ಮೂರನೇ ಮಹಾಯುದ್ಧದ ಬಗ್ಗೆ ಸೂಕ್ಷ್ಮಜ್ಞಾನಪ್ರಾಪ್ತಕರ್ತ ಸಾಧಕರಾದ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !

ಸದ್ಯ ಜಗತ್ತಿನಲ್ಲಿನ ವಿವಿಧ ದೇಶಗಳಲ್ಲಿ ಪರಸ್ಪರ ಯುದ್ಧಗಳು ಆರಂಭವಾಗಿವೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಮೂರನೇ ಮಹಾಯುದ್ಧ ಭುಗಿಲೇಳುವ ಸಾಧ್ಯತೆ ನಿರ್ಮಾಣವಾಗಿದೆ. ಈ ಮೂರನೇ ಮಹಾಯುದ್ಧದ ಸಂದರ್ಭದಲ್ಲಿ ಸೂಕ್ಷ್ಮದಲ್ಲಿ ಲಭಿಸಿದ ಜ್ಞಾನವನ್ನು ನಾವು ನೋಡುತ್ತಿದ್ದೇವೆ. ‘ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟವಾದ ಈ ಲೇಖನಮಾಲೆಯ ಮೊದಲ ಭಾಗದಲ್ಲಿ ನಾವು ಮೂರನೇ ಮಹಾಯುದ್ಧದ ಸ್ವರೂಪ ಮತ್ತು ಹಂತಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ವಾರದ ಎರಡನೇ ಭಾಗದಲ್ಲಿ, ಮೂರನೇ ಮಹಾಯುದ್ಧದ ಕಾಲದಲ್ಲಿ ಆಗುವ ಬದಲಾವಣೆಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವವರಿದ್ದೇವೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

(ಭಾಗ ೨)

ಶ್ರೀ. ನಿಷಾದ ದೇಶಮುಖ

೨ ಇ ೩. ಸಾಧನೆ ಮಾಡುವ ಜೀವಗಳಿಗೆ ಸಗುಣ ಸ್ತರದಲ್ಲಿನ ಯುದ್ಧದಲ್ಲಿ ಯಶಸ್ಸನ್ನು ಪಡೆಯಲು ಬರುವುದು : ಸಾಧನೆ ಮಾಡುವವರು ಅಥವಾ ಮಾಡದವರು, ಈ ಎಲ್ಲರಿಗೂ ಸ್ಥೂಲದಲ್ಲಿ ನಡೆಯುವ ಯುದ್ಧವನ್ನು ಎದುರಿಸಬೇಕಾಗುವುದು. ಹೀಗಿದ್ದರೂ, ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಮತ್ತು ‘ಸಾಧನೆ’ ಎಂದು ಯುದ್ಧ ಮಾಡುವ ಜೀವಗಳಿಗೆ ಸಗುಣ ಸ್ತರದ ಯುದ್ಧದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದಿದೆ. ಉದಾ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ಅನೇಕ ಧರ್ಮಯೋಧರ ಮನಸ್ಸಿನಲ್ಲಿ ಹಿಂದೂ ಧರ್ಮದ ತತ್ತ್ವ್ವ ಮತ್ತು ನಿಯಮಗಳ ಪ್ರಕಾರ ‘ಅನ್ಯಾಯಕಾರಿ ಮೊಘಲ್‌ ಆಡಳಿತದ ವಿರುದ್ಧ ಯುದ್ಧ ಮಾಡುವುದೇ ಶ್ರೇಷ್ಠ ಆಚರಣೆಯಾಗಿದೆ’ ಎಂಬ ಸಂಸ್ಕಾರವನ್ನು ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಅನೇಕ ಧರ್ಮಯೋಧರಿಗೆ ಅನ್ಯಾಯಕಾರಿ ಮೊಘಲ್‌ ಆಡಳಿತÀದ ವಿರುದ್ಧ ಹೋರಾಡುವುದು ಯೋಗ್ಯವಾಗಿದ್ದರೂ, ಅದಕ್ಕಾಗಿ ಮೊಘಲರಂತೆ ಹೀನ ಮಟ್ಟಕ್ಕೆ ಇಳಿಯದೆ, ಹಿಂದೂ ಧರ್ಮದ ತತ್ತ್ವ ಮತ್ತು ನಿಯಮಗಳಿಗನುಸಾರವಾಗಿ ಸಂಘರ್ಷ ಮಾಡಲು ಪ್ರೇರಣೆ ನೀಡಿದರು.

ಉದಾ., ಮೊಘಲರು ಹಿಂದೂ ರಾಜರನ್ನು ಯುದ್ಧದಲ್ಲಿ ಸೋಲಿಸಿ, ಅವರ ಸ್ತ್ರೀಯರನ್ನು ಮೊಘಲ್‌ ತಮ್ಮ ರಾಜನಿಗೆ ಉಡುಗೊರೆಯಾಗಿ ನೀಡುತ್ತಿದ್ದರು. ಒಮ್ಮೆ ಮಾವಳೆಗಳು (ಧರ್ಮಯೋಧರು) ಕಲ್ಯಾಣದ ಮೊಘಲ್‌ ಸುಬೇದಾರನನ್ನು ಸೋಲಿಸಿ, ಅವನ ಸೊಸೆಯನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಉಡುಗೊರೆಯಾಗಿ ತಂದಿದ್ದರು. ಆ ಸಮಯದಲ್ಲಿ ಮಹಾರಾಜರು ಅವಳನ್ನು ಉಡುಗೊರೆಯಾಗಿ ಸ್ವೀಕರಿಸದೆ ಗೌರವಿಸಿದರು ಮತ್ತು ಗೌರವಪೂರ್ವಕವಾಗಿ ಅವಳ ಮಾವನ ಮನೆಗೆ ಹಿಂತಿರುಗಿಸಿದರು. ಈ ರೀತಿ ಛತ್ರಪತಿ ಶಿವಾಜಿ ಮಹಾರಾಜರು ಮಾವಳೆಗಳಿಗೆ ಕಾಲಕಾಲಕ್ಕೆ ಸರಿಯಾದ ಆಚರಣೆಯ ಶಿಕ್ಷಣವನ್ನು ನೀಡಿದ್ದರಿಂದ, ಅನೇಕ ಮಾವಳೆಗಳ ಮನೋಲಯವು ಒಂದಷ್ಟು ಪ್ರಮಾಣದಲ್ಲಿ ಸಾಧ್ಯವಾಯಿತು ಮತ್ತು ಅನ್ಯಾಯದ ಮೊಘಲ್‌ ಆಡಳಿತದ ವಿರುದ್ಧ ಯುದ್ಧ ಮಾಡುವ ಮಾಧ್ಯಮದಿಂದ ಅವರ ಸಾಧನೆಯೂ ಆಯಿತು. ಬಾಜಿಪ್ರಭು ದೇಶಪಾಂಡೆ, ನೇತಾಜಿ ಪಾಲ್ಕರ್, ತಾನಾಜಿ ಮಾಲುಸರೆ ಅವರಂತಹ ಅನೇಕ ಮಾವಳೆಗಳು ಕಾಲ ಮತ್ತು ಕ್ಷಮತೆಗೆ ಅನುಗುಣವಾಗಿ ಅಗತ್ಯ ಯುದ್ಧಕಲೆಯನ್ನು ಕರಗತ ಮಾಡಿಕೊಂಡು, ಅತ್ಯಾಚಾರಿ ಮೊಘಲ್‌ ಅಧಿಕಾರದ ವಿರುದ್ಧ ಬಂಡೆದ್ದರು ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ವಿಜಯವನ್ನೂ ಸಾಧಿಸಿದರು. ಇದರ ವಿರುದ್ಧ ಆ ಕಾಲದಲ್ಲಿನ ಇತರ ರಾಜರು ಮೊಘಲರ ವಿರುದ್ಧ ಬಂಡಾಯ ಮಾಡಿದರು, ಆದರೆ ಅವರಿಗೆ ‘ಯುದ್ಧ ಮಾಡುವುದು ಒಂದು ಸಾಧನೆ ಆಗಿದೆ’ ಎಂಬ ಸಾಧನೆಯ ತಳಹದಿ ಮತ್ತು ಪ್ರತ್ಯಕ್ಷ ಕೃತಿಯ ಸಂದರ್ಭದಲ್ಲಿ ಸಂತರ ಮಾರ್ಗದರ್ಶನ ಇಲ್ಲದ ಕಾರಣ ಅವರು ಭೀಕರ ಸೋಲನ್ನು ಅನುಭವಿಸಿದರು ಮತ್ತು ಅವರ ರಾಜ್ಯವನ್ನು ಮೊಘಲರು ವಶಪಡಿಸಿಕೊಂಡರು. ಅದೇ ರೀತಿ, ಮೂರನೇ ಮಹಾಯುದ್ಧದ ಸಮಯದಲ್ಲಿ ‘ತಪ್ಪು ಕೃತಿಗಳ ವಿರುದ್ಧದ ಹೋರಾಟಗಳು’, ‘ಸ್ವರಕ್ಷಣೆ’, ‘ಪ್ರಥಮ ಚಿಕಿತ್ಸೆ’, ‘ಅಗ್ನಿಶಾಮಕ ದಳದ ತರಬೇತಿ’, ‘ಮನೆಮದ್ದಿನ ಗಿಡಗಳನ್ನು ಬೆಳೆಸುವಿಕೆ’ ಮುಂತಾದ ಜೀವನೋಪಯೋಗಿ ಕೃತಿಗಳನ್ನು ಕರಗತ ಮಾಡಿಕೊಂಡು, ಸಂತರ ಮಾರ್ಗದರ್ಶನದಂತೆ ಕೃತಿ ಮಾಡುವವರು ಸಗುಣ ಸ್ತರದ ಯುದ್ಧದಿಂದ ನಿರ್ಮಾಣವಾಗುವ ವಿವಿಧ ಸಂಕಟಗಳು ಮತ್ತು ತೊಂದರೆಗಳನ್ನು ಜಯಿಸಲು ಸಾಧ್ಯವಾಗುವುದು. ಇದಕ್ಕೆ ವಿರುದ್ಧ, ವಿವಿಧ ವಿಷಯಗಳಲ್ಲಿ ತಜ್ಞರಾಗಿದ್ದರೂ ಸಂತರ ಮಾರ್ಗದರ್ಶನವಿಲ್ಲದೆ ಕೇವಲ ಸ್ವಂತ ಬುದ್ಧಿಯಿಂದ ಪ್ರಯತ್ನಿಸುವವರು ಭೀಕರ ಸೋಲನ್ನು ಅನುಭವಿಸಿ ಮೃತ್ಯುವನ್ನು ಎದುರಿಸಬೇಕಾಗುವುದು.

೩. ಮೂರನೇ ಮಹಾಯುದ್ಧದ ಕಾಲಾವಧಿ ಮತ್ತು ಮಹಾಯುದ್ಧದ ಹಂತಗಳಿಗನುಗುಣವಾಗಿ ಅದರ ಲಕ್ಷಣಗಳು

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಫೋಂಡಾ, ಗೋವಾ. (ಜ್ಞಾನ ಪಡೆದ ದಿನಾಂಕ ೨೮.೯.೨೦೨೫, ಸಮಯ ರಾತ್ರಿ ೯.೦೫ ಮತ್ತು ಒಟ್ಟು ಅವಧಿ ೨ ನಿಮಿಷಗಳು)

ಮೂರನೇ ಮಹಾಯುದ್ಧದ ಕುರಿತು ಸೂಕ್ಷ್ಮಜ್ಞಾನಪ್ರಾಪ್ತಕರ್ತ ಸಾಧಕ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಲ್ಲಿ ಪ್ರಾಪ್ತವಾದ ಜ್ಞಾನ, ಭಾಗ 1

https://sanatanprabhat.org/kannada/174994.html