ಯುನಿವರ್ಸಲ್ ಆರಾ ಸ್ಕ್ಯಾನರ್ ಮಿತಿಗಳ ಹಿನ್ನೆಲೆಯಲ್ಲಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಆಧ್ಯಾತ್ಮಿಕ ಸಂಶೋಧನೆಗಾಗಿ ಲೋಲಕ ಪರೀಕ್ಷೆಯನ್ನು (Pendulum Testing) ಪರಿಚಯಿಸುತ್ತಿದೆ.

2021-2022 ರಲ್ಲಿ ‘ಯುನಿವರ್ಸಲ್ ಆರಾ ಸ್ಕ್ಯಾನರ್’ ಉಪಕರಣದ ಮೂಲಕ ಪರೀಕ್ಷೆಗಳನ್ನು ಮಾಡುವಾಗ ಕೆಲವು ಘಟಕಗಳ ಪ್ರಭಾವಳಿಗಳು (Aura) 2300 ಮೀಟರ್‌ಗಿಂತಲೂ ಹೆಚ್ಚಿದ್ದವು; ಆದರೆ ಸ್ಥಳಾವಕಾಶದ ಕೊರತೆಯಿಂದಾಗಿ ಅವುಗಳನ್ನು ನಿಖರವಾಗಿ ಅಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಪ್ರಭಾವಳಿಗಳನ್ನು ನಿಖರವಾಗಿ ಅಳೆಯುವಲ್ಲಿ ಎದುರಾಗುವ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಲೋಲಕ-ಪರೀಕ್ಷೆಯ ಮೂಲಕ, ಅಂದರೆ ಲೋಲಕವನ್ನು ಬಳಸಿ ಅವುಗಳನ್ನು ನಿಖರವಾಗಿ ಅಳೆಯಲು ಪ್ರಾರಂಭಿಸಿತು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಲೋಲಕ-ಪರೀಕ್ಷೆಯ ಮೂಲಕ ಘಟಕದ ನಿಖರವಾದ ಪ್ರಭಾವಳಿಯನ್ನು ಅಳೆಯುವ ವಿಧಾನ

‘ಲೋಲಕದಿಂದ ಘಟಕದ ನಿಖರವಾದ ಪ್ರಭಾವಳಿಯನ್ನು ಹೇಗೆ ಅಳೆಯಲಾಗುತ್ತದೆ?’ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಾಧಕರು ಲೋಲಕ-ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ? ಎಂಬುದರ ಮಾಹಿತಿಯನ್ನು ಮುಂದೆ ನೀಡಲಾಗಿದೆ.

ಲೋಲಕ (Pendulum)

1. ಲೋಲಕ-ಪರೀಕ್ಷೆ ಮಾಡುವ ಸಾಧಕನು ಮೊದಲು ತನ್ನ ಇಷ್ಟದೇವತೆಗೆ ‘ನನ್ನ ಸುತ್ತಲೂ ಮತ್ತು ಲೋಲಕದ ಸುತ್ತಲೂ ರಕ್ಷಾ-ಕವಚವು ನಿರ್ಮಾಣವಾಗಲಿ’ ಎಂದು ಪ್ರಾರ್ಥಿಸುತ್ತಾನೆ. ನಂತರ ಅವನು ಮುಂದಿನ ಪ್ರಶ್ನೆಗಳನ್ನು ಕೇಳುತ್ತಾನೆ.

ಪ್ರಶ್ನೆ 1. ನಾನು ಲೋಲಕ-ಪರೀಕ್ಷೆಯನ್ನು ಮಾಡಬಹುದೇ?

ಪ್ರಶ್ನೆ 2. ಲೋಲಕ-ಪರೀಕ್ಷೆ ಮಾಡಲು ಆಯ್ಕೆ ಮಾಡಿದ ಸ್ಥಳ ಮತ್ತು ಸಮಯ ಸೂಕ್ತವಾಗಿದೆಯೇ?

ಲೋಲಕವು ಎರಡೂ ಪ್ರಶ್ನೆಗಳಿಗೆ ಸಮ್ಮತಿಯನ್ನು ಸೂಚಿಸಿದ ನಂತರ ಸಾಧಕನು ಲೋಲಕ-ಪರೀಕ್ಷೆಯನ್ನು ಮಾಡಲು ಪ್ರಾರಂಭಿಸುತ್ತಾನೆ.

10 ರಿಂದ 100 ಗುಣಾಂಕಗಳ ಪಟ್ಟಿ

2. ಲೋಲಕ-ಪರೀಕ್ಷೆ ಮಾಡಲು, ಯಾವುದನ್ನು ಪರೀಕ್ಷಿಸಬೇಕೋ ಆ ಘಟಕ ಅಥವಾ ಅದರ ಚಿತ್ರ ಮತ್ತು ಕೆಲವು ಕೋಷ್ಟಕಗಳ (ಚಾರ್ಟ್‌ಗಳ) ಅವಶ್ಯಕತೆಯಿರುತ್ತದೆ. ಸಾಧಕನು ಘಟಕದ ಪ್ರಭಾವಳಿಯನ್ನು ಅಳೆಯಲು ಅದರ ಮುಂದೆ ಲೋಲಕವನ್ನು ಹಿಡಿದು ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ.

ಸೌ. ಮಧುರಾ ಧನಂಜಯ ಕರ್ವೆ

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ವಿವಿಧ ರೀತಿಯ ಕೋಷ್ಟಕಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ: ‘ಹೌದು’ ಮತ್ತು ‘ಇಲ್ಲ’ ಎಂಬ ಕೋಷ್ಟಕ; ‘ಮೀಟರ್’ ಮತ್ತು ‘ಕಿಲೋಮೀಟರ್’ ಕೋಷ್ಟಕ; ಸಂಖ್ಯೆಗಳ ಕೋಷ್ಟಕಗಳು (ಉದಾ. 1 ರಿಂದ 10 ರವರೆಗಿನ ಸಂಖ್ಯೆಗಳ ಕೋಷ್ಟಕ); 5, 10, 50, 100 ಇತ್ಯಾದಿ ಗುಣಕಗಳಲ್ಲಿರುವ ಸಂಖ್ಯೆಗಳ ಕೋಷ್ಟಕಗಳು; 1 ಸಾವಿರದಿಂದ 10 ಸಾವಿರ, 10 ಸಾವಿರದಿಂದ 1 ಲಕ್ಷ, 1 ಲಕ್ಷದಿಂದ 10 ಲಕ್ಷ, 10 ಲಕ್ಷದಿಂದ 100 ಲಕ್ಷ ಇತ್ಯಾದಿ ಗುಣಕಗಳಲ್ಲಿರುವ ಸಂಖ್ಯೆಗಳ ಕೋಷ್ಟಕಗಳು. ಇವುಗಳಲ್ಲಿ ಅವಶ್ಯಕವಿರುವ ಕೋಷ್ಟಕಗಳನ್ನು ಬಳಸಿ ಮತ್ತು ಅಗತ್ಯವಿರುವ ಪ್ರಶ್ನೆಗಳನ್ನು ಕೇಳಿ, ಸಾಧಕನು ಆ ಘಟಕದ ನಿಖರವಾದ ಪ್ರಭಾವಳಿಯನ್ನು ಅಳೆಯುತ್ತಾನೆ ಮತ್ತು ಅದನ್ನು ದಾಖಲಿಸಿಟ್ಟುಕೊಳ್ಳುತ್ತಾನೆ.

3. ಲೋಲಕ-ಪರೀಕ್ಷೆ ಮುಗಿದ ನಂತರ ಸಾಧಕನು ಇಷ್ಟದೇವತೆಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.

– ಸೌ. ಮಧುರಾ ಧನಂಜಯ್ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (10.7.2024)

ವಿಜ್ಞಾನಿಗಳು, ಸಂಶೋಧಕರು, ವಾಚಕರು ಮತ್ತು ಹಿತೈಷಿಗಳಿಗೆ ವಿನಮ್ರ ವಿನಂತಿ!

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡುತ್ತಿರುವ ಆಧ್ಯಾತ್ಮಿಕ ಸಂಶೋಧನೆಗೆ ಉಪಯುಕ್ತವಾಗುವಂತಹ ಯಾವುದೇ ಹೊಸ ವೈಜ್ಞಾನಿಕ ಉಪಕರಣಗಳ ಬಗ್ಗೆ ನಿಮಗೆ ಮಾಹಿತಿಯಿದ್ದರೆ, ದಯವಿಟ್ಟು ಈ ಕೆಳಗಿನ ಇ-ಮೇಲ್ ವಿಳಾಸವನ್ನು ಸಂಪರ್ಕಿಸಿ ನಮಗೆ ಖಂಡಿತ ತಿಳಿಸಿ.

ಇ-ಮೇಲ್: [email protected]

  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮ ಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಎಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ, ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.
  • ಇಲ್ಲಿ ಪ್ರಸಿದ್ಧಪಡಿಸಲಾದ ಅನುಭೂತಿಗಳು ಕೆಲವು ಬಾರಿ ಕೆಷ್ಟ ಶಕ್ತಿಗಳಿಂದ ಅಥವಾ ‘ಭಾವವಿದ್ದಲ್ಲಿ ದೇವ’ ಎಂಬ ಉಕ್ತಿಯಂತೆ ಸಾಧಕರಿಗೆ / ಸಂತರಿಗೆ / ಧರ್ಮಪ್ರೇಮಿಗಳಿಗೆ ಬಂದಿರುವ ವೈಯಕ್ತಿಕ ಅನುಭೂತಿಗಳಾಗಿವೆ. ಅವು ಎಲ್ಲರಿಗೂ ಬರುತ್ತವೆ ಎಂದೇನಿಲ್ಲ. - ಸಂಪಾದಕರು
  • ಸೂಕ್ಷ್ಮ-ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆ ಮಾಡುವವನಿಗೆ ಆಗುತ್ತದೆಯೋ, ಅದನ್ನು ‘ಸೂಕ್ಷ್ಮ-ಜಗತ್ತು’ ಎಂದು ಕರೆಯುತ್ತಾರೆ.
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.