ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ 80 ಕೋಟಿ ಹಿಂದೂಗಳಿಗಾಗಿ ಹರಿದ್ವಾರದಲ್ಲಿ ಸಾಮೂಹಿಕ ತರ್ಪಣ! : Samoohik Tarpan

‘ಅಯೋಧ್ಯೆ ಫೌಂಡೇಶನ್’ನ ಪ್ರಖರ ಹಿಂದೂತ್ವನಿಷ್ಠ ಮೀನಾಕ್ಷಿ ಶರಣ್ ಅವರ ನೇತೃತ್ವದಲ್ಲಿ ಸತತ 9ನೇ ವರ್ಷ ಅಭಿಯಾನದ !

ಹರಿದ್ವಾರದಲ್ಲಿ ನಡೆದ ಸಾಮೂಹಿಕ ತರ್ಪಣ ಸಮಾರಂಭದಲ್ಲಿ 1. ಸದ್ಗುರು ಡಾ. ಚಾರುದತ್ತ ಪಿಂಗಳೆ, 2. ಮೀನಾಕ್ಷಿ ಶರಣ್, 3. ನಿಶಿತ್ ಶರಣ್

ಹರಿದ್ವಾರ (ಉತ್ತರಾಖಂಡ) – ಸನಾತನ ಧರ್ಮಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಲಕ್ಷಾಂತರ ಹಿಂದೂಗಳ ಸ್ಮರಣೆಗಾಗಿ ಇಲ್ಲಿನ ಪವಿತ್ರ ಚಂಡಿ ಘಾಟ್‌ನಲ್ಲಿ ಒಂಬತ್ತನೇ ‘ಸಾಮೂಹಿಕ ಜಲ ತರ್ಪಣ’ ಮಾಡಲಾಯಿತು. ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶಗಳ ಹಿಂದೂಗಳು ಹಾಗೂ ಹಿಂದೂತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸೆಪ್ಟೆಂಬರ್ 21ರ ಸರ್ವಪಿತೃ ಅಮಾವಾಸ್ಯೆಯಂದು ನಡೆದ ಈ ಕಾರ್ಯಕ್ರಮವನ್ನು ‘ಅಯೋಧ್ಯೆ ಫೌಂಡೇಶನ್’ನ ಸಂಸ್ಥಾಪಕಿ ಮೀನಾಕ್ಷಿ ಶರಣ್ ಅವರು ಮುನ್ನಡೆಸಿದರು. ಕಳೆದ 9 ವರ್ಷಗಳಿಂದ ಅವರು ಸರ್ವಪಿತೃ ಅಮಾವಾಸ್ಯೆಯಂದು ಈ ಕಾರ್ಯವನ್ನು ಮಾಡುತ್ತಿದ್ದಾರೆ.

ನಮ್ಮ ಪೂರ್ವಜರ ಬಲಿದಾನದಿಂದಲೇ ಇಂದು ನಮ್ಮ ಭವ್ಯ ಹಿಂದೂ ಸಂಸ್ಕೃತಿ ಉಳಿದಿದೆ! – ಮೀನಾಕ್ಷಿ ಶರಣ್

ಮೀನಾಕ್ಷಿ ಶರಣ್

ಈ ಸಂದರ್ಭದಲ್ಲಿ ಮೀನಾಕ್ಷಿ ಶರಣ್ ಅವರು ಮಾಧ್ಯಮಗಳಿಗೆ ಮಾತನಾಡುತ್ತಾ, ಕಳೆದ 14 ಶತಮಾನಗಳಲ್ಲಿ ಹಿಂದೂ ಧರ್ಮ, ಶ್ರದ್ಧೆ, ಅಸ್ಮಿತೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಸುಮಾರು 80 ಕೋಟಿ ಹಿಂದೂಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈ ವೀರ ಯೋಧರು ಹೋರಾಡಿ ಮರಣವನ್ನು ಸ್ವೀಕರಿಸಿದರು; ಆದರೆ ಎಂದಿಗೂ ಧರ್ಮ ಪರಿವರ್ತನೆ ಮಾಡಲಿಲ್ಲ. ಈ ಬಲಿದಾನದಿಂದಲೇ ಇಂದು ಹಿಂದೂ ಸಮಾಜವು ತನ್ನ ಅಸ್ಮಿತೆ ಮತ್ತು ಭವ್ಯ ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಈ ಋಣವನ್ನು ತೀರಿಸಲು ಸಾಮೂಹಿಕ ತರ್ಪಣ ಮಾಡುವುದು ಕಾಲದ ಅವಶ್ಯಕತೆಯಾಗಿದೆ. ಈ ಧಾರ್ಮಿಕ ಆಚರಣೆಯು ನಮ್ಮ ಭವ್ಯ ಇತಿಹಾಸದೊಂದಿಗೆ ನಮ್ಮನ್ನು ಜೋಡಿಸುತ್ತದೆ.

ಶರಣ್ ಅವರು ಮಾತು ಮುಂದುವರೆಸಿ…,

1. ಭಾರತವು ತನ್ನ ಶಾಶ್ವತ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಡಬೇಕಾದರೆ, ಹಿಂದೂಗಳು ತಮ್ಮ ಧರ್ಮ, ಸಂಪ್ರದಾಯ ಮತ್ತು ಇತಿಹಾಸದ ಬಗ್ಗೆ ಅರಿವು ಹೊಂದಿರಬೇಕು. ಈ ಲಕ್ಷಾಂತರ ಪೂರ್ವಜರ ಹೋರಾಟವನ್ನು ಗೌರವಿಸಲು ಸಾಮೂಹಿಕ ತರ್ಪಣವು ಅವರ ನೆನಪುಗಳನ್ನು ಮಾತ್ರ ಜೀವಂತವಾಗಿಡುವುದಿಲ್ಲ, ಬದಲಾಗಿ ಭವಿಷ್ಯದ ಪೀಳಿಗೆಗೆ ಪ್ರೇರಣೆಯನ್ನೂ ನೀಡುತ್ತದೆ.

2. ಈ ಕಾರ್ಯಕ್ರಮದಲ್ಲಿ ರಾಜಕೀಯ ಸಲಹೆಗಾರ ನಿಶೀತ್ ಶರಣ್, ಬ್ರ್ಯಾಂಡ್ ಬಿಲ್ಡರ್ಸ್ ಶಿವಾನಿ ಸೋಹಿ ಮತ್ತು ಗುರುಪ್ರತಾಪ್ ಸಿಂಗ್ ಸೋಹಿ, ಚಂಡೀಗಢದ ‘ಶಾಶ್ವತ ಭಾರತ ಟ್ರಸ್ಟ್ (ಡೆಹ್ರಾಡೂನ್)’ ನ ಸಂಸ್ಥಾಪಕ ತಿರ್ಲೋಕ್ ಸಿಂಗ್ ಸೋಹಿ, ಡಾ. ಕುಲದೀಪ್ ದತ್ತಾ, ನಿವೃತ್ತ ಕರ್ನಲ್ ವಿವೇಕ್ ಗುಪ್ತಾ, ‘ಸಿಐಐ ಉತ್ತರಾಖಂಡ’ದ ಅಧ್ಯಕ್ಷ ಅಶೋಕ್ ಕುಮಾರ್ ವಿಂಡ್ಲಾಸ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಡಾ. ಚಾರುದತ್ತ ಪಿಂಗಳೆ, ಶ್ರೀ. ಶ್ರೀರಾಮ ಲುಕತುಕೆ, ‘ಹಿಂದೂ ರಕ್ಷಾ ಮಂಚ್’ ಹಿಮಾಚಲ ಪ್ರದೇಶದ ಅಧ್ಯಕ್ಷ ಕಮಲ್ ಗೌತಮ್, ಡಾ. ಮಹೇಂದ್ರ ಠಾಕೂರ್, ಮಾಜಿ ಗುಪ್ತಚರ ಅಧಿಕಾರಿ ಕರ್ನಲ್ ಹನಿ ಬಕ್ಷಿ, ಕರ್ನಲ್ ರಾಜೀವ್ ಕೋಟ್ವಾಲ್, ಅಮೃತಸರದ ರಣಜಿತ್ ಸಿಂಗ್ ಕಾಲ್ರಾ, ಗಢ ಸೇನಾ ಡೆಹ್ರಾಡೂನ್‌ನ ವಿಮಲ್ ಉನಿಯಾಲ್, ‘ಸನಾತನ ರಕ್ಷಾ ಬೋರ್ಡ್’ನ ಶೈಲೇಂದ್ರ ಡೋವಾಲ್, ಸರ್ವೋಚ್ಚ ನ್ಯಾಯಾಲಯದ ವಕೀಲೆ ಅಮಿತಾ ಸಚ್‌ದೇವ್ ಮತ್ತು ಸುಮಾರು 100 ಮಕ್ಕಳು ಭಾಗವಹಿಸಿದ್ದರು. ಇವರೆಲ್ಲರೂ ಚಂಡಿ ಘಾಟ್‌ನಲ್ಲಿ ಸೇರಿ ಧರ್ಮಕ್ಕಾಗಿ ಬಲಿದಾನ ಮಾಡಿದ ಲಕ್ಷಾಂತರ ಹಿಂದೂಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

3. ಈ ವರ್ಷ ಭಾರತ ಸೇರಿದಂತೆ ಕೀನ್ಯಾ, ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್, ಆಸ್ಟ್ರೇಲಿಯಾ, ಲಂಡನ್, ದುಬೈ, ಕೆನಡಾ ಮತ್ತು ಸಿಂಗಾಪುರದ ಲಕ್ಷಾಂತರ ಹಿಂದೂಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಸಾಮೂಹಿಕ ತರ್ಪಣವನ್ನು ಆಯೋಜಿಸಿದ್ದರು.

4. ಈ ಸೇವಾನಿರತ ಅಭಿಯಾನವು ಪ್ರತಿ ವರ್ಷವೂ ದೊಡ್ಡದಾಗುತ್ತಿದೆ ಮತ್ತು ಈಗ ಇದು ಹಿಂದೂ ಜಾಗೃತಿಗಾಗಿ ಒಂದು ದೊಡ್ಡ ಚಳುವಳಿಯಾಗಿದೆ.

5. ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ, ಹಿಂದೂ ರಕ್ಷಾ ಮಂಚ್ (ಹಿಮಾಚಲ ಪ್ರದೇಶ), ಪ್ರಯಾgರಾಜ್‌ನ ಸಂತ ಅಶೋಕ್ ಜೀ ಮಹಾರಾಜ್, ಹಿಂದೂ ಜಾಗರಣ ಮಂಚ್ (ಉತ್ತರ ಪ್ರದೇಶ ಮತ್ತು ಉತ್ತರಾಖಂಡ), ಗಢ ಸೇನಾ (ಡೆಹ್ರಾಡೂನ್), ಶಾಶ್ವತ ಭಾರತ ಟ್ರಸ್ಟ್, ಹಿಂದೂ ಯುವ ಮೋರ್ಚಾ, ಹಿಂದೂಸ್ಥಾನ್ (ಛತ್ತೀಸ್‌ಗಢ) ಸೇರಿದಂತೆ ದೇಶ-ವಿದೇಶಗಳ ಅನೇಕ ಸಂಘಟನೆಗಳು ಭಾಗಿಯಾಗಿದ್ದವು. ಉಜ್ಜಯಿನಿ, ‘ಇಟರ್ನಲ್ ಹಿಂದೂ ಫೌಂಡೇಶನ್’ (ದೆಹಲಿ-ಮುಂಬಯಿ), ಪನೂನ್ ಕಾಶ್ಮೀರ ಜಮ್ಮು, ಸಾರಸ್ವತ ಕಾಶ್ಮೀರಿ ಬ್ರಾಹ್ಮಣ ಫೌಂಡೇಶನ್, ಅರುಂಧತಿ ಫೌಂಡೇಶನ್ (ಪುಣೆ), ದೇವದೇವೇಶ್ವರ ಸಂಸ್ಥಾನ (ಪುಣೆ), ಸಂವೇದನಾ ಸಂಸ್ಥಾ (ಹಿಮಾಚಲ ಪ್ರದೇಶ), ಸಿದ್ಧ ವಿದ್ಯಾ ಅಸೋಸಿಯೇಟ್ಸ್ (ಮುಂಬಯಿ), ಅಮಿತಾ ಸಚ್‌ದೇವ್ & ಅಸೋಸಿಯೇಟ್ಸ್ (ದೆಹಲಿ) ಮುಂತಾದ ಸಂಘಟನೆಗಳು ಈ ಅಭಿಯಾನದಲ್ಲಿ ಪ್ರತಿ ವರ್ಷವೂ ಭಾಗವಹಿಸುತ್ತವೆ.