
‘ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ (೪೮ ನೇ ಸಂತರು, ವಯಸ್ಸು ೯೧ ವರ್ಷ) ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಾಸವಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಭೇಟಿಯಾಗುವ ಮೊದಲು ನಾವು ಒಂದು ಕೋಣೆಯಲ್ಲಿ ಕುಳಿತಿದ್ದೆವು. ಆಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅಲ್ಲಿಗೆ ಬಂದರು. ಆಗ ನನಗೆ ಅರಿವಾದ ಅಂಶ ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ನೀಡಲಾಗಿದೆ.
೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ದರ್ಶನವಾದ ಕೂಡಲೇ ನನಗೆ ತುಂಬಾ ಆನಂದವಾಯಿತು.
೨. ನಾವು ಕುಳಿತಿದ್ದ ಕೋಣೆ ತುಂಬಾ ಪ್ರಕಾಶಮಾನವಾಯಿತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ತೇಜಸ್ಸು ಎಲ್ಲೆಡೆ ಹರಡಿತ್ತು.
೩. ಅವರು ತುಂಬಾ ಭವ್ಯದಿವ್ಯ ಕಾಣಿಸುತ್ತಿದ್ದರು.
೪. ಅವರ ಮಾತುಗಳಲ್ಲಿ ಸಹಜತೆ, ನಮ್ರತೆ ಮತ್ತು ಪ್ರೀತಿ ಈ ಗುಣಗಳನ್ನು ನನಗೆ ಅನುಭವಿಸಲು ಸಾಧ್ಯವಾಯಿತು.
೫. ನನ್ನ ಮಗ ಶ್ರೀ. ಅಮಿತ ಡಗವಾರ ಇದ್ದಕ್ಕಿದ್ದಂತೆ ಒಂದು ಸಂದೇಶ ನೀಡಲು ಅಲ್ಲಿ ಬಂದನು. ಆಗ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರು ಅವನ ಬಟ್ಟೆಗಳ ಬಗ್ಗೆ ಹೇಳುತ್ತಿದ್ದರು. ಆಗ ನನಗೆ ಅವರು ಅಮಿತನ ಅಂತರಂಗದ ಶುದ್ಧೀಕರಣ ಮಾಡುತ್ತಿದ್ದಾರೆ’ ಎಂದು ಅನಿಸಿತು.
೬. ನಾವು ದೇವಿಯ ಗರ್ಭಗುಡಿಯಲ್ಲಿ ಕುಳಿತಿರುವಂತೆ ನನಗೆ ಕೋಣೆಯಲ್ಲಿ ಶಾಂತಿಯ ಅರಿವಾಯಿತು.
೭. ನನಗೆ ದೈವೀ ಸುಗಂಧ ಬಂದಿತು.
೮. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರು ಮುಗುಳ್ನಗೆ ಬೀರುತ್ತಿದ್ದರು. ಅವರು ಎಲ್ಲರನ್ನೂ ವಾತ್ಸಲ್ಯಭಾವದಿಂದ ನೋಡುತ್ತಿದ್ದರು.
೯. ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರನ್ನು ಅನುಭವಿಸುತ್ತಿದ್ದಾಗ ಪ. ಪೂ. ಗುರುದೇವರನ್ನು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅನುಭವಿಸುತ್ತಿದ್ದೇನೆ’ ಎಂದು ನನಗೆ ಅನಿಸಿತು. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರು ಗುರುದೇವರ ಬಗ್ಗೆ ಒಂದು ನೆನಪನ್ನು ಹೇಳಿದರು. ಆಗ ‘ಅವರು ಗುರುದೇವರೊಂದಿಗೆ ಏಕರೂಪತೆಯನ್ನು ಸಾಧಿಸಿದ್ದಾರೆ’ ಎಂದು ನನಗೆ ಅನಿಸಿತು.
‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರ ಸತ್ಸಂಗ ನನಗೆ ಲಭಿಸಿತು’ ಅದರ ಬಗ್ಗೆ ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿ ಬಂದಿತು. ನನ್ನಿಂದ ದೇವರಲ್ಲಿ ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರಂತೆ ನೀನು ನಮ್ಮನ್ನು ರೂಪಿಸು’ ಎಂದು ಪ್ರಾರ್ಥನೆ ಯಾಯಿತು. ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅವರ ಅಮೂಲ್ಯ ಪ್ರೀತಿ ಮತ್ತು ವಾತ್ಸಲ್ಯ ಭಾವ ನನಗೆ ಅನುಭವಿಸಲು ಸಿಕ್ಕಿತು’ ಆ ಬಗ್ಗೆ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು!’
– ಪೂ. (ಶ್ರೀಮತಿ) ಮಂದಾಕಿನಿ ಡಗವಾರ (೧೧೯ ನೆಯ ಸಂತರು, ವಯಸ್ಸು ೬೧ ವರ್ಷ), ಫೋಂಡಾ, ಗೋವಾ. (೨೨.೬.೨೦೨೪)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ