
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು (ಸೆಪ್ಟೆಂಬರ್ ೬) ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಇದರ ಅವಧಿ ೧೪ ವರ್ಷಗಳು. ನಂತರ ವ್ರತದ ಉದ್ಯಾಪನೆ ಮಾಡಲಾಗುತ್ತದೆ. ಈ ವ್ರತವನ್ನು ಯಾರಾದರೂ ಮಾಡಲು ಸೂಚಿಸಿದರೆ ಅಥವಾ ಅನಂತವ್ರತದ ದಾರ ದೊರೆತರೆ ಮಾಡುತ್ತಾರೆ.
ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ಎಂದೂ ಕಡಿಮೆ ಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.
ಅ. ಲೌಕಿಕ ಇಚ್ಛೆಆಕಾಂಕ್ಷೆಗಳು ಈಡೇರ ಬೇಕೆಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತದೆ. ಅನಂತಪೂಜೆ ಎಂದರೆ ಶ್ರೀ ವಿಷ್ಣುವಿನ ಕ್ರಿಯಾಶಕ್ತಿಯನ್ನು ಗ್ರಹಿಸಿಕೊಳ್ಳುವುದು. ಅನಂತ ವ್ರತದ ಪ್ರಧಾನ ದೇವರು ಅನಂತ, ಅಂದರೆ ಭಗವಾನ ಶ್ರೀ ವಿಷ್ಣು. ಯಮುನಾ ಮತ್ತು ಶೇಷನಾಗ ದೇವತೆಗಳು ಈ ಪೂಜೆಯ ಗೌಣ ದೇವತೆಗಳಾಗಿರುತ್ತಾರೆ.
ಆ. ಸಾಧ್ಯವಾದಷ್ಟು ದಂಪತಿಗಳೇ ಅನಂತನ ವ್ರತದ ಪೂಜೆಯನ್ನುನಡೆಸಬೇಕು.
ಅ. ಸಾಧಾರಣ ಸನ್ನಿವೇಶಗಳಲ್ಲಿ ಪುರುಷ ಅಥವಾ ಮಹಿಳೆ ಒಬ್ಬರೇ ಪೂಜೆ ಮಾಡಬಹುದು. ಪೂಜೆ ಹೇಗೆ ಮಾಡಬೇಕೆಂದು ಸಂಕ್ಷಿಪ್ತವಾಗಿ ನೀಡಲಾಗಿದೆ.
೧. ಕಳೆದುಹೋದ ಸಮೃದ್ಧಿಯನ್ನು ಮರಳಿ ಪಡೆಯಲು ಈ ಪೂಜೆಯ ಸಂಕಲ್ಪವನ್ನು ಮಾಡಲಾಗುತ್ತದೆ.
೨. ಶಾಸ್ತ್ರೋಕ್ತ ಶ್ರೀ ಯಮುನಾದೇವಿಯ ಷೋಡಶೋಪಚಾರ ಪೂಜೆ : ಮೊದಲು ಶ್ರೀ ಯಮುನಾದೇವಿಗೆ ಆಸನ ನೀಡಬೇಕು. ಶ್ರೀ ಯಮುನಾ ದೇವಿಯ ಪವಿತ್ರ ಪಾದಗಳನ್ನು ತೊಳೆದ ನಂತರ, ಅರ್ಘ್ಯ ನೀಡಿ, ಐದು ಪದಾರ್ಥಗಳೊಂದಿಗೆ ಸ್ನಾನ ಅರ್ಪಿಸಬೇಕು.ದೇವಿಗೆ ಜಲಾಭಿಷೇಕ ಮಾಡಬೇಕು. ವ್ರತಾ ಚರಣಿ ಮಹಿಳೆ ಅರಿಶಿನ-ಕುಂಕುಮವನ್ನು ಶ್ರೀ ಯಮುನಾ ದೇವಿಗೆ ಅರ್ಪಿಸಬೇಕು. ಕಳಶದಲ್ಲಿ ಅಕ್ಷತೆಗಳನ್ನು ಅರ್ಪಿಸಿ ಶ್ರೀಯಮುನಾ ದೇವಿಯ ಅಂಗ-ಪೂಜೆ ಮಾಡಬೇಕು. ಧೂಪ, ಆರತಿ, ನೈವೇದ್ಯ ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಪೂಜೆ ಯನ್ನು ಮುಕ್ತಾಯಗೊಳಿಸಬೇಕು.
ಇ. ಶೇಷನಾಗನ ಪೂಜೆ – ಇದರಲ್ಲಿ ದರ್ಭೆಯಿಂದ ಮಾಡಿದ ಏಳು ಹೆಡೆಗಳ ನಾಗರಹಾವನ್ನು ಶೇಷನಾಗನ ಸಂಕೇತವಾಗಿ ತಯಾರಿಸಿ ಅದರ ಶಾಸ್ತ್ರೊಕ್ತ ಪೂಜೆ ನಡೆಸಲಾಗುತ್ತದೆ.
ಮೊದಲು ಶೇಷನಾಗನನ್ನು ಆಹ್ವಾನಿಸಿ ಆಸನವನ್ನು ನೀಡಿ ಪಾದ್ಯಪೂಜೆ, ಅರ್ಘ್ಯ ಅರ್ಪಿಸಲಾಗುತ್ತದೆ.ಶೇಷನಾಗನ ಅಂಗ-ಪೂಜೆ ಮಾಡಲಾಗುತ್ತದೆ. ಶೇಷನಾಗನ ಏಳು ಹೆಡೆಗಳನ್ನು ಪೂಜಿಸಲಾಗುತ್ತದೆ. ನಂತರ ಶೇಷನಾಗನ ನಾಮಪೂಜೆ ಮಾಡಲಾಗುತ್ತದೆ. ಕೊನೆಯಲ್ಲಿ ಧೂಪ, ದೀಪ, ನೈವೇದ್ಯ ಇತ್ಯಾದಿ ಅರ್ಪಿಸಿ ಪೂಜೆಯನ್ನು ಮುಕ್ತಾಯಗೊಳಿಸಲಾಗುತ್ತದೆ.
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?