|

ದಾವಣಗೆರೆ – ಇಲ್ಲಿನ ಶ್ರೀ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಭಾರಿ ವಿವಾದ ನಿರ್ಮಾಣವಾಗಿದೆ. ಈ ಹಿಂದಿನ ನಿಗದಿತ ಮಾರ್ಗವನ್ನೇ ಬಳಸಲು ಅವಕಾಶ ನೀಡಬೇಕೆಂಬ ಆಗ್ರಹ ಸ್ಥಳೀಯರು ಮತ್ತು ಗಣೇಶ ಮಂಡಳದ ಯುವಕರು ಮುಂದಿಟ್ಟಿದ್ದಾರೆ. ಈ ಕಾರಣದಿಂದ ಮೆರವಣಿಗೆಗೆ ತೆರಳಿದ ಮೂರ್ತಿಯನ್ನು ಮಧ್ಯ ರಸ್ತೆಯಲ್ಲಿಯೇ ನಿಲ್ಲಿಸಲಾಯಿತು. ಈ ಮೆರವಣಿಗೆ 21 ದಿನಗಳ ಗಣೇಶೋತ್ಸವದ ನಂತರ ನಡೆಸಲಾಗುತ್ತಿತ್ತು.
ದಾವಣಗೆರೆಯ ಬಸವರಾಜ ಪೇಟೆಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗಣೇಶಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವಾಗ ಈ ವಿವಾದ ಉಂಟಾಯಿತು. ಈ ಹಿಂದೆಯೂ ಮೆರವಣಿ ‘ಮದಿನಾ ಆಟೋ ಸ್ಟ್ಯಾಂಡ್’ ಮತ್ತು ‘ಹಂಸಬಾವಿ ಸರ್ಕಲ್’ ಎಂಬ ಮುಸಲ್ಮಾನ ಬಾಹುಳ್ಯವಿರುವ ಪ್ರದೇಶಗಳ ಮೂಲಕ ಸಾಗುತ್ತಿತ್ತು; ಆದರೆ 2 ವರ್ಷಗಳ ಹಿಂದೆ ಇದೇ ಮಾರ್ಗದಲ್ಲಿ ಕಲ್ಲು ತೂರಾಟ ಸಂಭವಿಸಿದ್ದರಿಂದ, ಪೊಲೀಸ ಇಲಾಖೆಯು ಭದ್ರತೆಯ ದೃಷ್ಟಿಯಿಂದ ಈ ಮಾರ್ಗವನ್ನು ರದ್ದುಗೊಳಿಸಿ ಹೊಸ ಮಾರ್ಗವನ್ನು ನಿಗದಿಪಡಿಸಿತ್ತು.
ಈ ವರ್ಷವೂ ಪೊಲೀಸ್ ಇಲಾಖೆ ಹೊಸ ಮಾರ್ಗವನ್ನು ಅನುಸರಿಸಲು ಸೂಚಿಸಿತು; ಆದರೆ ಗಣೇಶ ಮಂಡಳಿಯ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಪ್ರತಿವರ್ಷದಂತೆ ಈ ವರ್ಷವೂ ನಾವು ಅದೇ ಹಿಂದಿನ ಮಾರ್ಗದಿಂದಲೇ ಹೋಗುತ್ತೇವೆ” ಎಂಬ ಮಂಡಳಿಯವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿಂದೂ ಮಹಿಳೆಯರೂ ಪೊಲೀಸರ ಎದುರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಮಂಡಿಸಿದರು.
ಹಿಂದುಗಳಿಂದ ಶ್ರೀ ಗಣೇಶನ ಕಣ್ಣುಗಳ ಮೇಲೆ ಕಪ್ಪು ಬಟ್ಟೆ ಹಾಕಿ ಪ್ರತಿಭಟನೆ!
ಪೋಲೀಸರ ನಿರ್ಧಾರವನ್ನು ಬದಲಾಯಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಸ್ಥಳೀಯ ಹಿಂದೂಗಳು ಹಾಗೂ ಗಣೇಶ ಮಂಡಳಿಯ ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಶ್ರೀ ಗಣೇಶಮೂರ್ತಿಗೆ ಕಪ್ಪು ಬಟ್ಟೆ ಹಾಕಿ ಪ್ರತಿಭಟನೆ ನಡೆಸಿದರು. “ಪೋಲೀಸರು ಹಿಂದಿನ ಮಾರ್ಗಕ್ಕೆ ಅನುಮತಿ ನೀಡದಿದ್ದರೆ ನಾವು ಮೆರವಣಿಗೆಯನ್ನು ಮುಂದುವರಿಸಲಿರುವುದಿಲ್ಲ. ನಾವು ಮದಿನಾ ಆಟೋ ಸ್ಟ್ಯಾಂಡ್ ಮತ್ತು ಹಂಸಬಾವಿ ಸರ್ಕಲ್ ಮಾರ್ಗವನ್ನೇ ಬೇಕೆಂದು ಆಗ್ರಹಿಸುತ್ತೇವೆ,” ಎಂಬುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !