ಅಮೆರಿಕಾದ ವಸ್ತುಗಳ ಮೇಲೆ ದೇಶವ್ಯಾಪಿ ಬಹಿಷ್ಕಾರಕ್ಕೆ ಕರೆ!

ಕೊಲ್ಹಾಪುರ, ಸೆಪ್ಟೆಂಬರ್ 1 (ಸುದ್ದಿ.) – ಅಮೆರಿಕಾ ಭಾರತದ ವಸ್ತುಗಳ ಮೇಲೆ ಶೇ.50 ರಷ್ಟು ಅನ್ಯಾಯದ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ, ಕೊಲ್ಹಾಪುರದಲ್ಲಿನ ವಿವಿಧ ಸಂಘಟನೆಗಳು ‘ಮೆಕ್‌ಡೊನಾಲ್ಡ್ಸ್’ ಎದುರು ಪ್ರತಿಭಟನೆ ನಡೆಸಿ, ಅಮೆರಿಕನ್ ಕಂಪನಿಗಳ ಉತ್ಪನ್ನಗಳ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವಂತೆ ಕರೆ ನೀಡಿದರು. ಈ ಆಂದೋಲನದ ಮೂಲಕ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಳಸಿದ ‘ಸ್ವದೇಶಿ’ ಅಸ್ತ್ರವನ್ನು ಮತ್ತೊಮ್ಮೆ ಬಳಸಿಕೊಂಡು ಅಮೆರಿಕಾದ ಆರ್ಥಿಕ ದಾದಾಗಿರಿಗೆ ಉತ್ತರ ನೀಡುವ ನಿರ್ಧಾರ ವ್ಯಕ್ತಪಡಿಸಲಾಯಿತು. ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಇತರ ಸಂಘಟನೆಗಳು ಭಾಗವಹಿಸಿದ್ದವು. ಹಿಂದುತ್ವನಿಷ್ಠ ಶ್ರೀ. ರಾಮಭಾವು ಮೇಥೆ ಅವರು ಕಾರ್ಯಕ್ರಮದ ಸೂತ್ರ ಸಂಚಾಲನ ಮಾಡಿದರು. ಆಂದೋಲನದ ನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಈ ಮನವಿಯನ್ನು ತಹಸೀಲ್ದಾರ್ ಸ್ವಪ್ನಿಲ್ ಪವಾರ್ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ‘ಶಿವಶಾಹಿ ಫೌಂಡೇಶನ್’ನ ಸಂಸ್ಥಾಪಕ ಶ್ರೀ. ಸುನೀಲ ಸಾಮಂತ, ಉದ್ಧವ ಬಾಳಾಸಾಹೇಬ ಠಾಕರೆ ಬಣದ ಉಪ ಜಿಲ್ಲಾ ಮುಖ್ಯಸ್ಥ ಶ್ರೀ. ಸಂಭಾಜಿರಾವ ಭೋಕರೆ ಮತ್ತು ಕರವೀರ ತಾಲೂಕಾ ಮುಖ್ಯಸ್ಥ ಶ್ರೀ. ರಾಜು ಯಾದವ, ಹ.ಭ.ಪ. ಮಹಾದೇವ ಯಾದವ ಮಹಾರಾಜ, ‘ಆರೋಗ್ಯ ಭಾರತಿ’ಯ ಡಾ. ಅಶ್ವಿನಿ ಮಾಳಕರ, ಶಿವಸೇನೆಯ ಉಪ ಜಿಲ್ಲಾ ಮುಖ್ಯಸ್ಥ ಶ್ರೀ. ಕಿಶೋರ ಘಾಟಗೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕರವೀರ ತಾಲೂಕಾ ಸಂಯೋಜಕ ಶ್ರೀ. ಶರದ ಮಾಳಿ, ಯುವಸೇನೆಯ ಶ್ರೀ. ಸಾಗರ ಪಾಟೀಲ, ‘ಹಿಂದೂ ಏಕತಾ ಆಂದೋಲನ’ದ ಶ್ರೀ. ದಿಲೀಪ್ ಭಿವಟೆ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
🚫🇺🇸 Boycott American Goods – Kolhapur Rises in Protest 🇮🇳
🌧️ Braving pouring rain, Hindus gathered in Kolhapur against America’s unjust Tariff hike on India.
📜 A memorandum was submitted at the District Collector’s office.
❌ America’s despicable attempt to corner Bharat… pic.twitter.com/8zTtH7uChD
— Sanatan Prabhat (@SanatanPrabhat) September 1, 2025
ಅಮೆರಿಕನ್ ವಸ್ತುಗಳ ಮೇಲೆ ಬಹಿಷ್ಕಾರಕ್ಕೆ ಕರೆ
ಅಮೆರಿಕದ ಅನ್ಯಾಯಕ್ಕೆ ಉತ್ತರವಾಗಿ, ಮೆಕ್‌ಡೊನಾಲ್ಡ್ಸ್, ಕೆ.ಎಫ್.ಸಿ, ಬರ್ಗರ್ ಕಿಂಗ್, ಪಿಜ್ಜಾ ಹಟ್, ಡೊಮಿನೋಸ್, ಸ್ಟಾರ್ ಬಕ್ಸ್, ಡಂಕಿನ್ ಡೊನಟ್ಸ್, ಸೆವೆನ್ ಅಪ್, ಕೋಕಾ-ಕೋಲಾ, ಸ್ಪ್ರೈಟ್, ಫ್ಯಾಂಟಾ, ಲೇಸ್, ಅಮೆಜಾನ್, ಉಬರ್, ನೆಟ್ ಫ್ಲಿಕ್ಸ್, ಕೋಲ್ಗೇಟ್, ಪಾಮೊಲಿವ್, ಜಾನ್ಸನ್ ಅಂಡ್ ಜಾನ್ಸನ್ ಮುಂತಾದ ಅನೇಕ ಪ್ರಸಿದ್ಧ ಅಮೆರಿಕನ್ ಬ್ರ್ಯಾಂಡ್‌ಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಯಿತು. ಅಮೆರಿಕನ್ ವಸ್ತುಗಳನ್ನು ತ್ಯಜಿಸಿ ಅದರ ಬದಲಿಗೆ ದೇಶೀಯ ವಸ್ತುಗಳನ್ನು ಹೆಮ್ಮೆಯಿಂದ ಬಳಸುವಂತೆ ಮನವಿ ಮಾಡಲಾಗಿದೆ.
ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸುವ ಅಮೆರಿಕಾದ ಹೀನ ಪ್ರಯತ್ನ
ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಭಾಗವಹಿಸಿದ ಸಂಘಟನೆಗಳು, ರಷ್ಯಾದಿಂದ ತೈಲ ಖರೀದಿಯ ಕಾರಣವನ್ನು ಮುಂದಿಟ್ಟುಕೊಂಡು ಅಮೆರಿಕವು ಭಾರತದ ಕೈಗಾರಿಕೆಗಳು, ರೈತರು ಮತ್ತು ಆರ್ಥಿಕತೆಯ ಮೇಲೆ ಆಕ್ರಮಣ ಮಾಡಿದೆ. ಒಂದು ಕಡೆ, ಭಾರತಕ್ಕಿಂತ ಹೆಚ್ಚು ತೈಲವನ್ನು ರಷ್ಯಾದಿಂದ ಖರೀದಿಸುವ ಚೀನಾದ ಮೇಲೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ. ಮತ್ತೊಂದೆಡೆ, ಅಮೆರಿಕಾ ಸ್ವತಃ ರಷ್ಯಾದಿಂದ ಯುರೇನಿಯಂ ಮತ್ತು ಪಲೇಡಿಯಂನಂತಹ ವಸ್ತುಗಳನ್ನು ಖರೀದಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ನಿರ್ಧಾರವು ಕೇವಲ ಭಾರತವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶದಿಂದಲೇ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ, ಎಂದು ಈ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
‘ಆತ್ಮನಿರ್ಭರ ಭಾರತ’ ಯೋಜನೆಗೆ ಹೆಚ್ಚಿನ ವೇಗ ನೀಡುವಂತೆ ಬೇಡಿಕೆ
ಈ ಆಂದೋಲನದ ಮೂಲಕ ಸರಕಾರಕ್ಕೆ ಸಲ್ಲಿಸಲಾದ ಪ್ರಮುಖ ಬೇಡಿಕೆಗಳಲ್ಲಿ, ಭಾರತ ಸರಕಾರವು ಅಮೆರಿಕದ ಒತ್ತಡಕ್ಕೆ ಮಣಿಯದೆ ತಕ್ಷಣ ಈ ಅನ್ಯಾಯದ ತೆರಿಗೆಯನ್ನು ಹಿಂಪಡೆಯಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು. ಈ ನಿರ್ಣಯದಿಂದ ನಷ್ಟಕ್ಕೊಳಗಾದ ಭಾರತೀಯ ಉದ್ಯಮಗಳಿಗೆ ಸಹಾಯ ಮಾಡಬೇಕು. ‘ಆತ್ಮನಿರ್ಭರ ಭಾರತ’ ಯೋಜನೆಗೆ ಹೆಚ್ಚಿನ ವೇಗ ನೀಡಿ ಭಾರತೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು. ಒಂದು ವೇಳೆ ಅಮೆರಿಕಾ ಈ ತೆರಿಗೆಯನ್ನು ಹಿಂಪಡೆಯದಿದ್ದರೆ, ಭಾರತದಲ್ಲಿ ವ್ಯಾಪಾರ ಮಾಡುವ ಅಮೆರಿಕನ್ ಕಂಪನಿಗಳ ಮೇಲೆ ಶೇ.50 ರಷ್ಟು ಪ್ರತಿಯಾಗಿ ತೆರಿಗೆ ವಿಧಿಸಬೇಕು ಎಂದು ಆಗ್ರಹಿಸಲಾಗಿದೆ.
ನೆರೆದಿದ್ದ ಗಣ್ಯರು: ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವಾನಂದ ಸ್ವಾಮಿ, ಶ್ರೀ. ಮಹೀಂದ್ರ ಅಹಿರೆ, ಮಂದಿರ ಮಹಾಸಂಘದ ಕೊಲ್ಹಾಪುರ ಜಿಲ್ಲಾ ಸಹ-ಸಂಯೋಜಕ ಶ್ರೀ. ಅಶೋಕ ಗುರವ ಮತ್ತು ಶ್ರೀ ಅಪ್ಪಾಸಾಹೇಬ ಗುರವ, ವಿಶ್ವ ಹಿಂದೂ ಪರಿಷತ್ತಿನ ಶ್ರೀ. ವಿಜಯ ಪಾಟೀಲ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾಗಲ ತಾಲೂಕಾ ಸಂಯೋಜಕ ಶ್ರೀ. ಕಿರಣ ಕುಲಕರ್ಣಿ, ಹಿಂದುತ್ವನಿಷ್ಠರಾದ ಸರ್ವಶ್ರೀ. ದಿಲೀಪ ದಳವಿ, ಮನೋಜ ಚೌಗುಲೆ, ಸಂಭಾಜಿ ಥೋರವೆ, ಸತೀಶ ಪಾಟೀಲ, ಯುವ ಸೇನೆಯ ಶ್ರೀ. ಸಚಿನ ನಾಗಟಿಳಕ, ಸನಾತನ ಸಂಸ್ಥೆಯ ಡಾ. ಶಿಲ್ಪಾ ಕೊಠಾವಳೆ, ಉದ್ಯಮಿ ಶ್ರೀ. ಆನಂದ ಪಾಟೀಲ, ಶಿವಸೇನೆಯ ಶ್ರೀ. ಬಾಳಾಸಾಹೇಬ ನಲವಡೆ ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!