|

ವಾಷಿಂಗ್ಟನ್ (ಅಮೆರಿಕ) – ಭಾರತ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಯಾವುದೇ ಉದ್ದೇಶ ನಮಗಿಲ್ಲ, ಹಾಗೂ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಆಲೋಚನೆಯಲ್ಲಿಯೂ ನಾವಿಲ್ಲ. ಇದು ನಮ್ಮ ದೀರ್ಘಕಾಲದ ನೀತಿಯಾಗಿದೆ. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ; ಆದರೆ ಯಾರಿಗಾದರೂ ನಮ್ಮಿಂದ ಸಹಾಯದ ನಿರೀಕ್ಷೆ ಇದ್ದರೆ, ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ಟ್ರಂಪ್ ಅವರ ಮುಂದೆ ಪ್ರಸ್ತುತ ಅನೇಕ ಇತರ ವಿಷಯಗಳಿವೆ. ಆದ್ದರಿಂದ, ಕಾಶ್ಮೀರ ವಿಷಯವನ್ನು ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಸೇರಿ ಪರಿಹರಿಸುತ್ತಾರೆ ಎಂದು ಅಮೆರಿಕದ ಒಬ್ಬ ಹಿರಿಯ ಅಧಿಕಾರಿಯು ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ರಷ್ಯಾದಿಂದ ಇಂಧನ ಖರೀದಿಗೆ ಸಂಬಂಧಿಸಿದಂತೆ ಸಕಾರಾತ್ಮಕ ಚರ್ಚೆ ನಡೆಯುತ್ತಿದೆ ಎಂಬ ವರದಿಯನ್ನು ಈ ಅಧಿಕಾರಿ ದೃಢಪಡಿಸಿದ್ದಾರೆ.
🇺🇸 US refuses mediation on Kashmir
❌ “No plans to mediate. Kashmir is a bilateral issue between India and Pakistan,” said a top US official.
🤝 “We’ll assist only if asked.”📉 Clear shift: US walking back on earlier Kashmir remarks.
💡 Why now? India-US talks on Russian oil… pic.twitter.com/SAKUJuUqur
— Sanatan Prabhat (@SanatanPrabhat) September 25, 2025
ಅಮೆರಿಕವು ಭಾರತದ ಮೇಲೆ ಹೇರಿದ 50% ಆಮದು ಸುಂಕ ಮತ್ತು ‘ಎಚ್-1 ಬಿ’ ವೀಸಾದ ಹೆಚ್ಚುವರಿ ಶುಲ್ಕಗಳಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಎರಡೂ ದೇಶಗಳ ಸಂಬಂಧಗಳು ಸಹಜ ಸ್ಥಿತಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಅದರ ಬಗ್ಗೆ ಅಮೆರಿಕದ ಒಬ್ಬ ಅಧಿಕಾರಿಯು, ‘ಮೋದಿ ಮತ್ತು ಟ್ರಂಪ್ ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ. ಅವರಿಬ್ಬರ ನಡುವೆ ಉತ್ತಮ ಸಂಬಂಧವಿದೆ. ನಾವು ಪ್ರಸ್ತುತ ‘ಕ್ವಾಡ್ ಶೃಂಗಸಭೆ’ಯ ಆಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ಈ ಸಭೆ ನಡೆಯಲಿದೆ. ಭಾರತ-ಅಮೆರಿಕ ಸಂಬಂಧಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಶೀಘ್ರದಲ್ಲೇ ನಮಗೆ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಲಿವೆ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪ್ರತಿ ನಿಮಿಷಕ್ಕೂ ಮಾತು ಬದಲಾಯಿಸುವ ಅಮೆರಿಕವನ್ನು ಯಾರು ತಾನೆ ನಂಬುತ್ತಾರೆ? ಭಾರತವು ಅಮೆರಿಕದಿಂದ ಮತ್ತೆ ತೈಲ ಖರೀದಿಸಬೇಕು ಎಂದು ಭಾರತವನ್ನು ಓಲೈಸುವ ಉದ್ದೇಶದಿಂದ ಅಮೆರಿಕ ಈ ಕಪಟ ನಾಟಕವನ್ನು ನಡೆಸಿದೆ ಎಂಬುದು ಸ್ಪಷ್ಟವಾಗಿದೆ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು