
ನಾಮವು ವೇದಗಳಿಗಿಂತಲೂ ಶ್ರೇಷ್ಠವಾಗಿದೆ. ಅದು ಹೇಗೆಂದು ನೋಡಿ. ವೇದಾಧ್ಯಯನದಿಂದ ಲಾಭ ಪಡೆಯಲು ನಾಲ್ಕು ವೇದಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಬಹಳ ಸಮಯ ಮತ್ತು ಶ್ರಮ ಬೇಕಾಗುತ್ತದೆ. ನಾಮಕ್ಕೆ ಯಾವುದೇ ಶ್ರಮವಿಲ್ಲ. ಎರಡನೆಯದಾಗಿ, ವೇದಾಧ್ಯಯನ ಮಾಡಲು ಎಲ್ಲರಿಗೂ ಅಧಿಕಾರವಿಲ್ಲ. ಆದರೆ ನಾಮವನ್ನು ಯಾರಾದರೂ ತೆಗೆದುಕೊಳ್ಳಬಹುದು, ವೇದಗಳ ಮಂತ್ರಗಳು ‘ಓಂ’ಕಾರದಿಂದಲೇ ಪ್ರಾರಂಭವಾಗುತ್ತವೆ; ಹಾಗಾಗಿ ವೇದಗಳ ಆರಂಭದಲೂ ನಾಮವೇ ಇದೆ. ನಾಮವು ತೀರ್ಥಯಾತ್ರೆಗಿಂತಲೂ ಶ್ರೇಷ್ಠವಾಗಿದೆ. ನಾಮವು ಮನೆಯಲ್ಲಿಯೇ ಅಂತರಂಗದ ಪರಿವರ್ತನೆಯನ್ನು ತರುತ್ತದೆ. ಪಂಢರಪುರಕ್ಕೆ ಹೋಗಿ ನಾಮವನ್ನು ತೆಗೆದುಕೊಳ್ಳಲು ಕಲಿಯದಿದ್ದರೆ, ಅಲ್ಲಿ ಹೋಗುವುದು ವ್ಯರ್ಥವಾಯಿತು ಎನ್ನಬೇಕು. ‘ನಾಮವನ್ನು ತೆಗೆದುಕೊಳ್ಳಬೇಕು’, ಎಂಬ ಬುದ್ಧಿ ಮೂಡಲು ಅಲ್ಲಿ ಹೋಗುವುದು ಅವಶ್ಯಕವಾಗಿದೆ. ನಾಮವು ಎಲ್ಲ ಸತ್ಕರ್ಮಗಳ ರಾಜನಾಗಿದೆ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !