
೧. ಮಹರ್ಷಿ ನಾಡಿಪಟ್ಟಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಗಿರುವ ಶ್ರೀವಿಷ್ಣುವಿನ ಅವತಾರ’ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳ ಇಬ್ಬರನ್ನೂ ‘ಶ್ರೀ ಮಹಾಲಕ್ಷ್ಮಿಯ ಅವತಾರ’ ಎಂದು ಉಲ್ಲೇಖಿಸಲಾಗಿದೆ
‘ನಾಡಿಪಟ್ಟಿಗಳಲ್ಲಿ ಒಬ್ಬ ವ್ಯಕ್ತಿಯ ಜೀವನ ಮತ್ತು ಕಾರ್ಯ ಈ ವಿಷಯದ ಭೂತಕಾಲ ಮತ್ತು ಭವಿಷ್ಯತ್ಕಾಲದ ಬಗ್ಗೆ ವರ್ಣನೆ ಇರುತ್ತದೆ. ೨೦೧೫ ರಿಂದ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ, ಹಾಗೆಯೇ ಅವರು ಇಲ್ಲಿಯ ವರೆಗೆ ಮಾಡಿದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದ ಬಗ್ಗೆ ಮತ್ತು ಸಾಧಕರನ್ನು ರೂಪಿಸಿ ಅವರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿದ ಬಗ್ಗೆ ೩೦೦ ಕ್ಕೂ ಹೆಚ್ಚು ಬಾರಿ ನಾಡಿಪಟ್ಟಿಗಳನ್ನು ಓದಲಾಗಿದೆ. ಆ ಎಲ್ಲದರಲ್ಲೂ ಪರಾತ್ಪರ ಗುರು ಡಾ. ಆಠವಲೆ ಅವರನ್ನು ‘ಅವತಾರಿ ಜೀವ’ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಗಿರುವ ಶ್ರೀವಿಷ್ಣುವಿನ ಅವತಾರ’ ಎಂದು ಕರೆಯಲಾಗಿದೆ. ಹಾಗೆಯೇ, ೨೦೧೫ ರಿಂದ ನಾಡಿಪಟ್ಟಿಗಳಲ್ಲಿ ಆಗ ಸದ್ಗುರು ಸ್ಥಾನದಲ್ಲಿ ವಿರಾಜಮಾನರಾಗಿರುವ ಸೌ. ಬಿಂದಾ ನೀಲೇಶ ಸಿಂಗಬಾಳ ಮತ್ತು ಸೌ. ಅಂಜಲಿ ಮುಕುಲ ಗಾಡಗೀಳ ಅವರನ್ನೂ ‘ಅವತಾರಿ ಜೀವ’ ಎಂದು ಉಲ್ಲೇಖಿಸಲಾಗಿದೆ ಮತ್ತು ಇಬ್ಬರೂ ಪರಾತ್ಪರ ಗುರು ಡಾ. ಆಠವಲೆ ಅವರ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಹೇಗೆ ಭಾಗವಹಿಸುತ್ತಿದ್ದಾರೆ ಎಂಬುದನ್ನೂ ಹೇಳಲಾಗಿದೆ. ನಾಡಿಪಟ್ಟಿಯನ್ನು ಬರೆದ ಮಹರ್ಷಿಗಳು ಆ ಇಬ್ಬರನ್ನು ‘ಶ್ರೀ ಮಹಾಲಕ್ಷ್ಮಿಯ ಅವತಾರ’ ಎಂದು ಉಲ್ಲೇಖಿಸಿದ್ದಾರೆ. ಮಹರ್ಷಿಗಳು ಸೌ. ಬಿಂದಾ ಸಿಂಗಬಾಳ ಮತ್ತು ಸೌ. ಅಂಜಲಿ ಗಾಡಗೀಳ ಅವರನ್ನು ‘ಪರಾತ್ಪರ ಗುರು ಡಾ. ಆಠವಲೆಯವರ ಉತ್ತರಾಧಿಕಾರಿಗಳು’ ಎಂದು ಗೌರವಿಸಿದ್ದಾರೆ. ಮಹರ್ಷಿಗಳು ಪರಾತ್ಪರ ಗುರು ಡಾ. ಆಠವಲೆ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಕರೆಯಲು ಹೇಳಿದಂತೆಯೇ, ಸೌ. ಬಿಂದಾ ಸಿಂಗಬಾಳ ಅವರನ್ನು ‘ಶ್ರೀಸತ್‌ಶಕ್ತಿ’ ಮತ್ತು ಸೌ. ಅಂಜಲಿ ಗಾಡಗೀಳ ಅವರನ್ನು ‘ಶ್ರೀಚಿತ್‌ಶಕ್ತಿ’ ಎಂದು ಕರೆಯಲು ಹೇಳಿದ್ದಾರೆ. ಇದರಿಂದ ಮಹರ್ಷಿಗಳು ಸನಾತನ ಸಂಸ್ಥೆಯ ಈ ಮೂವರು ಗುರುಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅವತಾರತ್ವವನ್ನು ಅವರ ಅಪಾರ ಕಾರ್ಯದ ಮೂಲಕ ಕಳೆದ ೩೦ ವರ್ಷಗಳಿಂದ ಸಾಧಕರು ಅನುಭವಿಸುತ್ತಿದ್ದಾರೆ
ಕಳೆದ ೩೦ ವರ್ಷಗಳಿಂದ ಸಾಧಕರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅದ್ವಿತೀಯ ಕಾರ್ಯವನ್ನು ನೋಡುತ್ತಿದ್ದಾರೆ. ಸನಾತನ ಸಂಸ್ಥೆಯ ಸ್ಥಾಪನೆ, ಅದರ ಮೂಲಕ ಭಾರತದಾದ್ಯಂತ ಅಧ್ಯಾತ್ಮ ಪ್ರಚಾರದ ಕಾರ್ಯ, ಅಧ್ಯಾತ್ಮ ಪ್ರಚಾರದಿಂದ ಸಾಧಕರ ನಿರ್ಮಾಣ, ಸಾವಿರಾರು ಉನ್ನತ ಸಾಧಕರು ಮತ್ತು ೧೩೦ ಕ್ಕೂ ಹೆಚ್ಚು ಸಂತರು ಇರುವಂತಹ ಸಾಧಕರ ಸಾಧನೆಯ ಪಯಣ, ಹಿಂದೂ ರಾಷ್ಟ್ರ ಸ್ಥಾಪನೆಗೆ ಸಾಧಕರಿಗೆ ಸಿಗುತ್ತಿರುವ ಮಾರ್ಗದರ್ಶನ, ಹಿಂದೂ ರಾಷ್ಟ್ರ ಸ್ಥಾಪನೆಗೆ ಸಿಗುತ್ತಿರುವ ಮಾನ್ಯತೆ ಮುಂತಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಅನೇಕ ಕಾರ್ಯಗಳನ್ನು ಕೇವಲ ಸಾಧಕರು ಮಾತ್ರವಲ್ಲದೆ, ಸಮಾಜದ ಗಣ್ಯ ವ್ಯಕ್ತಿಗಳೂ ಆಶ್ಚರ್ಯದಿಂದ ನೋಡುತ್ತಿದ್ದಾರೆ. ೩೦ ವರ್ಷಗಳ ಅಲ್ಪಾವಧಿಯಲ್ಲಿ ಇಂತಹ ಅಪಾರ ಕಾರ್ಯವನ್ನು ಅವತಾರಿ ವ್ಯಕ್ತಿಯೇ ಮಾಡಬಹುದು ! ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ದೇವತ್ವದ ಅನುಭೂತಿಗಳು ಸಾಧಕರಿಗೆ ಮೊದಲಿನಿಂದಲೂ ಬರುತ್ತಿವೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೯.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !