‘ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಅವರ ಹೇಳಿಕೆ

ವಾಷಿಂಗ್ಟನ್ – ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ವಿಶೇಷ ಸಭೆ ನಡೆಯಿತು. ಈ ಸಭೆಯಿಂದ ಅಮೆರಿಕಾ ಅಸಮಾಧಾನಗೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರರಾದ ಪೀಟರ್ ನವಾರೊ ಅವರು ಭಾರತದ ನಿಲುವನ್ನು ಟೀಕಿಸಿದ್ದಾರೆ. ‘ಫ್ರೀ ಪ್ರೆಸ್ ಜರ್ನಲ್’ ಈ ಬಗ್ಗೆ ವರದಿ ಮಾಡಿದೆ. ಈ ವರದಿಯ ಪ್ರಕಾರ ನವಾರೊ, “ಭಾರತವು ರಷ್ಯಾದೊಂದಿಗೆ ಅಲ್ಲ, ಬದಲಾಗಿ ಅಮೆರಿಕಾದೊಂದಿಗೆ ಇರಬೇಕು. ಮೋದಿ ಅವರು ಒಂದು ಕಡೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಇನ್ನೊಂದು ಕಡೆ ಪುಟಿನ್ ಅವರೊಂದಿಗೆ ಕೈ ಜೋಡಿಸುತ್ತಿರುವುದು ನಮಗೆ ಒಪ್ಪಿಗೆಯಿಲ್ಲ. ಭಾರತವು ಅನ್ಯಾಯದ ವ್ಯಾಪಾರದಲ್ಲಿ ತೊಡಗಿದ್ದು, ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಈ ಹಣವನ್ನು ರಷ್ಯಾ ಯುದ್ಧಕ್ಕಾಗಿ ಬಳಸುತ್ತದೆ. ಅದಕ್ಕಾಗಿಯೇ ನಾವು ಭಾರತದ ಮೇಲೆ ಈ ತೆರಿಗೆಯನ್ನು ವಿಧಿಸಿದ್ದೇವೆ. ಭಾರತದ ಕ್ರಮಗಳು ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿವೆ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಭಾರತವು ಏನು ಮಾಡಬೇಕು ಮತ್ತು ಏನು ಮಾಡಬಾರದು? ಎಂದು ಹೇಳಲು ಅಮೆರಿಕಾ ಯಾರು? ಇತರ ದೇಶಗಳ ಸಮಸ್ಯೆಗಳಲ್ಲಿ ಮೂಗು ತೂರಿಸುವ ಬದಲು, ಅಮೆರಿಕಾ ಮೊದಲು ತನ್ನ ದೇಶದ ಸಮಸ್ಯೆಗಳನ್ನು ನೋಡಿಕೊಳ್ಳಬೇಕು ಎಂದು ಭಾರತವು ಅಮೆರಿಕಾಗೆ ತಿವಿಯಬೇಕು! |
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine