಮಾನರ ಗುಂಪು ನಡೆಸಿದ ಹಿಂಸಾಚಾರಕ್ಕೆ ಸರ್ವೋಚ್ಚ ನ್ಯಾಯಾಲಯವು ನುಪೂರ ಶರ್ಮಾ ಇವರನ್ನೇ ಹೊಣೆಗಾರರನ್ನಾಗಿ ಮಾಡಿತು. ಆದರೆ ಹಿಂಸಾಚಾರಕ್ಕೆ ಕಾರಣರಾದ ಮುಸಲ್ಮಾನರ ಗುಂಪಿನ ಬಗ್ಗೆ ಏನು ?

ಅವರ ವಿರುದ್ಧ ಯಾರು ಕ್ರಮಕೈಗೊಳ್ಳುತ್ತಾರೆ ? ‘ಒಂದು ವೇಳೆ ಭಾರತೀಯ ಸಂವಿಧಾನವು ಜಾತ್ಯತೀತವಾಗಿದ್ದರೆ ನ್ಯಾಯಾಲಯಗಳು ತೀರ್ಪು ನೀಡುವಾಗ ಭೇದಭಾವ ಮಾಡದೇ ಅದೇ ಜಾತ್ಯತೀತತೆÉಯನ್ನು ಪ್ರದರ್ಶಿಸಬೇಕು’, ಎಂದು ನ್ಯಾಯ ವ್ಯವಸ್ಥೆಯಿಂದ ಹಿಂದೂಗಳ ಅಪೇಕ್ಷೆಯಾಗಿದೆ.

ಮುಂದಿನ ದಿಶೆ !

ಭಾರತದಲ್ಲಿ ಹಿಂದೂ ಸಮಾಜವು ಸಂವಿಧಾನವನ್ನು ಗೌರವಿಸುವಷ್ಟು ಇತರರು ಗೌರವಿಸುತ್ತಾರೆಯೇ ? ಆದ್ದರಿಂದ, ನ್ಯಾಯ ವ್ಯವಸ್ಥೆಯ ಜವಾಬ್ದಾರಿಯೂ ದೊಡ್ಡದಾಗಿದೆ. ಹಿಂದಿನ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳ ಸಮಯದಲ್ಲಿ ನೀಡಿದ ವಿವಿಧ ಹೇಳಿಕೆಗಳಿಂದ ಹಿಂದೂಗಳಲ್ಲಿ ಒಂದು ರೀತಿಯ ಆತಂಕವಿದೆ. ‘ನಾವು ಸತ್ಯದ ಪಕ್ಷದಲ್ಲಿದ್ದರೂ ನಮ್ಮ ಮೇಲೆ ಅನ್ಯಾಯವಾಗುತ್ತಿದೆ’ ಎಂಬ ಭಾವನೆ ಸಮಾಜದಲ್ಲಿ ಬೆಳೆದಾಗ, ಅದರಿಂದ ಉಂಟಾಗುವ ಆಕ್ರೋಶವು ಉಗ್ರ ರೂಪವನ್ನು ತಾಳುತ್ತದೆ. ಜಗತ್ತಿನಲ್ಲಿ ಯಾವ ದೇಶಗಳಲ್ಲಿ ಕ್ರಾಂತಿಗಳು ನಡೆದಿವೆಯೋ, ಅದರ ಹಿಂದೆ ಈ ಆಕ್ರೋಶವೇ ಕಾರಣವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಹಿಂದೂಗಳ ಮೇಲೆ ಅನಾವಶ್ಯಕವಾಗಿ ಪ್ರಹಾರ ನಡೆಸುತ್ತಿವೆ. ಈ ಆಕ್ರೋಶದಿಂದ ಒಂದು ವೇಳೆ ಹಿಂದೂಗಳು ಕಾನೂನನ್ನು ಕೈಗೆತ್ತಿಕೊಂಡು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರೆ, ಅದಕ್ಕೆ ಯಾರು ಹೊಣೆಗಾರರು ? ಸಮಾಜದ ನಾಯಕರು ಮತ್ತು ‘ಸಂವಿಧಾನದ ಅನುಯಾಯಿಗಳು’ ಎಂದು ಕರೆದುಕೊಳ್ಳುವವರು ಈ ಪ್ರಶ್ನೆಗೆ ಉತ್ತರ ಹುಡುಕಲು ಇದೇ ಸರಿಯಾದ ಸಮಯವಾಗಿದೆ ! ಇದರಿಂದಲೇ ಭಾರತಕ್ಕೆ ಹಿಂದೂ ರಾಷ್ಟ್ರದ ಅವಶ್ಯಕತೆ ಏಕೆ ಇದೆ ಎಂಬುದು ಗಮನಕ್ಕೆ ಬರುತ್ತದೆ !