
ವಾಷಿಂಗ್ಟನ್ (ಅಮೇರಿಕಾ) – ಡೊನಾಲ್ಡ್ ಟ್ರಂಪ್ ಇವರ ಆಮದ ಶುಲ್ಕ ಹೆಚ್ಚಳದ ನಿರ್ಣಯದ ನಂತರ ಅಮೇರಿಕಾದ 9 ಲಕ್ಷ ಜನರು ಬಡವರಾಗುವವರು, ಎಂದು ಅಮೇರಿಕಾದ ಯೇಲ್ ವಿಶ್ವವಿದ್ಯಾಲಯದ ವರದಿಯೊಂದು ತಿಳಿಸಿದೆ.
ಭಾರತದ ಅರ್ಥ ವ್ಯವಸ್ಥೆಯ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರುವುದಿಲ್ಲ !
‘ಗ್ಲೋಬಲ್ ರೇಟಿಂಗ್’ ಸಂಸ್ಥೆಯ ಪ್ರಕಾರ, ಈ ಶುಲ್ಕ ಹೆಚ್ಚಳವು ಭಾರತದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನವು ಶೇ. 6.5 ರಿಂದ 6.9 ಕ್ಕೆ ಏರಿದೆ. ಅಮೆರಿಕಾಗೆ ಭಾರತದ ರಫ್ತು ಕೇವಲ 2% ರಷ್ಟಿದೆ. ಆದ್ದರಿಂದ, ಭಾರತದ ಮೇಲೆ ಈ ಶುಲ್ಕ ಹೆಚ್ಚಳದ ಯಾವುದೇ ವಿಶೇಷ ಪರಿಣಾಮ ಆಗುವುದಿಲ್ಲ ಇದು ಸ್ಪಷ್ಟವಾಗಿದೆ. ಅಮೇರಿಕಾಗೆ ರಫ್ತು ಕಡಿಮೆ ಇದ್ದರೂ ಕೂಡ ಇತರ ದೇಶಗಳು ಭಾರತೀಯ ವಸ್ತುಗಳಿಗೆ ಅವರ ಮಾರುಕಟ್ಟೆಯಲ್ಲಿ ಸ್ವಾಗತ ಕೋರಿದೆ.
ಆಮದು ಶುಲ್ಕ ಮತ್ತು ಬಡತನದ ನಡುವಿನ ಸಂಬಂಧ ತಿಳಿದುಕೊಳ್ಳಿ !
ಅಮೇರಿಕಾದಿಂದ ಅನೇಕ ದೇಶಗಳ ಮೇಲೆ ಹೆಚ್ಚಿನ ಆಮದು ಶುಲ್ಕ ವಿಧಿಸಿದೆ. ಆದ್ದರಿಂದ ಅಮೆರಿಕಾದಲ್ಲಿ ಆಮದು ಮಾಡಿಕೊಂಡ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಅಮೆರಿಕಾವು ಅನೇಕ ಅಗತ್ಯ ವಸ್ತುಗಳಿಗಾಗಿ ಆಮದನ್ನು ಅವಲಂಬಿಸಿದೆ (ಉದಾಹರಣೆಗೆ ಮ್ಯಾಂಗನೀಸ್, ಗ್ರ್ಯಾಫೈಟ್, ಗ್ಯಾಲಿಯಮ್, ಟ್ಯಾಂಟಲಮ್‌ನಂತಹ ಖನಿಜಗಳು). ಇದರಿಂದಾಗಿ, ಸಾಮಾನ್ಯ ಅಮೆರಿಕನ್ ನಾಗರಿಕರಿಗೆ ಈ ವಸ್ತುಗಳನ್ನು ಖರೀದಿಸುವುದು ಕಷ್ಟವಾಗುತ್ತದೆ. ಹಣದುಬ್ಬರ ಹೆಚ್ಚಳದಿಂದಾಗಿ ಅವರ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದು ಅವರನ್ನು ಒಂದು ರೀತಿಯಲ್ಲಿ ಬಡತನದ ಕಡೆಗೆ ತಳ್ಳುತ್ತದೆ.
ಸಂಪಾದಕೀಯ ನಿಲುವುಡೊನಾಲ್ಡ್ ಟ್ರಂಪ್ ಇವರು ಅಮೆರಿಕಾದ ತುಘಲಕ್ ಆಗಿದ್ದೂ ಅಮೆರಿಕಾದ ಪ್ರಗತಿ ಮಾಡುವುದರ ಬದಲು ಅಧೋಗತಿಯ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಅಮೆರಿಕಾದ ನಾಗರಿಕರು ಈ ಸಂದರ್ಭದಲ್ಲಿ ಇಲ್ಲಿಯವರೆಗೆ ಶಾಂತವಾಗಿ ಏಕೆ ಇದ್ದಾರೆ ? ಇದೆ ಯಕ್ಷಪ್ರಶ್ನೆ ಆಗಿದೆ ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !