ತಮ್ಮ ಮನೆತನದಲ್ಲಿ ನಿಧನರಾಗಿರುವ (ಕನಿಷ್ಠ ೩ ಹಿಂದಿನ ತಲೆಮಾರುಗಳ ವರೆಗಿನ) ಎಲ್ಲ ಪಿತೃಗಳ ಶ್ರಾದ್ಧ ಕರ್ಮವನ್ನು ಮಾಡುವ ಪಕ್ಷವೇ (ಹದಿನೈದು ದಿನಗಳ) ಪಿತೃಪಕ್ಷ. ಶ್ರಾದ್ಧವೆಂದರೆ ಶ್ರದ್ಧೆಯಿಂದ ಮಾಡಿದ ಅನ್ನದಾನಾದಿ ಕರ್ಮ. ಇದರ ಭಾವವು ಅತ್ಯಂತ ಕೃತಜ್ಞತೆ, ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುವುದಾಗಿದೆ. ನಮ್ಮಲ್ಲಿ ಬ್ರಹ್ಮಯಜ್ಞ, ದೈವಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ನೃಯಜ್ಞ ಹೀಗೆ ೫ ಮಹತ್ವದ ಯಜ್ಞಗಳನ್ನು ಹೇಳಲಾಗಿದೆ.

ಅ. ಬ್ರಹ್ಮಯಜ್ಞ : ವೇದಾದಿ ಶಾಸ್ತ್ರಾಧ್ಯಯನ
ಆ. ದೈವಯಜ್ಞ : ದೇವಪೂಜೆ ಮತ್ತು ಯಜ್ಞ
ಇ. ಪಿತೃಯಜ್ಞ : ಶ್ರಾದ್ಧ ಪಕ್ಷಾದಿ
ಈ. ಭೌತಯಜ್ಞ : ಪ್ರಾಣಿ, ಪಕ್ಷಿಗಳಿಗೆ ಅನ್ನದ ಅಂಶವನ್ನು ನೀಡು ವುದು (ಗೋಗ್ರಾಸ, ಕಾಕಬಲಿ ಇತ್ಯಾದಿ)
ಉ. ನೃಯಜ್ಞ : ಅತಿಥಿ ಸತ್ಕಾರ
ಇವುಗಳಲ್ಲಿ ಪಿತೃಯಜ್ಞದ್ದೇ ಒಂದು ಭಾಗ ಎಂದರೆ ವಿದ್ಯುಕ್ತ ವಾಗಿ ಪಕ್ಷ ಮತ್ತು ಶ್ರಾದ್ಧಕರ್ಮಗಳನ್ನು ಮಾಡುವುದು !

೧. ಕುಲವೃದ್ಧಿ, ಕುಲಕ್ಷಯದಿಂದ ರಕ್ಷಣೆ ಮತ್ತು ಕೌಟುಂಬಿಕ ಸ್ವಾಸ್ಥ್ಯಕ್ಕಾಗಿ ಶ್ರಾದ್ಧವು ಮಹತ್ವದ್ದಾಗಿದೆ !
ನಮ್ಮ ಕುಲದೇವತೆಗಳು ಮತ್ತು ಪಿತೃಗಳಿಗೆ ನಮ್ಮ ಕುಲದ ಬಗ್ಗೆ ಭಾರಿ ಹೆಮ್ಮೆಯಿರುತ್ತದೆ. ಆದುದರಿಂದ, ಅವರಿಗೆ ನಿಮ್ಮಿಂದ ಅಪೇಕ್ಷೆಗಳೂ ಇರುತ್ತವೆ. ಇದರಲ್ಲಿ ವಿಳಂಬ ಮಾಡದೇ ಆಯಾ ಕರ್ಮಗಳನ್ನು ಕರ್ತವ್ಯಬುದ್ಧಿಯಿಂದ ಮತ್ತು ಶ್ರದ್ಧೆಯಿಂದ ಮಾಡು ವುದು, ಕುಲವೃದ್ಧಿ, ಕುಲಕ್ಷಯದಿಂದ ರಕ್ಷಣೆ ಮತ್ತು ಕೌಟುಂಬಿಕ ಸ್ವಾಸ್ಥ್ಯಕ್ಕಾಗಿ ಅತ್ಯಂತ ಹಿತಕರವಾಗಿದೆ.
೨. ಕವ್ಯ (ಅನ್ನ) ಪಿತೃಗಳಿಗೆ ಹೇಗೆ ತಲುಪುತ್ತದೆ ?
ನೀವು ಶಾಸ್ತ್ರೋಕ್ತ ಮಂತ್ರೋಚ್ಚಾರದೊಂದಿಗೆ ಅರ್ಪಿಸುವ ಕವ್ಯವನ್ನು (ಅನ್ನವನ್ನು) ಕವ್ಯವಾಹನ – ಅಗ್ನಿಯು ಯಾವಲೋಕ ದಲ್ಲಿ ಯಾವ ಪಿತೃವು ಯಾವ ಅನ್ನವನ್ನು ಸೇವಿಸುತ್ತಾನೆಯೋ, ಅಲ್ಲಿಗೆ ತೆಗೆದುಕೊಂಡು ಹೋಗಿ ಆತನ ಅನ್ನದಲ್ಲಿ ಪರಿವರ್ತಿಸಿ ಅಲ್ಲಿ ಆತನಿಗೆ ಅದನ್ನು ದೊರೆಯುವಂತೆ ಮಾಡುತ್ತಾನೆ. ಆತನು ದೇವರು, ಪಿತೃ, ಯಕ್ಷ, ಗಂಧರ್ವ ಹೀಗೆ ದೇವಕೋಟಿ ಯಲ್ಲಿರಲಿ ಅಥವಾ ಹುಲಿ, ಸಿಂಹ, ಆನೆ, ಕಾಗೆ, ಗರುಡ ಹೀಗೆ ಪಶುಪಕ್ಷಿಗಳ ಯೋನಿಯಲ್ಲಿರಲಿ ಅಥವಾ ಭೂತ, ಪಿಶಾಚಿ ಇತ್ಯಾದಿಗಳಲ್ಲಿರಲಿ ಅಥವಾ ಪುನಃ ಮನುಷ್ಯನಾಗಿರಲಿ. ಹೇಗೆ ಭಾರತೀಯ ರೂಪಾಯಿ ಮುದ್ರಾ ವಿನಿಮಯ ವಿಭಾಗದಿಂದ ಡಾಲರ್, ಯೂರೋ, ಪೌಂಡ್, ದಿನಾರ್ ಇತ್ಯಾದಿಗಳಲ್ಲಿ ಯೋಗ್ಯ ಬೆಲೆಯಲ್ಲಿ ರೂಪಾಂತರಗೊಳಿಸುವ ಹಾಗೆಯೆ ಇದು ಇರುತ್ತದೆ !
೩. ಶ್ರಾದ್ಧ ಪಕ್ಷ ಎಂದಿಗೂ ವ್ಯರ್ಥವಾಗುವುದಿಲ್ಲ !
‘ಒಂದು ವೇಳೆ ಪಿತೃ ಮುಕ್ತನಾಗಿದ್ದರೆ ?’ ಎಂಬ ಸಂದೇಹ ಬರಬಹುದು. ಇಂತಹ ಸ್ಥಿತಿಯಲ್ಲಿ ಪಿತೃಲೋಕದ ಮುಖ್ಯ ದೇವತೆ ‘ಅರ್ಯಮಾ’ ಇವನು ಆ ಕವ್ಯವನ್ನು ಗ್ರಹಿಸಿ ನಿಮಗೆ ತುಂಬಿ ತುಂಬಿ ಆಶೀರ್ವಾದವನ್ನು ಕೊಡುತ್ತಾನೆ. ನಿಮ್ಮ ಶ್ರಾದ್ಧ ಪಕ್ಷವು ಎಂದಿಗೂ ವ್ಯರ್ಥವಾಗುವುದಿಲ್ಲ, ಇದು ಖಂಡಿತ !
೪. ಶ್ರಾದ್ಧ ಪಕ್ಷದ ಕುರಿತು ಕೆಲವು ಅತಾರ್ಕಿಕ ವಿಚಾರ ಮತ್ತು ಅದರ ಉತ್ತರಗಳು
ಅ. ತರ್ಕ : ಕೆಲವರ ತರ್ಕ ಹೀಗಿರುತ್ತದೆ, ‘ಶ್ರಾದ್ಧ ಪಕ್ಷವನ್ನು ಮಾಡುವುದಕ್ಕಿಂತ ನಾವು ಬಡವರಿಗಾಗಿ, ಅನಾಥರಿಗಾಗಿ, ವೃದ್ಧಾಶ್ರಮದಲ್ಲಿರುವವರಿಗಾಗಿ ಅನ್ನದಾನ ಅಥವಾ ಅಂತಹದೇ ಕಲ್ಯಾಣಕಾರಿ ಏನಾದರೂ ಮಾಡುತ್ತೇವೆ.’
ಉತ್ತರ : ಈ ಕರ್ಮಗಳು ಖಂಡಿತವಾಗಿಯೂ ಪುಣ್ಯಕರ, ಲೋಕೋಪಯೋಗಿ ಮತ್ತು ಪ್ರಶಂಸನೀಯವಾಗಿವೆ, ಇದು ನಿರ್ವಿವಾದ. ಆದರೆ ಆದುದರಿಂದ ಶ್ರಾದ್ಧ ಪಕ್ಷ ಅಕರ್ತವ್ಯವೆಂದು ಆಗುವುದಿಲ್ಲ. ಹೇಗೆ ನನಗೆ ಬಾಯಾರಿಕೆಯಾದರೆ ನೀರು ಕುಡಿಯುತ್ತೇನೆ ಮತ್ತು ಹಸಿವಾದರೂ ಅನ್ನಕ್ಕೆ ಸಮ ಪ್ರಮಾಣದ ನೀರನ್ನೇ ಕುಡಿಯುತ್ತೇನೆ, ಎಂದು ಹೇಳುವುದು ಅಥವಾ, ನೀವು ಗಿಡಗಳ ಭಾಗದ ಅನ್ನೋದಕವನ್ನು ಅವುಗಳ ಪಾಲು ಸಹಿತ ತಮ್ಮ ಪ್ರಾಣಿಗಳಿಗೆ ಮಾತ್ರ ಕೊಡಬೇಕು ಎಂದು ನಿಶ್ಚಯಿಸಿದರೆ ಅಥವಾ ವಿರುದ್ಧವಾಗಿ ಮಾಡಿದರೆ ಅದು ತರ್ಕಸಂಗತವೆ ? ಶ್ರಾದ್ಧ ಪಕ್ಷದ ಕುರಿತೂ ಹಾಗೆಯೇ ಇದೆ. ಆದುದರಿಂದ ಶ್ರಾದ್ಧ ಪಕ್ಷಕ್ಕೆ ಬದಲಾಗಿ ಮೇಲಿನ ಸತ್ಕರ್ಮಗಳನ್ನು ಮಾಡಿದರೆ ಖಂಡಿತವಾಗಿಯೂ ಪುಣ್ಯ ಸಿಗುತ್ತದೆ, ಆದರೆ ಪಕ್ಷ-ಶ್ರಾದ್ಧವನ್ನು ತಪ್ಪಿಸುವ ಪಾಪ ತಲೆಗೆ ತಟ್ಟುವುದು ಇದು ಖಂಡಿತ ! ಆದುದರಿಂದ ವಿದ್ಯುಕ್ತವಾಗಿ ಪಕ್ಷ-ಶ್ರಾದ್ಧ ಮಾಡುವುದು, ಇದು ಗೃಹಸ್ಥನ ಪವಿತ್ರ ಕರ್ತವ್ಯವಾಗಿದೆ.
ಆ. ತರ್ಕ : ಕೆಲವರಲ್ಲಿ ಇಂತಹ ತರ್ಕವೂ ಇರುತ್ತದೆ, ‘ನೋಡಿ !
ಜೀವನ ಪರ್ಯಂತ ತಂದೆತಾಯಿಯೊಂದಿಗೆ ಜಗಳ ಮಾಡಿದನು ಮತ್ತು ಇಬ್ಬರೂ ಮರಣ ಹೊಂದಿದ ನಂತರ ಶ್ರಾದ್ಧ ಪಕ್ಷವನ್ನು ಮಾಡುವ ನಾಟಕ ಮಾಡುತ್ತಿದ್ದಾನೆ. ವಾರ್ಹೆವಾ ! ಇವÀನ ಕವ್ಯವನ್ನು (ಅನ್ನವನ್ನು) ಪಿತೃಗಳು ಖಂಡಿತ ಸ್ವೀಕರಿಸುವುದಿಲ್ಲ.’
ಉತ್ತರ : ತಂದೆತಾಯಿಯೊಂದಿಗೆ ಪ್ರೀತಿ, ಆದರದಿಂದ ಮತ್ತು ವಿಧೇಯತೆಯಿಂದಲೇ ವರ್ತಿಸಬೇಕು ಇದು ಸರಿಯಿದೆ; ಆದರೆ ಪಾಪಬುದ್ಧಿಯಿಂದ ಹಾಗೆ ಮಾಡದಿದ್ದರೂ, ಈಗ ಆತನು ಪಕ್ಷ-ಶ್ರಾದ್ಧವನ್ನು ಮಾಡುತ್ತಿದ್ದರೆ, ‘ಈಗಲಾದರೂ ಶ್ರದ್ಧೆಯಿಂದ ಮಾಡುತ್ತಿದ್ದಾನಲ್ಲವೇ ! ಈಶ್ವರನು ಆತನಿಗೆ ಒಳ್ಳೆಯದನ್ನು ಮಾಡಲಿ’ ಎನ್ನಬೇಕು. ಅಂದರೆÀ ತಂದೆ ತಾಯಿಯೊಂದಿಗೆ ನಿರ್ದಯೆಯಿಂದ ವರ್ತಿಸುವವನು ಅವರ ಮರಣದ ನಂತರ ಶ್ರಾದ್ಧ ಪಕ್ಷದ ಅಧಿಕಾರದಿಂದ ವಂಚಿತನಾಗುವುದಿಲ್ಲ. ಬಹುಶಃ ಭಯದಿಂದ ಅಥವಾ ಲೋಕಾಪವಾದಕ್ಕಾಗಿ ಆತನು ಪಕ್ಷ-ಶ್ರಾದ್ಧ ಮಾಡುತ್ತಿದ್ದರೆ, ಅದನ್ನಾದರೂ ತಿರಸ್ಕರಿಸ ಬೇಡಿ. ಸತ್ಕರ್ಮವನ್ನು ಮಾಡುತ್ತಿದ್ದಾನಲ್ಲ; ಇದನ್ನು ನೋಡಿ.
೫. ಶ್ರಾದ್ಧ ಪಕ್ಷವನ್ನು ತಪ್ಪಿಸದೇ ಮಾಡುವುದು ಮಹತ್ವದ್ದು !
ನಾನು ಹೇಳಲು ಇಚ್ಛಿಸುವುದೇನೆಂದರೆ ಒಂದು ವೇಳೆ ದಸರಾ, ದೀಪಾವಳಿಗೆ ರಜೆ ಸಿಗದಿದ್ದರೆ ನಡೆಯುತ್ತದೆ; ಆದರೆ ಪಕ್ಷ-ಶ್ರಾದ್ಧವನ್ನು ತಪ್ಪಿಸಬೇಡಿ. ಅದÀಕ್ಕಾಗಿ ಅವಶ್ಯಕವಾಗಿ ಸಾಕಷ್ಟು ಸಮಯವನ್ನು ಕೊಡಿ. ಅದಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳಿ. ‘ನಾವು ಭಗವಾನ್ ರಾಮಕೃಷ್ಣಾದಿಗಳನ್ನು ಗೌರವಿಸುತ್ತೇವೆ; ಆದರೆ ಅವರು ಹೇಳಿದ ಬೋಧನೆ ಮತ್ತು ಆಚರಣೆಯನ್ನು ಪಾಲಿಸುವುದಿಲ್ಲ’, ಇಂತಹ ಒಂದು ಭ್ರಷ್ಟ ಪರಂಪರೆಯು ಸದ್ಯ ಆಸ್ತಿಕರಲ್ಲಿ ಬೆಳೆಯುತ್ತಿದೆ. ಉದಾಹರಣೆಗಾಗಿ ಭರತನಿಂದ ಪಿತೃದೇಹಾಂತ್ಯದ ವಿಷಯ ತಿಳಿದೊಡನೆ ಪ್ರಭು ಶ್ರೀರಾಮನುವನವಾಸದಲ್ಲಿ ಯೋಗ್ಯವಾದ ಫಲದ ತಿರುಳಿನಿಂದ ಪಿಂಡವನ್ನು ಮಾಡಿ ಮಂತ್ರೋಚ್ಚಾರದೊಂದಿಗೆ ತಂದೆಯ ಶ್ರಾದ್ಧಕರ್ಮವನ್ನು ಪೂರ್ಣಗೊಳಿಸಿ. ಭಗವಾನ್ ಪರಶುರಾಮರು ಶತ್ರುವಿನ ರಕ್ತದಿಂದ ಕೂಡಿದ ನೀರಿನಿಂದ ಪಿತೃಗಳ ತರ್ಪಣವನ್ನು ನೀಡಿದರು. ಮಹಾರಾಜ ಯುಧಿಷ್ಠಿರನು ಮಹಾಭಾರತ ಯುದ್ಧದಲ್ಲಿ ಮರಣ ಹೊಂದಿದ ಎರಡೂ ಪಕ್ಷಗಳ ಕೋಟ್ಯಂತರ ವೀರರಿಗಾಗಿ ಶ್ರಾದ್ಧಕರ್ಮವನ್ನು ಮಾಡಿದನು, ಅರ್ಜುನನು ಯಾದವೀ ಕಲಹದಲ್ಲಿ ಸತ್ತÀ ಕೋಟ್ಯಂತರ ಯದುವೀರರ ಶ್ರಾದ್ಧ ಮತ್ತು ತರ್ಪಣವನ್ನು ಮಾಡಿಸಿದನ. ಆಧುನಿಕ ಕಾಲ ಮತ್ತು ನೌಕರಿ- ವ್ಯವಹಾರದ ಕಾರಣವನ್ನು ಮುಂದಿಟ್ಟುಕೊಂಡು ಅಥವಾ ಪತ್ನಿ / ಪತಿಯ ಸಹಕಾರ ಇದರಲ್ಲಿ ಸಿಗುತ್ತಿಲ್ಲ, ಈ ಕಾರಣವನ್ನು ಮುಂದಿಟ್ಟುಕೊಂಡು ತಪ್ಪಿಸಿಕೊಳ್ಳುವುದು ಆತ್ಮವಂಚನೆಯೇ ಆಗಿದೆ, ಇದನ್ನು ಆಸ್ತಿಕರು ಗಮನದಲ್ಲಿಡಬೇಕು.
ತಾತ್ಪರ್ಯ : ತಮ್ಮ ಈ ಪಕ್ಷ – ಶ್ರಾದ್ಧದ ಪವಿತ್ರ ಕರ್ತವ್ಯವನ್ನು ಎಲ್ಲ ಸಂಬಂಧಿತರು ಅವಶ್ಯವಾಗಿ ಪೂರ್ಣಗೊಳಿಸಬೇಕು; ಇದೇ ವಿಶೇಷ ವಿನಂತಿ ! ಈ ಪಿತೃಪಕ್ಷದ ಹದಿನೈದು ದಿನ ಗಳಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡದಿರುವುದು ಉತ್ತಮ; ಆದರೆ ಆತ್ಮಕಲ್ಯಾಣದ ಪರಮಾರ್ಥ ಸಾಧನೆಯನ್ನು ಮಾಡಲೇಬೇಕು, ಇದನ್ನೂ ಮರೆಯಬಾರದು.
– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ವೇಂಗುರ್ಲಾ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !