‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ರಂಗೋಲಿ ೬೪ ಕಲೆಗಳಲ್ಲಿ ಒಂದು ಕಲೆ ಆಗಿದೆ. ಈಗ ಈ ಕಲೆಯು ಎಲ್ಲ ಮನೆಗಳಿಗೆ ತಲುಪಿದೆ. ಹಬ್ಬಹರಿದಿನಗಳಂದು, ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ಸೌಂದರ್ಯದ ಸಾಕ್ಷಾತ್ಕಾರ ಮತ್ತು ಮಂಗಲದ ಸಿದ್ಧಿ – ಇವು ರಂಗೋಲಿಯ ಎರಡು ಉದ್ದೇಶಗಳಾಗಿವೆ. ಯಾವ ಸ್ಥಳದಲ್ಲಿ ಸಾತ್ತ್ವಿಕ ರಂಗೋಲಿಯನ್ನು ಬಿಡಿಸಲಾಗುತ್ತದೆಯೋ, ಅಲ್ಲಿ ತಾನಾಗಿಯೇ ಮಂಗಳಕರ ವಾತಾವರಣ ತಯಾರಾಗುತ್ತದೆ. ಹಿಂದೂ ಧರ್ಮದ ಎಲ್ಲ ಹಬ್ಬಗಳು ಮತ್ತು ವಿಧಿಗಳು ವಿವಿಧ ದೇವತೆ ಗಳಿಗೆ ಸಂಬಂಧಿಸಿವೆ. ಆಯಾ ಹಬ್ಬದ ದಿನ ಮತ್ತು ವಿಧಿಯ ಸಮಯದಲ್ಲಿ ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಯಾವಾಗಲೂ ಇರುವುದ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ವಿಧಿಯಿಂದ ರಂಗೋಲಿಯಲ್ಲಿ ಆಕರ್ಷಿತವಾಗುತ್ತದೆ.

ಪ್ರತಿಯೊಂದು ಹಬ್ಬಕ್ಕನುಗುಣವಾಗಿ ಆಯಾ ದೇವತೆಯ ತತ್ತ್ವವು ರಂಗೋಲಿಯಿಂದ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಅದರ ಲಾಭ ಎಲ್ಲರಿಗೂ ಆಗಲಿ ಎಂಬ ಉದ್ದೇಶದಿಂದ ಸನಾತನದ ಸಾಧಕ-ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಡಿಯಲ್ಲಿ ವಿವಿಧ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಅನೇಕ ಸಾತ್ತ್ವಿಕ ರಂಗೋಲಿಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳನ್ನು ಸನಾತನದ ‘ಸಾತ್ತ್ವಿಕ ರಂಗೋಲಿಗಳು’ ಎಂಬ ಕಿರುಗ್ರಂಥದಲ್ಲಿ ನೀಡಲಾಗಿದೆ. ಈ ಸನಾತನದ ಸಾತ್ತ್ವಿಕ ರಂಗೋಲಿಗಳನ್ನು ಕು. ಸಂಧ್ಯಾ ಮಾಳಿ ಇವರು ರಚಿಸಿದ್ದಾರೆ. ಈ ರಂಗೋಲಿಗಳಿಂದ ದೇವತೆಯ ತತ್ತ್ವವು ಆಕರ್ಷಿತವಾಗಿ ಮತ್ತು ಪ್ರಕ್ಷೇಪಣೆಗೊಂಡು ಅಲ್ಲಿನ ವಾತಾವರಣವು ಆ ತತ್ತ್ವದಿಂದ ತುಂಬಿಕೊಂಡು ಅದರ ಲಾಭ ಎಲ್ಲರಿಗೂ ಆಗುತ್ತದೆ. ದೇವತೆಯ ತತ್ತ್ವವನ್ನು ಆಕರ್ಷಿಸುವ ಯಂತ್ರ, ದೇವತೆಯ ಸಾತ್ತ್ವಿಕ ಚಿತ್ರ ಮತ್ತು ಸಾತ್ತ್ವಿಕ ರಂಗೋಲಿಯಿಂದ ಪ್ರಕ್ಷೇಪಿತಗೊಳ್ಳುವ ಸ್ಪಂದನಗಳ ಬಗ್ಗೆ ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ೧೬ ಅಕ್ಟೋಬರ್ ೨೦೧೮ ರಂದು ಒಂದು ಪ್ರಯೋಗ ವನ್ನು ಮಾಡಲಾಯಿತು. ಈ ಪ್ರಯೋಗಕ್ಕಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣವನ್ನು ಉಪಯೋಗಿಸಲಾಯಿತು. ಪರೀಕ್ಷೆಯ ನಿರೀಕ್ಷಣೆಯ ವಿಶ್ಲೇಷಣೆ, ಫಲಿತಾಂಶ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯಲ್ಲಿನ ಘಟಕಗಳ ಮಾಹಿತಿ
೧ ಅ. ದೇವತೆಯ ಯಂತ್ರ : ಯಂತ್ರ ಎಂದರೆ ಒಂದು ವಿಶಿಷ್ಟ ಆಕೃತಿಬಂಧ !


೭ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ವಿವಿಧ ದೇವತೆಗಳ ತತ್ತ್ವ ಗಳನ್ನು ಆಕರ್ಷಿಸುವ ವಿವಿಧ ಯಂತ್ರಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ‘ಶ್ರೀ ಮಹಾಲಕ್ಷ್ಮೀ ಯಂತ್ರ’ವು ಶ್ರೀ ಲಕ್ಷ್ಮೀದೇವಿಯ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತದೆ ಮತ್ತು ‘ಶ್ರೀಯಂತ್ರ’ವು ಶ್ರೀ ದುರ್ಗಾದೇವಿಯ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತದೆ.
೧ ಆ. ದೇವತೆಯ ಸಾತ್ತ್ವಿಕ ಚಿತ್ರ

ಸನಾತನ ಸಂಸ್ಥೆಯ ಸಾಧಕ-ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗ ದರ್ಶನದಂತೆ ಶ್ರೀ ಲಕ್ಷ್ಮೀ ದೇವಿಯ ಮತ್ತು ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಆಯಾ ದೇವಿಯ ತತ್ತ್ವವು ಬಹಳಷ್ಟು ಪ್ರಮಾಣ ದಲ್ಲಿ ಬಂದಿದೆ.
೧ ಇ. ಸಾತ್ತ್ವಿಕ ರಂಗೋಲಿ

ಈ ರಂಗೋಲಿಗಳಲ್ಲಿ ಒಂದು ರಂಗೋಲಿ ಯಲ್ಲಿ ಶ್ರೀ ಲಕ್ಷ್ಮೀ ದೇವಿಯ ತತ್ತ್ವ ಮತ್ತು ಇನ್ನೊಂದರಲ್ಲಿ ಶ್ರೀ ದುರ್ಗಾದೇವಿಯ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ಈ ರಂಗೋಲಿಗಳನ್ನು ಸನಾತನದ ಕಲಾಕಾರ ಸಾಧಕಿಯರು ಪರಾತ್ಪರ ಗುರು ಡಾ. ಆಠವಲೆ ಯವರ ಮಾರ್ಗದರ್ಶನದಲ್ಲಿ ರಚಿಸಿದ್ದಾರೆ.
೨. ಪರೀಕ್ಷೆಯಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ
೨ ಅ. ನಕಾರಾತ್ಮಕ ಊರ್ಜೆಯ ಬಗೆಗಿನ ನಿರೀಕ್ಷಣೆಯ ವಿಶ್ಲೇಷಣೆ : ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ಸಾತ್ತ್ವಿಕ ರಂಗೋಲಿಗಳು, ಯಂತ್ರ ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ನಕಾರಾತ್ಮಕ ಶಕ್ತಿ ಕಂಡುಬರಲಿಲ್ಲ.
೨ ಆ. ಸಕಾರಾತ್ಮಕ ಊರ್ಜೆಯ ಬಗ್ಗೆ ನಿರೀಕ್ಷಣೆಯ ವಿಶ್ಲೇಷಣೆ : ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ಸಾತ್ತ್ವಿಕ ರಂಗೋಲಿಗಳು, ಯಂತ್ರ ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು.
೩. ನಿಷ್ಕರ್ಷ
ದೇವಿಯ ಯಂತ್ರದಲ್ಲಿರುವಂತಹ ಸಕಾರಾತ್ಮಕ ಊರ್ಜೆ (ಚೈತನ್ಯ) ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಯ ತತ್ತ್ವ ಗಳನ್ನು ಆಕರ್ಷಿಸುವ ಸನಾತನ ರಚಿತ ಸಾತ್ತ್ವಿಕ ರಂಗೋಲಿಗಳು ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ಇದೆ.
ಮೇಲಿನ ಎಲ್ಲ ಅಂಶಗಳ ಬಗ್ಗೆ ಅಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೪’ ರಲ್ಲಿ ನೀಡಲಾಗಿದೆ.
೪. ಪರೀಕ್ಷೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೪ ಅ. ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ಯಂತ್ರಗಳಲ್ಲಿ ಬಹಳಷ್ಟ್ಟು ಚೈತನ್ಯವಿದೆ : ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ಯಂತ್ರಗಳನ್ನು ಆದಿ ಶಂಕರಾಚಾರ್ಯರು (ಅಧ್ಯಾತ್ಮ ದಲ್ಲಿ ಅಧಿಕಾರಿ ವ್ಯಕ್ತಿ) ರಚಿಸಿದ್ದಾರೆ.
೭ ನೇಯ ಶತಮಾನದಲ್ಲಿದ್ದ ಆದಿ ಶಂಕರಾಚಾರ್ಯರು ಅವತಾರಿ ಪುರುಷ ರಾಗಿದ್ದರು. ಅವರಲ್ಲಿ ಅತಿ ಸೂಕ್ಷ್ಮಸ್ಪಂದನಗಳನ್ನು ಗ್ರಹಿಸುವ ಸಾಮರ್ಥ್ಯ ಇದ್ದುದರಿಂದ, ಅವರು ಉಪಾಸಕರಿಗೆ ಆಧ್ಯಾತ್ಮಿಕ ಲಾಭದಾಯಕವಾಗಿ ರುವ ದೇವತೆಗಳ ವಿವಿಧ ಯಂತ್ರಗಳನ್ನು ತಯಾರಿಸಿದರು. ಈ ಯಂತ್ರಗಳು ಸಾಕಷ್ಟು ಸಾತ್ತ್ವಿಕವಾಗಿದ್ದು, ಈ ಯಂತ್ರಗಳಲ್ಲಿ ಸಂಬಂಧಿತ ದೇವತೆಯ ತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯ ಇದೆ. ಆದ್ದರಿಂದ ಪರೀಕ್ಷಣೆಯಲ್ಲಿನ ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ಯಂತ್ರಗಳಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ಸಕಾರಾತ್ಮಕ ಶಕ್ತಿ ಕಂಡುಬಂದಿದೆ.

೪ ಆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕ-ಕಲಾಕಾರರು ರಚಿಸಿದ ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಯ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ದೇವಿಯರ ಯಂತ್ರ ಗಳಂತೆ ಸಕಾರಾತ್ಮಕ ಸ್ಪಂದನಗಳು ಇರುವುದು : ಸ್ಪಂದನಶಾಸ್ತ್ರದ ಪ್ರಕಾರ, ಒಂದು ದೇವತೆಯ ಚಿತ್ರ ಅಥವಾ ಮೂರ್ತಿಯು ಅದರ ಮೂಲ ರೂಪಕ್ಕೆ ಎಷ್ಟು ಹೆಚ್ಚು ಹೋಲುತ್ತದೆಯೋ, ಅಷ್ಟು ಹೆಚ್ಚು ಪ್ರಮಾಣದಲ್ಲಿ ಆ ಚಿತ್ರ ಅಥವಾ ಮೂರ್ತಿಯಲ್ಲಿ ಆ ದೇವತೆಯ ಸ್ಪಂದನಗಳು ಆಕರ್ಷಿತವಾಗುತ್ತವೆ. ಸನಾತನ ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸೂಕ್ತ ಅಭ್ಯಾಸ ಮಾಡಿ, ಪರಾತ್ಪರ ಗುರು ಡಾ. ಆಠವಲೆಯವರು ಕಾಲಕ್ಕನುಗುಣವಾಗಿ ನೀಡಿದ ಮಾರ್ಗದರ್ಶನದಂತೆ ರಚಿಸಿದ್ದಾರೆ. ಇದರಿಂದಾಗಿ ಆ ಚಿತ್ರಗಳಲ್ಲಿ ಆಯಾ ದೇವತೆಗಳ ತತ್ತ್ವ (ಚೈತನ್ಯ) ಬಂದಿದೆ. ಆದ್ದರಿಂದ ಆ ಚಿತ್ರಗಳು ಸಾಕಷ್ಟು ಸಾತ್ತ್ವಿಕವಾಗಿವೆ. ಇದರಿಂದ ಆ ಚಿತ್ರಗಳಲ್ಲಿ ಸಾಕಷ್ಟು ಸಕಾರಾತ್ಮಕ ಊರ್ಜೆ ಕಂಡುಬಂದಿದೆ.
ಸಾಮಾನ್ಯವಾಗಿ ಎಲ್ಲ ರಂಗೋಲಿಗಳಲ್ಲಿ ಸಕಾರಾತ್ಮಕ ಸ್ಪಂದನಗಳು ಇರುವುದಿಲ್ಲ. ರಂಗೋಲಿಯು ಎಷ್ಟು ಸಾತ್ತ್ವಿಕವಾಗಿರುತ್ತದೆಯೋ, ಅದರಲ್ಲಿ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಹೆಚ್ಚು ಇರುತ್ತದೆ. ಸಾತ್ತ್ವಿಕ ರಂಗೋಲಿಯ ಸಕಾರಾತ್ಮಕ ಸ್ಪಂದನಗಳ ಲಾಭ ರಂಗೋಲಿ ಬಿಡಿಸುವವರಿಗೆ ಮತ್ತು ನೋಡುವವರಿಗೆ ಇಬ್ಬರಿಗೂ ಆಗುತ್ತದೆ. ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ ಅಂದರೆ ‘ಸೂಕ್ಷ್ಮ’. ಸಾತ್ತ್ವಿಕ ರಂಗೋಲಿಯನ್ನು ರಚಿಸುವಾಗ ‘ರಂಗೋಲಿಯಲ್ಲಿ ದೇವತೆಯ ತತ್ತ್ವ ಬರುತ್ತಿದೆಯೇ ?’, ಎಂದು ತಿಳಿದುಕೊಳ್ಳಲು ಚಿತ್ರಕಾರರಲ್ಲ್ಲಿ ಸೂಕ್ಷ್ಮ ಸ್ಪಂದನಗಳನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಈ ಸಾಮರ್ಥ್ಯವು ಸೂಕ್ತ ಸಾಧನೆಯಿಂದ ವಿಕಸಿತವಾಗುತ್ತದೆ. ಸನಾತನ-ನಿರ್ಮಿತ ಶ್ರೀ ಲಕ್ಷ್ಮೀತತ್ತ್ವ ಮತ್ತು ಶ್ರೀ ದುರ್ಗಾತತ್ತ್ವ ಇರುವ ರಂಗೋಲಿಗಳನ್ನು ಸನಾತನದ ಸಾಧಕ-ಕಲಾಕಾರರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ರಚಿಸಿದ್ದಾರೆ. ಅವುಗಳನ್ನು ರಚಿಸುವಾಗ ಅದರಲ್ಲಿ ಸಂಬಂಧಿಸಿದ ದೇವತೆಯ ತತ್ತ್ವವು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುವಂತಹ ಆಕೃತಿಬಂಧಗಳನ್ನು ಉಪಯೋಗಿಸಿದ್ದಾರೆ. ಈ ರಂಗೋಲಿಗಳಲ್ಲಿ ಆಯಾ ದೇವತೆಗಳ ತತ್ತ್ವವು ಬಂದಿದೆ. ಇದರಿಂದ ಈ ರಂಗೋಲಿಗಳಲ್ಲಿ ಸಾಕಷ್ಟು ಸಕಾರಾತ್ಮಕ ಊರ್ಜೆ ಕಂಡುಬಂದಿದೆ.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (ಅಕ್ಟೋಬರ್ ೭, ೨೦೨೦)
ವಿ-ಅಂಚೆ : [email protected]
ಯುನಿವರ್ಸಲ್ ಆರಾ ಸ್ಕ್ಯಾನರ್ ಮಿತಿಗಳ ಹಿನ್ನೆಲೆಯಲ್ಲಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಆಧ್ಯಾತ್ಮಿಕ ಸಂಶೋಧನೆಗಾಗಿ ಲೋಲಕ ಪರೀಕ್ಷೆಯನ್ನು (Pendulum Testing) ಪರಿಚಯಿಸುತ್ತಿದೆ.
ಶೈಕ್ಷಣಿಕ, ವೈದ್ಯಕೀಯ ಮತ್ತು ಕಾರ್ಯನೀತಿ ರೂಪಿಸುವಂತಹ ವಿಷಯಗಳಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು, ಕಾಲದ ಅವಶ್ಯಕತೆಯಾಗಿದೆ! – ಶಾನ್ ಕ್ಲಾರ್ಕ್, ಫೋಂಡಾ, ಗೋವಾ
ಮೂರನೇ ಮಹಾಯುದ್ಧದ ಬಗ್ಗೆ ಸೂಕ್ಷ್ಮಜ್ಞಾನಪ್ರಾಪ್ತಕರ್ತ ಸಾಧಕರಾದ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !
ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ ! – (ಲೇಖನ ೧೩)
ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !