“ಕೃಷ್ಣವರ್ಣೀಯರು ಹಾಗೂ ಯಹೂದಿಗಳಿಗೆ ತಮ್ಮ ನರಸಂಹಾರದ ಇತಿಹಾಸ ಗೊತ್ತಿದೆ, ಆದರೆ ಹಿಂದೂಗಳಿಗೆ ಇಲ್ಲ !” – ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ನವದೆಹಲಿ – 1946ರಲ್ಲಿ ಪಶ್ಚಿಮ ಬಂಗಾಳದ ಕೊಲಕಾತಾ ಮತ್ತು ಇಂದಿನ ಬಾಂಗ್ಲಾದೇಶದ ನೋಯಖಾಲಿ ಪ್ರದೇಶದಲ್ಲಿ ಹಿಂದೂಗಳ ಮೇಲಿನ ಭೀಕರ ನರಮೇಧ ನಡೆದಿತ್ತು. ಅದನ್ನಾಧಾರ ಮಾಡಿಕೊಂಡು ತಯಾರಿಸಲಾದ ‘ದಿ ಬೆಂಗಾಲ್ ಫೈಲ್ಸ್’ ಎಂಬ ಚಲನಚಲನ ಚಿತ್ರ ನಾಳೆ, ಸೆಪ್ಟೆಂಬರ್ 5 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಲನ ಚಿತ್ರಕ್ಕೆ ಬಂಗಾಳ ಸರಕಾರದಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದ್ದರೂ, ಕೇವಲ ಟ್ರೇಲರ್‌ನನ್ನೇ ಈಗಾಗಲೇ 1.5 ಕೋಟಿ ಭಾರತೀಯರು ವೀಕ್ಷಿಸಿದ್ದಾರೆ.

ಚಲನ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಸೆಪ್ಟೆಂಬರ್ 4 ರಂದು ಒಂದು ರಾಷ್ಟ್ರೀಯ ಹಿಂದಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿ, “ಹಿಂದೂಗಳಿಗೆ ತಮ್ಮ ಮೇಲೆ ನಡೆದ ನರಮೇಧಗಳ ಬಗ್ಗೆ ಯಾವುದೇ ಜ್ಞಾನ ಇಲ್ಲ. ನೀವು ಒಬ್ಬ ಕೃಷ್ಣವರ್ಣೀಯ ಅಥವಾ ಯಹೂದಿಯನ್ನು ಅವರ ಮೇಲೆ ನಡೆದ ಹಿಂಸಾಚಾರಗಳ ಕುರಿತು ಕೇಳಿದರೆ, ಅವರಿಗೆ ಎಲ್ಲಾ ಇತಿಹಾಸ ಗೊತ್ತಿರುತ್ತದೆ. ಆದರೆ ಹಿಂದೂಗಳಿಗೆ ತಮ್ಮ ಇತಿಹಾಸದ ಬಗ್ಗೆ ತಿಳಿದೇ ಇಲ್ಲ. ತೃಣಮೂಲ ಕಾಂಗ್ರೆಸ್‌ನ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಕೂಡಾ ಈ ಚಲನ ಚಿತ್ರವನ್ನು ನೋಡಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದರು.

ಅಗ್ನಿಹೋತ್ರಿ ಅವರು ಕಾರ್ಯಕ್ರಮಕ್ಕೆ ಬರುವಾಗ “Never Again” ಎಂದು ಬರೆದ ಟೀ-ಶರ್ಟ್ ಧರಿಸಿದ್ದರು. ಇದರ ಬಗ್ಗೆ ಅವರು, “ಹಿಂದೂಗಳ ನರಸಂಹಾರ ಮತ್ತೆ ನಡೆಯಬಾರದು ಎಂಬ ಸಂದೇಶವನ್ನು ನಾನು ಹಂಚಲು ಬಯಸುತ್ತೇನೆ” ಎಂದರು.
ಅಗ್ನಿಹೋತ್ರಿ ಅವರು ಉಲ್ಲೇಖಿಸಿದ ಪ್ರಮುಖ ಅಂಶಗಳು !
ಅಗ್ನಿಹೋತ್ರಿ ಅವರು ಪ್ರಸ್ತಾಪಿಸಿದ ಅಂಶಗಳು:
1. 1946 ರಲ್ಲಿ ಮುಸ್ಲಿಮರಿಂದ ಹಿಂದೂಗಳ ಮೇಲೆ ನಡೆಯುತ್ತಿದ್ದ ದಾಳಿಗಳನ್ನು ಕ್ರಾಂತಿಕಾರಿ ಗೋಪಾಲ್ ಮುಖರ್ಜಿ ಸಹಿಸಲು ಸಾಧ್ಯವಾಗಲಿಲ್ಲ. ಅವರು ಎಲ್ಲಾ ಹಿಂದೂ ಜಾತಿಗಳನ್ನು ಸಂಘಟಿಸಿ ಮುಸ್ಲಿಮರಿಗೆ ಪ್ರತಿಕ್ರಿಯೆ ನೀಡಿದರು. ಗೋಪಾಲ್ ಮುಖರ್ಜಿ ಹಿಂದೂಗಳ ರಕ್ಷಕ ಮತ್ತು ಸಂಘಟಕರಾಗಿದ್ದರು. ಅವರ ನೇತೃತ್ವದಲ್ಲಿ, ಹಿಂದೂಗಳು ‘ಜೈ ಮಾ ಕಾಳಿ’ ಎಂದು ಜಯಘೋಷ ಮೊಳಗಿಸುತ್ತಾ ಪ್ರತ್ಯುತ್ತರ ನೀಡಿದರು. ಮುಖರ್ಜಿ ಅವರು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಬಾರದು ಎಂದು ಹಿಂದೂಗಳಿಗೆ ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲ, ಅವರು ತಮ್ಮ ಮನೆಯಲ್ಲಿ ಕೆಲವು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡಿದ್ದರು.
2. ಪಂಡಿತ್ ನೆಹರು ಮತ್ತು ಮ. ಗಾಂಧಿ ಸೋಲಿನ ಮನೋಭಾವದ ನಾಯಕರಾಗಿದ್ದರು. 1960 ರಲ್ಲಿ ಒಬ್ಬ ಪತ್ರಕರ್ತನಿಗೆ ನೆಹರು ಅವರು, “ನಮ್ಮಲ್ಲಿ ಜೈಲಿಗೆ ಹೋಗುವ ಇಚ್ಛೆ ಮತ್ತು ಸಾಮರ್ಥ್ಯ ಎರಡೂ ಇರಲಿಲ್ಲ. ಅದಕ್ಕಾಗಿಯೇ ನಾವು ದೇಶವನ್ನು ವಿಭಜಿಸಲು ಬಿಟ್ಟೆವು” ಎಂದು ಹೇಳಿದರು.
3. ಇನ್ನೊಂದೆಡೆ, ಮೊಹಮ್ಮದ್ ಅಲಿ ಜಿನ್ನಾ ಸಂಪೂರ್ಣವಾಗಿ ಸಿದ್ಧರಾಗಿದ್ದರು. ತಮ್ಮ ಕ್ಷಯರೋಗವನ್ನು ಮುಚ್ಚಿಟ್ಟು ಪಾಕಿಸ್ತಾನವನ್ನು ಸೃಷ್ಟಿಸಿದರು. ಇದನ್ನು ಇಸ್ಲಾಂನಲ್ಲಿ ‘ಅಲ್-ತಕಿಯಾ’ ಅಂದರೆ ಸುಳ್ಳು ಹೇಳುವುದು ಎಂದು ಕರೆಯುತ್ತಾರೆ. ಲಾರ್ಡ್ ಮೌಂಟ್ಬ್ಯಾಟನ್ ತಮ್ಮ ಆತ್ಮಚರಿತ್ರೆಯಲ್ಲಿ, ‘ಜಿನ್ನಾ ಅವರ ಅನಾರೋಗ್ಯದ ಬಗ್ಗೆ ನನಗೆ ತಿಳಿದಿದ್ದರೆ, ನಾನು ಪಾಕಿಸ್ತಾನವನ್ನು ಸೃಷ್ಟಿಸಲು ಅವಕಾಶ ನೀಡುತ್ತಿರಲಿಲ್ಲ’ ಎಂದು ಬರೆದಿದ್ದಾರೆ.
“ಚಲನಚಿತ್ರಕ್ಕೆ ಎದುರಾಗಿರುವ ವಿರೋಧವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿ!” – ನಿರ್ಮಾಪಕಿ ಪಲ್ಲವಿ ಜೋಶಿ ಅವರ ರಾಷ್ಟ್ರಪತಿಗೆ ಮನವಿ

ಚಲನ ಚಿತ್ರದ ನಿರ್ಮಾಪಕಿ ಪಲ್ಲವಿ ಜೋಶಿ ಅವರು ರಾಷ್ಟ್ರಪತಿಯವರಿಗೆ ಪತ್ರ ಬರೆದು ಅದರಲ್ಲಿ ಅವರು, ‘ದಿ ಬೆಂಗಾಲ್ ಫೈಲ್ಸ್’ ಭಾರತದ ಇತಿಹಾಸದ ನೋವಿನ ಭಾಗ, ಹಿಂದೂ ನರಮೇಧ ಮತ್ತು ಭಾರತ ವಿಭಜನೆಯ ಸಮಯದಲ್ಲಿ ನಡೆದ ಘಟನೆಗಳನ್ನು ಚಿತ್ರಿಸುವ ಒಂದು ಪ್ರಮುಖ ಚಲನಚಿತ್ರವಾಗಿದೆ. ಈ ಚಿತ್ರ ಕೇವಲ ಒಂದು ಕಥೆಯಲ್ಲ, ಇದು ಸತ್ಯದ ಧ್ವನಿಯಾಗಿದ್ದು, ಅದನ್ನು ಜನರಿಗೆ ತಲುಪಿಸುವುದು ಅವಶ್ಯಕವಾಗಿದೆ.
Producer of #TheBengalFiles, Pallavi Joshi, writes an open letter to the President of India:
URGENT APPEAL:
Your Excellency, @rashtrapatibhvn,“As Producer of #TheBengalFiles, I am pained that multiplex chains in Bengal have refused the film’s release under political pressure… pic.twitter.com/ERTLvqxp3y
— Vivek Ranjan Agnihotri (@vivekagnihotri) September 4, 2025
ರಾಜಕೀಯ ಒತ್ತಡದ ಕಾರಣ, ಈ ಚಿತ್ರದ ಪ್ರದರ್ಶನವನ್ನು ಮುಖ್ಯವಾಗಿ ಬಂಗಾಳ ರಾಜ್ಯದಲ್ಲಿ ತಡೆಯಲು ಪ್ರಯತ್ನಿಸಲಾಗುತ್ತಿದೆ. ನಮ್ಮ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಚಲನ ಚಿತ್ರ ಮತ್ತು ಅದರ ಕಲಾವಿದರಿಗೆ ಭದ್ರತೆ ಒದಗಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ, ಇದರಿಂದ ಸತ್ಯದ ಈ ಧ್ವನಿಯನ್ನು ಅಡಗಿಸಲು ಸಾಧ್ಯವಾಗುವುದಿಲ್ಲ. ಈ ವಿಷಯದಲ್ಲಿ ನೀವು ಮಧ್ಯಪ್ರವೇಶಿಸಿ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು ಎಂದು ನಾನು ಬಯಸುತ್ತೇನೆ, ಎಂದು ಬರೆದಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!